ವಿದ್ಯೆ, ಛಲವಿದ್ದರೆ ಕಷ್ಟಗಳನ್ನು ಎದುರಿಸಬಹುದು ಎಂಬುದಕ್ಕೆ ವೀನಸ್ ವಾಂಗ್ ನಿದರ್ಶನ. ಗೂಗಲ್‌ನಲ್ಲಿ ಕೆಲಸ ಬಿಟ್ಟರೂ, ವಿಚ್ಛೇದನದ ನಂತರ ಮತ್ತೆ ವೃತ್ತಿ ಜೀವನ ಆರಂಭಿಸಿದರು. ಸ್ಟಾರ್ಟ್‌ಅಪ್‌ನಲ್ಲಿ ಎಐ ವಿಭಾಗದಲ್ಲಿ ಅನುಭವ ಪಡೆದರು. ಕಠಿಣ ಪರಿಶ್ರಮದಿಂದ ಇಂದು 8.7 ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ. ಪ್ರಮುಖ ಎಐ ಸಂಸ್ಥೆಯಲ್ಲಿ ಮುಖ್ಯ ಹುದ್ದೆಯಲ್ಲಿದ್ದಾರೆ. ಇದು ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ.

ವಿದ್ಯೆ ಹಾಗೂ ಕೆಲಸ ಮಾಡುವ ಛಲವಿದ್ರೆ ಎಂಥ ಕಷ್ಟವನ್ನೂ ಎದುರಿಸಿ ನಿಲ್ಲಬಹುದು. ಅದಕ್ಕೆ ವೀನಸ್ ವಾಂಗ್ (Venus Wang) ಉತ್ತಮ ನಿದರ್ಶನ. ಮದುವೆಯಾಗಿ ಮಕ್ಕಳಾದ್ಮೇಲೆ ಕೆಲಸ ಸಿಗೋದಿಲ್ಲ ಎನ್ನುವ ಮನಸ್ಥಿತಿಯಲ್ಲೇ ಮನೆಯಲ್ಲೇ ಕುಳಿತು, ಆರ್ಥಿಕ ಸಮಸ್ಯೆ ಎದುರಿಸುವ ಮಹಿಳೆಯರಿಗೆ ವೀನಸ್ ಸ್ಪೂರ್ತಿಯಾಗಿ ನಿಲ್ಲುತ್ತಾರೆ. ಗೂಗಲ್ (Google) ನಲ್ಲಿ ಕೆಲಸ ಮಾಡಿ ಅನುಭವ ಇದ್ದ ವೀನಸ್, ಗಂಡನಿಗಾಗಿ ಕೆಲಸ ಬಿಡ್ಬೇಕಾಯ್ತು. ಮಗಳು ಜನಿಸಿದ ಒಂದೇ ವರ್ಷಕ್ಕೆ ಗಂಡ ವಿಚ್ಛೇದನ ನೀಡಿದ್ದ. ಒಂಟಿಯಾಗಿ ಮಗಳನ್ನು ಬೆಳೆಸುವ ಹೊಣೆ ವೀನಸ್ ಮೈಮೇಲೆ ಬಂತು. ಕೇವಲ 10,000 ಯುಎಸ್ ಎ ಡಾಲರ್ ನಲ್ಲಿ ಜೀವನ ನಡೆಸಲು ಹೆಣಗಾಡುತ್ತಿದ್ದ ವೀನಸ್ ವಾಂಗ್ ಈಗ ಗೂಗಲ್ ನಲ್ಲಿ ಪಡೆಯುತ್ತಿದ್ದ ಸಂಬಳದ ಮೂರು ಪಟ್ಟು ಹೆಚ್ಚು ಸಂಬಳ ಪಡೆಯುತ್ತಿದ್ದಾಳೆ. ಡಿವೋರ್ಸ್ ನಂತ್ರ ಮತ್ತೆ ವೃತ್ತಿಗೆ ಮರಳುವ ನಿರ್ಧಾರಕ್ಕೆ ಬಂದ ವೀನಸ್, ಮೊದಲು ಸ್ಟಾರ್ಟ್ ಅಪ್ (Startup) ಸೇರಿಕೊಂಡ್ರು. ಎಐ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡ್ರು. ಕಠಿಣ ಪರಿಶ್ರಮ ಹಾಗೂ ನಿರಂತರ ಕೆಲಸದ ನಂತ್ರ ವೀನಸ್ ಇಂದು ಒಂದು ಮಿಲಿಯನ್ ಡಾಲರ್ ಅಂದ್ರೆ ಸುಮಾರು 8.7 ಕೋಟಿ ಸಂಬಳ ಹೊಂದಿದ್ದಾರೆ. ಅಲ್ಲದೆ ಪ್ರಮುಖ ಎಐ ಸಂಸ್ಥೆಯ ಮುಖ್ಯ ವಿಭಾಗದಲ್ಲಿ ಕೆಲಸ ಮಾಡ್ತಿದ್ದಾರೆ.

ವೀನಸ್ ವಾಂಗ್, ಮೂಲತಃ ಮಧ್ಯ ಚೀನಾದ ಕೈಫೆಂಗ್‌ನವರು. ಅಲ್ಲಿ ಹುಟ್ಟಿ ಬೆಳೆದ ಅವರು, 2013 ರಲ್ಲಿ ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದರು. ಓದು ಮುಗಿದ್ಮೇಲೆ ವೀನಸ್‌ಗೆ ಸಿಯಾಟಲ್‌ನ ಟೆಕ್ ಕಂಪನಿಯಲ್ಲಿ ಕೆಲ್ಸ ಸಿಕ್ಕತ್ತು. ಅದಾದ್ಮೇಲೆ ವೀನಸ್ ಹಾರ್ಡ್‌ವೇರ್ ವಿಭಾಗದಲ್ಲಿ ಸೋರ್ಸಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ರು. ಈ ವೇಳೆ ಅವರ ಸಂಬಳ ಆರು ಅಂಕಿ ಇತ್ತು. ಹಲವು ವರ್ಷಗಳ ಕಾಲ ಗೂಗಲ್‌ನಲ್ಲಿ ಕೆಲಸ ಮಾಡಿದ ವೀನಸ್ ವಾಂಗ್ 2020 ರಲ್ಲಿ ಗೂಗಲ್ ಕೆಲಸ ಬಿಡ್ಬೇಕಾಯ್ತು.

ಆಸ್ತಿ-ಅಂತಸ್ತು ಬೇಡ, ಭಾರತದ 6 ಅಡಿ ಎತ್ತರದ ಕ್ರಿಕೆಟ್ ಆಡುವ ಹುಡುಗ ಬೇಕು; ರಷ್ಯನ್ ಸುಂದರಿ

ಮದುವೆಯಾಗಿದ್ದ ವೀನಸ್ ಕೆಲಸ ಬಿಡಲು ಕಾರಣ ಅವರ ಪತಿ. ಗಂಡನಿಗೆ ನ್ಯೂಯಾರ್ಕ್ ಗೆ ವರ್ಗವಾದ ಕಾರಣ ವೀನಸ್ ಗೂಗಲ್ ಕೆಲಸ ಬಿಟ್ಟರು. ಸಾಕಷ್ಟು ಅನುಭವ ಹೊಂದಿದ್ದ, ಗೂಗಲ್ ನಲ್ಲಿ ಉನ್ನತ ಸ್ಥಾನಕ್ಕೆ ಏರಲು ಶ್ರಮಪಟ್ಟಿದ್ದ ವೀನಸ್ ವಿಂಗ್, ಕುಟುಂಬಕ್ಕಾಗಿ ಕಠಿಣ ನಿರ್ಧಾರ ತೆಗೆದುಕೊಂಡ್ರು. ಆದ್ರೆ ಅವರು ಅಂದ್ಕೊಂಡತೆ ಎಲ್ಲವೂ ನಡೆಯಲಿಲ್ಲ. ನ್ಯೂಯಾರ್ಕ್ ಗೆ ಹೋದ ವರ್ಷದಲ್ಲಿಯೇ ಗಂಡನಿಂದ ವಿಚ್ಛೇದನ ಪಡೆಯುವ ಸ್ಥಿತಿ ನಿರ್ಮಾಣವಾಯ್ತು. ಆಗಷ್ಟೇ ಜನಸಿದ್ದ ಮಗಳನ್ನು ಬೆಳೆಸುವ ಜವಾಬ್ದಾರಿ ವೀನಸ್ ಮೇಲಿತ್ತು. ಮಗವನ್ನು ಬೆಳೆಸಲು ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದು ವೀನಸ್ ಗುರಿಯಾಗಿತ್ತು. ಹಾಗಾಗಿಯೇ ಮತ್ತೆ ವೃತ್ತಿಗೆ ಮರಳುವ ನಿರ್ಧಾರವನ್ನು ಅವರು ತೆಗೆದುಕೊಂಡರು. ವೃತ್ತಿ ಹಾಗೂ ಸಿಂಗಲ್ ಪೇರೆಂಟಿಂಗನ್ನು ಚಾಲೆಂಜಾಗಿ ಸ್ವೀಕರಿಸಿದ ವೀನಸ್ ವಾಂಗ್ ಅದ್ರಲ್ಲಿ ಯಶಸ್ವಿಯಾಗಿದ್ದಾರೆ.

ಹಿರಿಯ ನಾಗರಿಕರಿಗೆ ಖುಷಿ ಸುದ್ದಿ, ಎಫ್ ಡಿ ಬಡ್ಡಿ ಲಕ್ಷವಾಗೋವರೆಗೆ ಟಿಡಿಎಸ್ ಕಡಿತದ ಟೆನ್ಷನ್ ಇಲ್ಲ

ತಮ್ಮ ವಿದ್ಯೆ ಹಾಗೂ ಅನುಭವವನ್ನು ಅವರು ಸರಿಯಾದ ರೀತಿಯಲ್ಲಿ ಬಳಸಿಕೊಂಡು ವೃತ್ತಿಯಲ್ಲಿ ಯಶಸ್ಸು ಕಂಡಿದ್ದಾರೆ. ವಿಚ್ಛೇದನ ನಂತ್ರ ಮತ್ತೆ ಗೂಗಲ್ ಸೇರಿದ್ದ ವೀನಸ್, 2024 ರವರೆಗೆ ಗೂಗಲ್ ಭಾಗವಾಗಿದ್ದು, ಎಐನ ಮೂರು ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ಗೂಗಲ್ ತೊರೆದ್ಮೇಲೆ ಸ್ಟಾರ್ಟ್ ಅಪ್ ಸೇರಿದ್ದ ಅವರು ಈಗ ಪ್ರಮುಖ ಟೆಕ್ ಕಂಪನಿ ಭಾಗವಾಗಿದ್ದಾರೆ. ವಿಚ್ಛೇದನದ ವೇಳೆ ಗೂಗಲ್ ನಲ್ಲಿ ವೀನಸ್ ಗೆ ಸಿಗ್ತಿದ್ದ ಸಂಬಳದ ಮೂರು ಪಟ್ಟು ಹೆಚ್ಚಿನ ಸಂಬಳ ಈಗ ಈ ಕಂಪನಿಯಲ್ಲಿ ಸಿಗ್ತಿದೆ.