Asianet Suvarna News Asianet Suvarna News

ಮಹಿಳೆಯರೇ ಹುಷಾರ್‌ ! ಗರ್ಭ ನಿರೋಧಕ ಮಾತ್ರೆ ಸೇವನೆಯಿಂದ ರಕ್ತಸ್ರಾವ ಆಗ್ಬಹುದು

ಆರೋಗ್ಯ ಚೆನ್ನಾಗಿರಲಿ ಎಂದು ನಾವು ತೆಗೆದುಕೊಳ್ಳುವ ಅದೆಷ್ಟೋ ಟ್ಯಾಬ್ಲೆಟ್ಸ್ ಹೆಲ್ತ್ ಹಾಳು ಮಾಡುತ್ತವೆ. ಈ ಲಿಸ್ಟ್‌ಗೆ ಗರ್ಭ ನಿರೋಧಕ ಮಾತ್ರೆಯೂ ಸೇರುತ್ತದೆ. ಗರ್ಭನಿರೋಧಕ ಮಾತ್ರೆಗಳು ಮಹಿಳೆಯರ ಅನುಕೂಲಕ್ಕಾಗಿ ಮಾಡಿದ್ದರೂ, ಅದರಿಂದ ಕೆಲವೊಮ್ಮೆ ಸಮಸ್ಯೆಗಳು ಸಹ ಆಗುತ್ತವೆ. ಆ ಬಗ್ಗೆ ತಿಳ್ಕೊಳ್ಳೋಣ.

Health Tips: Side Effects Of Birth Control Pills In Woman Vin
Author
First Published Oct 6, 2022, 5:32 PM IST

ಲೈಂಗಿಕ ಕ್ರಿಯೆಯ ಬಳಿಕ ಗರ್ಭಧರಿಸುವ ಆತಂಕ ಮಹಿಳೆಯರಿಗೆ ಸಹಜವಾಗಿಯೇ ಕಾಡುತ್ತದೆ.  ಅಂತಹ ಸಂದರ್ಭಗಳಲ್ಲಿ ನಾನಾ ಕಾರಣಗಳಿಂದ ಗರ್ಭ ಧರಿಸಲು ಇಷ್ಟಪಡದವರು ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪದೇ ಪದೇ ಮಾತ್ರೆ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಹಾಗಾದರೆ ಗರ್ಭನಿರೋಧಕ ಮಾತ್ರೆಗಳನ್ನು ತೆಗದುಕೊಳ್ಳುವುದರಿಂದ ಏನೆಲ್ಲಾ ಅಡ್ಡ ಪರಿಣಾಮವಾಗುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಗರ್ಭನಿರೋಧಕ ಮಾತ್ರೆಯ ಸೇವನೆಯಿಂದ ರಕ್ತಸ್ರಾವದ ಅಪಾಯ
ಲೈಂಗಿಕ ಸಂಪರ್ಕ (Sex) ನಡೆದಾಗ ಅದು ಅಂಡೋತ್ತಿಯ ದಿನಗಳು ಅಥವಾ ಅದರ ಹತ್ತಿರದ ದಿನಗಳಾಗಿದ್ದರೆ ಅಂತಹ ಸಂದರ್ಭದಲ್ಲಿ ಗರ್ಭನಿರೋಧಕ ಮಾತ್ರೆ (Birth control pills)ಗಳನ್ನು ತೆಗೆದುಕೊಳ್ಳಬಹುದು. ನೆನಪಿಡಿ ಲೈಂಗಿಕ ಸಂಪರ್ಕದ ನಂತರ 72 ಗಂಟೆಯೊಳಗೆ ಈ ತುರ್ತು ಗರ್ಭನಿರೋಧಕ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಆದರೆ ಇದನ್ನು ಪದೇ ಪದೇ ಬಳಸುವುದು ಒಳ್ಳೆಯದಲ್ಲ. ಒಂದು ಮಾತ್ರೆಯನ್ನು ಮಾತ್ರ ತೆಗೆದುಕೊಳ್ಳಬಹುದು ಅದಕ್ಕಿಂತ ಜಾಸ್ತಿ ತೆಗೆದುಕೊಂಡರೆ ಹಾರ್ಮೋನುಗಳಲ್ಲಿ ಏರುಪೇರಾಗಿ ಹೆಚ್ಚು ರಕ್ತಸ್ರಾವವಾಗುವ ಅಪಾಯ (Danger)ವಿರುತ್ತದೆ ಎಂದು  ವೈದ್ಯರು ಹೇಳುತ್ತಾರೆ. 

ಹೆಂಗಸರಿಗಷ್ಟೇ ಅಲ್ಲ ಗಂಡಸರಿಗೂ ಬಂದಿದೆ Birth Control Pills

ಮುಟ್ಟಿನ ದಿನ ತಡವಾಗಬಹುದು
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡ ಬಳಿಕ 3 ರಿಂದ 4 ದಿನಗಳ ನಂತರ ಸಣ್ಣ ಪ್ರಮಾಣದಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಆದರೆ ಇದು ಮಾಸಿಕ ದಿನಗಳ ಸ್ರವಿಸುವಿಕೆ ಆಗಿರುವುದಿಲ್ಲ. ಮಾತ್ರೆಯ ಅಡ್ಡ ಪರಿಣಾಮದಿಂದ ಈ ರೀತಿ ಆಗಿರುತ್ತದೆ. ಇದನ್ನು ವಿಥ್‌ ಡ್ರಾವಲ್‌ ಬ್ಲೀಡಿಂಗ್‌ ಎನ್ನುತ್ತಾರೆ. ಹೀಗಾಗಿ ಇದು ಮುಟ್ಟಿನ ದಿನಗಳ ಮೇಲೂ ಪರಿಣಾಮ ಬೀರುತ್ತದೆ. ಗರ್ಭನಿರೊಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮುಟ್ಟಿನ ದಿನಗಳಲ್ಲಿ ಬದಲಾವಣೆಯಾಗುತ್ತದೆ. ಮುಟ್ಟಿನ ದಿನ ತಡವಾಗಬಹುದು. ಅದೇ ರೀತಿ ಮುಂದಿನ ಕೆಲವು ತಿಂಗಳ ಮಾಸಿಕ ದಿನಗಳು ಕೂಡ ಸರಿಯಾಗಿ ಆಗದೇ ಇರಬಹುದು.

ಗರ್ಭ ನಿರೋಧಕ ತೆಗೆದುಕೊಂಡರೂ ಗರ್ಭ ಧರಿಸುವ ಸಾಧ್ಯತೆ
ಕೆಲವೊಮ್ಮೆ ಎಷ್ಟೇ ಗರ್ಭ ನಿರೋಧಕ ತೆಗೆದುಕೊಂಡರೂ ಗರ್ಭ ಧರಿಸುವ ಸಾಧ್ಯತೆ ಇರುತ್ತದೆ. ತುರ್ತು ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೂ ಶೇ. 10 ರಿಂದ 15 ಪ್ರತಿಶತದಷ್ಟು ಗರ್ಭಧಾರಣೆಯಾಗುತ್ತದೆ. ಹೀಗಾಗಿ ಲೈಂಗಿಕತೆಯ ನಂತರದ ದಿನಗಳಲ್ಲಿ ಋತುಚಕ್ರವಾಗಿಲ್ಲವೆಂದರೆ ಗರ್ಭಧಾರಣೆಯನ್ನು ತಪಾಸಣೆ ಮಾಡಿಸುವುದು ಒಳ್ಳೆಯದು.

Planned Parenthood: ಮಕ್ಕಳಾಗದಿರಲು ತೆಗೆದುಕೊಳ್ಳುವ ಮಾತ್ರೆಗಳು ಸುರಕ್ಷಿತವೇ ?

ವಿಪರೀತ ತಲೆನೋವಿನ ತೊಂದರೆ 
ಜೊತೆಗೆ ತಲೆನೋವು ಕೂಡ ಕಾಡುತ್ತದೆ. ಹೀಗಾಗಿ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಕೆಲವೊಂದು ಟ್ಯಾಬ್ಲೆಟ್‌ಗಳನ್ನು ಸೇವಿಸುವಾಗ ತಲೆನೋವು ಸಮಸ್ಯೆ ವಿಪರೀರವಾಗಿ ತೊಂದರೆ ಕೊಡುತ್ತದೆ. ಗರ್ಭ ನಿರೋಧಕ ಮಾತ್ರೆಯನ್ನು ಸೇವಿಸುವುದರಿಂದಲೂ ಇದು ಹಲವು ಬಾರಿ ಉಂಟಾಗುತ್ತದೆ. ಹೀಗಾಗಿ ಇಂಥಾ ಸಮಸ್ಯೆ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

Follow Us:
Download App:
  • android
  • ios