ಹವ್ಯಕ ಸಮಾಜದಲ್ಲಿ ವಧುಗಳ ಅಭಾವದ ಪರಿಣಾಮ ಉತ್ತರಪ್ರದೇಶದಿಂದ ಹವ್ಯಕ ಹೆಣ್ಣುಮಕ್ಕಳ ಪಾಲಕರನ್ನು ಸಂಪರ್ಕಿಸಿ ವಿವಾಹ ಕಾರ್ಯ ನೆರವೇರಿಸುವ ಮಹತ್‌ ಕಾರ್ಯವನ್ನು ಸ್ವರ್ಣವಲ್ಲಿ ಮಠದ ಅಧೀನನ ‘ಸಪ್ತಪದಿ’ ಸಂಸ್ಥೆಯ ತಂಡ ಯಶಸ್ವಿಯಾಗಿ ನಡೆಸಿದೆ.

ಶಂಕರ ಭಟ್ಟತಾರೀಮಕ್ಕಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಲ್ಲಾಪುರ (ಫೆ.8) : ಹವ್ಯಕ ಸಮಾಜದಲ್ಲಿ ವಧುಗಳ ಅಭಾವದ ಪರಿಣಾಮ ಉತ್ತರಪ್ರದೇಶದಿಂದ ಹವ್ಯಕ ಹೆಣ್ಣುಮಕ್ಕಳ ಪಾಲಕರನ್ನು ಸಂಪರ್ಕಿಸಿ ವಿವಾಹ ಕಾರ್ಯ ನೆರವೇರಿಸುವ ಮಹತ್‌ ಕಾರ್ಯವನ್ನು ಸ್ವರ್ಣವಲ್ಲಿ ಮಠದ ಅಧೀನನ ‘ಸಪ್ತಪದಿ’ ಸಂಸ್ಥೆಯ ತಂಡ ಯಶಸ್ವಿಯಾಗಿ ನಡೆಸಿದೆ.

ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಶ್ರೀ ಅನುಗ್ರಹದಂತೆ ಭಾರತದ ದಕ್ಷಿಣೋತ್ತರ ಸಂಬಂಧ ಬೆಸೆಯಲು ಕಾರಣವಾಗಿದೆ. ಅದರಲ್ಲೂ ಸುಮಾರು 70ಕ್ಕೂ ಹೆಚ್ಚಿನ ಕನ್ಯೆಯರು ಈ ಜಿಲ್ಲೆಗೆ ಬಂದು ವಿವಾಹವಾಗಿ ಸುಖ, ಸಂತಸದ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಯಲ್ಲಾಪುರಕ್ಕೆ ಅತಿಹೆಚ್ಚು ಉತ್ತರಪ್ರದೇಶ ಭಾಗದಿಂದ ಹೆಣ್ಣುಮಕ್ಕಳು ವಿವಾಹವಾಗಿ ಬಂದಿದ್ದಾರೆ.

ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ: ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ರೈತರು

ಪ್ರಕಾಶ-ಜಾಹ್ನವಿ:

ಇತ್ತೀಚೆಗೆ ತಾಲೂಕಿನ ಚಂದಗುಳಿ ಗ್ರಾಪಂ ವ್ಯಾಪ್ತಿಯ ಸಾವಿತ್ರಿ ಮತ್ತು ಗೋಪಾಲಕೃಷ್ಣ ಹಂಗಾರಿ ಜೂಜಿನಬೈಲ್‌ ಎಂಬವರ ಪುತ್ರ, ಪ್ರಕಾಶ ಹಂಗಾರಿ ಅವರೊಂದಿಗೆ ಸೋನಿಯಾ ಮಿಶ್ರಾ ಮತ್ತು ಅಂಜನಿಕುಮಾರ ಮಿಶ್ರಾ ಅವರ ಸುಪುತ್ರಿ ಜಾಹ್ನವಿ ಮಿಶ್ರಾ ವಿವಾಹ ಕಾರ್ಯಕ್ರಮವು ಉತ್ತರ ಪ್ರದೇಶದ ತುಳಸೀಪುರದಲ್ಲಿ ಫೆ.4ರಂದು ನೆರವೇರಿತು.

ಈ ಸಂದರ್ಭದಲ್ಲಿ ವಿನಾಯಕ ಭಟ್ಟಅಗ್ಗಾಸಿ, ಅನಂತ ಅಬ್ಬಿ, ಬಂಧು-ಮಿತ್ರರು ಉಪಸ್ಥಿತರಿದ್ದು ವಧು-ವರರನ್ನು ಆಶೀರ್ವದಿಸಿದರು. ಸಪ್ತಪದಿಯ ಕಾರ್ಯಕರ್ತರ ತಂಡ ಈ ಶ್ರೇಷ್ಠ ಕಾರ್ಯ ಮಾಡುವಲ್ಲಿ ನಿರಂತರ ಪ್ರಯತ್ನಿಸುತ್ತಿದೆ. ಇದಕ್ಕೆ ಪೂಜ್ಯರ ಆಶೀರ್ವಾದವೇ ಕಾರಣ. ತಂಡದ ಎಲ್ಲರನ್ನು ಅಭಿನಂದಿಸುತ್ತೇನೆ ಎಂದು ಸಪ್ತಪದಿ ಸಂಸ್ಥೆಯ ಅಧ್ಯಕ್ಷ ಗಣಪತಿ ಬೋಳಗುಡ್ಡೆ ತಿಳಿಸಿದ್ದಾರೆ.

ಮೂರು ಲೋಕದಲ್ಲೂ ಕಾಣ ಸಿಗದ ಅದ್ಭುತ ಸುಂದರಿ ಈ ಗಂಧರ್ವ ಕನ್ಯೆ ‘ಆಮ್ರಪಾಲಿ’