ಯಪ್ಪಾ..ನಾಯಿಯನ್ನು ಒದ್ದು ಮಜಾ ನೋಡಿ ನಗ್ತಿದ್ದಾಳಲ್ಲಪ್ಪಾ ಈಕೆ !
ನಾಯಿ ಅಂದ್ರೆ ಕೆಲವರಿಗೆ ಇಷ್ಟವಿರುತ್ತದೆ, ಕೆಲವರಿಗೆ ಇಲ್ಲ. ಆದ್ರೆ ನಾಯಿಗಳು ಇಷ್ಟವಿಲ್ಲ ಅನ್ನೋ ಕಾರಣಕ್ಕೆ ಅವುಗಳ ಮೇಲೆ ದೌರ್ಜನ್ಯ ಮಾಡೋದು ಸರಿಯಲ್ಲ. ಆದ್ರೆ ಇಲ್ಲೊಬ್ಬ ವೀಡಿಯೋ ಇನ್‌ಫ್ಲುಯೆನ್ಸರ್ ವೀಡಿಯೋ ಮಾಡೋ ನೆಪದಲ್ಲಿ ನಾಯಿಗೆ ಒದ್ದಿದ್ದಾಳೆ. ಆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ನಾಯಿ (Dog) ಕೆಲವೊಬ್ಬರಿಗೆ ಇಷ್ಟವಾದರೆ, ಇನ್ನು ಹಲವರಿಗೆ ಇಷ್ಟವಾಗಲ್ಲ. ಹೀಗಿದ್ದೂ ನಮಗೂ ಇರ್ಲಿ ಅಂದುಕೊಂಡು ಹೆಚ್ಚಿನವರು ನಾಯಿ ಸಾಕ್ತಾರೆ. ಅದರಲ್ಲೂ ನಾಯಿಯನ್ನು ಸಾಕುವುದು ಇತ್ತೀಚಿನ ವರ್ಷಗಳಲ್ಲಿ ಹೊಸ ಟ್ರೆಂಡ್ ಆಗಿದೆ. ಕಾಸ್ಟ್ಲೀ ನಾಯಿಯನ್ನು ಖರೀದಿಸುವುದು, ನಂತರ ಅವುಗಳನ್ನು ರೋಡಿನಲ್ಲಿ ವಾಕಿಂಗ್ ಕರೆದುಕೊಂಡು ಹೋಗುವುದು ಶೋಕಿಯಂತಾಗಿಬಿಟ್ಟಿದೆ. ಆದರೆ ಇದೆಲ್ಲದರ ಮಧ್ಯೆ ನಾಯಿ ಮಾಲೀಕರು ತೋರಿಸುವ ಬೇಜವಾಬ್ದಾರಿತನದಿಂದ ಹಲವರು ಕಷ್ಟಪಡುವಂತಾಗುತ್ತದೆ. ಅಂಥಾ ಕೆಲವು ಘಟನೆಗಳು ಇತ್ತೀಚಿಗೆ ನಡೆದಿದ್ದವು. ಆದ್ರೆ ಇಲ್ಲಿ ಹಾಗಲ್ಲ, ಬೀದಿ ನಾಯಿಯ ಮೇಲೆ ಯುವತಿಯೊಬ್ಬಳು ದರ್ಪ ಮೆರೆದಿದ್ದಾಳೆ.
ಇನ್‌ಸ್ಟಾಗ್ರಾಮ್‌ನ ವೀಡಿಯೋ ಇನ್‌ಫ್ಲುಯೆನ್ಸರ್ ಮಹಿಳೆ (Women)ಯೊಬ್ಬರು ನಾಯಿಯನ್ನು ಒದ್ದಿದ್ದಾಳೆ ನಂತರ ಕ್ಷಮೆಯಾಚಿಸುವ ವೀಡಿಯೋದಲ್ಲಿ ತಾನು ಪ್ರಾಣಿ ಪ್ರೇಮಿ ಎಂದು ಹೇಳಿಕೊಂಡಿದ್ದಾಳೆ. ವೀಡಿಯೋ ಮಾಡುವ ಮಹಿಳೆ ಮಾಡಿದ ಕೃತ್ಯ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಮಹಿಳೆಯೊಬ್ಬಳು ನಾಯಿಯನ್ನು ಒದೆಯುವ ಮತ್ತು ನಗುವ ಸಲುವಾಗಿ ಅದನ್ನು ನಿಂದಿಸುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social media) ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟ್ಟರ್ ಬಳಕೆದಾರರು ಪ್ರಭಾವಿ ಎಂದು ಕರೆಯಲ್ಪಡುವವರ ಸಂವೇದನಾಶೀಲತೆಯನ್ನು ಖಂಡಿಸಿದರು ಮತ್ತು ಮಹಿಳೆಯ ವರ್ತನೆಗೆ ಆಕ್ರೋಶ (Angry) ವ್ಯಕ್ತಪಡಿಸಿದರು.
ನಾಯಿ ಬೊಗಳಿದ್ದಕ್ಕೆ ಆಸ್ಟ್ರೇಲಿಯಾ ಮಹಿಳೆಯನ್ನು ಕೊಂದ ಭಾರತ ಮೂಲದ ವ್ಯಕ್ತಿ..!
ನಾಯಿಯನ್ನು ಒದ್ದ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಮಹಿಳೆ ಕ್ಷಮೆ ಯಾಚಿಸಿದ್ದಾರೆ. ನಾಯಿಯು ನನ್ನ ಮೇಲೆ ದಾಳಿ (Attack) ಮಾಡಲು ಯತ್ನಿಸಿತ್ತು. ಹೀಗಾಗಿ ಇದಕ್ಕೆ ಪ್ರತಿಯಾಗಿ ನಾಯಿಯ ಮೇಲೆ ಅಟ್ಯಾಕ್ ಮಾಡಿರುವುದಾಗ ಹೇಳಿಕೊಂಡಿದ್ದಾಳೆ. ಹೀಗಿದ್ದೂ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆಯ ಖಾತೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. 1.21 ಲಕ್ಷ ಅನುಯಾಯಿಗಳ ಸಂಖ್ಯೆಯನ್ನು ಹೊಂದಿರುವ ವೀಡಿಯೋ ಇನ್‌ಫ್ಲುನ್ಸಿಯರ್ ಕಿರಣ್ ಕಾಜಲ್ ಕ್ಷಮೆಯಾಚಿಸಿದ್ದಾಳೆ. ಮಾತ್ರವಲ್ಲ ನಾನು ಪ್ರಾಣಿ ಪ್ರೇಮಿ ಎಂದು ಹೇಳಿದ್ದು, ಭಯದಿಂದ ನಾಯಿಯನ್ನು ಒದ್ದಿರುವುದಾಗಿ ಹೇಳಿದ್ದಾಳೆ. ಆ ನಂತರ ವೀಡಿಯೋವನ್ನು ಡಿಲೀಟ್ ಮಾಡಲಾಗಿದೆ. ಕಂಟೆಂಟ್ ಕ್ರಿಯೇಟರ್ ಕಿರಣ್ ಕಾಜಲ್ ನಾಯಿಗಳಿಗೆ ಆಹಾರ (Food) ನೀಡುವ ಮತ್ತು ಅವುಗಳನ್ನು ನೋಡಿಕೊಳ್ಳುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾಳೆ.
'ಘಟನೆಯ ಬಗ್ಗೆ ಮೊದಲು ನಾನೇನೂ ಅಂದುಕೊಂಡಿರಲಿಲ್ಲ. ನಾಯಿ ನನ್ನ ಹತ್ತಿರ ಬಂದಿತ್ತು. ಮತ್ತು ನಾನು ಅದನ್ನು ಒದೆದಿದ್ದೇನೆ. ನನ್ನ ಭಾಷೆ ಕೆಟ್ಟದಾಗಿದೆ ಮತ್ತು ಅದಕ್ಕಾಗಿ ಕ್ಷಮಿಸಿ. ಆದರೆ ದೆಹಲಿ ಮತ್ತು ಮುಂಬೈ ಜನರಿಗೆ ಇದು ಸಾಮಾನ್ಯವಾಗಿದೆ. ನಾಯಿ ಹತ್ತಿರ ಬಂದಾಗ ನನಗೆ ಭಯವಾಯಿತು. ನನ್ನನ್ನು ಕ್ಷಮಿಸಿ' ಎಂದು ಹೊಸ ವೀಡಿಯೊದಲ್ಲಿ ಕಿರಣ್ ಕಾಜಲ್ ಹೇಳಿದ್ದಾಳೆ. ಕ್ಷಮೆಯಾಚನೆಯು (Apology) ಟೀಕೆಗಳನ್ನು ಎದುರಿಸಿತು. ಹಲವರು ನಾಯಿಯನ್ನು ಒದ್ದು ಬಳಿಕ ಮಹಿಳೆ ಮತ್ತೆ ನಾಟಕವನ್ನಾಡುತ್ತಿದ್ದಾರೆ ಎಂದು ದೂರಿದರು. ಹೀಗಿದ್ದೂ ಮಹಿಳೆ ನನಗೆ ಘಟನೆಯ ಬಗ್ಗೆ ಯಾವುದೇ ರೀತಿ ಪಶ್ಚಾತ್ತಾಪವಿಲ್ಲ ಎಂದು ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಲಿಫ್ಟ್‌ನಲ್ಲಿ ಪುಟ್ಟ ಬಾಲಕನ ಕಚ್ಚಿ ಎಳೆದಾಡಿದ ಬೇರೆಯವರ ಸಾಕುನಾಯಿ
ಮಹಿಳೆ ಘಟನೆಯನ್ನು ವಿವರಿಸಿ, 'ನಡೆದಿರೋ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನೀವು ನನ್ನ ಸ್ಥಾನದಲ್ಲಿದ್ದು, ನಾಯಿ ಅಟ್ಯಾಕ್ ಮಾಡಲು ಬಂದರೆ ಏನು ಮಾಡುತ್ತೀರಿ' ಹೇಳಿ ಎಂದು ಪ್ರಶ್ನಿಸಿದ್ದಾಳೆ. ಅದೇನೆ ಇರ್ಲಿ ಕಂಟೆಂಟ್ ಅನ್ನೋ ಹೆಸರಿನಲ್ಲಿ ವೀಡಯೋ ಇನ್‌ಫ್ಲುಯೆನ್ಸರ್ ಹೀಗೆ ಪ್ರಾಣಿಗಳ ಮೇಲೆ ದೌರ್ಜನ್ಯ ಮೆರೆಯುವುದು ವಿಪರ್ಯಾಸವೇ ಸರಿ.