Asianet Suvarna News Asianet Suvarna News

ನಾಯಿ ಬೊಗಳಿದ್ದಕ್ಕೆ ಆಸ್ಟ್ರೇಲಿಯಾ ಮಹಿಳೆಯನ್ನು ಕೊಂದ ಭಾರತ ಮೂಲದ ವ್ಯಕ್ತಿ..!

ತನ್ನ ಹೆಂಡತಿಯೊಂದಿಗೆ ಜಗಳವಾಡಿದ ನಂತರ ಕ್ವೀನ್ಸ್‌ಲ್ಯಾಂಡ್‌ನ ವಾಂಗೆಟ್ಟಿ ಬೀಚ್‌ಗೆ 38 ವರ್ಷದ ರಾಜ್ವಿಂದರ್ ಸಿಂಗ್ ತೆರಳಿದ್ದರು. ಆ ವೇಳೆ ಸ್ವಲ್ಪ ಹಣ್ಣು ಹಾಗೂ ಅಡುಗೆ ಮನೆಯ ಚಾಕುವನ್ನು ತೆಗೆದುಕೊಂಡು ಹೋಗಿದ್ದೆ, ಇದನ್ನು ನೋಡಿ ನಾಯಿ ಬೊಗಳಿತು ಎಂದು ದೆಹಲಿ ಪೊಲೀಸರಿಗೆ ಆರೋಪಿ ಹೇಳಿಕೊಂಡಿದ್ದಾನೆ. 

indian man killed australian woman after her dog barked at him ash
Author
First Published Nov 26, 2022, 2:28 PM IST

ಭಾರತ (India) ಮೂಲದ ವ್ಯಕ್ತಿ ರಾಜ್ವಿಂದರ್‌ ಸಿಂಗ್ (Rajwinder Singh) ಆಸ್ಟ್ರೇಲಿಯಾ (Australia) ಮೂಲದ ಮಹಿಳೆಯನ್ನು (Lady) ಕೊಲೆ (Murder) ಮಾಡಿದ್ದಾರೆ ಎಂಬ ಆರೋಪ ಪ್ರಕರಣ ಟ್ವಿಸ್ಟ್‌ ಪಡೆದುಕೊಂಡಿದೆ. 2018ರಲ್ಲಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ (Queensland) ಮಹಿಳೆಯೊಬ್ಬರನ್ನು ಕೊಲ್ಲಲಾಗಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೆಹಲಿ ಪೊಲೀಸರು (Delhi Police) ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆಯನ್ನು ಕೊಲೆ ಮಾಡಿದ ಬಳಿಕ ಆರೋಪಿ ರಾಜ್ವಿಂದರ್‌ ಸಿಂಗ್ ಆಸ್ಟ್ರೇಲಿಯಾದಿಂದ ತಪ್ಪಿಸಿಕೊಂಡಿದ್ದರು. ಈ ಹಿನ್ನೆಲೆ ಆಸ್ಟ್ರೇಲಿಯಾ ಸರ್ಕಾರ ಅವರನ್ನು ಹುಡುಕಿಕೊಟ್ಟವರಿಗೆ ಅಥವಾ ಬಂಧಿಸಿದವರಿಗೆ 1 ಮಿಲಿಯನ್ ಆಸ್ಟ್ರೇಲಿಯಾ ಡಾಲರ್‌ ಬಹುಮಾನವನ್ನೂ ಘೋಷಿಸಿತ್ತು. 
 
24 ವರ್ಷದ ಆಸ್ಟ್ರೇಲಿಯಾ ಮಹಿಳೆ ಟೋಯಾ ಕಾರ್ಡಿಂಗ್ಲೆ (Toya Cordingley) ಅವರ ನಾಯಿ ಬೊಗಳಿದ್ದಕ್ಕೆ ರಾಜ್ವಿಂದರ್‌ ಸಿಂಗ್ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ತನ್ನ ಹೆಂಡತಿಯೊಂದಿಗೆ ಜಗಳವಾಡಿದ ನಂತರ ಕ್ವೀನ್ಸ್‌ಲ್ಯಾಂಡ್‌ನ ವಾಂಗೆಟ್ಟಿ ಬೀಚ್‌ಗೆ 38 ವರ್ಷದ ರಾಜ್ವಿಂದರ್ ಸಿಂಗ್ ತೆರಳಿದ್ದರು. ಆ ವೇಳೆ ಸ್ವಲ್ಪ ಹಣ್ಣು ಹಾಗೂ ಅಡುಗೆ ಮನೆಯ ಚಾಕುವನ್ನು ತೆಗೆದುಕೊಂಡು ಹೋಗಿದ್ದೆ ಎಂದೂ ದೆಹಲಿ ಪೊಲೀಸರಿಗೆ ಆರೋಪಿ ಹೇಳಿಕೊಂಡಿದ್ದಾನೆ. 

ಇದನ್ನು ಓದಿ: Honour Killing: ಅಂತರ್ಜಾತಿ ಯುವಕನ ಜತೆ ಪ್ರೀತಿ: ಮಗಳನ್ನೇ ಕೊಂದ ತಾಯಿ..!

ಈ ವೇಳೆ, ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿರುವ ಟೋಯಾ ಕಾರ್ಡಿಂಗ್ಲೆ ತನ್ನ ಶ್ವಾನದೊಂದಿಗೆ ವಾಕಿಂಗ್ ಮಾಡುತ್ತಿದ್ದರು. ಆ ವೇಳೆ, ರಾಜ್ವಿಂದರ್‌ ಅವರತ್ತ ಆಕೆಯ ನಾಯಿ ಬೊಗಳಿದಾಗ ಆಸ್ಟ್ರೇಲಿಯಾ ಮಹಿಳೆ ಹಾಗೂ ರಾಜ್ವಿಂದರ್ ಬ್ಬರೂ ಜಗಳವಾಡಿದ್ದಾರೆ. ಈ ವೇಲೆ ಸಿಟ್ಟಿಗೆದ್ದ ರಾಜ್ವಿಂದರ್ ಆಕೆಯ ಮೇಲೆ ದಾಳಿ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಅಷ್ಟೇ ಅಲ್ಲದೆ, ಮರಳಿನಲ್ಲಿ ಆಕೆಯ ಮೃತದೇಹವನ್ನು ಸಮಾಧಿ ಮಾಡಿ ಮರವೊಂದಕ್ಕೆ ನಾಯಿಯನ್ನು ಕಟ್ಟಿಹಾಕಿದನು ಎಂದೂ ತಿಳಿದುಬಂದಿದೆ. ನಂತರ, 2 ದಿನಗಳಲ್ಲಿ ರಾಜ್ವಿಂದರ್‌ ಸಿಂಗ್ ತನ್ನ ಕೆಲಸ, ಹೆಂಡತಿ ಹಾಗೂ 3 ಮಕ್ಕಳನ್ನು ಸಹ ಬಿಟ್ಟು ಆಸ್ಟ್ರೇಲಿಯಾವನ್ನು ತೊರೆದಿದ್ದ ಎಂದೂ ಹೇಳಲಾಗಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ ಮತ್ತೊಂದು ಭೀಭತ್ಸ ಕೃತ್ಯ: ಕುಟುಂಬದ ನಾಲ್ವರನ್ನು ಕೊಂದ ಮಾದಕ ವ್ಯಸನಿ..!

ಈ ಹಿನ್ನೆಲೆ ರಾಜ್ವಿಂದರ್ ಸಿಂಗ್ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು. ಹಾಗೂ, ಆತ ಭಾರತಕ್ಕೆ ಬಂದಿರಬಹುದೆಂಬ ಅನುಮಾನ ಸಹ ಕೇಳಿಬಂದಿತ್ತು. ಅಲ್ಲದೆ, ಹಸ್ತಾಂತರ ಕಾಯ್ದೆಯಡಿ ನವೆಂಬರ್ 21 ರಂದು ಪಟಿಯಾಲಾ ಹೌಸ್‌ ಕೋರ್ಟ್‌ ಆರೋಪಿ ವಿರುದ್ಧ ಜಾಮೀನು ರಹಿತ ವಾರಂಟ್‌ ಅನ್ನೂ ಹೊರಡಿಸಿತ್ತು . 

ಇನ್ನು, ಇಂಟರ್‌ಪೋಲ್‌ನ ಭಾರತದ ನೋಡಲ್‌ ಏಜೆನ್ಸಿಯಾದ ಸಿಬಿಐ ಹಂಚಿಕೊಂಡ ಮಾಹಿತಿ ಅನುಸಾರ ಆರೋಪಿಯನ್ನು ವಿಶೇಷ ದೆಹಲಿ ಪೊಲೀಸರು ಬಂಧಿಸಿದ್ದರು. ದೆಹಲಿಯ ಜಿ.ಟಿ. ಕರ್ನಲ್‌ ರಸ್ತೆಯ ಬಳಿ ಬಂಧಿಸಲಾಗಿದೆ ಎಂದೂ ತಿಳಿದುಬಂದಿದೆ.  ಅಲ್ಲದೆ, ರಾಜ್ವಿಂದರ್ ಸಿಂಗ್ ಬಂಧನದ ಬಳಿಕ ಅವರನ್ನು 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ದೆಹಲಿ ಕೋರ್ಟ್‌ ಅನುಮತಿ ನೀಡಿದೆ. 

ಇದನ್ನೂ ಓದಿ: ಸೋನಾಲಿಗೆ ಆಪ್ತರೇ ಬಲವಂತವಾಗಿ ಡ್ರಗ್ಸ್ ನೀಡಿದ್ದರು : ಸಿಬಿಐ ಚಾರ್ಜ್‌ಶೀಟ್

Follow Us:
Download App:
  • android
  • ios