ಕಸಕ್ಕೆ ಸೇರುವ ಹಾಲಿನ ಕವರ್, ಪ್ಲಾಸ್ಟಿಕ್ ಗಳನ್ನು ಮರು ಬಳಸೋದು ಮುಖ್ಯ. ಇದ್ರಿಂದ ಪರಿಸರ ರಕ್ಷಣೆ ಆಗುವ ಜೊತೆಗೆ ಒಂದಿಷ್ಟು ಅಲಂಕಾರಿಕ ವಸ್ತುಗಳು, ಬಳಕೆ ವಸ್ತುಗಳು ನಮ್ಮ ಕೈ ಸೇರುತ್ತವೆ. ನಿಮ್ಮ ಮನೆಯಲ್ಲೂ ಹಾಲಿನ ಪ್ಯಾಕೆಟ್ ಕಸ ಸೇರುತ್ತಿದೆ ಎಂದಾದ್ರೆ ಇದನ್ನೊಮ್ಮೆ ಓದಿ.
ಪ್ರತಿಯೊಬ್ಬರ ಮನೆಗೆ ಹಾಲಿನ ಪ್ಯಾಕೆಟ್ ಬರುತ್ತೆ. ಪ್ಯಾಕೆಟ್‌ನಲ್ಲಿರುವ ಹಾಲನ್ನು ಪಾತ್ರೆಗೆ ಹಾಕಿ, ಪ್ಯಾಕೆಟನ್ನು ನಾವೆಲ್ಲ ಕಸದ ಬುಟ್ಟಿಗೆ ಹಾಕ್ತೇವೆ. ಪ್ರತಿ ದಿನ ನಡೆಯುವ ಕೆಲಸಗಳಲ್ಲಿ ಇದೂ ಒಂದು. ಈ ಪ್ಲಾಸ್ಟಿಕ್ ಹಾಲಿನ ಪ್ಯಾಕೆಟ್ ನಮ್ಮಲ್ಲಿ ದೊಡ್ಡ ತ್ಯಾಜ್ಯ. ಇದು ಪರಿಸರ ನಾಶ ಮಾಡುವಂತಹ ವಸ್ತುವೂ ಹೌದು. ನಮಗೆ ಇದು ಬರಿ ಹಾಲಿನ ಪ್ಯಾಕೆಟ್‌ನಂತೆ ಕಂಡಿದೆ. ಆದ್ರೆ ಪತ್ತನಂತಿಟ್ಟದ ಅಡೂರಿನ 67 ವರ್ಷದ ಮಹಿಳೆ ಲೀಲಮ್ಮಾ ಮ್ಯಾಥ್ಯೂ, ಹಾಲಿನ ಪ್ಯಾಕೆಟ್ ಗಳನ್ನು ನೋಡುವ ದೃಷ್ಟಿಯೇ ಬೇರೆ. ಲೀಲಮ್ಮಾ ಮ್ಯಾಥ್ಯೂಗೆ ಹಾಲಿನ ಪ್ಯಾಕೆಟ್‌ಗಳು ಹಲವಾರು ಉಪಯುಕ್ತ ಕರಕುಶಲ ವಸ್ತುಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಕಚ್ಚಾ ವಸ್ತುಗಳಾಗಿವೆ.
ಕೈ ಕಸೂತಿ ಮತ್ತು ಕರಕುಶಲ ಕಲೆಯಲ್ಲಿ ಪರಿಣತಿ ಹೊಂದಿರುವ ಲೀಲಮ್ಮ ಅವರು ಬಳಸಿದ ಹಾಲಿನ ಪ್ಯಾಕೆಟ್‌ಗಳೊಂದಿಗೆ ವಾರ್ಡ್ರೋಬ್, ಲಾಂಡ್ರಿ ಬಿನ್‌ಗಳು, ಹಣ್ಣಿನ ಬುಟ್ಟಿಗಳು, ಕೈಚೀಲಗಳು ಮತ್ತು ಪರ್ಸ್‌ಗಳನ್ನು ತಯಾರಿಸಿದ್ದಾರೆ. ಅವರ ಕೆಲಸದ ಕೆಲವು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅನೇಕ ಜನರು ಲೀಲಮ್ಮ ಕಲೆಯನ್ನು ಮೆಚ್ಚಿಕೊಂಡಿದ್ದಾರೆ. ಕೆಲ ಆರ್ಡರ್ ಕೂಡ ಬರ್ತಿದೆ. ಈ ವಸ್ತುಗಳನ್ನು ಹೇಗೆ ತಯಾರಿಸೋದು ಎಂದು ಲೀಲಮ್ಮ ಬಳಿ ಜನರು ಮಾಹಿತಿ ಪಡೆಯುತ್ತಿದ್ದಾರೆ. ಮತ್ತೆ ಕೆಲವರು ಲೀಲಮ್ಮ ವಿಡಿಯೋ ನೋಡಿ ಸ್ಪೂರ್ತಿ ಪಡೆದು ತಾವೂ ಇಂಥ ಕೆಲಸ ಮಾಡಲು ಆಸಕ್ತಿ ತೋರುತ್ತಿದ್ದಾರೆ.
ಕಡೆಗೆ ಒಂಚೂರು ಉಳಿದಿರುತ್ತಲ್ಲ ಸೋಪ್, ಅದನ್ನು ಬಳಸೋದು ಹೇಗೆ? ಇಲ್ಲಿದೆ ಟಿಪ್ಸ್
ಮೂರು ವರ್ಷಗಳ ಹಿಂದೆ ಮನೆ ಸುತ್ತಮುತ್ತ ಬಿದ್ದಿದ್ದ ಪ್ಲಾಸ್ಟಿಕ್ (Plastic) ಬಾಟಲಿಗಳನ್ನು ನೋಡಿದ ಲೀಲಮ್ಮ (Leelamma) ತಲೆಯಲ್ಲಿ ಅದನ್ನು ಮರು ಬಳಕೆ ಮಾಡುವ ಬಗ್ಗೆ ಆಲೋಚನೆ ಬಂತು. ಲೀಲಮ್ಮಗೆ ಪ್ಲಾಸ್ಟಿಕ್ ನಮ್ಮ ಪರಿಸರಕ್ಕೆ ಹಾನಿಕರ ಎಂಬ ಸಂಗತಿ ತಿಳಿದಿತ್ತು. ಹಾಗಾಗಿ ಲೀಲಮ್ಮ ಮನೆಯಲ್ಲಿರುವ ಹಾಗೂ ಸುತ್ತಮುತ್ತಲ ಪ್ಲಾಸ್ಟಿಕ್ ವಸ್ತುಗಳನ್ನು ತಂದು, ಒಂದು ಹೊಂಡ ತೋಡಿ ವಸ್ತುಗಳನ್ನು ಅದ್ರಲ್ಲಿ ಹಾಕಿ ಬೆಂಕಿ ಹಾಕುತ್ತಿದ್ದರು. ಆದ್ರೆ ಬೆಂಕಿ ಹಾಕಿ ಈ ಪ್ಲಾಸ್ಟಿಕ್ ವಸ್ತುಗಳನ್ನು ಸುಡುವುದು ಕೂಡ ಪರಿಸರ ಸ್ನೇಹಿ ಅಲ್ಲ ಎಂಬುದನ್ನು ತಿಳಿದ ಲೀಲಮ್ಮ, ಅದನ್ನು ಮರು ಬಳಕೆ ಮಾಡುವ ನಿರ್ಧಾರಕ್ಕೆ ಬಂದರು.
ಕರಕುಶಲ ವಸ್ತುಗಳ ತಯಾರಿಕೆ, ಹೊಲಿಗೆಯಲ್ಲಿ ಬಾಲ್ಯದಿಂದಲೂ ಆಸಕ್ತಿ ಹೊಂದಿದ್ದ ಲೀಲಮ್ಮ, ಅನೇಕ ಕ್ರಾಫ್ಟ್ ಗಳನ್ನು ಸಿದ್ಧಪಡಿಸಿದ್ದರು. ಆರಂಭದಲ್ಲಿ ಹಾಲಿನ ಪ್ಯಾಕೆಟ್ ಗಳನ್ನು ಮರುಬಳಕೆ ಮಾಡಿದ ಲೀಲಮ್ಮ, ಅದ್ರಿಂದ ಪರ್ಸ್ ಗಳನ್ನು ತಯಾರಿಸಿದ್ರು. ಕವರ್ ಗಳನ್ನು ಸ್ವಚ್ಛವಾಗಿ ತೊಳೆದು ಅದನ್ನು ಒಣಗಿಸಿ ನಂತ್ರ ಸಣ್ಣ ದಾರಗಳಂತೆ ಕತ್ತರಿಸಿ ಅದನ್ನು ನೆಯ್ಯುತ್ತಿದ್ದರು. ಇದರಲ್ಲಿ ಯಶಸ್ವಿಯಾದ ಲೀಲಮ್ಮ ನಂತ್ರ ಶಾಪಿಂಗ್ ಬ್ಯಾಗ್, ಹಣ್ಣಿನ ಬಾಸ್ಕೆಟ್ ಗಳನ್ನು ಹಾಲಿನ ಪ್ಯಾಕೆಟ್ ನಿಂದ ತಯಾರಿಸಲು ಶುರು ಮಾಡಿದ್ರು. ಲೀಲಮ್ಮ ಸ್ನೇಹಿತರು, ಆಪ್ತರು ತಂದುಕೊಟ್ಟ ಹಾಲಿನ ಪ್ಯಾಕೆಟ್ ಬಳಸಿ, ಕಪಾಟನ್ನು ಅಲಂಕರಿಸಿದ್ದಾರೆ. ಅದಕ್ಕೆ ಅವರು 4150 ಹಾಲಿನ ಪ್ಯಾಕೆಟ್ ಬಳಸಿದ್ದಾರೆ. ಇದಲ್ಲದೆ 1 ಸಾವಿರ ಹಾಲಿನ ಪ್ಯಾಕೆಟ್ ಬಳಸಿ ಲಾಂಡ್ರಿ ಬಿನ್ ತಯಾರಿಸಿದ್ದಾರೆ.
ರೈಲ್ವೆ ಮಂಡಳಿಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಜಯಾ ವರ್ಮಾ ನೇಮಕ, ಯಾರೀಕೆ?
ಬರೀ ಹಾಲಿನ್ ಪ್ಯಾಕೆಟ್ ನಿಂದ ಕ್ರಾಫ್ಟ್ ಮಾತ್ರ ತಯಾರಿಸಿಲ್ಲ, ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಕೂಡ ಅವರು ಮರುಬಳಕೆ ಮಾಡಿದ್ದಾರೆ. ಒಂದಿಷ್ಟು ಪ್ಲಾಸ್ಟಿಕ್ ಬಾಟಲಿಗಳನ್ನು ಜೋಡಿಸಿ, ಗಿಡ ನಡೆಲು ಪಾಟ್ ತಯಾರಿದ್ದಾರೆ ಲೀಲಮ್ಮ. ತಮ್ಮಂತೆ ಅನೇಕರಿಗೆ ಪ್ಲಾಸ್ಟಿಕ್ ಕವರ್ ನಿಂದ ಕ್ರಾಫ್ಟ್ ಕಲಿಸುವ ಆಸೆಯನ್ನು ಲೀಲಮ್ಮ ಹೊಂದಿದ್ದಾರೆ. ಆದ್ರೆ ಆರಂಭಿಕ ಹೂಡಿಕೆ ಸವಾಲಾಗಿದೆ.
