Skincare in Monsoon: ಏನೇನೋ ಸರ್ಕಸ್ ಮಾಡ್ಬೇಡಿ, ಹೀಗ್ ಮಾಡಿದರಾಯಿತು
ಮಳೆಗಾಲದಲ್ಲಿ ಕಾಫಿ, ಟೀ ಕುಡಿಯುವ ಪ್ರಮಾಣ ಹೆಚ್ಚಬಹುದು. ಹುಷಾರು, ಇದರಿಂದ ಚರ್ಮದ ಮೇಲೆ ಪರಿಣಾಮವುಂಟಾಗಬಹುದು. ಹಾಗೆಯೇ, ಮಳೆಗಾಲದಲ್ಲೂ ಚರ್ಮದ ಬಗ್ಗೆ ಕಾಳಜಿ ಅಗತ್ಯ. ಫಂಗಸ್ ಹಾಗೂ ಇನ್ನಿತರ ಸೋಂಕಾಗದಂತೆ ಎಚ್ಚರಿಕೆ ವಹಿಸಬೇಕು.
ಮಳೆಗಾಲದಲ್ಲಿ (Monsoon) ದೇಹಕ್ಕೆ ಹಿತವೆನಿಸುತ್ತದೆ. ಹೆಚ್ಚು ಸೆಖೆಯಿಲ್ಲದ, ಚಳಿಯೂ ಇಲ್ಲದ ದಿನಗಳಲ್ಲಿ ಖುಷಿಯಾಗುತ್ತದೆ. ಆದರೆ, ವಾತಾವರಣದಲ್ಲಾಗುವ ಏರಿಳಿತದಿಂದ ನಮ್ಮ ಚರ್ಮದ (Skin) ಮೇಲೆ ಸಾಕಷ್ಟು ಪರಿಣಾಮಗಳು ಉಂಟಾಗಬಹುದು. ಅದರಲ್ಲೂ ಮುಖದ ಚರ್ಮ ಸಾಕಷ್ಟು ನಾಜೂಕು. ಹೀಗಾಗಿ, ಮಳೆಯ ಕಾಲದಲ್ಲಿ ಮುಖದ ಚರ್ಮದ ಬಗ್ಗೆ ಹೆಚ್ಚು ಕಾಳಜಿ (Care) ವಹಿಸಬೇಕು. ಚರ್ಮಕ್ಕೆ ಹಾನಿ ಆಗುವಂತಹ ಕೆಲಸಗಳನ್ನು ನಾವು ಸಾಕಷ್ಟು ಬಾರಿ ಅರಿವಿಲ್ಲದೆ ಮಾಡುತ್ತೇವೆ. ಅವುಗಳ ಬಗ್ಗೆ ತಿಳಿದುಕೊಂಡು ನಮ್ಮ ಶೈಲಿಯನ್ನು ಬದಲಿಸಿಕೊಳ್ಳಬೇಕು. ಆಗ ಮಾತ್ರ ಮಳೆಕಾಲದಲ್ಲೂ ಮುಖದ (Face) ತ್ವಚೆಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಮಳೆಗಾಲದಲ್ಲಿ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆ ಎಂದು ಭಾವಿಸಲಾಗುತ್ತದೆ. ಆದರೆ, ಹಾಗೇನೂ ಇಲ್ಲ. ವಾತಾವರಣದಲ್ಲಿರುವ ತೇವಾಂಶದಿಂದ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಕೆಲವು ತಪ್ಪುಗಳನ್ನು ಮಾಡಬಾರದು.
• ಮುಖಕ್ಕೆ ಗಾಢವಾದ ಮೇಕಪ್ (Avoid Heavy Makeup)
ಮುಖಕ್ಕೆ ಗಾಢವಾದ ಮೇಕಪ್ ಎಂದಿಗೂ ಒಳ್ಳೆಯದಲ್ಲ. ಮಳೆಗಾಲವೂ ಇದಕ್ಕೆ ಹೊರತಲ್ಲ. ಈ ಸಮಯದಲ್ಲಿ ಮುಖದ ಮೇಲೆ ಗುಳ್ಳೆಗಳು, ಮೊಡವೆ ಆಗುವ ಸಮಸ್ಯೆ ಹೆಚ್ಚು. ಹೀಗಾಗಿ, ದಪ್ಪನೆಯ ಹೊದಿಕೆಯಂತಹ ಮೇಕಪ್ ನಿಂದ ದೂರವಿರಬೇಕು. ಹಾಗೆಯೇ, ದಪ್ಪನೆಯ ಲೋಷನ್ (Lotion)ಗಳನ್ನು ಮುಖಕ್ಕೆ ಬಳಕೆ ಮಾಡಬಾರದು. ಲಘು ಮಾಯಿಶ್ಚರೈಸ್ ಹಾಗೂ ಮೊಡವೆ (Acne) ಇದ್ದಾಗ ಮಾತ್ರ ಸನ್ ಸ್ಕ್ರೀನ್ ಗಳನ್ನು ಬಳಕೆ ಮಾಡಬಹುದು. ದಟ್ಟವಾದ ಮೇಕಪ್ ನಿಂದ ಮುಖದ ತ್ವಚೆ ಹಾಳಾಗುತ್ತದೆ. ಮಳೆಗಾಲದಲ್ಲಿ ಇದು ಇನ್ನಷ್ಟು ಸಮಸ್ಯೆ ತಂದೊಡ್ಡುತ್ತದೆ. ತೇವಾಂಶದಿಂದಾಗಿ ಮೇಕಪ್ ಸ್ಟಿಕ್ ಗಳು ಫಂಗಸ್ (Fungus) ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು. ಇದರಿಂದಾಗಿ ಅಲರ್ಜಿ (Allergy) ಸಮಸ್ಯೆ ಈ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಬೆವರು ರಂಧ್ರಗಳನ್ನು ಮುಚ್ಚುವುದರಿಂದ ಚರ್ಮಕ್ಕೆ ಉಸಿರಾಡಿಸಲು ಸಾಧ್ಯವಾಗದೆ ಚರ್ಮ ಕಳೆಗುಂದುತ್ತದೆ. ಮಳೆಗಾಲದಲ್ಲಿ ಚರ್ಮ ಸಹಜವಾಗಿ ಹೊಳಪಾಗುತ್ತದೆ. ಅದನ್ನೇ ಕಾಪಾಡಿಕೊಳ್ಳಬೇಕು. ಲೈಟ್ ಪೌಡರ್ ನಂತಹ ಮೇಕಪ್ ಬಳಕೆ ಮಾಡಿ ಎಷ್ಟು ಸಾಧ್ಯವೋ ಅಷ್ಟು ಬೇಗ ಅದನ್ನು ತೆಗೆದುಹಾಕಬೇಕು.
ಇದನ್ನೂ ಓದಿ: ಅರಿಶಿಣ: ಸರ್ವರೋಗಕ್ಕೂ ಮದ್ದು
• ಸ್ವಚ್ಛತೆ ಮರೆತುಬಿಡಬೇಡಿ (Daily Hygiene)
ಮಳೆಗಾಲದಲ್ಲಿ ಚರ್ಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಸಮಯದಲ್ಲಿ ಫಂಗಸ್ ಕಾಟ ಅಧಿಕ.
• ಸನ್ ಸ್ಕ್ರೀನ್ (Sunscreen) ಬಳಕೆ ಇರಲಿ
ಮಳೆಗಾಲದಲ್ಲಿ ಸನ್ ಸ್ಕ್ರೀನ್ ಬಳಕೆ ಏಕೆ ಎಂದು ಅಂದುಕೊಳ್ಳುವವರೇ ಹೆಚ್ಚು. ಅವು ಕೇವಲ ಬೇಸಿಗೆಗಲ್ಲ. ಮಳೆಗಾಲದಲ್ಲಿ ಬೇಸಿಗೆಯಷ್ಟು ಸೂರ್ಯಕಿರಣಗಳು ಕಾಡದೆ ಇರಬಹುದು. ಆದರೆ, ಅತಿನೇರಳೆ ಕಿರಣಗಳು ಮೋಡದ ಮೂಲಕವೂ ಹಾದು ಬರುತ್ತವೆ ಹಾಗೂ ಅವು ಚರ್ಮಕ್ಕೆ ಹಾನಿ ತರಬಲ್ಲವು. ಮಳೆಗಾಲದಲ್ಲಿ ನೀರು (Water) ಹಾಗೂ ಸಿಲಿಕಾನ್ ಆಧಾರಿತ ಸನ್ ಸ್ಕ್ರೀನ್ ಗಳು ಉತ್ತಮ ಆಯ್ಕೆ ಎನ್ನುತ್ತಾರೆ ತಜ್ಞರು.
• ಮಾಯಿಶ್ಚರೈಸ್ (Moisturise) ದೂರವಿಡಬೇಡಿ
ಬೇಸಿಗೆ ಮಾತ್ರವಲ್ಲ, ಮಳೆಗಾಲದಲ್ಲೂ ಚರ್ಮ ಶುಷ್ಕವಾಗದೆ ಇರಲು ಮಾಯಿಶ್ಚರೈಸ್ ಬೇಕಾಗುತ್ತದೆ. ಚಳಿಗಾಲದಷ್ಟು ಪ್ರಮಾಣದಲ್ಲಿ ಬೇಕಾಗದಿದ್ದರೂ ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡುವುದು ಉತ್ತಮ. ಇದರಿಂದ ಚರ್ಮ ಮೃದುವಾಗಿರುತ್ತದೆ. ಶುಷ್ಕತೆ ಕಳೆದುಕೊಂಡು ಬಾಡುವುದಿಲ್ಲ.
ಮಳೆಗಾಲದಲ್ಲಿ ಬ್ಯಾಗಲ್ಲೇನು ಇರಬೇಕು?
• ಸಾಕಷ್ಟು ನೀರು (Enough Water) ಕುಡಿಯದಿರುವುದು
ಬಹಳಷ್ಟು ಜನರ ಸಮಸ್ಯೆ ಎಂದರೆ ಇದೇ. ಮಳೆಗಾದಲ್ಲಿ ನೀರು ಕುಡಿಯುವುದೆಂದರೆ ಅವರಿಗೆ ಬೇಸರ. ದೇಹಕ್ಕೆ ಸಾಕಾಗುವಷ್ಟು ನೀರನ್ನು ಸೇವಿಸುವುದಿಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬಾಯಾರಿಕೆ ಆಗುವುದು ಕಡಿಮೆ. ಆದರೆ ದೇಹಕ್ಕೆ ನೀರು ಕಡಿಮೆ ಸಾಕು ಎಂದರ್ಥವಲ್ಲ. ಚರ್ಮಕ್ಕೆ ಯಾವಾಗಲೂ ನೀರಿನ ಅಗತ್ಯವಿದೆ. ಹೀಗಾಗಿ, ದಿನಕ್ಕೆ ಕನಿಷ್ಠ 3 ಲೀಟರ್ ನೀರನ್ನಾದರೂ ಕುಡಿಯಬೇಕು. ನೀರು ಕಡಿಮೆಯಾದರೆ ಚರ್ಮ ಕಳಾಹೀನವಾಗುತ್ತದೆ. ಒಣಗುತ್ತದೆ ಹಾಗೂ ಶುಷ್ಕವಾಗುತ್ತದೆ. ಇದರಿಂದ ಮುಖದಲ್ಲಿ ತೇಜಸ್ಸು ಇರುವುದಿಲ್ಲ. ಚರ್ಮದಲ್ಲಿ ಹೊಳಪು (Shine) ಇರಬೇಕೆಂದರೆ ಸಾಕಷ್ಟು ನೀರು ಅಗತ್ಯ.