ಮನೆ ಅಂದ್ಮೇಲೆ ಜಿರಳೆ, ಸೊಳ್ಳೆ, ಕೀಟಗಳ ಕಾಟ ಎದುರಿಸಬೇಕಾಗುತ್ತದೆ. ಆದರೆ ಇದು ಕೆಲವೊಮ್ಮೆ ವಿಪರೀತವಾಗಿ ಬಿಟ್ಟಾಗ ಮನೆ ಮಂದಿಗೆ ತೊಂದರೆಯಾಗೋದು ಸಹಜ. ನಿಮ್ಮನೇಲಿ ವಿಪರೀತ ಜಿರಳೆ ಕಾಟನಾ, ಹಾಗಿದ್ರೆ ಅದನ್ನು ಹೋಗಲಾಡಿಸೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್‌.

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳಿಂದ ತೊಂದರೆಗೊಳಗಾಗುತ್ತಾರೆ. ಮನೆಯ ಹಲವು ಮೂಲೆಯಲ್ಲಿ ಜಿರಳೆಗಳು ಓಡಾಡುತ್ತವೆ. ಅಡುಗೆಮನೆಯಲ್ಲಿ, ಬೀರುಗಳಲ್ಲಿ, ಸಿಂಕ್ ಅಡಿಯಲ್ಲಿ, ಪೈಪುಗಳಲ್ಲಿ ಎಲ್ಲೆಲ್ಲೂ ಜಿರಳೆ ಕಾಣಸಿಗುತ್ತವೆ. ಮನೆಯಲ್ಲಿ ಜಿರಳೆಗಳಿದ್ದರೆ, ... ಹಲವಾರು ಆರೋಗ್ಯ ಸಮಸ್ಯೆಗಳು ಬರುತ್ತವೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಜಿರಳೆಗಳನ್ನು ಹೋಗಲಾಡಿಸಲು ಅನೇಕರು ಹರಸಾಹಸ ಪಡುತ್ತಾರೆ. ಆದರೂ ಇದು ಕೆಲವೊಮ್ಮೆ ಶಾಶ್ವತ ಪರಿಹಾರ ಒದಗಿಸುವುದಿಲ್ಲ. ಆದರೆ, ಈ ಕೆಳಗಿನ ಸಲಹೆಗಳ ಮೂಲಕ ಕೇವಲ ಒಂದು ವಾರದಲ್ಲಿ ಈ ಜಿರಳೆಗಳನ್ನು ಶಾಶ್ವತವಾಗಿ ಹೋಗಲಾಡಿಸಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಅಡುಗೆ ಸೋಡಾ, ಸಕ್ಕರೆ
ಈ ಎರಡು ಕಾಂಬಿನೇಷನ್ ನಿಂದ ಸುಲಭವಾಗಿ ಜಿರಳೆಗಳನ್ನು ಹೋಗಲಾಡಿಸಬಹುದು. ಒಂದು ಬಟ್ಟಲಿನಲ್ಲಿ ಅಡಿಗೆ ಸೋಡಾ ಮತ್ತು ಸಕ್ಕರೆಯನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್‌ನ್ನು ಜಿರಳೆಗಳು ಪ್ರವೇಶಿಸುವ, ನಿರ್ಗಮಿಸುವ ಮತ್ತು ಮರೆಮಾಚುವ ಸ್ಥಳದಾದ್ಯಂತ ಅನ್ವಯಿಸಬೇಕು. ಈ ಮಿಶ್ರಣದಿಂದ ಜಿರಳೆಗಳು ಸುಲಭವಾಗಿ ಓಡಿಹೋಗುತ್ತವೆ.

Cleaning Tips: ಮನೆ ಕ್ಲೀನ್ ಮಾಡುವಾಗ ಇದನ್ನು ನೀರಲ್ಲಿ ಬೆರೆಸಿದ್ರೆ ನೆಲ ಫಳಫಳ ಹೊಳೆಯುತ್ತೆ!

ಲ್ಯಾವೆಂಡರ್ ಎಣ್ಣೆ
ಲ್ಯಾವೆಂಡರ್ ಎಣ್ಣೆಯು ಜಿರಳೆಗಳನ್ನು ಸುಲಭವಾಗಿ ಹಿಮ್ಮೆಟ್ಟಿಸುತ್ತದೆ. ನೀರು ಮತ್ತು ಲ್ಯಾವೆಂಡರ್ ಎಣ್ಣೆಯನ್ನು ಮಿಶ್ರಣ ಮಾಡುವ ಮೂಲಕ ಸ್ಪ್ರೇ ಬಾಟಲಿಯನ್ನು ತುಂಬಿಸಿ. ಈ ಮಿಶ್ರಣವನ್ನು ಜಿರಳೆಗಳು ಅಡಗಿರುವ ಸ್ಥಳಗಳು ಮತ್ತು ಬಿರುಕುಗಳ ಮೇಲೆ ಸಿಂಪಡಿಸಿ. ಲ್ಯಾವೆಂಡರ್‌ನ ಬಲವಾದ ವಾಸನೆಯು ಜಿರಳೆಗಳನ್ನು ಹೋಗಲಾಡಿಸಲು ಸಹಾಯಕವಾಗಿದೆ.

ಬೇವಿನ ಎಣ್ಣೆ
ಬೇವಿನ ಎಣ್ಣೆ ಕೂಡಾ ಜಿರಳೆಗಳನ್ನು ಹೋಗಲಾಡಿಸಲು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಬೇವಿನ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ತುಂಬಿಸಿ. ಈಗ, ಈ ಮಿಶ್ರಣವನ್ನು ಜಿರಳೆಗಳು, ಅವುಗಳ ಅಡಗಿರುವ ಸ್ಥಳಗಳು ಮತ್ತು ಬಿರುಕುಗಳ ಮೇಲೆ ಸಿಂಪಡಿಸಿ. ಬೇವಿನ ಕಹಿ ವಾಸನೆಯಿಂದಾಗಿ ಜಿರಳೆಗಳು ಬರುವುದಿಲ್ಲ.

Cleaning Tips: ಹಲ್ಲುಜ್ಜಲು ಮಾತ್ರವಲ್ಲ ಟೂತ್‌ಪೇಸ್ಟ್‌ನ್ನು ಹೀಗೆಲ್ಲಾ ಬಳಸ್ಬೋದು

ಪುದೀನಾ ಎಲೆ
ತಾಜಾ ಪುದೀನ ಎಲೆಗಳನ್ನು ಜಿರಳೆಗಳನ್ನು ಅಡಗುವ ಸ್ಥಳಗಳಲ್ಲಿ ಇರಿಸಿ. ಇದನ್ನು ಪೌಡರ್ ಮಾಡಿಟ್ಟುಕೊಂಡು ಮನೆಯ ಮೂಲೆ ಮೂಲೆಯಲ್ಲಿಟ್ಟರೂ ಸರಿ. ಅದರ ದ್ರವವನ್ನು ಸಹ ಇಡಬಹುದು. ಪುದೀನಾ ವಾಸನೆಯು ಜಿರಳೆಗಳನ್ನು ನಿಮ್ಮ ಮನೆಯಿಂದ ದೂರವಿಡುತ್ತದೆ. ಇವುಗಳಷ್ಟೇ ಅಲ್ಲ.. ಜಿರಳೆಗಳಿಂದ ದೂರವಿರಲು ಮೊದಲು ನಿಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಹ ಮುಖ್ಯ.