Drug Addiction: ದಿನ ದಿನಕ್ಕೂ ಏರ್ತಿದೆ ಡ್ರಗ್ಸ್ ವ್ಯಸನಿಗಳ ಸಂಖ್ಯೆ..
ಮಾದಕ ವಸ್ತುಗಳ ಬಳಕೆ ಚಟವಾಗಲು ಹೆಚ್ಚಿನ ಸಮಯ ಬೇಕಾಗಿಲ್ಲ. ಆದ್ರೆ ಹಿಡಿದ ಚಟವನ್ನು ಬಿಡೋದು ಕಷ್ಟ. ಭಾರತದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಇದಕ್ಕೆ ಬಲಿಯಾಗ್ತಿರೋದು ದುಃಖದ ಸಂಗತಿ.
ಕಾಲೇಜ್ ಹಿಂದುಗಡೆ ಮಕ್ಕಳು ಡ್ರಗ್ಸ್ ತೆಗೆದುಕೊಳ್ಳೋದನ್ನು ನಾನೆಷ್ಟು ಬಾರಿ ನೋಡಿದ್ದೇನೆ… ಪ್ರಶ್ನೆ ಮಾಡಿದ್ರೆ ನಮ್ಮ ಮೇಲೆ ಕಿರುಚಾಡ್ತಾರೆ, ನೀವ್ಯಾರು ಅಂತ ಪ್ರಶ್ನೆ ಮಾಡ್ತಾರೆ. ಹಾಗಾಗಿ ಸಹವಾಸ ಬೇಡ ಅಂತ ಸುಮ್ಮನಾಗಿದ್ದೇನೆ ಅಂತ ಕೆಲ ದಿನಗಳ ಹಿಂದೆ ನಡೆದ ಮಹಿಳಾ ಸಮಾವೇಶದಲ್ಲಿ ಅನೇಕ ಮಹಿಳೆಯರು ದೂರಿದ್ದನ್ನು ನಾನು ಕೇಳಿದ್ದೇನೆ. ನಿಮ್ಮ ಮಗ ಅಥವಾ ಮಗಳು ಡ್ರಗ್ಸ್ ತೆಗೆದುಕೊಳ್ತಿದ್ದಾರೆ ಅಂತ ಪಾಲಕರಿಗೆ ಹೇಳಿದ್ರೆ ಅವರು ನಂಬೋದಿಲ್ಲ. ತಮ್ಮ ಮಕ್ಕಳು ಒಳ್ಳೆಯವರು ಅಂತ ವಾದ ಮಾಡ್ತಾರೆ. ಶಿಕ್ಷಣ ವ್ಯವಸ್ಥೆ ಸರಿಯಾಗಿಲ್ಲ, ಪಾಲಕರು ಸರಿಯಾಗಿಲ್ಲ ಎನ್ನುವವರೂ ಅನೇಕರಿದ್ದಾರೆ. ಅದೇನೇ ಇರಲಿ ಭಾರತದಲ್ಲಿ ಡ್ರಗ್ಸ್ ವ್ಯವಹಾರ ಮಿತಿ ಮೀರಿದ ವೇಗದಲ್ಲಿ ಬೆಳೆಯುತ್ತಿರೋದು ಕಟು ಸತ್ಯ. ಹೆಚ್ಚಿನ ಯುವಕರು ಡ್ರಗ್ಸ್ ವ್ಯಸನಿಗಳಾಗ್ತಿದ್ದು, ಇದು ನಿರಂತರವಾಗಿ ಏರಿಕೆಯಾಗ್ತಿರೋದು ಕಳವಳ ಹುಟ್ಟಿಸಿದೆ.
ಸರ್ಕಾರ (Govt), ಡ್ರಗ್ಸ್ (Drugs) ತಡೆಗೆ ನಿರಂತರ ಪ್ರಯತ್ನ ನಡೆಸುತ್ತಿದೆ. ಆದ್ರೆ ಅದ್ರಿಂದ ಯಾವುದೇ ಪ್ರಯೋಜನ ಆಗ್ತಿಲ್ಲ. ಇತ್ತೀಚಿಗೆ ನಡೆದ ಸಮೀಕ್ಷೆ (Survey) ವರದಿಯೊಂದು ಆಘಾತಕಾರಿ ವಿಷ್ಯವನ್ನು ಹೊರ ಹಾಕಿದೆ.
ಆಯಸ್ಸಿದ್ರೆ ಯಾವ ಖಾಯಿಲೆ ಬಂದ್ರೂ ಬದುಕಿ ಬರ್ತಾರೆ; ಅಪರೂಪದ ಬ್ರೈನ್ ಟ್ಯೂಮರ್ ಗೆದ್ದ ಬಾಲಕ
ವರದಿ ಪ್ರಕಾರ, ದೇಶದಲ್ಲಿ ಅಕ್ರಮ ಡ್ರಗ್ಸ್ ವ್ಯವಹಾರವು 30 ಲಕ್ಷ ಕೋಟಿ ರೂಪಾಯಿ ದಾಟಿದೆ. ರಾಷ್ಟ್ರೀಯ ಔಷಧ ಅವಲಂಬಿತ ಚಿಕಿತ್ಸಾ ವರದಿಯ ಪ್ರಕಾರ, 10 ರಿಂದ 75 ವರ್ಷ ವಯಸ್ಸಿನ ದೇಶದ ಜನಸಂಖ್ಯೆಯ ಸುಮಾರು ಶೇಕಡಾ 20 ರಷ್ಟು ಜನರು ಮಾದಕ ವ್ಯಸನಿಗಳಾಗಿದ್ದಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಸೇರಿದ್ದಾರೆ. ಬರೀ ವಯಸ್ಕರು, ಮಧ್ಯ ವಯಸ್ಕರು ಮಾತ್ರವಲ್ಲ ಮಕ್ಕಳು, ಮಾದಕ ವ್ಯಸನಿಗಳಾಗ್ತಿರೋದು ಮತ್ತಷ್ಟು ಆತಂಕ ಹುಟ್ಟಿಸಿದೆ.
ನೀವು ಕುಳಿತು ಕೆಲಸ ಮಾಡುವ ಖುರ್ಚಿಯಲ್ಲಿದ್ದಾನೆ ಯಮ; ಎಚ್ಚರ ತಪ್ಪಿದ್ರೆ ಸಾವು ಖಚಿತ
ವಿಶ್ವಸಂಸ್ಥೆಯ ಔಷಧ ಮತ್ತು ನಿಯಂತ್ರಣ ಕಚೇರಿ ವರದಿ ಪ್ರಕಾರ, ಒಂದು ವರ್ಷದಲ್ಲಿ ಪ್ರಪಂಚದಾದ್ಯಂತ 300 ಟನ್ ಗಾಂಜಾ ಸರಬರಾಜಾಗಿದೆ. ಅಚ್ಚರಿ ಅಂದ್ರೆ ಇದರಲ್ಲಿ ಶೇಕಡಾ 6 ರಷ್ಟನ್ನು ಭಾರತದಲ್ಲಿ ಮಾತ್ರ ಸೇವಿಸಲಾಗುತ್ತಿದೆ. 2017 ರಲ್ಲಿ ಗಾಂಜಾ ಪೂರೈಕೆ 353 ಟನ್‌ಗಳಿಗೆ ಏರಿತ್ತು. ಅದರಲ್ಲಿ ಸುಮಾರು ಶೇಕಡಾ 10ರಷ್ಟು ಪಾಲು ಭಾರತದಿತ್ತು. ಹಲವು ಅಂಕಿಅಂಶಗಳ ಪ್ರಕಾರ 2017ರ ವರೆಗೆ ಭಾರತದ ಮಾದಕ ವ್ಯಸನ ಮಾರುಕಟ್ಟೆ ಸುಮಾರು 10 ಲಕ್ಷ ಕೋಟಿ ಇತ್ತು. 2020 ರ ಗ್ಲೋಬಲ್ ಡ್ರಗ್ ವರದಿಯ ಪ್ರಕಾರ, ವಿಶ್ವಾದ್ಯಂತ ವಶಪಡಿಸಿಕೊಂಡ ಅಫೀಮುಗಳಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ.
ಮಾದಕ ವಸ್ತುಗಳ ಬಗ್ಗೆ ಭಾರತದ ಕಾನೂನು : ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್, 1985 ರ ಪ್ರಕಾರ ಯಾವುದೇ ಮಾದಕವಸ್ತು ಅಥವಾ ಸೈಕೋಟ್ರೋಪಿಕ್ ವಸ್ತುವನ್ನು ಉತ್ಪಾದಿಸುವುದು, ಹೊಂದುವುದು, ಮಾರಾಟ ಮಾಡುವುದು, ಖರೀದಿಸುವುದು, ಸಾಗಿಸುವುದು, ಸಂಗ್ರಹಿಸುವುದು ಮತ್ತು ಸೇವಿಸುವುದು ಕಾನೂನಿಗೆ ವಿರುದ್ಧವಾಗಿದೆ. ಮಾದಕವಸ್ತು ಪ್ರಕರಣಗಳಲ್ಲಿ ವಿವಿಧ ಶಿಕ್ಷೆಗಳಿಗೆ ನಿಬಂಧನೆಗಳಿವೆ. ಸೆಕ್ಷನ್ 15 ರ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ, ಸೆಕ್ಷನ್ 24 ರ ಅಡಿಯಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷದಿಂದ 2 ಲಕ್ಷ ರೂ.ವರೆಗೆ ದಂಡ ಮತ್ತು ಸೆಕ್ಷನ್ 31 ಎ ಅಡಿಯಲ್ಲಿ ಮರಣದಂಡನೆ ವಿಧಿಸಲು ಅವಕಾಶವಿದೆ. ಮಾದಕ ವ್ಯಸನದ ಸಮಸ್ಯೆಯನ್ನು ನಿಭಾಯಿಸಲು ಮತ್ತು ಭಾರತವನ್ನು ಮಾದಕ ದ್ರವ್ಯ ಮುಕ್ತವಾಗಿಸಲು 2020 ರಲ್ಲಿ ಅಭಿಯಾನ ಪ್ರಾರಂಭಿಸಲಾಯಿತು. ಭಾರತೀಯ ಕೋಸ್ಟ್ ಗಾರ್ಡ್ ಭದ್ರತಾ ಏಜೆನ್ಸಿಗಳು ಮತ್ತು ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದ ಕೋಸ್ಟ್ ಗಾರ್ಡ್‌ಗಳೊಂದಿಗೆ ಅಂತಹ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲು ಸರಿಯಾದ ಸಮನ್ವಯವನ್ನು ಸ್ಥಾಪಿಸಿದೆ.