Asianet Suvarna News Asianet Suvarna News

ಅಜ್ಜಿಯ ಕೊನೆಯ ಆಸೇ ಈಡೇರಿಸಲು ಸಮಾಧಿ ಮೇಲೆ ಐದೂವರೆ ಅಡಿ ಎತ್ತರದ ಶಿಶ್ನ ಪ್ರತಿಮೆ ಕೆತ್ತನೆ!

ಮನುಷ್ಯನ ಆಸೆಗಳಿಗೆ ಕೊನೆ ಇಲ್ಲ. ಒಂದರ ಮೇಲೊಂದರಂತೆ ಆಸೆಗಳ, ಆಕಾಂಕ್ಷೆಗಳು ಇದ್ದೇ ಇರುತ್ತದೆ. ಇದರಲ್ಲಿ ಕೆಲವರು ವಿಚಿತ್ರ ಬಯಕೆಗಳನ್ನು ಇಟ್ಟುಕೊಂಡಿರುತ್ತಾರೆ. ಹೀಗೆ ಅಜ್ಜಿಯ ವಿಚಿತ್ರ ಆಸೆಯನ್ನು ಕಡೆಗಣಿಸಿದ್ದ ಕುಟುಂಬ, ಬಳಿಕ ಯಾರು ಏನೇ ಅಂದರೂ ಅಜ್ಜಿಯ ಆಸೆ ಈಡೇರಿಸಲು ಐದೂವರೆ ಅಡಿ ಎತ್ತರದ ಶಿಶ್ನದ ಪ್ರತಿಮೆ ನಿರ್ಮಿಸಿ ಅನಾವರಣ ಮಾಡಿದ್ದಾರೆ. 

Giant statue of penis on top of  grave Family fulfill Mexican grandmother dying wish ckm
Author
Bengaluru, First Published Aug 1, 2022, 9:20 AM IST

ಮೆಕ್ಸಿಕೋ(ಆ.01):  ಅಜ್ಜಿಯ ತನ್ನ ಕೊನೆಯ ಆಸೆಯನ್ನು ಬಿಚ್ಚಿಟ್ಟಾಗ ಕುಟುಂಬ ಸದಸ್ಯರಿಗೆ ಅಚ್ಚರಿ ಕಾದಿತ್ತು. ಕಾರಣ ತನ್ನ ಸಮಾಧಿ ಮೇಲೆ ಶಿಶ್ನದ ಪ್ರತಿಮೆ ಇರಬೇಕು ಎಂದಿದ್ದಾರೆ. ಅಜ್ಜಿಯ ಈ ಮಾತನ್ನು ಕುಟುಂಬಸ್ಥರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ 99ನೇ ವಯಸ್ಸಿನಲ್ಲಿ ಅಜ್ಜಿ ನಿಧನರಾದ ಬಳಿಕ ಕುಟಂಬಸ್ಥರು ಅಜ್ಜಿಯ ಕೊನೆಯ ಆಸೆ ಈಡೇರಿಸಲು ನಿರ್ಧರಿಸಿದರು. ಇದರ ಪರಿಣಾಮ ಅಜ್ಜಿಯ ಸಮಾಧಿ ಮೇಲೆ ಐದೂವರೆ ಅಡ್ಡಿ ಎತ್ತರದ ಶಿಶ್ನದ ಪ್ರತಿಮೆ ನಿರ್ಮಿಸಿ ಅನಾವರಣ ಮಾಡಿದ್ದಾರೆ. ಈ ಘಟನೆ ನಡೆದಿರುವುದು ಮೆಕ್ಸಿಕೋದಲ್ಲಿ. ಈ ಅಜ್ಜಿಯ ಹೆಸರು ಕ್ಯಾಟರಿನಾ ಒರ್ಡುನಾ ಪೆರಾಜ್. ಜನವರಿ 20, 2021ರಲ್ಲಿ ಕ್ಯಾಟರಿನಾ 99ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆದರೆ ಅಜ್ಜಿ ನಿಧನಕ್ಕೂ ವರ್ಷಗಳ ಮೊದಲೇ ತನ್ನ ಸಮಾಧಿ ಮೇಲೆ ಶಿಶ್ನದ ಪ್ರತಿಮೆ ಇರಬೇಕು. ಹಾಗಿದ್ದರೆ ಮಾತ್ರ ನನ್ನ ಆತ್ಮಕ್ಕೆ ನೆಮ್ಮದಿ ಎಂದಿದ್ದರು. ಆದರೆ ಶಿಶ್ನದ ಪ್ರತಿಮೆ ಎಂದಾಗ ಕುಟುಂಬಸ್ಥರು ಅಜ್ಜಿಯ ಮಾತನ್ನು ನಿರ್ಲಕ್ಷ್ಯಸಿದ್ದಾರೆ. ನಿಧನ ಬಳಿಕವೂ ಕುಟುಂಬಸ್ಥರು ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ ಅಜ್ಜಿಯ ನಿಧನದ ಬಳಿಕ ಅನುಪಸ್ಥಿತಿ ಕುಟುಂಬಕ್ಕೆ ಕಾಡತೊಡಗಿತ್ತು. ಸರಿಸುಮಾರು ಒಂದು ವರ್ಷಗಳ ತನಕ ಕುಟುಂಬಸ್ಥರು ಅಜ್ಜಿಯ ಆಸೆ ಈಡೇರಿಸುವ ಗೋಜಿಗೆ ಹೋಗಿರಲಿಲ್ಲ. ಬಳಿಕ ಅಜ್ಜಿಯ ಪ್ರೀತಿ, ವಾತ್ಸಲ್ಯ ಹಾಗೂ ಕುಟುಂಬಸ್ಥರನ್ನು ಬೆಳೆಸಿದ ರೀತಿಗಾಗಿ ಅಜ್ಜಿಯ ಕೊನೆಯ ಆಸೆ ಈಡೇರಿಸಲು ಮುಂದಾಗಿದ್ದಾರೆ. ಹೀಗಾಗಿ ಅಜ್ಜಿಯ ಸಮಾಧಿ ಮೇಲೆ ಐದೂವರೆ ಅಡಿ ಎತ್ತರದ ಶಿಶ್ನದ ಪ್ರತಿಮೆ ನಿರ್ಮಿಸಿದ್ದಾರೆ. ಇದರ ಒಟ್ಟು ತೂಕ 600 ಪೌಂಡ್. 

 

ನ್ಯೂಯಾರ್ಕ್‌ ಗಾರ್ಡನ್‌ನಲ್ಲಿ ಅರಳುತ್ತೆ ಅಪರೂಪ ಶಿಶ್ನದ ಹೂವು !

ಅಜ್ಜಿಯ ಪ್ರೀತಿ ಹಾಗೂ ಸಂತೋಷವನ್ನು ಪರಿಗಣಿಸಿ ಈ ಸ್ಮಾರಕ ನಿರ್ಮಿಸಲಾಗಿದೆ. ಮೆಕ್ಸಿಕೋದಲ್ಲಿ ಇದೀಗ ಅಧುನಿಕತೆ ಗಾಳಿ ಹಾಸುಹೊಕ್ಕಿದೆ. ಆದರೆ ಅಜ್ಜಿಯ ಕಾಲದಲ್ಲಿ ಆಧುನಿಕ ಚಿಂತನೆಗಳು ಇರಲಿಲ್ಲ. ಕಟ್ಟುಪಾಡು, ಸಂಪ್ರದಾಯ, ಗೌಪ್ಯತೆಗಳೇ ಹೆಚ್ಚಾಗಿತ್ತು. ಈ ಕಾಲದಲ್ಲಿ ನಮ್ಮ ಅಜ್ಜಿ ದೂರದೃಷ್ಟಿ ಹೊಂದಿದ್ದರು. ಆಧುನಿಕ ಚಿಂತನೆಗಳನ್ನು ಹೊಂದಿದ್ದರು. ನೇರ ನುಡಿ ಮೂಲಕ ಎಲ್ಲವನ್ನೂ ಮುಕ್ತವಾಗಿ ಚರ್ಚಿಸುತ್ತಿದ್ದರು. ಇದು ನಮ್ಮ ಜೀವನದಲ್ಲೂ ಸಹಕಾರಿಯಾಗಿದೆ. ಮೆಕ್ಸಿಕೋ ಸಂಪ್ರದಾಯಕ್ಕೆ ಕಟ್ಟು ಬೀಳದೆ, ಆಧುನಿಕತೆಯಲ್ಲಿ ಸಾಗಿದ ಅಜ್ಜಿ ತನ್ನ ಸಾವಿನ ಬಳಿಕವೂ ಈ ಸಂದೇಶ ಜನರಿಗೆ ತಲುಪಬೇಕು ಎಂದು ನಿರ್ಧರಿಸಿದ್ದರು. ಈ ಕಾರಣಕ್ಕೆ ಅಜ್ಜಿ ತನ್ನ ಸಮಾಧಿ ಮೇಲೆ ಶಿಶ್ನದ ಪ್ರತಿಮೆ ಬೇಕು ಎಂದಿದ್ದಾರೆ. ಅವರ ಆಸೆಯಂತೆ ಶಿಶ್ನದ ಪ್ರತಿಮೆ ಅನಾವರಣ ಮಾಡಿದ್ದೇವೆ ಎಂದು ಕ್ಯಾಟರಿನಾ ಮೊಮ್ಮಗ ಹೇಳಿದ್ದಾರೆ.

ಹೀಗಿದೆ ನೋಡಿ ಜಗತ್ತಿನ ಏಕೈಕ ಶಿಶ್ನ ಮ್ಯೂಸಿಯಂ!

ಕ್ಯಾಟರಿನಾ ಮೆಕ್ಸಿಕೋದ ಮಿಸಾಂತ್ಲಾ ಪಟ್ಟಣದಲ್ಲಿ ನೆಲೆಸಿದ್ದರು. ಇಲ್ಲಿ ಡೋನಾ ಕ್ಯಾಟಾ ಎಂದೇ ಜನಪ್ರಿಯರಾಗಿದ್ದರು. ಶಿಶ್ನದ ಮೇಲೆ ಮೋಹದಿಂದ ಡೋನಾ ಕ್ಯಾಟ ಎಂದು ಗುರುತಿಸಿಕೊಂಡಿದ್ದರು ಎಂದು ಕ್ಯಾಟರಿನಾ ಕುಟುಂಬಸ್ಥರು ಹೇಳಿದ್ದಾರೆ.  ಆರಂಭದಲ್ಲಿ ಶಿಶ್ನದ ಪ್ರತಿಮೆ ನಿರ್ಮಾಣ ಮಾಡಬೇಕು ಎಂದಾಗ ಶಿಲ್ಪಿ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಅಜ್ಜಿಯ ಕೊನೆಯ ಆಸೆ ಕುರಿತು ಹೇಳಿದ ಬಳಿಕ 12 ಶಿಲ್ಪಕಲಾಕಾರರು ಒಂದು ತಿಂಗಳ ಅವಧಿಯಲ್ಲಿ ಈ ಕೆತ್ತನೆ ಮಾಡಿದ್ದಾರೆ ಎಂದು ಕುಟಂಬಸ್ಥರು ಹೇಳಿದ್ದಾರೆ.

ಜುಲೈ 23 ರಂದು ಅಜ್ಜಿ ಸಮಾಧಿ ಮೇಲೆ ಶಿಶ್ನದ ಪ್ರತಿಮೆ ಅನಾವರಣ ಮಾಡಲಾಗಿದೆ. ಮೆಕ್ಸಿಕೋ  ಸ್ಮಶಾನದಲ್ಲಿ ಈ ಸಮಾಧಿ ಇದೆ. ಈ ಸುದ್ದಿ ಹರಡುತ್ತಿದ್ದಂತೆ ಇದೀಗ ಮೆಕ್ಸಿಕೋ ಸ್ಮಶಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಹಲವರು ಅಜ್ಜಿ ಸಮಾಧಿ ವೀಕ್ಷಿಸುತ್ತಿದ್ದಾರೆ. 


 

Follow Us:
Download App:
  • android
  • ios