ಮನೆ ತಲುಪಿಸಿ ಕಾರಿಂದ ಇಳಿಯಮ್ಮ ಎಂದ ಕ್ಯಾಬ್ ಚಾಲಕನಿಗೆ ಥಳಿಸಿದ ಕುಡುಕಿ

ಕ್ಯಾಬ್ ಚಾಲಕನನ್ನು ಪಾನಮತ್ತ ಮಹಿಳೆಯೊಬ್ಬರು ಹಲ್ಲೆ ಮಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಲುಪಬೇಕಾದ ಸ್ಥಳ ತಲುಪಿದ್ದರೂ ಅರಿವಿಲ್ಲದ ಮಹಿಳೆ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

Drunk woman beats cab driver for asking her to get down from cab

ಇಯರ್‌ ಎಂಡ್‌ ಹಾಗೂ ಹೊಸವರ್ಷದ ಸಂಭ್ರಮದಲ್ಲಿ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳು ಕೂಡ ರಸ್ತೆಯಲ್ಲಿ ಕುಡಿದು ತೂರಾಡಿದಂತಹ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇವುಗಳ ಮಧ್ಯೆ ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿದ ವೀಡಿಯೋವೊಂದು ವೈರಲ್ ಆಗಿದ್ದು, ಮಹಿಳೆಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪಾನಮತ್ತಳಾದ ಮಹಿಳೆ ಕ್ಯಾಬ್ ಬುಕ್ ಮಾಡಿದ್ದು, ಆಕೆ ತಲುಪಬೇಕಾದ ಸ್ಥಳಕ್ಕೆ ಆಕೆಯನ್ನು ಕ್ಯಾಬ್ ಚಾಲಕ ಸುರಕ್ಷಿತವಾಗಿ ತಲುಪಿಸಿದ್ದಾನೆ. ಆದರೆ ಕುಡಿದ ಮತ್ತಿನಲ್ಲಿದ್ದ ಆಕೆಗೆ ತಾನು ತಲುಪಬೇಕಾದ ಸ್ಥಳ ತಲುಪಿದ್ದರೂ ಅದರ ಅರಿವಿಲ್ಲ, ಹೀಗಾಗಿ ಆಕೆ ನೀವು ತಲುಪಬೇಕಾದ ಸ್ಥಳ ಬಂದಿದೆ ಕ್ಯಾಬ್‌ನಿಂದ ಇಳಿಯಿರಿ ಎಂದ ಕ್ಯಾಬ್ ಚಾಲಕನಿಗೆ ನಿಂದಿಸುತ್ತಾ ಹಲ್ಲೆ ಮಾಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ಖಂಡನೆ ವ್ಯಕ್ತವಾಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ, ಆದರೆ ದುಬೈನಲ್ಲಿ ನಡೆದಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. 

ವೀಡಿಯೋವನ್ನು ಟ್ವಿಟ್ಟರ್‌ (ಎಕ್ಸ್‌)ನಲ್ಲಿ ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ಮಹಿಳೆ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದು, ಮುಂದಿನ ಸೀಟಿನಲ್ಲಿರುವ ಚಾಲಕನಿಗೆ ತನ್ನ ಥಳಿಸುತ್ತಿದ್ದಾಳೆ. ಈ ವೇಳೆ ಕ್ಯಾಬ್ ಚಾಲಕ, ಗೌರವಯುತವಾಗಿಯೇ ನಡೆದುಕೊಂಡಿದ್ದು, ನನ್ನನ್ನು ಟಚ್ ಮಾಡಬೇಡಿ ಮ್ಯಾಡಂ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಅಲ್ಲದೇ ಮಹಿಳೆ ಕಿರುಚುತ್ತಾ ತನನ್ನನ್ನು ತಾನು ಹೋಗಬೇಕಾಗಿರುವ ಪ್ರದೇಶಕ್ಕೆ ತಲುಪಿಸುವಂತೆ ಕ್ಯಾಬ್ ಚಾಲಕನಿಗೆ ಬೊಬ್ಬೆ ಹೊಡೆಯುವುದನ್ನು ಕೇಳಬಹುದು. ಈ ವೇಳೆ ಚಾಲಕ ಈಗಾಗಲೇ ನೀವು ಹೋಗಬೇಕಿದ್ದ ಸ್ಥಳ ಬಂದಾಗಿದೆ ಇಳಿದುಕೊಳ್ಳಿ ಎಂದು ಹೇಳುತ್ತಾನೆ. ಆದರೆ ಮಹಿಳೆ ಆತನ ಮಾತು ಕೇಳಲು ಸಿದ್ಧಳಿಲ್ಲದೇ ಆತನಿಗೆ ಥಳಿಸಲು ಶುರು ಮಾಡಿದ್ದಾಳೆ. 

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಇದು ದುಬೈನಲ್ಲಿ ನಡೆದ ಘಟನೆ ಅಲ್ಲ ದುಬೈನಲ್ಲಿ ಎಡಬದಿಗೆ ಡ್ರೈವಿಂಗ್ ಇದೆ ಎಂದಿದ್ದಾರೆ. ಮತ್ತೆ ಕೆಲವರು ಈ ಮಹಿಳೆಯನ್ನು ಪತ್ತೆ ಮಾಡಿ ಎಂದು ಕಾಮೆಂಟ್ ಮಾಡಿ. ದುಬೈ ಆಗಿದ್ದರೆ ಆಕೆ ಪಕ್ಕಾ ಕಂಬಿ ಹಿಂದೆ ಕೂತಿರುತ್ತಾಳೆ. ಇಲ್ಲಿ ಬಹಳ ಕಠಿಣವಾದ ಕಾನೂನಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

Latest Videos
Follow Us:
Download App:
  • android
  • ios