ಅಪ್ಪ ಸತ್ತೋದ, ಚಿಕ್ಕಪ್ಪ ನನ್ನ ಮಾರಿದ... ವೇ* ಮನೆಯಲ್ಲಿ ಯೂಟ್ಯೂಬರ್: ವಿಡಿಯೋಗೆ ಶ್ಲಾಘನೆಗಳ ಮಹಾಪೂರ
ಮಹಿಳೆಯನ್ನು ಅವರ ವೃತ್ತಿಯಿಂದ ತಿರಸ್ಕರಿಸಬೇಡಿ ಎಂದು ಸಂದೇಶ ಸಾರುವ ವಿಡಿಯೋ ಒಂದನ್ನು ಯೂಟ್ಯೂಬರ್ ಒಬ್ಬರು ಶೇರ್ ಮಾಡಿದ್ದು, ಇದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.
ವೇಶ್ಯಾವೃತ್ತಿಯ ಬಗ್ಗೆ ಹಲವರಲ್ಲಿ ಹಲವು ರೀತಿಯ ವಾದಗಳಿವೆ. ಕೆಲವರು ಈ ವೃತ್ತಿಯನ್ನು ಕಾನೂನುಬದ್ಧಗೊಳಿಸಬೇಕು ಎಂದು ಹೇಳಿದರೆ ಮತ್ತೆ ವೇಶ್ಯಾಗೃಹಗಳು ಮಾರಕ ರೋಗಗಳನ್ನು ಹರಡುವ ಕೇಂದ್ರಗಳಾಗುತ್ತಿವೆ. ಅವುಗಳನ್ನು ಬ್ಯಾನ್ ಮಾಡಬೇಕು ಎನ್ನುತ್ತಾರೆ. ಮಾತು, ವಾದ-ವಿವಾದ, ಪ್ರತಿವಾದಗಳು ಏನೇ ಇರಲಿ... ಪ್ರತಿಯೊಬ್ಬ ವೇಶ್ಯೆಯನ್ನು ಮಾತನಾಡಿದರೆ, ಬಹುತೇಕದ ಜೀವನದ ಕಥೆಯೇ ಕರಾಳ. ಅವರು ಅನುಭವಿಸುತ್ತಿರುವ ಬದುಕು ಘನಘೋರ. ಇವರಲ್ಲಿ ಕೆಲವೇ ಕೆಲವು ಮಹಿಳೆಯರು ದುಡ್ಡಿಗಾಗಿ ಖುದ್ದು ಈ ವೃತ್ತಿಗೆ ಇಳಿದಿದರೆ, ಹಲವರನ್ನು ಅನ್ಯಾಯವಾಗಿ, ಮೋಸದಿಂದ ಇಲ್ಲಿಗೆ ತಂದು ಬಿಟ್ಟಿರಲಾಗುತ್ತದೆ. ಸಂಬಂಧಿಕರೇ ಉದ್ಯೋಗದ ಆಸೆ ತೋರಿಸಿ ಮಾರಾಟ ಮಾಡಿರುತ್ತಾರೆ. ಮತ್ತೆ ಕೆಲವರು ಮಕ್ಕಳನ್ನು ಚೆನ್ನಾಗಿ ಸಾಕಲು ಬೇರೆ ದಾರಿ ಕಾಣದೇ ಈ ವೃತ್ತಿಗೆ ಇಳಿದವರೂ ಇದ್ದಾರೆ. ಒಂದೊಂದು ಮಹಿಳೆಯರದ್ದು ಒಂದೊಂದು ನೋವಿನ ಕಥೆಯೇ ಇಲ್ಲಿ ಕಾಣಬಹುದು. ಆದರೆ ಜನರ ದೃಷ್ಟಿಯಲ್ಲಿ ಇವರು ಕೀಳೆಂಬ ಭಾವವಷ್ಟೇ.
ಆದರೆ ಈ ಮಹಿಳೆಯರ ಹೃದಯದಲ್ಲಿಯೂ ತಾಯಿ ಇದ್ದಾಳೆ, ಮಗಳು ಇದ್ದಾಳೆ, ಅಕ್ಕ-ತಂಗಿಯೂ ಇದ್ದಾರೆ ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ ಯೂಟ್ಯೂಬರ್ ಅನೀಶ್ ಭಗತ್. ತಮ್ಮ ಸೋಷಿಯಲ್ ಮೀಡಿಯಾ ಅಭಿಮಾನಿಯಾಗಿರುವ ವೈಶ್ಯೆಯೊಬ್ಬರು ಇರುವಲ್ಲಿಗೆ ಹೋಗಿ ಅವರು ರಾಕ್ಸಿ ಎಂಬ ಮಹಿಳೆಯ ಸಂದರ್ಶನ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ನೋವಿಗೆ ಜನರು ದನಿಗೂಡಿಸಿದ್ದಾರೆ. ಬಿಂದಾಸ್ ಆಗಿ ಮಾತನಾಡುವ ಈಕೆಯ ಈ ನಗುವಿನ ಹಿಂದಿರುವ ನೋವಿಗೆ ಸ್ಪಂದಿಸಿದ್ದಾರೆ. ವೇಶ್ಯೆಯನ್ನು ಕೀಳಾಗಿ ನೋಡಬೇಡಿ ಎನ್ನುವ ಸಂದೇಶವನ್ನು ಅನೀಶ್ ಅವರು ಈ ವಿಡಿಯೋ ಮೂಲಕ ಹೊತ್ತು ತಂದಿದ್ದಾರೆ.
ಮದ್ವೆಯಾಗಿ 25 ವರ್ಷಕ್ಕೆ 24 ಮಕ್ಕಳು! ಗಂಡನ ಗುಟ್ಟು ಬಿಚ್ಚಿಟ್ಟು ಎಲ್ಲರನ್ನೂ ಬೆಚ್ಚಿಬೀಳಿಸಿದ ಮಹಿಳೆ!
'ರಾಕ್ಸಿ ಡಿ ಜೊತೆ ದಿನ ಕಳೆಯುವುದು ನಿಜಕ್ಕೂ ಕಣ್ಣು ತೆರೆಸುವಂತಿತ್ತು. ಅವಳ ದೃಢತೆ ಮತ್ತು ಬುದ್ಧಿವಂತಿಕೆ ನನ್ನ ಹೃದಯವನ್ನು ಮುಟ್ಟಿತು. ಅವಳು 15 ವರ್ಷಗಳಿಂದ ಇಲ್ಲಿದ್ದಾಳೆ ಮತ್ತು ಈಗ ಅವಳು ತನ್ನ ಸ್ವಂತ ಜಾಗವನ್ನು ಬಾಡಿಗೆಗೆ ಪಡೆದಿದ್ದಾಳೆ. ಅಲ್ಲಿ ಅವಳು ಚಿಕ್ಕ ಮಕ್ಕಳಿಗೆ ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳುತ್ತಾಳೆ. ಅವಳು ತನ್ನ ಮಗಳನ್ನು ಈ ಪ್ರಪಂಚದಿಂದ ದೂರವಿಡುತ್ತಾಳೆ, ಅವಳು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುತ್ತಿದ್ದಾಳೆ. ನಾನು ಇಂದು ಕಲಿತದ್ದು ಏನೆಂದರೆ, ನೀವು ಯಾರೊಬ್ಬರ ಕಥೆಯನ್ನು ಅರ್ಥಮಾಡಿಕೊಳ್ಳಬೇಕಾಗಿಲ್ಲ - ಗೌರವಿಸುವುದು ಮೂಲಭೂತ ಹಕ್ಕು, ಸವಲತ್ತು ಅಲ್ಲ' ಎಂದು ಅನೀಶ್ ಅವರು ಬರೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಆಕೆ ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ.ಅಪ್ಪ ಸತ್ತು ಹೋದ.ಚಿಕ್ಕಪ್ಪ ಕೆಲಸ ಕೊಡಿಸುತ್ತೇನೆ ಎಂದು ಮಾರಿದ. 15 ವರ್ಷಗಳಿಂದ ಇಲ್ಲಿದ್ದೇನೆ. ನನ್ನಂಥವರ ನೋವನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದು. ಅನಿವಾರ್ಯದ ಬದುಕು ಇದು ಎಂದಿದ್ದಾರೆ. ಇದೇ ವೇಳೆ ಲೈಂಗಿಕ ಆಸೆಯನ್ನು ತೀರಿಸಿಕೊಳ್ಳಲು ಯಾರ ಮೇಲೋ ಅತ್ಯಾಚಾರ ಮಾಡುವವರಿಗೆ ಸಂದೇಶ ನೀಡಿರುವ ರಾಕ್ಸಿ, ಯಾರ ಮೇಲೋ ಅತ್ಯಾಚಾರ ಮಾಡಬೇಡಿ, ನಮ್ಮಲ್ಲಿಗೆ ಬನ್ನಿ ಎಂದಿದ್ದಾಳೆ. ತನಗೆ ಓದು ಎಂದರೆ ತುಂಬಾ ಇಷ್ಟ ಎಂದಿರುವ ರಾಕ್ಸಿ ಪುಸ್ತಕ ಓದುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಕೊನೆಗೆ ತನಗೆ ಹೂವಿನ ಬೊಕೆ ಇಷ್ಟ ಎಂದಿರುವ ಆಕೆಗೆ ಹೂವಿನ ಬೊಕೆ ನೀಡಿ ಖುಷಿಪಡಿಸಿರುವ ಯೂಟ್ಯೂಬರ್ಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.
ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಹೈಫೈ ಪತ್ನಿಗೆ ಉಗಿದು ಕಳಿಸಿದ ನ್ಯಾಯಾಧೀಶೆ: ಕೋರ್ಟ್ ಕೇಸ್ ವೈರಲ್
ಹಲವರು ಇವರ ಕಾರ್ಯವನ್ನು ಶ್ಲಾಘಿಸಿದರೆ, ಮತ್ತೆ ಕೆಲವರು ಮಹಿಳೆ ನೀಡಿರುವ ಸಂದೇಶ ಉತ್ತಮವಾಗಿದೆ ಎಂದಿದ್ದಾರೆ. ಆದರೆ ಮತ್ತೆ ಕೆಲವರು, ಈಕೆ ಮಾಡುತ್ತಿರುವ ವೃತ್ತಿ ಸರಿಯಿಲ್ಲ, ಅದನ್ನು ಬ್ಯಾನ್ ಮಾಡಬೇಕು. ಇಂಥ ಸಂದೇಶ ಕೊಡುವುದು ಸರಿಯಲ್ಲ ಎಂದಿದ್ದಾರೆ. ಆದರೆ ಹೆಚ್ಚಿನವರು ಮಹಿಳೆಯರು ಈ ವೃತ್ತಿಗೆ ಬರುವ ಹಿಂದಿರುವ ನೋವಿನ ಕಥೆಗೆ ಸ್ಪಂದಿಸಿದ್ದು ನಿಜಕ್ಕೂ ನೀವು ನಮ್ಮ ಕಣ್ಣು ತೆರೆಸಿದ್ದೀರಿ ಎಂದಿದ್ದಾರೆ.