ಮದುವೆ ಫಿಕ್ಸ್ ಆಗ್ತಿದ್ದಂತೆ ಶಾಕಿಂಗ್ ವಿಷ್ಯ ಸರ್ಚ್ ಮಾಡ್ತಾರಂತೆ ಹುಡುಗೀರು!
ಮದುವೆ ಪ್ರತಿಯೊಬ್ಬರಿಗೂ ವಿಶೇಷವಾಗಿರುತ್ತದೆ. ಮದುವೆ ನಂತ್ರ ಹಾಗಿರಬೇಕು ಹೀಗಿರಬೇಕೆಂದು ಕನಸು ಕಾಣುವ ಹುಡುಗಿಯರು, ಮದುವೆಗೆ ಮುನ್ನ ಕೆಲ ತಯಾರಿ ನಡೆಸ್ತಾರೆ. ಗೂಗಲ್ ಮೂಲಕ ಕೆಲ ಮಾಹಿತಿಯನ್ನು ಸಂಗ್ರಹಿಸ್ತಾರೆ.
ಮದುವೆ ಒಂದು ಬಿಡಿಸಲಾಗದ ಬಂಧ. ಜೀವನ ಪರ್ಯಂತ ಸಂಗಾತಿ ಜೊತೆಗಿರಬೇಕು. ಫಸ್ಟ್ ಇಂಪ್ರೆಶನ್ ಈಸ್ ಬೆಸ್ಟ್ ಇಂಪ್ರೆಶನ್ ಎನ್ನುವಂತೆ ಮೊದಲ ಭೇಟಿ, ಮೊದಲ ಮಾತು ಎಲ್ಲವೂ ವಿಶೇಷವಾಗಿಯೇ ಇರುತ್ತದೆ. ಸಂಗಾತಿ ತನಗೆ ಆಕರ್ಷಿತವಾಗ್ಬೇಕೆಂದು ಎಲ್ಲ ಹುಡುಗಿಯೂ ಬಯಸ್ತಾರೆ. ಹುಟ್ಟಿದ ಮನೆ ಬಿಟ್ಟು ಇನ್ನೊಂದು ಮನೆಗೆ ಹೋಗಿ ಬಾಳ್ವೆ ಮಾಡುವುದು ಹೇಳಿದಷ್ಟು ಸುಲಭವಲ್ಲ. ಪತಿ ಜೊತೆ ಕುಟುಂಬಸ್ಥರ ಜೊತೆಯೂ ಹೊಂದಾಣಿಕೆ ಮುಖ್ಯವಾಗುತ್ತದೆ. ಅಲ್ಲಿನ ಪದ್ಧತಿ, ಸಂಸ್ಕೃತಿಗೆ ತಕ್ಕಂತೆ ನಡೆಯಬೇಕಾಗುತ್ತದೆ. ಮದುವೆ ಜೀವನದಲ್ಲಿ ಆಗುವ ದೊಡ್ಡ ಬದಲಾವಣೆ. ಮದುವೆ ನಂತ್ರ ಹುಡುಗಿಯರು ಬದಲಾಗ್ತಾರೆ. ಹುಡುಗ ಎಷ್ಟೇ ಆಪ್ತನಾಗಿರಲಿ, ಮದುವೆ ಎಂದಾಗ ಎಲ್ಲ ಹುಡುಗಿಯರು ಭಯಕ್ಕೊಳಗಾಗ್ತಾರೆ. ಮನಸ್ಸಿನಲ್ಲೊಂದಿಷ್ಟು ಗೊಂದಲ, ಆತಂಕ ಮನೆ ಮಾಡಿರುತ್ತದೆ. ಹಾಗೆ ಸೌಂದರ್ಯ ಪ್ರಜ್ಞೆ ಜಾಗೃತವಾಗಿರುತ್ತದೆ. ಮದುವೆ ನಿಶ್ಚಿಯವಾಯ್ತು ಎಂದಾಗ ಹುಡುಗಿಯರು ಮೊದಲು ಸಹಾಯ ಕೇಳೋದೇ ಗೂಗಲ್ (Google) ಅನ್ನು. ಯಸ್. ಗೂಗಲ್ ನಲ್ಲಿ ಈಗ ಎಲ್ಲವೂ ಸಿಗುತ್ತೆ. ಇದೇ ಕಾರಣಕ್ಕೆ ಹುಡುಗಿಯರು ಗೂಗಲ್ ನಲ್ಲಿ ಒಂದಿಷ್ಟು ಮಾಹಿತಿ ಹುಡುಕ್ತಾರೆ. ಮದುವೆ ಫಿಕ್ಸ್ ಆಗ್ತಿದ್ದಂತೆ ಹುಡುಗಿಯರು ಗೂಗಲ್ ನಲ್ಲಿ ಏನು ಸರ್ಚ್ (ಮಾಡ್ತಾರೆ ಎಂಬುದನ್ನು ನಾವಿಂದು ಹೇಳ್ತೇವೆ.
ಗೂಗಲ್ ನಲ್ಲಿ ಹುಡುಗಿಯರು ಸರ್ಚ್ ಮಾಡ್ತಾರೆ ಈ ಸಂಗತಿ :
ಬಟ್ಟೆ : ಹುಡುಗಿಯರು ಅಂದ್ಮೇಲೆ ಇದು ಕಾಮನ್. ಗೂಗಲ್ ನಲ್ಲಿ ಚೆಂದದ ಬಟ್ಟೆ ಸರ್ಚ್ ಮಾಡುವುದು ಅನೇಕ ಹುಡುಗಿಯರ ಹವ್ಯಾಸವೂ ಹೌದು. ಆದ್ರೆ ಮದುವೆ ನಿಶ್ಚಯವಾಗ್ತಿದ್ದಂತೆ ಮದುವೆಗೆ ಯಾವ ಡ್ರೆಸ್ ಧರಿಸಬೇಕು ಎನ್ನುವುದ್ರಿಂದ ಹಿಡಿದು ಮದುವೆ ನಂತ್ರ ಯಾವ ಬಟ್ಟೆ ಧರಿಸಬೇಕು ಎನ್ನುವವರೆಗೆ ಎಲ್ಲವನ್ನೂ ಹುಡುಗಿಯರು ಗೂಗಲ್ ಮಾಡ್ತಾರೆ. ಮದುವೆ ನಂತ್ರ ಪತಿ ಮನೆಯಲ್ಲಿ ಯಾವ ಬಟ್ಟೆ ಧರಿಸಿದ್ರೆ ಸೂಕ್ತ ಹಾಗೆ ಪತಿಯನ್ನು ಆಕರ್ಷಿಸಲು ಯಾವ ಡ್ರೆಸ್ ಧರಿಸಬೇಕೆಂದು ಹುಡುಗಿಯರು ಮಾಹಿತಿ ಸಂಗ್ರಹಿಸುತ್ತಾರೆ. ಮದುವೆ ನಂತ್ರ ಸಾಮಾನ್ಯವಾಗಿ ಹುಡುಗಿಯರ ಡ್ರೆಸ್ ನಲ್ಲಿ ಬದಲಾವಣೆ ಆಗೋದನ್ನು ನೀವು ಗಮನಿಸಿರಬಹುದು.
ಸ್ಟ್ರೆಚ್ ಮಾರ್ಕ್ ಬಗ್ಗೆ ಚಿಂತೆ ಬೇಡ, ಈ ಮನೆಮದ್ದು ಟ್ರೈ ಮಾಡಿ...
ಮದುವೆಗೆ ಸರಿಯಾದ ವಯಸ್ಸು : ಅರೇ, ಮದುವೆ ನಿಶ್ಚಯವಾದ್ಮೇಲೆ ಇದೆಲ್ಲ ಏಕೆ ಅಂತಾ ನೀವು ಕೇಳ್ಬಹುದು. ಆದ್ರೆ ನಮ್ಮ ಹುಡುಗಿಯರಿಗೆ ಮದುವೆ ಬಗ್ಗೆ ಇರುವ ಭಯ ಹೋಗಲಾಡಿಸಲು ಅವರು ಈ ವಿಷ್ಯವನ್ನೂ ಸರ್ಚ್ ಮಾಡ್ತಾರೆ. ಮದುವೆ ಬಗ್ಗೆ ಉತ್ಸುಕರಾಗಿದ್ದರೂ, ತಾವು ತೆಗೆದುಕೊಂಡ ನಿರ್ಧಾರ ಸರಿಯಾಗಿದೆಯಾ? ಮದುವೆಯಾಗಲು ಇದು ಸರಿಯಾದ ವಯಸ್ಸೇ ಎಂಬುದನ್ನು ಅವರು ಗೂಗಲ್ ಮಾಡ್ತಾರೆ. ಮದುವೆಯಾಗಲು ಯಾವುದು ಸರಿಯಾದ ವಯಸ್ಸು ಎಂದು ಹುಡುಕಾಡುವ ಹುಡುಗಿಯರು, ನಾನು ಬೇಗ ಮದುವೆಯಾಗ್ತಿಲ್ಲ ಅಲ್ವಾ ಎಂದು ತನ್ನನ್ನು ತಾನೇ ಪ್ರಶ್ನೆ ಮಾಡಿಕೊಳ್ತಾರೆ.
ಪ್ರೆಗ್ರೆನ್ಸಿ ಟೆಸ್ಟ್ ಕಿಟ್ ಸರಿಯಾದ ರೀತಿಯಲ್ಲಿ ಬಳಸೋದು ಹೇಗೆ ?
ಪತಿಯ ಸಂತೋಷಕ್ಕೆ ಏನು ಮಾಡ್ಬೇಕು ? : ಮದುವೆ ನಂತ್ರ ಹೊಸ ಮನೆಗೆ ಹೋಗಬೇಕೆಂಬ ಆತಂಕವಿರುತ್ತದೆ. ಅಲ್ಲಿನ ಪರಿಸರಕ್ಕೆ ನಾನು ಹೊಂದಿಕೊಳ್ತೇನಾ ಎಂಬ ಭಯವಿರುತ್ತದೆ. ಹಾಗೆ ಪತಿಗೆ ನಾನು ಸಂತೋಷ ನೀಡಬಲ್ಲೆನಾ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಮನಸ್ಸಿನಲ್ಲಿರುವ ಈ ಪ್ರಶ್ನೆಗೆ ಗೂಗಲ್ ನಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಪತಿಯನ್ನು ಸಂತೋಷವಾಗಿಡಲು ಏನೇನು ಮಾಡ್ಬೇಕು ಎಂಬುದನ್ನು ಅವರು ಸರ್ಚ್ ಮಾಡ್ತಾರೆ. ಹಾಗೆಯೇ ಅನೇಕ ಹುಡುಗಿಯರು ಅತ್ತೆ ಜೊತೆ ಸಂಬಂಧ ಹೇಗಿರಬೇಕು ಎನ್ನುವ ಬಗ್ಗೆಯೂ ಗೂಗಲ್ ಗೆ ಪ್ರಶ್ನೆ ಕೇಳ್ತಾರೆ. ಹೊಸ ಅಡಿಕೆ ಕಲಿಕೆಯಿಂದ ಹಿಡಿದು ಮನೆ ಕೆಲಸದವರೆಗೆ ಎಲ್ಲ ಮಾಹಿತಿಯನ್ನು ಹುಡುಗಿಯರು ಗೂಗಲ್ ನಲ್ಲಿ ಹುಡುಕ್ತಾರೆ.