ರಷ್ಯಾದ ಯುವತಿಯೊಬ್ಬಳು ಭಾರತೀಯ ಹುಡುಗ ಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸುತ್ತಿದ್ದಾಳೆ. ಆಕೆ 6 ಅಡಿ ಎತ್ತರದ, ಕ್ರಿಕೆಟ್ ಆಸಕ್ತಿಯುಳ್ಳ ಹುಡುಗನಿಗಾಗಿ ಕಾಯುತ್ತಿದ್ದು, ಲ್ಯಾಂಬೋರ್ಗಿನಿಯಲ್ಲಿ ಡೇಟಿಂಗ್ ಹೋಗಲು ಸಿದ್ಧಳಾಗಿದ್ದಾಳೆ.
ಇತ್ತೀಚೆಗೆ ಭಾರತದ ಯುವಕರಿಗೆ ಜಾಗತಿಕ ಮಟ್ಟದಲ್ಲಿ ಭಾರೀ ಬೇಡಿಕೆ ಶುರುವಾಗಿದೆ. ಕೆಲವು ತಿಂಗಳ ಹಿಂದಷ್ಟೇ ಭಾರತದ ಪುರುಷರಿಗೆ ಪಾಕಿಸ್ತಾನದಲ್ಲಿ ಬೇಡಿಕೆ ಇರುವ ವಿಡಿಯೋ ಒಂದು ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ಇದೀಗ ರಷ್ಯನ್ ಯುವತಿ ತನಗೆ 6 ಅಡಿ ಎತ್ತರದ ಭಾರತದ ಯುವಕ ಬೇಕು ಎಂದು ವಿಡಿಯೋ ಮಾಡಿ ಆತನಿಗಾಗಿ ಸೀರೆ ಧರಿಸಿ ಕಾಯುತ್ತಿದ್ದಾಳೆ. ನೀವೇನಾದರೂ 6 ಅಡಿ ಎತ್ತರವಿದ್ದರೆ, ಈಗಲೇ ಆಕೆಯನ್ನು ಸಂಪರ್ಕ ಮಾಡಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಆಕೆಯೊಂದಿಗೆ ಡೇಟಿಂಗ್ ಮಾಡಬಹುದು.
ಮೊಬೈಲ್, ಸಾಮಾಜಿಕ ಜಾತಲಾಣ ಬಂದ ನಂತರ ಇಡೀ ವಿಶ್ವವೇ ಇದೀಗ ಅಂಗೈನಲ್ಲಿ ಬಂದು ಕುಳಿತಂತಾಗಿದೆ. ಯಾವುದೇ ವ್ಯಕ್ತಿ ಎಷ್ಟೇ ದೂರದಲ್ಲಿದ್ದರೂ, ಭೂಮಿಯ ಮೇಲಿನ ಯಾವುದೇ ಮೂಲೆಯಲ್ಲಿದ್ದರೂ ಪರಸ್ಪರ ಸಂಪರ್ಕ ಮಾಡುವುದಕ್ಕೆ ಸಾಮಾಜಿಕ ಜಾಲತಾಣ ದೊಡ್ಡ ವೇದಿಕೆಯಾಗಿದೆ. ಈ ವೇದಿಕೆ ಮೂಲಕ ರಷ್ಯನ್ ಸುಂದರ ಯುವತಿಯೊಬ್ಬಳು ತನಗೆ ಭಾರತದ 6 ಅಡಿ ಎತ್ತರವಿರುವ ಕ್ರಿಕೆಟ್ ಆಡುವ ಹುಡುಗ ಬೇಕು ಎಂದು ಸರಳವಾದ ಬೇಡಿಕೆಯೊಂದನ್ನು ಇಟ್ಟಿದ್ದಾಳೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಇದೀಗ ಇದೇ ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಮ್ ಮೂಲಕ ರಷ್ಯನ್ ಯುವತಿಯೊಬ್ಬಳು ತನಗೆ ಭಾರತದ ಹುಡುಗ ಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಅದು ಕೂಡ ಭಾರತದ ಹುಡುಗ 6 ಅಡಿ ಎತ್ತರವಿರಬೇಕು, ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರಬೇಕು. ಜೊತೆಗೆ ಟ್ರಾವೆಲಿಂಗ್‌ನಲ್ಲಿಯೂ ಆಸಕ್ತಿ ಇರಬೇಕು ಎಂದು ಸರಳವಾಗಿ ತನ್ನ ಬೇಡಿಕೆಗಳನ್ನು ಇಟ್ಟಿದ್ದಾಳೆ. ಆದರೆ, ಭಾರತೀಯ ಹುಡುಗನಿಂದ ಯಾವುದೇ ಆಸ್ತಿ, ಅಂತಸ್ತು ಇರಬೇಕು ಎಂದು ಬೇಡಿಕೆಯನ್ನು ಇಟ್ಟಿಲ್ಲ. ದೆಹಲಿ, ಮುಂಬೈ, ದುಬೈ ಎಲ್ಲಿದ್ದರೂ ಸರಿ. ನಾನೇ ಅಂತಹ ಹುಡುಗ ಸಿಕ್ಕಿದರೆ ನನ್ನ ಲ್ಯಾಂಬೋರ್ಗಿನಿ ಕಾರಿನಲ್ಲಿ ಕರೆದುಕೊಂಡು ಹೋಗಿ ತನ್ನ ರೆಸ್ಟೋರೆಂಟ್‌ನಲ್ಲಿ ಡೇಟ್ ಮಾಡುವುದಾಗಿ ತಿಳಿಸಿದ್ದಾಳೆ. ಇದೀಗ ರಷ್ಯನ್ ಸುಂದರಿ ಭಾರತದ ಹುಡುಗ ಬೇಕು ಎಂಬ ಬೇಡಿಕೆಯ ವಿಡಿಯೋ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ಮದ್ವೆಯಾಗಲು ಭಾರತೀಯ ವರ ಬೇಕಾಗಿದ್ದಾನೆ, ಮಾಲ್‌ನಲ್ಲಿ ಪೋಸ್ಟರ್ ಹಿಡಿದು ಪೋಸ್ ನೀಡಿದ ರಷ್ಯನ್ ಬೆಡಗಿ!
ಇದಕ್ಕೆ ಹಲವರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಕೇರಳ, ಚೆನ್ನೈ, ಮಧುರೈ, ಬೆಂಗಳೂರು, ಪಂಜಾಬಿ, ಮುಂಬೈ, ಮಲೆಯಾಳಿ, ಹೈದರಾಬಾದ್ ಇತ್ಯಾದಿ ಯುವಕರು ಹೀಗೆ ತಮ್ಮ ಸ್ಥಳಗಳನ್ನು ಹಾಕಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ನನಗೆ ನಿನ್ನ ಅವಶ್ಯಕತೆ ಇಲ್ಲ, ಸಾಂಪ್ರದಾಯಿಕ ಭಾರತೀಯ ಹುಡುಗಿಯಿದ್ದರೆ ನಾನು ಹೆಚ್ಚು ಸಂತೋಷವಾಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ರೇಡಿಯೋ ಜಾಕಿ ಪರೀಕ್ಷಿತ್ ಎನ್ನುವವರು ನಿಮ್ಮ ಬೇಡಿಕೆಯನ್ನು ಭಾರತೀಯ ಯುವಕರ ಮುಂದಿಡುತ್ತೇನೆ ಎಂದೂ ಕಾಮೆಂಟ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನ girl_white_indian ಎಂಬ ಖಾತೆಯಿಂದ ರಷ್ಯನ್ ಮೂಲದ ನೆಲ್ಲಿ ಎಂಬ ಯುವತಿ ಹೀಗೆ ತನ್ನ ಬೇಡಿಕೆ ಇಟ್ಟಿರುವ ಹುಡುಗಿಯಾಗಿದ್ದಾಳೆ. ದುಬೈನಲ್ಲಿ ವಾಸವಾಗಿದ್ದು, ಭಾರತೀಯ ಸಂಸ್ಕೃತಿಯನ್ನು ತುಂಬಾ ಇಷ್ಟಪಡುವುದಾಗಿ ತಿಳಿಸಿದ್ದಾರೆ. ಈಕೆಯ ಇನ್‌ಸ್ಟಾಗ್ರಾಮ್ ಖಾತೆಗೆ 4,86,906 ಫಾಲೋವರ್ಸ್‌ಗಳಿದ್ದಾರೆ. ಇದೀಗ ದುಬೈನಲ್ಲಿ ನಡೆಯುತ್ತಿರುವ ಭಾರತದ ಎಲ್ಲ ಕ್ರಿಕೆಟ್ ಪಂದ್ಯಗಳನ್ನು ನೋಡಲು ಹೋಗಿ, ಭಾರತ ತಂಡದ ಪರವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. ಭಾರತದ ಸಂಸ್ಕೃತಿಯಂತೆ ಸೀರೆ, ಲೆಹೆಂಗಾ, ಚೂಡಿದಾರ್ ಸೇರಿದಂತೆ ಹಲವು ಉಡುಪುಗಳನ್ನು ದರಿಸಿಕೊಂಡಿದ್ದು, ಈ ಬಗ್ಗೆ ಫೋಟೋ ಶೂಟ್ ಹಾಗೂ ವಿಡಿಯೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಎರಡು ಮಕ್ಕಳ ತಂದೆಯಾಗಿರೋ ಪ್ರಿಯಕರನನ್ನ ಭೇಟಿಯಾಗಲು ಭಾರತಕ್ಕೆ ಬಂದ ಪಾಕಿಸ್ತಾನದ ಚೆಲುವೆ !
ಇನ್ನು, ಮೊಬೈಲ್ ಕೈಯಲ್ಲಿ ಹಿಡಿದುಕೊಂಡರೆ ಇಡೀ ಜಗತ್ತೇ ನಮ್ಮ ಬೆರಳ ತುದಿಯಲ್ಲಿದೆ ಎನ್ನುವಂತೆ ಭಾಸವಾಗುತ್ತದೆ. ಕಾರಣ ಭೂಮಿಯ ಮೇಲೆ ಯಾವುದೇ ಮೂಲೆಯಲ್ಲಿದ್ದರೂ ಅವರನ್ನು ಸುಲಭವಾಗಿ ಸಂಪರ್ಕ ಮಾಡಿ ಸಂವಹನ ಮಾಡಬಹುದು. ಇದಕ್ಕಾಗಿ ಜಾಗತಿಕ ಮಟ್ಟದಲ್ಲಿ ಹಲವು ಸಾಮಾಜಿಕ ಜಾಲತಾಣಗಳು ಇದಕ್ಕೆ ಅವಕಾಶ ಮಾಡಿಕೊಟ್ಟಿವೆ. ಈಗಾಗಲೇ ಭಾರತ-ಪಾಕಿಸ್ತಾನದ ಅನೇಕ ಜೋಡಿಗಳು ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾಗಿ, ಜಾತಿ-ಧರ್ಮ ಹಾಗೂ ಗಡಿಗಳನ್ನು ದಾಟಿ ಮದುವೆ ಮಾಡಿಕೊಂಡು ಸಂಸಾರ ಮಾಡುತ್ತಿದ್ದಾರೆ. ಇದಕ್ಕೆ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಒಂದು ಉದಾಹರಣೆ ಆಗಿದ್ದಾರೆ. ಇನ್ನೂ ಅನೇಕ ದೇಶಗಳ ಜನರು ಭಾರತೀಯರನ್ನು ಮದುವೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣವೇ ಸಂಪರ್ಕ ಕೊಂಡಿಯಾಗಿದೆ.
