ಮಹಿಳೆಯ ಕಣ್ಣಿನ ಮೂಲಕವೇ ಈ ಕ್ಯಾನ್ಸರ್ ಮತ್ತೆ ಮಾಡಬಹುದು!

ಈಗ ಕ್ಯಾನ್ಸರ್ ನಿರಂತರವಾಗಿ ಹೆಚ್ಚಾಗ್ತಿದೆ. ಮಹಿಳೆಯರು ನಾನಾ ಕ್ಯಾನ್ಸರ್ ಗೆ ಬಲಿಯಾಗ್ತಿದ್ದಾರೆ. ಕೆಲ ಕ್ಯಾನ್ಸರ್ ಮೊದಲೇ ತನ್ನ ಲಕ್ಷಣವನ್ನು ತೋರಿಸುತ್ತೆ. ಸೂಕ್ಷ್ಮವಾಗಿ ಲಕ್ಷಣ ಗಮನಿಸಿದ್ರೆ ಶೀಘ್ರ ಚಿಕಿತ್ಸೆ ಪಡೆಯಬಹುದು.   
 

Early Symptoms Of Acute Myeloid Leukemia Blood Cancer In Eyes roo

ಇಂದು ಅಂತರಾಷ್ಟ್ರೀಯ ಮಹಿಳಾ ದಿನ. ಮಹಿಳೆ ಯಾವಾಗಲೂ ತನ್ನ ಕುಟುಂಬದ ಒಳಿತಿಗಾಗಿ ಶ್ರಮಿಸುತ್ತಾಳೆ. ಬಿಡುವಿಲ್ಲದೇ ಕೆಲಸದಲ್ಲಿ ನಿರತರಾಗಿರುವ ಮಹಿಳೆಯರನ್ನು ಕೆಲವು ಖಾಯಿಲೆಗಳು ಬಾಧಿಸುತ್ತವೆ. ಮಹಿಳೆಯರನ್ನು ಹೆಚ್ಚಾಗಿ ಬಾಧಿಸುವ ಕೆಲವು ಮಾರಣಾಂತಿಕ ಖಾಯಿಲೆಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಈ ಖಾಯಿಲೆಯಿಂದ ಅನೇಕ ಮಹಿಳೆಯರು ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ ನಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಲ್ಯೂಕೇಮಿಯಾ ಕೂಡ ಒಂದು ಬಗೆಯ ಕ್ಯಾನ್ಸರ್ ಆಗಿದೆ. ಇದನ್ನು ರಕ್ತದ ಕ್ಯಾನ್ಸರ್ (ಬ್ಲಡ್ ಕ್ಯಾನ್ಸರ್) ಎಂದೂ ಕರೆಯುತ್ತಾರೆ. ಇದು ಮಹಿಳೆಯರಲ್ಲಿ ಕೂಡ ಕಾಣಿಸಿಕೊಳ್ಳುವ ಮಾರಣಾಂತಿಕ ಕ್ಯಾನ್ಸರ್ ಆಗಿದೆ.

ಇತ್ತೀಚಿನ ಆಹಾರ ಶೈಲಿ ಹಾಗೂ ಲೈಫ್ ಸ್ಟೈಲ್ ನಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ರಕ್ತದ ಕ್ಯಾನ್ಸರ್ ಈಗ ಸಾಮಾನ್ಯವಾಗಿಬಿಟ್ಟಿದೆ ಎಂದರೆ ತಪ್ಪಾಗದು. ಅದು ದೇಹದಲ್ಲಿ ಯಾವಾಗ ಹೇಗೆ ಬೆಳೆದು ಭಯಂಕರ ರೂಪವನ್ನು ತಾಳುತ್ತೆ ಎನ್ನುವುದೇ ತಿಳಿಯುವುದಿಲ್ಲ. ಅನೇಕ ಅಧ್ಯಯನಗಳು ಬ್ಲಡ್ ಕ್ಯಾನ್ಸರ್ ಬಹಳ ಬೇಗ ಗಂಭೀರ ಸ್ವರೂಪ ಪಡೆಯುತ್ತದೆ ಎಂದು ಹೇಳಿವೆ. ಮಹಿಳೆಯರಲ್ಲೂ ಲ್ಯೂಕೇಮಿಯಾ ಸಾಮಾನ್ಯವಾಗಿದೆ. ಸಕಾಲದಲ್ಲಿ ಲ್ಯುಕೇಮಿಯಾದ ಕೆಲವು ಲಕ್ಷಣಗಳ ಕುರಿತು ತಿಳಿದುಕೊಳ್ಳುವುದರಿಂದ ರೋಗನಿರ್ಣಯ ಮಾಡಲು ಸುಲಭವಾಗುತ್ತದೆ. ಲ್ಯುಕೇಮಿಯಾದ ಕೆಲವು ಲಕ್ಷಣಗಳು ಕಣ್ಣುಗಳಲ್ಲಿ ಗೋಚರಿಸುತ್ತದೆ.

KIDNEY HEALTH SAFETY TIPS: ಒಂದೇ ಒಂದು ಕಿಡ್ನಿ ಇರೋರು ಎಷ್ಟು ಸುರಕ್ಷಿತ?

ಮಹಿಳೆಯರನ್ನು ಹೆಚ್ಚು ಕಾಡುತ್ತೆ ಲ್ಯುಕೇಮಿಯಾ (Leukemia) : ಲ್ಯುಕೇಮಿಯಾ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ರಕ್ತ (Blood) ದ ಮತ್ತು ಮೂಳೆಯ ಕ್ಯಾನ್ಸರ್ (cancer) ಆಗಿದೆ. ಎಕ್ಯೂಟ್ ಮೈಲೈಯ್ಡ್ ಲ್ಯುಕೇಮಿಯಾ (AML) ಲ್ಯುಕೇಮಿಯಾದ ಒಂದು ವಿಧವಾಗಿದೆ. ಈ ಕ್ಯಾನ್ಸರ್ ರಕ್ತದಲ್ಲಿ ವೇಗವಾಗಿ ಹರಡುತ್ತದೆ ಮತ್ತು ಇಡೀ ದೇಹವನ್ನು ಆವರಿಸುತ್ತದೆ. ಆದ್ದರಿಂದ ಇದನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ ವ್ಯಕ್ತಿಯ ಜೀವವನ್ನು ಉಳಿಸಬಹುದು.

ಎಕ್ಯೂಟ್ ಮೈಲೈಯ್ಡ್ ಲ್ಯುಕೇಮಿಯಾ ಲಕ್ಷಣಗಳು : 
• ಕಣ್ಣುಗಳಲ್ಲಿ ಊತ (Swelling Eyes)
• ಕಣ್ಣಿನ ರಕ್ತಸ್ರಾವ (Bleeding Eyes)
• ಕಣ್ಣಿನ ಸೋಂಕು (Eye Infection)
• ಮಂದ ದೃಷ್ಟಿ (Low Vision)
• ದೃಷ್ಟಿ ಹೀನತೆ
ಲ್ಯುಕೇಮಿಯಾಗೆ ಒಳಗಾದ ಹೆಚ್ಚಿನ ರೋಗಿಗಳಲ್ಲಿ ಕಣ್ಣಿನ ತೊಂದರೆಗಳು ಕಾಣಸಿಕೊಳ್ಳುತ್ತದೆ. 2019ರಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಇದರ ಕುರಿತು ಮಾಹಿತಿ ನೀಡಲಾಗಿದೆ. ರಕ್ತದ ಕ್ಯಾನ್ಸರ್ ಕಣ್ಣಿಗೆ ಹೆಚ್ಚಿನ ಸಮಸ್ಯೆ ಉಂಟುಮಾಡುತ್ತದೆ. ಇದರಿಂದ ರೆಟಿನಾದ ರಕ್ತಸ್ರಾವವು ಲ್ಯಕೇಮಿಯಾದ ಸಾಮಾನ್ಯ ಲಕ್ಷಣವಾಗಿದೆ. ಆಯಾಸ, ಜ್ವರ, ರಾತ್ರಿಯ ಸಮಯದಲ್ಲಿ ಬೆವರುವುದು, ತೂಕ ಕಡಿಮೆಯಾಗುವುದು, ಶೀತ, ಚರ್ಮ ಹಳದಿಯಾಗುವುದು, ಉಸಿರಾಟದ ತೊಂದರೆ, ತಲೆನೋವು ಮುಂತಾದವು ಕೂಡ ಎಕ್ಯೂಟ್ ಮೈಲೈಯ್ಡ್ ಲ್ಯುಕೇಮಿಯಾದ ಲಕ್ಷಣಗಳಾಗಿವೆ. ಬಿಳಿ ರಕ್ತಕಣಗಳ ಸಂಖ್ಯೆ ವಿಪರೀತ ಹೆಚ್ಚಾಗುವುದು ಕೂಡ ಲ್ಯುಕೇಮಿಯಾದ ಲಕ್ಷಣವಾಗಿದೆ.

Sexual Health: ಲೈಂಗಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದ ಕೊರೊನಾ!

ಲ್ಯುಕೇಮಿಯಾದಿಂದ ಬಚಾವಾಗೋದು ಹೇಗೆ? : ಕೆಲವು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವುದರಿಂದ ಮತ್ತು ಸಕಾಲದಲ್ಲಿ ರೋಗನಿರ್ಣಯ ಮಾಡುವುದರಿಂದ ಈ ರಕ್ತದ ಕ್ಯಾನ್ಸರ್ ನಿಂದ ಪಾರಾಗಬಹುದು. ಅಂತಹ ಕೆಲವು ಕ್ರಮಗಳು ಇಲ್ಲಿವೆ.
• ವಿಕಿರಣದ ಸಂಪರ್ಕದಿಂದ ದೂರವಿರಬಹುದು
• ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡುವುದು
• ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ದೂರವಿರುವುದು
• ನಿಯಮಿತವಾಗಿ ವ್ಯಾಯಾಮ ಮಾಡುವುದು
• ಆರೋಗ್ಯಕರ ಆಹಾರಗಳನ್ನು ಸೇವಿಸುವುದು
• ಮತ್ತೆ ಮತ್ತೆ ಕಾಣಿಸಿಕೊಳ್ಳುವ ರೋಗಗಳನ್ನು ಹಾಗೂ ರೋಗ ಲಕ್ಷಣಗಳನ್ನು ನಿರ್ಲಕ್ಷಿಸದೇ ಇರುವುದು

ಯಾವುದೇ ರೋಗವಾದರೂ ಅದು ಆರಂಭಿಕ ಲಕ್ಷಣಗಳನ್ನು ತೋರಿಸುತ್ತದೆ. ಅಂತಹ ಯಾವುದೇ ಲಕ್ಷಣಗಳನ್ನು ನಾವು ಗಂಭೀರವಾಗಿ ಪರಿಗಣಿಸಿಬೇಕು ಹಾಗೂ ವೈದ್ಯರಲ್ಲಿ ಈ ಕುರಿತು ಚರ್ಚಿಸಿ ಸೂಕ್ತ ಚಿಕಿತ್ಸೆ ಪಡೆದುಕೊಂಡಾಗ ರೋಗ ಭೀಕರ ಸ್ವರೂಪ ತಾಳುವುದನ್ನು ತಡೆಗಟ್ಟಬಹುದು. ಈ ಕ್ಯಾನ್ಸರ್ ಪತ್ತೆಗೆ ರಕ್ತ ಪರೀಕ್ಷೆ ಮಾಡಲಾಗುತ್ತದೆ ಮತ್ತು ಮೂಳೆ ಮಜ್ಜೆಯನ್ನು ಪರೀಕ್ಷಿಸಲಾಗುತ್ತದೆ.  

Latest Videos
Follow Us:
Download App:
  • android
  • ios