Asianet Suvarna News Asianet Suvarna News

ಇದೆಂಥಾ ವಿಚಿತ್ರ ಕಾನೂನು..ಇಲ್ಲಿ ತಂದೆ ಮಗಳನ್ನೇ ಮದ್ವೆಯಾಗ್ಬೋದು!

ಪ್ರಪಂಚದ ಅನೇಕ ದೇಶಗಳಲ್ಲಿ ಮಹಿಳೆಯರ ವಿರುದ್ಧ ಅನೇಕ ಕ್ರೂರ ಕಾನೂನುಗಳಿವೆ. ಇದು ಮಹಿಳೆಯರಿಗೆ ನ್ಯಾಯ ಕೊಡಿಸುವ ಬದಲು ಅವರನ್ನು ಮತ್ತಷ್ಟು ಕುಗ್ಗಿಸುತ್ತದೆ. ಅವರ ಸ್ವಾತಂತ್ರ್ಯವನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಸಿದುಕೊಳ್ಳುತ್ತದೆ. ಹೀಗಾಗಿ ಇಂಥಾ ಅರ್ಥಹೀನ ನಿಯಮಗಳ ವಿರುದ್ಧ ಆಗಾಗ ಪ್ರತಿಭಟನೆಗಳು ನಡೀತಾನೆ ಇರ್ತವೆ. ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಇಂಥಾ ಕಾನೂನುಗಳು ತುಂಬಾ ವಿಚಿತ್ರವಾಗಿವೆ. ಆ ಬಗ್ಗೆ ತಿಳಿಯೋಣ.

Here the father can marry his daughter, seeing a non-man leads to imprisonment Vin
Author
First Published Jan 20, 2023, 1:04 PM IST

ಎಲ್ಲಿ ಒಳ್ಳೆಯದು ಇರುತ್ತೋ ಅಲ್ಲಿ ಕೆಟ್ಟದ್ದು ಕೂಡಾ ಇರುತ್ತೆ. ಅದಕ್ಕೆ ನಮ್ಮ ಸಮಾಜವೂ ಹೊರತಾಗಿಲ್ಲ. ಇಲ್ಲಿ ಸಾಕಷ್ಟು ಒಳ್ಳೆಯ ವಿಚಾರಗಳು ಇರುವ ಹಾಗೆಯೇ ಸಾಕಷ್ಟು ಕೆಟ್ಟ ವಿಚಾರಗಳೂ ಇವೆ. ಒಳ್ಳೆಯ ನಿಯಮಗಳು ಇರುವ ಹಾಗೆಯೇ ಬದಲಾಯಿಸಲಾಗದ ಕೆಟ್ಟ ನಿಯಮಗಳೂ ಇವೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಅದಕ್ಕೆ ವಿರುದ್ಧವಾಗಿ ಜನರು ಮಾತನಾಡುತ್ತಿದ್ದಾರೆ. ಹಿಜಾಬ್ ಬಗ್ಗೆ ಕಳೆದ ಹಲವು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದ ದೇಶ ಇರಾನ್. ಆದರೆ ಈ ದೇಶದಲ್ಲಿ ಹೆಣ್ಣಿಗೆ ಕಿರುಕುಳ ನೀಡಲು ವಿಚಿತ್ರ ಕಾನೂನುಗಳಿವೆ. ಮೊದಲನೆಯದಾಗಿ ಇಲ್ಲಿ ಹಿಜಾಬ್ ಧರಿಸುವ ಕಾನೂನು ಎಷ್ಟು ಕಟ್ಟುನಿಟ್ಟಾಗಿದೆ ಎಂದರೆ ಯಾರಾದರೂ ಅದನ್ನು ಪಾಲಿಸದಿದ್ದರೆ ಜೈಲು ಪಾಲಾಗುತ್ತಾರೆ. ಮಹ್ಸಾ ಅಮಿನಿ ಎಂಬ ಹುಡುಗಿ ಹಿಜಾಬ್ ಧರಿಸಲು ನಿರಾಕರಿಸಿದಾಗ, ಪೊಲೀಸರು ಅವಳನ್ನು ಕಸ್ಟಡಿಗೆ ತೆಗೆದುಕೊಂಡರು. ಆಕೆ ಜೈಲಿನಲ್ಲೇ ಸತ್ತಳು.

ಹಿಜಾಬ್ ವಿರುದ್ಧದ ಪ್ರತಿಭಟನೆಯ ಧ್ವನಿ ಪ್ರಪಂಚದ ಹಲವು ದೇಶಗಳಲ್ಲಿ ಹರಡಿದೆ. ಹಿಜಾಬ್ ಬಗ್ಗೆ ಕಟ್ಟುನಿಟ್ಟನ್ನು ಕೊನೆಗೊಳಿಸಲು ಇರಾನ್‌ನ ವಿವಿಧ ಸ್ಥಳಗಳಲ್ಲಿ ಪ್ರದರ್ಶನಗಳು ಪ್ರಾರಂಭವಾಗಿವೆ. ಹಿಜಾಬ್ ಮಾತ್ರವಲ್ಲ, ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ಬಂದಾಗ ಮಹಿಳೆಯರ (Women) ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. 1979 ರಲ್ಲಿ ಮಹಿಳೆಯರ ವಿರುದ್ಧ ಅನೇಕ ಕಾನೂನು (Law)ಗಳನ್ನು ಜಾರಿಗೆ ತರಲಾಯಿತು. ಅಂಥಾ ಕೆಲವು ಕಾನೂನಿನ ಮಾಹಿತಿ ಇಲ್ಲಿದೆ.

ಮಹಿಳೆಯರು ಕೂದಲು ಸರಿ ಮಾಡ್ಕೋಬೇಡಿ; ಕೋರ್ಟ್‌ ಕಾರ್ಯಕಲಾಪಕ್ಕೆ ಅಡ್ಡಿಯಾಗುತ್ತೆ ಎಂದ Pune Court..!

ಪರಪುರುಷನ ಜೊತೆ ಮಾತನಾಡಿದರೆ ಜೈಲು: ಕಾಲ ಅದೆಷ್ಟೇ ಬದಲಾದರೂ ಹೆಣ್ಣುಮಕ್ಕಳ ಪಾಲಿಗಿರುವ ಕಾನೂನು, ಕಟ್ಟಳೆಗಳು ಇನ್ನೂ ಹಾಗೆಯೇ ಇವೆ. ಇನ್ನೂ ಕೆಲವು ದೇಶಗಳಲ್ಲಿ ಮಹಿಳೆ ಪರಪುರುಷನ ಜೊತೆ ಮಾತನಾಡುವುದು ತಪ್ಪೆಂದು ಪರಿಗಣಿಸಲಾಗುತ್ತದೆ. ಮಹಿಳೆಯನ್ನು ನೋಡಲು ಅವಳ ಪತಿ, ತಂದೆ ಮತ್ತು ಸಹೋದರನಿಗೆ ಮಾತ್ರ ಹಕ್ಕಿದೆ. ಅದಲ್ಲದೆ ಮಹಿಳೆ ಪುರುಷೇತರರ ಜೊತೆ ಮಾತನಾಡುವುದು ಅಥವಾ ಕೈಕುಲುಕುವುದು ಕಂಡುಬಂದರೆ ಆಕೆಗೆ ದಂಡ ಅಥವಾ ಜೈಲು ಶಿಕ್ಷೆ (Punishment) ವಿಧಿಸಬಹುದು. ಇಸ್ಲಾಮಿಕ್ ಧಾರ್ಮಿಕ ಮುಖಂಡರ ಪ್ರಕಾರ, 12 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರ ಮುಖ ಮತ್ತು ದೇಹವನ್ನು ಅವರ ತಂದೆ, ಸಹೋದರ ಅಥವಾ ಪತಿ ಮಾತ್ರ ನೋಡಬಹುದು. ಅವಳು ಮನೆಯಿಂದ ಹೊರಗೆ ಹೋಗುವಾಗ ಹಿಜಾಬ್ ಧರಿಸಬೇಕು. ಅವಳು ತನ್ನ ಇಡೀ ದೇಹ (Body) ಮತ್ತು ಮುಖವನ್ನು ಮುಚ್ಚದೆ ಹೊರಗೆ ಹೋಗಬಾರದು ಎಂದು ಹೇಳಲಾಗಿದೆ.

ಮಗಳು ತಂದೆಯನ್ನು ಮದುವೆಯಾಗಬಹುದು: ಇರಾನ್‌ನಲ್ಲಿ ಮಹಿಳೆಯರ ವಿರುದ್ಧ ಮತ್ತೊಂದು ಕಾನೂನು 2013ರಲ್ಲಿ ಜಾರಿಗೆ ಬಂದಿತ್ತು. ಈ ಕಾನೂನಿನ ಅಡಿಯಲ್ಲಿ ತಂದೆ ತನ್ನ ಮಗಳನ್ನು ಮದುವೆ (Marriage)ಯಾಗಬಹುದು. ಇದರಲ್ಲಿ ಒಂದು ಷರತ್ತು ಕೂಡಾ ಇದೆ. ಈ ಪ್ರಕಾರ, ಒಬ್ಬ ತಂದೆ ತನ್ನ ದತ್ತು ಮಗಳನ್ನು ಮಾತ್ರ ಮದುವೆಯಾಗಬಹುದು. ವಯಸ್ಸಿನ ಮಿತಿಯೂ ಆಶ್ಚರ್ಯಕರವಾಗಿದೆ. ತಂದೆ 13 ವರ್ಷ ಮತ್ತು ಮೇಲ್ಪಟ್ಟ ಹುಡುಗಿಯರನ್ನು ಮದುವೆಯಾಗಬಹುದು. ಆದರೆ, ಈ ಕಾನೂನಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಟಾಯ್ಲೆಟ್ ಮಾಡಿ ಫ್ಲಶ್ ಮಾಡೋ ಹಾಗಿಲ್ಲ, ಜಗತ್ತನ್ನು ಬೆರಗುಗೊಳಿಸುವ ವಿಚಿತ್ರ ಕಾನೂನುಗಳು

ಮಹಿಳೆಯರು ಫುಟ್ಬಾಲ್ ವೀಕ್ಷಿಸುವುದನ್ನು ನಿಷೇಧಿಸಲಾಗಿದೆ: ಇರಾನ್‌ನಲ್ಲಿ ಮಹಿಳೆಯರು ಫುಟ್‌ಬಾಲ್ ವೀಕ್ಷಿಸುವಂತಿಲ್ಲ. ಮಾತ್ರವಲ್ಲ ಮಹಿಳೆಯರು ಫುಟ್ಬಾಲ್ ಮೈದಾನಕ್ಕೆ ಹೋಗುವುದನ್ನು ಸಹ ನಿಷೇಧಿಸಲಾಗಿದೆ. ಮಹಿಳೆ ಹೀಗೆ ಮಾಡಿದರೆ ಆಕೆಗೆ ಶಿಕ್ಷೆಯಾಗುತ್ತದೆ. ಆಕೆಯ ಕ್ರೀಡೆಯ ಬಗ್ಗೆ ಯಾವುದೇ ರೀತಿಯ ಒಲವನ್ನು ಬೆಳೆಸಿಕೊಳ್ಳುವಂತಿಲ್ಲ.

ಸಾಕುಪ್ರಾಣಿಗಳೊಂದಿಗೆ ಸಂಬಂಧ ಇಟ್ಕೊಳ್ಬೋದು: ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳು ಓಡಾಡುವಂತಿಲ್ಲ. ಇಲ್ಲಿ ಜನರು ಸಾಕುಪ್ರಾಣಿಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಬಹುದು. ಆದರೆ ಸಂಬಂಧವನ್ನು ಮಾಡಿದ ನಂತರ, ಆ ಪ್ರಾಣಿಯನ್ನು ಕೊಲ್ಲಬೇಕು ಎಂಬ ನಿಯಮವಿದೆ. ಇಂಥಾ ಕೆಟ್ಟ ನಿಯಮಗಳ ಬಗ್ಗೆ ಅದೆಷ್ಟು ಧ್ವನಿಯೆತ್ತಿದ್ದರೂ ಇವು ಇನ್ನೂ ನಿಷೇಧಗೊಂಡಿಲ್ಲ. ಬದಲಿಗೆ ಜನರ ಮಧ್ಯೆ ಇನ್ನೂ ಜೀವಂತವಾಗಿದೆ.

Follow Us:
Download App:
  • android
  • ios