MMS ಲೀಕ್ ಆಗೋದು ಹೇಗೆ ಗೊತ್ತಾ? ಈ ಎಚ್ಚರಿಕೆ ತೆಗೆದುಕೊಳ್ಳಿ
ದಿನ ಬೆಳಗಾದ್ರೆ ಎಂಎಂಎಸ್ ಲೀಕ್ ಬಗ್ಗೆ ಒಂದಿಷ್ಟು ಸುದ್ದಿಗಳು ಬರ್ತಿರುತ್ತವೆ. ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಇದಕ್ಕೆ ಬಲಿಯಾಗ್ತಾರೆ. ನೀವೂ ಈ ಜಾಲದಲ್ಲಿ ಸಿಲುಕಬಾರದು ಅಂದ್ರೆ ಕೆಲ ವಿಷ್ಯವನ್ನು ತಿಳಿದಿರಬೇಕು.

ಸ್ಮಾರ್ಟ್ ಜಗತ್ತಿನಲ್ಲಿ ಎಲ್ಲವೂ ಡಿಜಿಟಲ್, ಇಂಟರ್ನೆಟ್ ಮಯವಾಗಿದೆ. ಪ್ರತಿಯೊಂದು ಕೆಲಸವೂ ಯಾಂತ್ರಿಕವಾಗಿ ತಂತ್ರಜ್ಞಾನದ ಸಹಾಯದಿಂದಲೇ ನಡೆಯುತ್ತಿದೆ. ಕೈಯಲ್ಲಿರುವ ಸ್ಮಾರ್ಟ್ ಫೋನ್ ನಲ್ಲಿರುವ ವಿವಿಧ ರೀತಿಯ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ಅನೇಕ ರೀತಿಯ ಕೆಲಸಗಳನ್ನು ಮಾಡುವಂತಹ ಯುಗದಲ್ಲಿ ನಾವಿದ್ದೇವೆ. ಆದರೆ ಇಂತಹ ತಂತ್ರಜ್ಞಾನವು ಮನುಷ್ಯನಿಗೆ ಎಷ್ಟು ಉಪಕಾರಿಯಾಗಿದೆಯೋ ಅಷ್ಟೇ ಅಪಾಯಕಾರಿ ಕೂಡ.
ಈಗ ಯಾರನ್ನು ನೋಡಿದರೂ ಕೈಯಲ್ಲೊಂದು ಮೊಬೈಲ್ (Mobile) ಹಿಡಿದುಕೊಂಡು ಎಸ್ ಎಂ ಎಸ್, ವಿಡಿಯೋ, ಚ್ಯಾಟಿಂಗ್ ಮುಂತಾದವುಗಳಲ್ಲೇ ಮಗ್ನರಾಗಿರುವುದನ್ನು ನಾವು ನೋಡ್ತೇವೆ. ಮೊಬೈಲ್ ನಲ್ಲಿ ಅವರ ಖಾಸಗಿ ವಿಡಿಯೋಗಳಿಂದ ಹಿಡಿದು ಇನ್ನೂ ಅನೇಕ ಪ್ರೈವೇಟ್ ವಿಷಯಗಳು ಇರುತ್ತವೆ. ಮೊಬೈಲ್, ಫೇಸ್ ಬುಕ್, ಇನ್ಸ್ಟಾ ಗ್ರಾಂ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಖಾಸಗಿ ವಿಷಯಗಳನ್ನು ನಾವು ಹಂಚಿಕೊಳ್ಳುತ್ತೇವೆ. ಹೀಗೆ ನಾವು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಎಷ್ಟೋ ಮಾಹಿತಿಗಳು ಸೋರಿಕೆಯಾಗುತ್ತವೆ. ಇತ್ತೀಚಿನ ದಿನಗಳಲ್ಲಂತೂ ಎಂಎಂಎಸ್ ಸೋರಿಕೆಯ ಹಲವಾರು ಪ್ರಕರಣಗಳು ನಡೆದಿವೆ. ದೊಡ್ಡ ದೊಡ್ಡ ಸೆಲೆಬ್ರಟಿಗಳ ಖಾಸಗೀ ವಿಡಿಯೋಗಳು ಕೂಡ ಅನೇಕ ಬಾರಿ ಸೋರಿಕೆಯಾಗಿದೆ. ಕೆಲವೊಮ್ಮೆ ನಮಗೆ ತಿಳಿಯದೇ ನಡೆಯುವ ಕೆಲವು ತಪ್ಪುಗಳಿಂದಲೂ ಎಂಎಂಎಸ್ ಸೋರಿಕೆಯಾಗುತ್ತೆ. ಎಂಎಂಎಸ್ (MMS) ಲೀಕ್ ಆಗುವುದನ್ನು ಹೇಗೆ ತಪ್ಪಿಸಬಹುದು ಎಂಬ ಮಾಹಿತಿ ಇಲ್ಲಿದೆ.
NETFLIX ಡಾಕ್ಯುಮೆಂಟ್ ನೋಡ್ತಾ ಜೀವಕ್ಕೇ ಅಪಾಯ ತಂದ್ಕೊಂಡ ಮಹಿಳೆ!
ಸೇಡು ತೀರಿಸಿಕೊಳ್ಳಲು ಹೀಗೆ ಮಾಡ್ತಾರೆ : ಸಾಮಾಜಿಕ ಜಾಲತಾಣಗಳು ಹೆಚ್ಚು ಹೆಚ್ಚು ಫೇಮಸ್ ಆಗುತ್ತಿದ್ದಂತೆ ಅದನ್ನೇ ಕೆಲವು ಮಂದಿ ಕೆಟ್ಟ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಾರೆ. ತಮಗೆ ಆಗದೇ ಇರುವವರ ವಿರುದ್ಧ ಸೇಡುತೀರಿಸಿಕೊಳ್ಳಲು ಅವರ ವೈಯಕ್ತಿಕ ವಿಷಯಗಳನ್ನೋ ಅಥವಾ ಖಾಸಗಿ ವಿಡಿಯೋಗಳನ್ನೋ ಲೀಕ್ ಮಾಡಿ ಅವರ ಬಗ್ಗೆ ಜನರಲ್ಲಿ ಕೆಟ್ಟ ಭಾವನೆ ಮೂಡುವಂತೆ ಮಾಡುತ್ತಾರೆ. ಇಂತಹ ಘಟನೆಗಳನ್ನು ತಡೆಗಟ್ಟಲು ನೀವು , ನಿಮ್ಮ ವೈಯಕ್ತಿಕ ವಿಷಯಗಳನ್ನು, ಫೋಟೋ (Photo) ಅಥವಾ ವಿಡಿಯೋಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯದಂತೆ ನೋಡಿಕೊಳ್ಳಬೇಕು. ನಿಮ್ಮ ಪ್ರೈವೇಟ್ ಫೋಟೋಗಳನ್ನು ಶೇರ್ ಮಾಡಿಕೊಳ್ಳಬಾರದು. ನಿಮ್ಮ ಮೊಬೈಲ್ ಅನ್ನು ಪಾಸ್ ವರ್ಡ್ ಅಥವಾ ಬೇರೆ ರೀತಿಯಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬೇಕು.
ಎಂಎಂಎಸ್ ಹೇಗೆ ಲೀಕ್ ಆಗುತ್ತೆ? : ಕೆಲವರು ತಮ್ಮ ಪ್ರೈವೇಟ್ ಫೋಟೋ, ವಿಡಿಯೋಗಳನ್ನು ಮೊಬೈಲ್ ನಲ್ಲಿ ಇಟ್ಟುಕೊಳ್ಳುತ್ತಾರೆ. ಅಂತಹ ವಿಡಿಯೋಗಳಿದ್ದಾಗ ನೀವು ಇನ್ನಷ್ಟು ಜಾಗ್ರತರಾಗಿರಬೇಕು. ನಿಮ್ಮ ಫೋನ್ ಕೆಟ್ಟಾಗ ಅಥವಾ ಅದನ್ನು ದುರಸ್ತಿಗಾಗಿ ಬೇರೆಯವರ ಕೈಗೆ ಕೊಟ್ಟಾಗ ನಿಮ್ಮ ಪರ್ಸನಲ್ ಡಿಟೇಲ್ಸ್ ಸೋರಿಕೆಯಾಗುವ ಸಂಭವ ಇರುತ್ತದೆ. ಇದರ ಹೊರತಾಗಿ ನಿಮ್ಮ ಮೊಬೈಲ್ ಅಕಸ್ಮಾತ್ ಆಗಿ ಕಳೆದುಹೋದರೆ ಅಥವಾ ಯಾರಾದರೂ ಅದನ್ನು ದೋಚಿದಾಗಲೂ ಮಾಹಿತಿಗಳು, ವಿಡಿಯೋಗಳು ಲೀಕ್ ಆಗಬಹುದು. ಇದಲ್ಲದೇ ಫೋನ್ ಹ್ಯಾಕ್ ಆದಾಗಲೂ ಸ್ಕ್ಯಾಮರ್ಸ್ ನಿಮ್ಮ ಫೋಟೋ ವಿಡಿಯೋವನ್ನು ಸೋರಿಕೆ ಮಾಡಬಹುದು.
ಈ ದೇಶದಲ್ಲಿ ಮಕ್ಕಳು ಶಾಲೆಗೆ ಹೋಗಿಲ್ಲ ಅಂದ್ರೆ, ಪೋಷಕರನ್ನು ಜೈಲಿಗೆ ಹಾಕ್ತಾರಂತೆ!
ಎಐ ಮತ್ತು ಡೀಪ್ ಫೇಕ್ : ತಂತ್ರಜ್ಞಾನವು (Technology) ಎಷ್ಟು ಒಳ್ಳೆಯ ಕೆಲಸಕ್ಕೆ ಉಪಯೋಗವಾಗುತ್ತದೆಯೋ ಅಷ್ಟೇ ಕೆಟ್ಟ ಕೆಲಸಗಳಿಗೂ ಬಳಕೆಯಾಗುತ್ತದೆ. ಸಾಮಾಜಿಕ್ ಮಾಧ್ಯಮದಲ್ಲಿ (Social Media) ಕಾಮುಕರ ಅನೇಕರ ಚಾನೆಲ್ಸ್, ಪ್ರೊಫೈಲ್ಸ್ ಇವೆ. ಅವರು ಎಐ ತಂತ್ರಜ್ಞಾನದ ಮೂಲಕ ಮಕ್ಕಳ, ದೊಡ್ಡವರ ಲೈಂಗಿಕ ಫೋಟೋ ಮತ್ತು ವಿಡಿಯೋಗಳನ್ನು ರಚಿಸುತ್ತಾರೆ. ಈಗಾಗಲೇ ಅನೇಕ ಸೆಲೆಬ್ರೆಟಿಗಳ ವಿಡಿಯೋಗಳನ್ನು ಕೂಡ ಇದೇ ರೀತಿ ವೈರಲ್ ಆಗಿದೆ.
ಇಂತಹ ತಂತ್ರಜ್ಞಾನದಿಂದ ಬಚಾವಾಗೋದು ಹೇಗೆ? : ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾದಿಂದ ಉಂಟಾಗುವ ಸೋರಿಕೆಯನ್ನು ತಪ್ಪಿಸಲು ನೀವು ಸಾಧ್ಯವಾದಷ್ಟು ನಿಮ್ಮ ಮಾಹಿತಿಯನ್ನು ಸೋರಿಕೆಯಾಗದಿರುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಶೇರ್ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಸಾಧ್ಯವಾದಷ್ಟು ಅಂತಹ ಫೋಟೋ, ವಿಡಿಯೋಗಳನ್ನು ಸೆರೆಹಿಡಿಯಬಾರದು. ಹಾಗೊಮ್ಮೆ ಫೋಟೋಗಳನ್ನು ತೆಗೆದರೂ ಕೂಡ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಾರದು.