Netflix ಡಾಕ್ಯುಮೆಂಟ್ ನೋಡ್ತಾ ಜೀವಕ್ಕೇ ಅಪಾಯ ತಂದ್ಕೊಂಡ ಮಹಿಳೆ!
ಸಿನಿಮಾ, ರೀಲ್ಸ್, ಸಿರೀಸ್ ಎಷ್ಟೇ ಆಸಕ್ತಿಯಿಂದ ಕೂಡಿರಲಿ, ಜನರಿಗೆ ಹೊರ ಪ್ರಪಂಚದ ಅರಿವಿರಬೇಕು. ಟಿವಿ, ಮೊಬೈಲ್‌ನಲ್ಲೇ ಮುಳುಗಿ ಹೋದ್ರೆ ಆಪತ್ತು ಕಾಡ್ಬಹುದು. ನಮ್ಮ ಜೀವಕ್ಕೆ ನಾವೇ ಹಾನಿಯುಂಟು ಮಾಡಿಕೊಳ್ಬಹುದು. ಇದಕ್ಕೆ ಈ ಮಹಿಳೆ ಕೂಡ ನಿದರ್ಶನ.

ಮೊಬೈಲ್, ಟಿವಿ ಶೋಗಳು ಜನರನ್ನು ಸಂಪೂರ್ಣ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಕೆಲವರು ಟಿವಿ, ಮೊಬೈಲ್ ನಲ್ಲಿ ಎಷ್ಟು ಮಗ್ನರಾಗಿರ್ತಾರೆ ಅಂದ್ರೆ ತಾವು ಏನು ಮಾಡ್ತಿದ್ದೇವೆ, ಅಕ್ಕಪಕ್ಕದಲ್ಲಿ ಏನಾಗ್ತಿದೆ ಅನ್ನೋದೆ ಅವರಿಗೆ ನೆನಪಿರೋದಿಲ್ಲ. ಮೊಬೈಲ್ ನೋಡ್ತಾ, ಟಿವಿ ನೋಡ್ತಾ ಕೆಲಸ ಮಾಡುವ ಜನರು ಅನೇಕ ತಪ್ಪುಗಳನ್ನು ಮಾಡಿರ್ತಾರೆ. ಕೆಲ ಅಪಘಾತಕ್ಕೆ ಇದೇ ಕಾರಣವಾಗ್ತಿದೆ. ಆದ್ರೂ ಜನರಿಗೆ ಬುದ್ಧಿ ಬಂದಿಲ್ಲ.
ಅಡುಗೆ ಮನೆಯಲ್ಲಿ ಗ್ಯಾಸ್ ಮೇಲಿರುವ ಹಾಲು ಉಕ್ಕಿ ಹರಿಯುತ್ತಿದ್ದರೂ ಟಿವಿ ನೋಡ್ತಿದ್ದವರಿಗೆ ಅದ್ರ ಗಮನ ಇರೋದಿಲ್ಲ. ಶೌಚಾಲಯಕ್ಕೆ ಮೊಬೈಲ್ (Mobile) ಹಿಡಿದು ಹೋಗುವ ಜನರು ಗಂಟೆಗಟ್ಟಲೆ ಅಲ್ಲೇ ಕಳೆಯುತ್ತಾರೆ. ಅವರಿಗೆ ಸಮಯ ಸರಿದಿದ್ದು ಗೊತ್ತಾಗೋದಿಲ್ಲ. ಓದುವಾಗ ನಾನಾ ಕಡೆ ಲಕ್ಷ್ಯಕೊಡುವ ಮಕ್ಕಳಿಗೆ ಕೈನಲ್ಲಿ ಮೊಬೈಲ್ ಬಂದ್ರೆ ಪ್ರಪಂಚದ ಅರಿವೇ ಇರೋದಿಲ್ಲ. ಇಷ್ಟೊಂದು ಮೋಡಿ ಮಾಡಿರುವ ಮೊಬೈಲ್, ಟಿವಿಗಳು ಜನರನ್ನು ಆಪತ್ತಿಗೆ ತಳ್ತಿದೆ.
ಅನೇಕ ಸಂಬಂಧಗಳು ಈ ಮೊಬೈಲ್ ನಿಂದ ಹಾಳಾಗಿವೆ. ಈಗಿನ ದಿನಗಳಲ್ಲಿ ಒಟಿಟಿ (OTT) ಹಾವಳಿ ಹೆಚ್ಚಾಗಿದೆ. ಸಿನಿಮಾ ಸೇರಿದಂತೆ ಅನೇಕ ಸಿರೀಸ್ ಗಳು ಒಟಿಟಿಯಲ್ಲಿ ಲಭ್ಯವಿದೆ. ಮನೆಯಲ್ಲೇ ಕುಳಿತು ಜನರು ಸಿರೀಸ್ ನೋಡ್ತಿರುತ್ತಾರೆ. ಈ ಸಿರೀಸ್ ಗಳು ಸಮಯ ಹಾಳು ಮಾಡೋದಲ್ಲದೆ ಮಾನಸಿಕ ಸಮಸ್ಯೆ, ಬೊಜ್ಜು ಸೇರಿದಂತೆ ಕೆಲ ಅನಾರೋಗ್ಯಕ್ಕೆ ಕಾರಣವಾಗುತ್ತೆ.
ಟಿವಿ ನೋಡ್ತಾ ಏನು ಯಡವಟ್ಟಾಯ್ತು ಎನ್ನುವ ನಾನಾ ಫನ್ನಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬರ್ತಿರುತ್ತವೆ. ಈಗ ಮಹಿಳೆಯೊಬ್ಬಳು ತನ್ನ ಕಥೆಯನ್ನು ಹೇಳಿದ್ದಾಳೆ. ಟಿವಿ ಸಿರೀಸ್ ನಲ್ಲಿ ಎಷ್ಟು ಮಗ್ನಳಾಗಿದ್ದಳೆಂದ್ರೆ ಯಾವುದ್ರಲ್ಲಿ ಬ್ರೆಷ್ ಮಾಡ್ತಿದ್ದೇನೆ ಎಂಬ ಗಮನ ಆಕೆಗಿರಲಿಲ್ಲ. ಟೂತ್ ಬ್ರಷ್ (Tooth brush) ನಲ್ಲಿ ಹಲ್ಲುಜ್ಜಲು ಶುರು ಮಾಡಿದ ಕೆಲ ಸಮಯದ ನಂತ್ರ ಆಕೆಯ ಅರಿವಿಗೆ ಬಂದಿದ್ದು ನಂತ್ರ ಆಸ್ಪತ್ರೆಗೆ ಓಡಿದ್ದಾಳೆ. ಆಕೆ ಹೆಸರು ಮಿಯಾ ಕಿಟೆಲ್ಸನ್. ನೆಟ್ಫಿಕ್ಸ್ ನಲ್ಲಿ ಆಕೆ ಸಾಕ್ಷ್ಯಚಿತ್ರ ನೋಡ್ತಿದ್ದಳು. ಡಾಕ್ಯುಮೆಂಟರಿ ವೀಕ್ಷಣೆಯಲ್ಲಿ ಎಷ್ಟು ಮಗ್ನಳಾಗಿದ್ದಳು ಅಂದ್ರೆ ಬ್ರಷ್ ಗೆ ಏನು ಹಾಕ್ತಿದ್ದೇನೆ ಅನ್ನೋದನ್ನು ನೋಡಿಲ್ಲ. ಮಿಯಾ ಕಿಟೆಲ್ಸನ್ ಪ್ರಕಾರ, ಆಕೆ ಟೂತ್ ಪೇಸ್ಟ್ ಬದಲು ನೋವಿನ ಮುಲಾಮನ್ನು ಬ್ರಷ್ ಗೆ ಹಾಕಿಕೊಂಡು ಹಲ್ಲುಜ್ಜಲು ಶುರು ಮಾಡಿದ್ದಾಳೆ. ಕೆಲ ಕ್ಷಣದಲ್ಲಿ ಇದು ಆಕೆಗೆ ಗೊತ್ತಾಗಿದೆ. ತಕ್ಷಣ ಅದನ್ನು ಉಗುಳಿ, ಬಾಯಿ ಕ್ಲೀನ್ ಮಾಡಿಕೊಂಡಿದ್ದಾಳೆ.
ಫಾರಿನ್ ಟ್ರಿಪ್ ಹೋಗೋಕೆ ದುಡ್ಡು ಬೇಡ, ಈ ದೇಶಕ್ಕೆ ಹೋಗ್ಬಿಡಿ ಭರ್ತಿ 25 ಲಕ್ಷ ರೂ. ಸಿಗುತ್ತೆ!
ಮಿಯಾ, ಡೀಪ್ ಹೀಟ್ ಹೆಸರಿನ ಮುಲಾಮನ್ನು ಹಾಕಿಕೊಂಡು ಬ್ರಷ್ ಮಾಡಿದ್ದಾಳೆ. ಅನೇಕರು ಡೀಪ್ ಹೀಟ್ ವಿಷಕಾರಿ ಎಂದು ನಂಬುತ್ತಾರೆ. ಹಾಗಾಗಿ ಮಿಯಾ ಬಾಯ್ ಫ್ರೆಂಡ್ ವಿಷ ನಿಯಂತ್ರಣ ವೈದ್ಯಕೀಯ ತಂಡಕ್ಕೆ ಕರೆ ಮಾಡಿದ್ದರು. ಮಿಯಾ ಸೂಕ್ತ ಚಿಕಿತ್ಸೆ ಪಡೆದಿದ್ದಾಳೆ. ಈಗ ಆಕೆ ಆರೋಗ್ಯವಾಗಿದ್ದಾಳೆ.
ಡೇವಿಡ್ ಬೆಕ್‌ಹ್ಯಾಮ್‌ನ ಸಾಕ್ಷ್ಯಚಿತ್ರ ನೋಡೋದ್ರಲ್ಲಿ ನಾನು ಮಗ್ನಳಾಗಿದ್ದೆ. ಬ್ರಷ್‌ಗೆ ಡೀಪ್ ಹೀಟ್ ಹಾಕಿದ್ದನ್ನು ನಾನು ಗಮನಿಸಲಿಲ್ಲ ಎಂದು ಮಿಯಾ ಟಿಕ್ ಟಾಕ್ ಪೋಸ್ಟ್ ನಲ್ಲಿ ಹೇಳಿದ್ದಾಳೆ. ಇದು ಜೀವ ತೆಗೆಯುವಷ್ಟು ಅಪಾಯಕಾರಿ ಎಂಬುದು ಮಿಯಾ ಅಭಿಪ್ರಾಯವಾಗಿದೆ. ಮಿಯಾ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ.
ಮೆಡಿಕಲ್ ಟೀಂ ಕರೆಸುವ ಬದಲು ನಾನು ಸಾವಿಗೆ ಕಾಯ್ತಿದ್ದೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ ಮತ್ತೊಬ್ಬರು ಕೋಲ್ಗೇಟ್ ಹಾಗೂ ಡೀಪ್ ಹೀಟ್ ನೋಡಲು ಸಂಪೂರ್ಣ ಭಿನ್ನವಾಗಿರುತ್ತದೆ. ಇದ್ರಲ್ಲಿ ಕನ್ಫ್ಯೂಜ್ ಏನಿತ್ತು. ನಿಮ್ಮ ಈ ಮೂರ್ಖತನ ಜೀವ ತೆಗೆಯುತ್ತಿತ್ತು ಎಂದು ಬರೆದಿದ್ದಾರೆ. ವಾಸ್ತವವಾಗಿ ಡೀಪ್ ಹೀಟ್ ಅನ್ನು ಸಣ್ಣ ನೋವುಗಳಿದ್ದರೆ ಬಳಸಲಾಗುತ್ತದೆ. ಮೆಂಥೋಲಾಟಮ್ ಕಂಪನಿಯ 1889ರಲ್ಲಿ ಇದರ ಉತ್ಪಾದನೆ ಶುರು ಮಾಡಿದೆ. ಆದ್ರೆ ಇದು ತಿನ್ನಲು ಯೋಗ್ಯವಲ್ಲ.