Asianet Suvarna News Asianet Suvarna News

Sanitary Pad: ಕ್ಯಾನ್ಸರ್, ಬಂಜೆತನಕ್ಕೂ ಕಾರಣವಾಗುತ್ತೆ, ಖರೀದಿಸುವಾಗ ಎಚ್ಚರ

ಋತುಚಕ್ರದ ಸಮಯದಲ್ಲಿ ಹಿಂದೆಲ್ಲಾ ಬಟ್ಟೆ, ಕಾಗದಗಳನ್ನು ಬಳಸುತ್ತಿದ್ದರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಎಲ್ಲರೂ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಆದ್ರೆ ಈ ಪ್ಯಾಡ್‌ಗಳು ಸಹ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ನಿಮ್ಗೆ ಗೊತ್ತಿದ್ಯಾ ? ಸೇಫ್ ಅಂದ್ಕೊಂಡು ನಾವ್‌ ಬಳಸೋ ಪ್ಯಾಡ್ ಕ್ಯಾನ್ಸರ್‌, ಬಂಜೆತನಕ್ಕೂ ಕಾರಣವಾಗ್ಬೋದಂತೆ.

Health Tips: Sanitary Pads May Increase Cancer, Infertility Risk Vin
Author
First Published Nov 23, 2022, 4:38 PM IST

ಪೀರಿಯೆಡ್ಸ್ ಬಂದಾಗ ಸಾಮಾನ್ಯವಾಗಿ ಎಲ್ಲರೂ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಕಠಿಣವಾದ ಋತುಚಕ್ರದ (Menstruation) ಸಮಯದಲ್ಲಿ ಇವು ಆರಾಮದಾಯಕವೆಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಆದರೆ ಕೆಲವು ಸ್ಯಾನಿಟರಿ ಪ್ಯಾಡ್‌ಗಳು ತ್ವಚೆಗೆ ಹಾನಿಯುಂಟುಮಾಡುವ ಸುಗಂಧ ದ್ರವ್ಯಗಳು ಮತ್ತು ರಾಸಾಯನಿಕಗಳನ್ನು (Chemical) ಒಳಗೊಂಡಿರುತ್ತವೆ. ಇವು ಆರೋಗ್ಯ ಸಮಸ್ಯೆ (Health tips)ಗಳನ್ನು ಸಹ ಉಂಟು ಮಾಡಬಹುದು ಬಗ್ಗೆ ನಿಮಗೆ ತಿಳಿದಿದೆಯೇ? ಹೊಸ ಅಧ್ಯಯನವೊಂದು ಈ ವಿಚಾರವನ್ನು ಬಹಿರಂಗಪಡಿಸಿದದೆ. ಭಾರತದಲ್ಲಿ ಮಹಿಳೆಯರು ಸಾಮಾನ್ಯವಾಗಿ ಬಳಸುವ ಸ್ಯಾನಿಟರಿ ಪ್ಯಾಡ್‌ಗಳು ಕೆಲವು ಗಂಭೀರ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು ಎಂದು ತಿಳಿಸಿದೆ. ಈ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಕಂಡುಬರುವ ರಾಸಾಯನಿಕಗಳು ತೀವ್ರವಾಗಿ ಹಾನಿಕಾರಕವೆಂದು ವರದಿಯಾಗಿದೆ ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಮತ್ತು ಬಂಜೆತನದ (Infertility) ಅಪಾಯವನ್ನು ಹೆಚ್ಚಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ..

ಸ್ಯಾನಿಟರಿ ಪ್ಯಾಡ್‌ ಕ್ಯಾನ್ಸರ್, ಬಂಜೆತನದ ಅಪಾಯ ಹೆಚ್ಚಿಸಬಹುದು
ನವದೆಹಲಿ ಮೂಲದ ಟಾಕ್ಸಿಕ್ ಲಿಂಕ್ ಎಂಬ ಸಂಸ್ಥೆ ನಡೆಸಿದ ಅಧ್ಯಯನವು ಭಾರತದಲ್ಲಿನ ಕೆಲವು ಜನಪ್ರಿಯ ಬ್ರಾಂಡ್‌ಗಳು ತಯಾರಿಸಿದ ಸ್ಯಾನಿಟರಿ ಪ್ಯಾಡ್‌ಗಳು ಕ್ಯಾನ್ಸರ್ ಮತ್ತು ಬಂಜೆತನದ ಅಪಾಯ (Danger)ವನ್ನು ಹೆಚ್ಚಿಸುವ ರಾಸಾಯನಿಕಗಳನ್ನು ಒಳಗೊಂಡಿವೆ ಎಂದು ಕಂಡುಹಿಡಿದಿದೆ. ಅಧ್ಯಯನಕ್ಕಾಗಿ, ಸಂಶೋಧಕರು ಭಾರತದಲ್ಲಿ ತಯಾರಿಸಿದ 10 ವಿವಿಧ ರೀತಿಯ ಸ್ಯಾನಿಟರಿ ಪ್ಯಾಡ್‌ಗಳನ್ನು (ಸಾವಯವ ಮತ್ತು ಅಜೈವಿಕ) ಪರೀಕ್ಷಿಸಿದ್ದಾರೆ. ಥಾಲೇಟ್‌ಗಳು ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತಗಳು (VOC ಗಳು) ಈ ಪ್ಯಾಡ್‌ಗಳಲ್ಲಿ ಸಾಮಾನ್ಯವಾಗಿ ಬಳಸುವ ಎರಡು ರಾಸಾಯನಿಕಗಳಾಗಿವೆ ಎಂದು ಅವರು ಕಂಡುಕೊಂಡರು.

ಪಿರಿಯಡ್ಸ್ ಕಿರಿಕಿರಿ ಅನ್ಬೇಡಿ, ಸರಿಯಾದ ಪ್ಯಾಡ್ ಬಳಸಿದ್ರೆ ಆರಾಮವಾಗಿರ್ಬೋದು

ಮುಂಬೈನ ಖರ್ಘರ್‌ನ ಮದರ್‌ಹುಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ.ಸುರಭಿ ಸಿದ್ಧಾರ್ಥ ಹೇಳುವಂತೆ, 'ಹೆಚ್ಚಿನ ಸಂಖ್ಯೆಯ ಹುಡುಗಿಯರು ಮತ್ತು ಮಹಿಳೆಯರು (Woman) ಪ್ಯಾಡ್‌ಗಳನ್ನು ಬಳಸುವುದರಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಸಂಶೋಧನೆಯ ಪ್ರಕಾರ, ಎಲ್ಲಾ ಮಾದರಿಗಳಲ್ಲಿ ಕಂಡುಬರುವ ಥಾಲೇಟ್‌ಗಳು ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತಗಳು (ವಿಒಸಿ) ಕ್ಯಾನ್ಸರ್ ಕೋಶಗಳನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ಪ್ಯಾಡ್‌ಗಳು ಬಂಜೆತನಕ್ಕೆ ಕಾರಣವಾಗುತ್ತವೆ ತಿಳಿದುಬಂದಿದೆ.

ಕಾರ್ಸಿನೋಜೆನ್ಸ್, ರಿಪ್ರೊಡಕ್ಟಿವ್ ಟಾಕ್ಸಿನ್‌ಗಳು, ಎಂಡೋಕ್ರೈನ್ ಡಿಸ್ಟ್ರಪ್ಟರ್‌ಗಳು ಮತ್ತು ಅಲರ್ಜಿನ್‌ಗಳಂತಹ ವಿಷಕಾರಿ ರಾಸಾಯನಿಕಗಳು ಸೇರಿದಂತೆ ಸ್ಯಾನಿಟರಿ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಹಲವಾರು ಹಾನಿಕಾರಕ ರಾಸಾಯನಿಕಗಳು ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಕಂಡುಬರುತ್ತವೆ. ಇವು ದೇಹಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ.

ಸ್ಯಾನಿಟರಿ ಪ್ಯಾಡ್‌ಗಳ ಬದಲಿಗೆ ನೀವು ಬೇರೇನು ಬಳಸಬಹುದು ?
ಸ್ಯಾನಿಟರಿ ಪ್ಯಾಡ್‌ಗಳು ಆರಾಮದಾಯಕ ಆಯ್ಕೆಯಾಗಿದೆ. ಭಾರತದಲ್ಲಿ ಬಹುತೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ಇದನ್ನು ಬಳಸುತ್ತಾರೆ. ಹೀಗಿದ್ದೂ ಇದು ಸುರಕ್ಷಿತವಲ್ಲ (Unsafe). ಹಲವು ಆರೋಗ್ಯ ಸಮಸ್ಯೆಗಳಿಗೆ ಸ್ಯಾನಿಟರಿ ಪ್ಯಾಡ್ ಬಳಕೆ ಕಾರಣವಾಗುತ್ತದೆ. ಹಾಗಿದ್ರೆ ಋತುಚಕ್ರದ ಸಮಯದಲ್ಲಿ ಬೇರೇನು ಬಳಸಬಹುದು.

ಮೆನ್‌ಸ್ಟ್ರುವಲ್ ಕಪ್ ಯೋನಿಯಲ್ಲಿ ಸಿಕ್ಕಾಕಿಕೊಂಡರೆ ಏನು ಮಾಡೋದು?

* ಸ್ಯಾನಿಟರಿ ಪ್ಯಾಡ್‌ಗಳಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಮುಟ್ಟಿನ ಕಪ್‌ಗಳ ಟ್ಯಾಂಪೂನ್‌ಗಳನ್ನು ಬಳಸಿ. ಟ್ಯಾಂಪೂನ್‌ಗಳು ಮತ್ತು ಮುಟ್ಟಿನ ಕಪ್‌ಗಳನ್ನು ಆರಿಸಿಕೊಳ್ಳಿ. ಆದರೆ ಇವುಗಳನ್ನು ವೈದ್ಯರ ಸೂಚನೆಗಳ ಪ್ರಕಾರ ಸುರಕ್ಷಿತವಾಗಿ ಬಳಸಬೇಕಾಗುತ್ತದೆ.
* ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವುದನ್ನು ಮುಂದುವರಿಸಲು ಆಯ್ಕೆ ಮಾಡಿದರೆ, ಅದನ್ನು ಆಗಾಗ ಬದಲಾಯಿಸುವುದನ್ನು ಮರೆಯಬೇಡಿ
* ಸುಗಂಧ ದ್ರವ್ಯಗಳನ್ನು ಒಳಗೊಂಡಿರುವ ಯಾವುದೇ ಪ್ಯಾಡ್‌ಗಳನ್ನು ಬಳಸುವುದನ್ನು ತಪ್ಪಿಸಿ ಮತ್ತು ಅಲರ್ಜಿ ಅಥವಾ ಸೋಂಕುಗಳಿಗೆ ಕಾರಣವಾಗದ ಮೃದುವಾದ ವಸ್ತುವಿನಿಂದ ಪ್ಯಾಡ್ ಅನ್ನು ತಯಾರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
* ಸಂಭವನೀಯ ಸೋಂಕುಗಳನ್ನು ತಪ್ಪಿಸಲು ನಿಮ್ಮ ಯೋನಿಯನ್ನು ಸ್ವಚ್ಛವಾಗಿಡಿ.

Follow Us:
Download App:
  • android
  • ios