ಭಾಷೆ, ಮನುಷ್ಯ ಸಂವಹನವನ್ನು ನಡೆಸಲಿರುವ ದಾರಿ. ಆಯಾ ಪ್ರದೇಶದಲ್ಲಿ ನಿರ್ಧಿಷ್ಟವಾದ ಭಾಷೆಯನ್ನು ಮಾತನಾಡುತ್ತಾರೆ. ಹೀಗಾಗಿ ಹೆಚ್ಚು ಭಾಷೆಯನ್ನು ತಿಳಿದುಕೊಂಡಿರುವುದು ಹೆಚ್ಚು ಅನುಕೂಲಕಾರಿಯಾಗಿದೆ. ಆದರೆ ಬಹುತೇಕರು ಮೂರ್ನಾಲ್ಕು ಭಾಷೆಯನ್ನಷ್ಟೇ ತಿಳಿದಿರುತ್ತಾರೆ. ಆದ್ರೆ ತಮಿಳುನಾಡಿನ ಈ ಮಹಿಳೆ ಬರೋಬ್ಬರಿ 15 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 27 ವರ್ಷದ ಕಿರುಭಾಷಿಣಿ ಜಯಕುಮಾರ್ 15 ಭಾಷೆಗಳಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆ. ತಮ್ಮ ಎಂಟನೇ ವಯಸ್ಸಿನಿಂದಲೂ ಭಾಷೆಗಳನ್ನು ಕಲಿಯುವ ಉತ್ಸಾಹವನ್ನು ಕಿರುಭಾ‍ಷಿಣಿ ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲಿ, ಅವರು ತಮಿಳು, ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬರೆಯುವುದನ್ನು ಮಾತನಾಡುವುದನ್ನು ಕಲಿತಿದ್ದಾರೆ. ಆಕೆಯ ಉತ್ಸಾಹವನ್ನು ಅರಿತುಕೊಂಡ ನಂತರ ಆಕೆಯ ಪೋಷಕರು ಬಹು ಭಾಷೆಗಳನ್ನು ಅಧ್ಯಯನ ಮಾಡಲು ಬೆಂಬಲಿಸಿದರು. ಸದ್ಯ ಕಿರುಭಾಷಿಣಿ ಜಯಕುಮಾರ್ 15 ಭಾಷೆಗಳನ್ನು ಓದಲು, ಮಾತನಾಡಲು ಮತ್ತು ಬರೆಯಬಲ್ಲರು.

ಕಿರುಭಾಷಿಣಿ ಸದ್ಯ ತಮಿಳು, ಇಂಗ್ಲಿಷ್, ಹಿಂದಿ, ಸಂಸ್ಕೃತ, ಕನ್ನಡ, ಮಲಯಾಳಂ, ಬೆಂಗಾಲಿ, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಇಟಾಲಿಯನ್, ಪೋರ್ಚುಗೀಸ್, ಜಪಾನೀಸ್, ಟರ್ಕಿಶ್ ಮತ್ತು ಅರೇಬಿಕ್ ಭಾಷೆಯನ್ನು (Language) ಬಲ್ಲರು. ಈಗ ಅವರು 15 ಭಾಷೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವುಗಳನ್ನು ದೋಷರಹಿತವಾಗಿ ಮಾತನಾಡಲು (Talking) ಮತ್ತು ಬರೆಯಲು (Writing) ಸಮರ್ಥರಾಗಿದ್ದಾರೆ. 

ವೇಟರ್ ಆಗಿದ್ದ ಮಹಿಳೆ ಇಂದು 105 ಕೋಟಿ ರೂ. ಸಂಪಾದಿಸುವ ಬ್ಲಾಗರ್!

ನಿರಂತರವಾಗಿ ಹೊಸ ಭಾಷೆಯನ್ನು ಕಲಿಯುವ ಪ್ರಯತ್ನ
ಕೊಯಮತ್ತೂರಿನ ರಾಮನಾಥಪುರಂ ಪ್ರದೇಶದವರಾದ ಕಿರುಭಾಷಿಣಿ ಅವರು ಎಂ.ಎ. ಪದವೀಧರರು. ಹೊಸ ಹೊಸ ಭಾಷೆಯನ್ನು ಕಲಿಯುವ ಪ್ರಯತ್ನವನ್ನು ಅವರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.ನಿರರ್ಗಳವಾಗಿ ಮಾತನಾಡುವ ಹಂತಕ್ಕೆ ಭಾಷೆಯನ್ನು ಕರಗತ ಮಾಡಿಕೊಳ್ಳಲು ಕೇವಲ ಮೂರು ತಿಂಗಳು ತೆಗೆದುಕೊಳ್ಳುತ್ತದೆ ಮತ್ತು ತರಬೇತಿಗಾಗಿ ಹಲವಾರು ರಾಜ್ಯಗಳು ಮತ್ತು ದೇಶಗಳಿಗೆ ಹೋಗಿದ್ದೇನೆ ಎಂದು ಅವರು ಹೇಳುತ್ತಾರೆ.

ಹೊಸ ಭಾಷೆಗಳನ್ನು ಕಲಿಯಲು ಬಯಸುವ ಮಕ್ಕಳಿಗೆ ಉಚಿತವಾಗಿ ಭಾಷೆಗಳನ್ನು ಕಲಿಸುತ್ತೇನೆ. ನಾನು 30ನೇ ವಯಸ್ಸಿಗೆ 20 ಭಾಷೆಗಳನ್ನು ಕರಗತ ಮಾಡಿಕೊಳ್ಳುತ್ತೇನೆ ಮತ್ತು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಳ್ಳುತ್ತೇನೆ ಎಂದು ನಾನು ಭಾವಿಸುತ್ತೇನೆ' ಎಂದು ಕಿರುಭಾಷಿಣಿ ಹೇಳಿದ್ದಾರೆ. ಭಾರತದಲ್ಲಿ ಅನೇಕ ಜನರು ಅನೇಕ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದರೆ. ಸದ್ಯ 15 ವಿವಿಧ ಭಾಷೆಗಳನ್ನು ನಿರರ್ಗಳವಾಗಿ ಉಚ್ಚರಿಸಲು, ಬರೆಯಲು ಮತ್ತು ಓದಬಲ್ಲ ಈ ಕೊಯಮತ್ತೂರು ಮಹಿಳೆ (Women) ಪುರಸ್ಕಾರಗಳನ್ನು ಪಡೆಯುತ್ತಿದ್ದಾರೆ.

ಅಬ್ಬಬ್ಬಾ..ಧೈರ್ಯವೇ..25 ಅಡಿ ಆಳದ ಬಾವಿಗಿಳಿದು ಚಿರತೆ ರಕ್ಷಿಸಿದ ಮಹಿಳೆ

ಹೊಸ ಭಾಷೆಗಳನ್ನು ಕಲಿತದ್ದು ಹೇಗೆ ?
ನಾನು 19 ವರ್ಷಗಳ ಹಿಂದೆ ಭಾಷೆಗಳನ್ನು ಕಲಿಯಲು ಪ್ರಾರಂಭಿಸಿದೆ. ಶಾಲೆಯಲ್ಲಿ ಇಂಗ್ಲಿಷ್ ಕಲಿಯುವುದರ ಜೊತೆಗೆ ನನ್ನ ಮಾತೃಭಾಷೆ (Mother tongue) ತಮಿಳು, ಹಿಂದಿಯನ್ನು ನಾನು ಕುತೂಹಲದಿಂದ ಕಲಿಯಲು ಆರಂಭಿಸಿದೆ. ನಂತರ ನಾನು ಯುರೋಪಿನ ಭಾಷೆಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದೆ. ನಾನು 8 ರಿಂದ 9 ವಿವಿಧ ಭಾಷೆಗಳನ್ನು ಕಲಿತುಕೊಂಡ ನಂತರ ಕಿರುಭಾ ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಅನ್ನು ಪ್ರಾರಂಭಿಸಿದೆ. ವೈದ್ಯರು ಮತ್ತು ರಾಜಕಾರಣಿಗಳು ಸೇರಿದಂತೆ ಅನೇಕ ಜನರು ನನ್ನಿಂದ ಭಾಷೆಗಳನ್ನು ಕಲಿಯಲು ಪ್ರಾರಂಭಿಸಿದರು. ನಂತರ ನಾನು ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದೆ. ಕಲಿಕೆ ಮತ್ತು ಬೋಧನೆಯ ಜೊತೆಗೆ, ನಾನು ಕೆಲವು ವಿಭಿನ್ನ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದ ನಂತರ ನನ್ನ ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದೆ ಎಂದು ಕಿರುಭಾಷಿಣಿ ಮಾಹಿತಿ ನೀಡಿದ್ದಾರೆ.

ನಾನು ನನ್ನ BSW ಮತ್ತು MA ಅನ್ನು ಹಿಂದಿಯಲ್ಲಿ ಮುಗಿಸಿದ್ದೇನೆ ಮತ್ತು ನಾನು ಪ್ರಸ್ತುತ ಇಂಗ್ಲಿಷ್‌ನಲ್ಲಿ ನನ್ನ MA ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಸಾಮಾನ್ಯವಾಗಿ ನನ್ನ ದಿನದ ಮೊದಲ ಎರಡು ಗಂಟೆಗಳ ಕಾಲ ಭಾಷಾ ಪುಸ್ತಕಗಳನ್ನು ಓದುತ್ತೇನೆ. ನಾನು ಮಲಗುವ ಮುನ್ನ ಹಲವಾರು ಭಾಷಾ ಪುಸ್ತಕಗಳೊಂದಿಗೆ ದಿನವನ್ನು ಮುಗಿಸುತ್ತೇನೆ ಎಂದು ಅವರು ಹೇಳಿದ್ದಾರೆ.