Asianet Suvarna News Asianet Suvarna News

Sexual Health: ಲೈಂಗಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದ ಕೊರೊನಾ!

ಕೊರೊನಾ ಅಬ್ಬರದ ಆ ದಿನವನ್ನು ಮರೆಯಲು ಸಾಧ್ಯವಿಲ್ಲ. ಈಗ್ಲೂ ಅಲ್ಲಲ್ಲಿ ಕೊರೊನಾ ಸೋಂಕಿತರಿದ್ದಾರೆ. ಕೊರೊನಾ ದೀರ್ಘಕಾಲದವರೆಗೆ ಮಾನಸಿಕ, ದೈಹಿಕವಾಗಿ ಮಾತ್ರವಲ್ಲ ಲೈಂಗಿಕವಾಗಿಯೂ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. 

Study Says Covid Can Affect Woman Sexual Health roo
Author
First Published Mar 7, 2024, 12:49 PM IST

ಕೊರೊನಾ ಮಾಡಿರುವ ಹಾವಳಿ ಅಷ್ಟಿಷ್ಟಲ್ಲ. ಸಾವಿರಾರು ಮಂದಿಯನ್ನು ಬಲಿಪಡೆದ ಕೊರೊನಾ ಅನೇಕರನ್ನು ಅನಾಥರನ್ನಾಗಿ ಮಾಡಿದೆ. ಮತ್ತೆ ಕೆಲವರು ಸಾವಿನ ಅಂಜಿಗೆ ಹೋಗಿ ವಾಪಸ್ ಬಂದಿದ್ದಾರೆ. ಕೊರೊನಾ ದಾಳಿಗೆ ತೀವ್ರವಾಗಿ ತುತ್ತಾದ ಜನರು ಈಗ್ಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಕೊರೊನಾ ಕಡಿಮೆ ಆದ್ರೂ ಅದ್ರ ಅಡ್ಡಪರಿಣಾಮಗಳು ಕಡಿಮೆ ಆಗಿಲ್ಲ. ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಇದು ಲೈಂಗಿಕ ಆರೋಗ್ಯದ ಮೇಲೂ ಪ್ರಭಾವ ಬೀರಿದೆ ಎಂಬ ವಿಷ್ಯ ಸದ್ಯ ನಡೆದ ಅಧ್ಯಯನದಲ್ಲಿ ಬಹಿರಂಗವಾಗಿದೆ. 

ಅಮೆರಿಕಾ (America) ದ ಬೋಸ್ಟನ್ ವಿಶ್ವವಿದ್ಯಾನಿಲಯ ಈ ಬಗ್ಗೆ ಅಧ್ಯಯನ ನಡೆಸಿದೆ. ದೀರ್ಘಕಾಲ ಕೊರೊನಾ (Corona)ದಿಂದ ಬಳಲಿದ ಪುರುಷರಲ್ಲಿ ಲೈಂಗಿಕ (Sex) ಇಚ್ಛೆ ಕಡಿಮೆ ಆಗಿದೆ. ಮಹಿಳೆಯರ ಲೈಂಗಿಕ ಜೀವನದಲ್ಲೂ ಬದಲಾವಣೆ ಕಂಡು ಬಂದಿದೆ ಎಂದು ಅಧ್ಯಯನ (Studies) ದಲ್ಲಿ ಹೇಳಲಾಗಿದೆ. 

ಎರಡೂ ಕೈ ಕಳ್ಕೊಂಡಿದ್ದ ಪೇಂಟರ್‌ಗೆ ಮಹಿಳೆ ಕೈ ಜೋಡಣೆ ಯಶಸ್ವಿ!

ಲೈಂಗಿಕ ಆರೋಗ್ಯದ ಬಗ್ಗೆ ನಡೆದಿದೆ ಸಂಶೋಧನೆ : ಅಮೆರಿಕಾದ ಬೋಸ್ಟನ್ ವಿಶ್ವವಿದ್ಯಾನಿಲಯ ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರ ಮೇಲೆ ಈ ಅಧ್ಯಯನ ನಡೆಸಿದೆ. ದೀರ್ಘಕಾಲ ಕೊರೊನಾದಿಂದ ಬಳಲಿದೆ ಮಹಿಳೆಯರ ಲೈಂಗಿಕ ಚಟುವಟಿಕೆ ದುರ್ಬಲವಾಗಿದೆ ಎಂದು ಅಧ್ಯಯನದ ವರದಿ ಹೇಳಿದೆ. 

ಲೈಂಗಿಕ ಆಸಕ್ತಿಯಲ್ಲಿ ಇಳಿಕೆ : ಕೊರೊನಾ ವೈರಸ್‌ನಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ. ಸಂಭೋಗಕ್ಕೆ ದೇಹ ಸಿದ್ಧವಾಗುವ ಪ್ರಮಾಣ ಕಡಿಮೆಯಾಗುತ್ತದೆ. ದೀರ್ಘಕಾಲದ ಕೊರೊನಾ ವೈರಸ್ ರೋಗಲಕ್ಷಣಗಳು ನಿಜವಾಗಿಯೂ ಮಹಿಳೆಯರ ಲೈಂಗಿಕ ಸ್ವಾಸ್ಥ್ಯದ ಮೇಲೆ ದೈಹಿಕ ಮತ್ತು ಮಾನಸಿಕ ಪರಿಣಾಮವನ್ನು ಬೀರಬಹುದು ಎಂದು ಅಧ್ಯಯನ ಹೇಳಿದೆ.

ಮಹಿಳೆಯರನ್ನು ಸಂಶೋಧಕರು ಆನ್ಲೈನ್ ನಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಧದಷ್ಟು ಮಹಿಳೆಯರು ತಮಗೆ ಕೊರೊನಾ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆ ಮಹಿಳೆಯರ ಲೈಂಗಿಕ ಬಯಕೆ ಹೇಗಿದೆ ಎಂಬುದನ್ನು ಕೂಡ ತಿಳಿಯಲಾಗಿದೆ. ಕಳೆದ ನಾಲ್ಕು ಒಬ್ಬರು ಎಷ್ಟು ಬಾರಿ ಲೈಂಗಿಕ ಬಯಕೆ ಅನುಭವಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಪಡೆಯಲಾಗಿದೆ. ಮಹಿಳೆಯರು ನೀಡಿದ ಉತ್ತರದ ಪ್ರಕಾರ, ಕೋವಿಡ್ ಹೊಂದಿದ್ದ ಮಹಿಳೆಯರಿಗೆ ಕೋವಿಡ್ ಇಲ್ಲದವರಿಗಿಂತ ಕಡಿಮೆ ಮಟ್ಟದ ಆಸೆ, ಪ್ರಚೋದನೆ ಮತ್ತು ತೃಪ್ತಿ ಇತ್ತು ಎಂಬುದು ಬಹಿರಂಗವಾಗಿದೆ. ಕೊರೊನಾದಿಂದ ಬಳಲುತ್ತಿದ್ದ ಮಹಿಳೆಯರು ಒಂದು ವಾರದವರೆಗೆ ಇಲ್ಲದೆ ತಿಂಗಳವರೆಗೆ ಅವರು ತೊಂದರೆ ಅನುಭವಿಸುತ್ತಾರೆ. ಈ ಸಮಯದಲ್ಲಿ ಲೈಂಗಿಕ ಬಯಕೆ, ಲುಬ್ರಿಕೇಷನ್ ಹಾಗೂ ಉತ್ತೇಜನ ಬಹಳ ಕಡಿಮೆ ಇರುತ್ತದೆ ಎಂದು ಜರ್ನಲ್ ಆಫ್ ಸೆಕ್ಷುಯಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.

ಥೈರಾಯ್ಡ್‌ ಮಟ್ಟ ದೇಹದಲ್ಲಿ ಸಾಕಷ್ಟಿಲ್ಲವಾದರೆ ಬೆಳಗ್ಗೆ ಎದ್ದಾಕ್ಷಣ ಹೀಗೆಲ್ಲ ಆಗುತ್ತೆ, ಗಮನಿಸಿ

ಹಾರ್ಮೋನ್ ಗಳ ಮೇಲೆ ಪರಿಣಾಮ : ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನುಗಳು ಅಂಡಾಶಯದಿಂದ ಉತ್ಪತ್ತಿಯಾಗುತ್ತವೆ. ಪೆರಿಮೆನೋಪಾಸ್ ಮತ್ತು ಮೆನೋಪಾಸ್ ಸಮಯದಲ್ಲಿ ಈ ಎರಡೂ ಹಾರ್ಮೋನುಗಳ ಮಟ್ಟವು ಕಡಿಮೆಯಾಗುತ್ತದೆ. ಆನ್‌ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ದೀರ್ಘ ಕೊರೊನಾದಿಂದ ಬಳಲುತ್ತಿರುವ 1294 ಮಹಿಳೆಯರಲ್ಲಿ ಶೇಕಡಾ 73ರಷ್ಟು ಮಹಿಳೆಯರು, ಕೊರೊನಾ ಸಮಯದಲ್ಲಿ ತಮ್ಮ ಪಿರಿಯಡ್ಸ್ ಬದಲಾಗಿದೆ ಎಂದಿದ್ದಾರೆ. ದೀರ್ಘಕಾಲದ ಕೊರೊನಾ, ಪೆರಿಮೆನೋಪಾಸ್ ಮತ್ತು ಮೆನೋಪಾಸ್ ರೋಗಲಕ್ಷಣಗಳನ್ನು ಹದಗೆಡಿಸುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಕೊರೊನಾದಿಂದ ಬಳಲುವ ವ್ಯಕ್ತಿಗಳ ಇಡೀ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ವ್ಯಕ್ತಿ ಮತ್ತೆ ಮೊದಲಿನಂತಾಗಲು ಅನೇಕ ಸಮಯ ಬೇಕು. ಲೈಂಗಿಕ ವಿಷ್ಯದಲ್ಲೂ ಇದು ಸತ್ಯ. ಕಾಮಾಸಕ್ತಿ, ಲೈಂಗಿಕ ಅನ್ಯೂನ್ಯತೆ ಹೆಚ್ಚಾಗಲು ಒಂದಿಷ್ಟು ಸಮಯದ ಅಗತ್ಯವಿರುತ್ತದೆ ಎಂದು ಸಂಶೋಧಕ ಸ್ಟಾಂಟನ್ ಮತ್ತು ಅವರ ಸಹೋದ್ಯೋಗಿಗಳು ಹೇಳಿದ್ದಾರೆ. 

Follow Us:
Download App:
  • android
  • ios