Asianet Suvarna News Asianet Suvarna News

ಈಗ್ಲೂ ಸಿಗ್ತಿದೆ ಉಚಿತ ಹೊಲಿಗೆ ಯಂತ್ರ, ಅಪ್ಲೈ ಮಾಡೋದು ಹೇಗೆ?

ಮಹಿಳೆಯರು ಸ್ವಾವಲಂಬಿ ಜೀವನ ನಡೆಸೋದು ಬಹಳ ಮುಖ್ಯ. ಅದಕ್ಕೆ ಸರ್ಕಾರ ಕೂಡ ಸಾಕಷ್ಟು ಆರ್ಥಿಕ ಸಹಾಯ ಮಾಡ್ತಿದೆ. ಅನೇಕ ಯೋಜನೆಗಳನ್ನು ಜಾರಿಗೆ ತರ್ತಿದೆ. ಅದ್ರಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆ ಕೂಡ ಒಂದು. 
 

Free Sewing  Machine Yojana instruction to apply for union government scheme roo
Author
First Published Jun 17, 2024, 2:50 PM IST

ಮನೆಯಿಂದ ಹೊರಗೆ ಬಂದು ಕೆಲಸ ಮಾಡಲು ಸಾಧ್ಯವಾಗದ ಮಹಿಳೆಯರು ಮನೆಯಲ್ಲೇ ದುಡಿಮೆ ಮಾಡಲು ಮುಂದಾಗ್ತಾರೆ. ಮಹಿಳೆಯರು ಮಾಡಬಹುದಾದ ಅತ್ಯುತ್ತಮ ಕೆಲಸಗಳಲ್ಲಿ ಹೊಲಿಗೆ ಒಂದು. ಎಂದೂ ಬೇಡಿಕೆ ಕಡಿಮೆಯಾಗದ ಉದ್ಯೋಗ ಇದು. ಸರ್ಕಾರವೇ ಬಡ ಮಹಿಳೆಯರಿಗೆ ಹೊಲಿಗೆ ಕಲಿಸುವ ಕೆಲಸ ಮಾಡ್ತಿದೆ. ಅದ್ರ ಜೊತೆಗೆ ಹೊಲಿಗೆ ಯಂತ್ರವನ್ನೂ ನೀಡ್ತಿದೆ. ಸ್ಟಿಚ್ಚಿಂಗ್ ಬರುತ್ತೆ ಆದ್ರೆ ಹೊಲಿಗೆ ಮಶಿನ್ ಮನೆಯಲ್ಲಿಲ್ಲ ಎನ್ನುವವರು ಇಂದೇ ಸರ್ಕಾರಿ ಯೋಜನೆ ಲಾಭ ಪಡೆಯಬಹುದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು (Free Sewing Machine Scheme) ಪ್ರಾರಂಭಿಸಿದ್ದು, ಅದು ಈಗ್ಲೂ ಚಾಲ್ತಿಯಲ್ಲಿದೆ. 

ಈ ಯೋಜನೆ (Scheme) ಅಡಿಯಲ್ಲಿ ಪ್ರತಿ ರಾಜ್ಯದಲ್ಲಿ 50,000ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳ ಮಹಿಳೆಯರಿಗೆ ಉಚಿತ ಹೊಲಿಗೆ (Sewing) ಯಂತ್ರಗಳನ್ನು ನೀಡಲಾಗುವುದು. ಸರ್ಕಾರ ನಡೆಸುತ್ತಿರುವ ಉಚಿತ ಹೊಲಿಗೆ ಯಂತ್ರ ಯೋಜನೆಯ ಲಾಭ ಪಡೆಯಲು ಮಹಿಳೆಯರು ಅರ್ಜಿ (Application) ಸಲ್ಲಿಸಬೇಕು. ಕೆಳಗೆ ನೀಡಿರುವ ಮಾಹಿತಿಯ ಪ್ರಕಾರ ನೀವು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಸ್ಪೂರ್ತಿ ಕತೆ; ಅಂದು 500 ರೂ. ಸಾಲ ಪಡೆದಿದ್ದ ಈಕೆ ಇಂದು 5 ಕೋಟಿ ವ್ಯವಹಾರ ನಡೆಸುವ ಕಂಪನಿ ಒಡತಿ!

ಕೇಂದ್ರ ಸರ್ಕಾರದ ಈ ಉಚಿತ ಹೊಲಿಗೆ ಯಂತ್ರ ಯೋಜನೆ ಲಾಭವನ್ನು ಕರ್ನಾಟಕದ ಮಹಿಳೆಯರು ಕೂಡ ಪಡೆಯಬಹುದು. ಉಚಿತ ಹೊಲಿಗೆ ಯಂತ್ರ ಯೋಜನೆಯಡಿ, 20 ವರ್ಷದಿಂದ 40 ವರ್ಷ ವಯಸ್ಸಿನ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲಾಗುತ್ತಿದೆ. ಮಹಿಳೆಯರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಕರ್ನಾಟಕದ ಕೆಲ ಜಿಲ್ಲೆಯಲ್ಲಿ ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಪ್ರತಿ ಜಿಲ್ಲಾ ಪಂಚಾಯತಿ ವೆಬ್ಸೈಟ್ ನಲ್ಲಿ ಆನ್ ಲೈನ್ ಪೋರ್ಟಲ್ ಲಿಂಕ್ ನೀಡಲಾಗುತ್ತದೆ. ಅದನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.  

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆ : ಆಧಾರ್ ಕಾರ್ಡ್, ಪಾಸ್ ಪೋರ್ಟ್ ಗಾತ್ರದ ಫೋಟೋ, ಆದಾಯ ಪ್ರಮಾಣಪತ್ರ, ಕಾರ್ಮಿಕ ಕಾರ್ಡ್, ಮೊಬೈಲ್ ನಂಬರ್, ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ (Tailoring Training Certificate), ವಿಳಾಸ ಪುರಾವೆಯಾಗಿ ರೇಷನ್ ಕಾರ್ಡ್, ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ನೀಡಬೇಕು. ವಿಧವೆಯಾದಲ್ಲಿ ವಿಧವಾ ಪ್ರಮಾಣ ಪತ್ರ, ವಿಕಲಾಂಗರಾಗಿದ್ದರೆ ಅದರ ಪ್ರಮಾಣ ಪತ್ರ ನೀಡಬೇಕು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಿಂದ ದೃಡೀಕರಣ ಪತ್ರ ನೀಡಬೇಕಾಗುತ್ತದೆ. ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು, ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ನೀವು ಉಚಿತ ಹೊಲಿಗೆ ಯಂತ್ರ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.

ವಿರಾಟ್ ಕೊಹ್ಲಿಯ 112 ಕೋಟಿ ಬಿಸ್ನೆಸ್ ಸಾಮ್ರಾಜ್ಯದ ಒಡೆಯ ಈ ವಿಕಾಸ್

ಅರ್ಜಿ ಸಲ್ಲಿಸಲು ನೀವು ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು (https://pmvishwakarma.gov.in/). ಇಲ್ಲಿ ನೀವೆಲ್ಲರೂ ಉಚಿತ ಹೊಲಿಗೆ ಯಂತ್ರ ಯೋಜನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಆನ್‌ಲೈನ್ ಅರ್ಜಿ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಅರ್ಜಿಯಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಬೇಕು. ಆ ನಂತ್ರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಪ್ರಸ್ತುತ ಉಚಿತ ಹೊಲಿಗೆ ಯಂತ್ರ ಯೋಜನೆಯು ಗುಜರಾತ್, ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶದಂತಹ ಕೆಲವೇ ರಾಜ್ಯದಲ್ಲಿ ಜಾರಿಯಲ್ಲಿದೆ. ಶೀಘ್ರದಲ್ಲೇ ಎಲ್ಲ ರಾಜ್ಯದಲ್ಲಿ ಈ ಯೋಜನೆ ಜಾರಿಗೆ ತರುವ ಪ್ಲಾನ್ ನಲ್ಲಿ ಕೇಂದ್ರ ಸರ್ಕಾರವಿದೆ. ಈ ಯೋಜನೆಯಡಿ ಮಹಿಳೆಯರಿಗೆ ಹೊಲಿಗೆ ಯಂತ್ರ ಪಡೆಯಲು 15000 ರೂಪಾಯಿ ಸಿಗುತ್ತದೆ. ಅದ್ರಿಂದ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಖರೀದಿಸಿ ಮಹಿಳೆಯರು ಕೆಲಸ ಶುರು ಮಾಡಬಹುದು.   

Latest Videos
Follow Us:
Download App:
  • android
  • ios