Health Tips: ವಯಸ್ಸಾದಂತೆ ಕಾಡುವ ಯೋನಿ ಶುಷ್ಕತೆಗೆ ಈ ಆಹಾರ ಮದ್ದು!

ವಯಸ್ಸು ನಲವತ್ತರ ಗಡಿ ದಾಟುತ್ತಿದ್ದಂತೆ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಲು ಶುರು ಮಾಡ್ತಾರೆ. ಅದ್ರಲ್ಲಿ ಯೋನಿ ಶುಷ್ಕತೆಯೂ ಒಂದು, ಶುಷ್ಕ ಯೋನಿ, ಉರಿ, ತುರಿಕೆ ಜೊತೆ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಆಹಾರದಲ್ಲಿಯೇ ಪರಿಹಾರ ಇದೆ. 

Foods To Increase Vaginal Lubrication Natural roo

ಒಂದು ವಯಸ್ಸಿನ ನಂತ್ರ ಮಹಿಳೆಯರ ಯೋನಿಯಲ್ಲಿ ಶುಷ್ಕತೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದಕ್ಕೆ ಅನೇಕ ಕಾರಣವಿದೆ. ಮುಖ್ಯವಾಗಿ ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ  ಯೋನಿಯಲ್ಲಿ ನೈಸರ್ಗಿಕ ನಯಗೊಳಿಸುವಿಕೆಯ ಕೊರತೆಯು ಹೆಚ್ಚಾಗುತ್ತದೆ. ಇದು ಶುಷ್ಕತೆಯ ಭಾವನೆಯುಂಟು ಮಾಡುತ್ತದೆ. ಯೋನಿ ಶುಷ್ಕವಾದಾಗ, ನಯಗೊಳಿಸುವಿಕೆ ಕಡಿಮೆ ಆದಾಗ ಲೈಂಗಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅನೇಕ ಮಹಿಳೆಯರು ಯೋನಿಯನ್ನು ನಯಗೊಳಿಸಲು ಲೂಬ್ರಿಕೇಶನ್ ಬಳಕೆ ಮಾಡ್ತಾರೆ. ಆದ್ರೆ ಇದು ನೂರಕ್ಕೆ ನೂರು ಪರಿಣಾಮ ಬೀರುವುದಿಲ್ಲ. ಕೆಲ ಬಾರಿ ಅಲರ್ಜಿಯಂತಹ ಸಮಸ್ಯೆ ಇದ್ರಿಂದ ಉಂಡಾಗುತ್ತದೆ.. ಯೋನಿ ಶುಷ್ಕತೆಯನ್ನು ಹೋಗಲಾಡಿಸಲು ಮತ್ತು ನೈಸರ್ಗಿಕ ಲೂಬ್ರಿಕೇಶನ್ ಪಡೆಯಲು ನೀವು ನಿಮ್ಮ ಡಯಟ್ ಬದಲಿಸಬಹುದು. ಕೆಲ ಆಹಾರವನ್ನು ಡಯಟ್ ನಲ್ಲಿ ಸೇರಿಸುವ ಮೂಲಕ, ನೈಸರ್ಗಿಕವಾಗಿ ನಿಮ್ಮ ಯೋನಿಯನ್ನು ನಯಗೊಳಿಸಬಹುದು.  

ನೈಸರ್ಗಿಕವಾಗಿ ಯೋನಿ (Vagina) ನಯಗೊಳಿಸುವ ಆಹಾರ : 

ಹಸಿರು (Green) ಸೊಪ್ಪು ಹಾಗೂ ತರಕಾರಿ : ಹಸಿರು ತರಕಾರಿಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ಬಹಳ ಮುಖ್ಯ. ಇದು ಯೋನಿ ಶುಷ್ಕತೆ (Dryness) ಯನ್ನು ಕಡಿಮೆ ಮಾಡುವುದರಲ್ಲಿ ದೊಡ್ಡ ಪಾತ್ರವಹಿಸುತ್ತದೆ. ಹಸಿರು ತರಕಾರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಕಂಡುಬರುತ್ತವೆ. ಇದರಲ್ಲಿರುವ ಆಹಾರ ನೈಟ್ರೇಟ್‌ಗಳು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ನೈಟ್ರೇಟ್‌ಗಳ ಸಹಾಯದಿಂದ, ರಕ್ತನಾಳಗಳು ವಿಸ್ತರಿಸಲು ಪ್ರಾರಂಭಿಸುತ್ತವೆ. ಇದು ಯೋನಿ ಸೇರಿದಂತೆ ಇಡೀ ದೇಹದಲ್ಲಿ ರಕ್ತದ ಹರಿವು ಸುಧಾರಿಸಲು ಕಾರಣವಾಗುತ್ತದೆ. 

DRUG ADDICTION: ದಿನ ದಿನಕ್ಕೂ ಏರ್ತಿದೆ ಡ್ರಗ್ಸ್ ವ್ಯಸನಿಗಳ ಸಂಖ್ಯೆ..

ಒಮೆಗಾ -3 ಕೊಬ್ಬಿನಾಮ್ಲ : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ವರದಿಯ ಪ್ರಕಾರ, ಒಮೆಗಾ 3 ಕೊಬ್ಬಿನಾಮ್ಲಗಳ ಸೇವನೆಯಿಂದ ಅನೇಕ ಪ್ರಯೋಜನವಿದೆ. ಇದು ಪಿರಿಯಡ್ ನೋವಿನ ಸಮಸ್ಯೆಯನ್ನು ಮಾತ್ರ ಕಡಿಮೆ ಮಾಡೋದಿಲ್ಲ. ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಯೋನಿ ಶುಷ್ಕತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಸೂರ್ಯಕಾಂತಿ ಬೀಜಗಳು, ಎಳ್ಳು, ಕುಂಬಳಕಾಯಿ ಬೀಜಗಳು ಮತ್ತು ಮೀನುಗಳಲ್ಲಿ ನೀವು ಒಮೆಗಾ  3 ಕೊಬ್ಬಿನಾಮ್ಲವನ್ನು ಕಾಣಬಹುದು.

ಊಟದಲ್ಲಿ ಚಪಾತಿ, ಅನ್ನ ಎರಡೂ ತಿನ್ನಬೇಡಿ ಅಂತಿದ್ದಾರೆ ಬಾಬಾ ರಾಮ್ ದೇವ್, ಅದು ಯಾಕೆ?

ಕ್ಯಾನ್ಬರಿ : ಕ್ಯಾನ್ಬರಿ ಹಣ್ಣುಗಳನ್ನು ಮಹಿಳೆಯರು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇವು ಹೆಚ್ಚು ಪೋಷಕಾಂಶ ಹೊಂದಿವೆ., ಸೋಂಕಿನ ವಿರುದ್ಧ ಹೋರಾಡುತ್ತವೆ. ಇಷ್ಟೇ ಅಲ್ಲದೆ, ಯುಟಿಐ ಅಪಾಯವನ್ನು ತಪ್ಪಿಸುತ್ತದೆ. ಯೋನಿಯ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲಾಗುತ್ತದೆ. ದೇಹದಲ್ಲಿ ವಿಟಮಿನ್ ಇ ಮತ್ತು ಸಿ ಕೊರತೆಯನ್ನು ನೀಗಿಸುತ್ತದೆ. ಯೋನಿ ತುರಿಕೆ ಸಮಸ್ಯೆ ಇರುವ ಮಹಿಳೆಯರು ಇದ್ರ ಸೇವನೆ ಮಾಡಿದ್ರೆ ಸಮಸ್ಯೆಯಿಂದ ಹೊರಬರಬಹುದು.

ಸೋಯಾ : ಫೈಟೊಸ್ಟ್ರೋಜನ್ ಸಂಯುಕ್ತಗಳು ಸೋಯಾದಲ್ಲಿ ಕಂಡುಬರುತ್ತವೆ. ಇದರ ಸೇವನೆಯಿಂದ ದೇಹದಲ್ಲಿ ಈಸ್ಟ್ರೊಜೆನ್ ಪ್ರಮಾಣ ಹೆಚ್ಚುತ್ತದೆ. ಯೋನಿ ಶುಷ್ಕತೆಗೆ ಪರಿಹಾರ ಸಿಗುತ್ತದೆ.  

ಗೆಣಸಿನ ಗಡ್ಡೆ : ಸಿಹಿ ಆಲೂಗಡ್ಡೆ ಎಂದು ಕರೆಯುವ ಗೆಣಸಿನ ಗಡ್ಡೆ ಬೀಟಾ ಕ್ಯಾರೋಟಿನ್, ಫೋಲೇಟ್ ಮತ್ತು ವಿಟಮಿನ್ ಎ, ಸಿ, ಡಿ ಮತ್ತು ಇ ಹೊಂದಿದೆ. ನಿಯಮಿತ ಸೇವನೆಯಿಂದ ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಪ್ರಮಾಣ ಹೆಚ್ಚಾಗತೊಡಗುತ್ತದೆ. ಸಿಹಿ ಆಲೂಗಡ್ಡೆಯಲ್ಲಿರುವ ಫೈಬರ್ ಅಂಶವು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಸ್ಥಿರಗೊಳಿಸುತ್ತದೆ. 

ಪ್ರೋಬಯಾಟಿಕ್ ಆಹಾರ : ಪ್ರೋಬಯಾಟಿಕ್ ಸಮೃದ್ಧ ಆಹಾರವನ್ನು ಮಹಿಳೆಯರು ನಿಯಮಿತವಾಗಿ ಸೇವನೆ ಮಾಡಬೇಕು. ಇದ್ರಿಂದ ನಾನಾ ಪ್ರಯೋಜನವಿದೆ. ಯೋನಿ ಶುಷ್ಕತೆಯನ್ನು ಇದು ಕಡಿಮೆ ಮಾಡುತ್ತದೆ. ಇದಲ್ಲದೆ ಯೋನಿ ಡಿಸ್ಚಾರ್ಜ್ ಮತ್ತು ವಾಸನೆಯಲ್ಲಿನ ಬದಲಾವಣೆಯನ್ನು ತಡೆಯುತ್ತದೆ. ಯೋನಿ ಸೊಂಕಿರುವ ಮಹಿಳೆಯರು ಪ್ರೋಬಯಾಟಿಕ್ ಆಹಾರವನ್ನು ಅಗತ್ಯವಾಗಿ ಸೇವನೆ ಮಾಡಬೇಕು. ಬ್ಯಾಕ್ಟೀರಿಯಾ ತಡೆದು, ಕರುಳಿನ ಆರೋಗ್ಯವನ್ನೂ ಇದು ರಕ್ಷಿಸುತ್ತದೆ. 

Latest Videos
Follow Us:
Download App:
  • android
  • ios