ಪ್ರೊ ನಂತೆ ಲಿಪ್ ಲೈನರ್ ಹಚ್ಚುವ ಸೂಕ್ತ ವಿಧಾನ ತಿಳಿದುಕೊಳ್ಳಿ!
ಸುಂದರವಾಗಿ ಕಾಣಲು ಮಹಿಳೆಯರು ಅನೇಕ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ. ಮೇಕಪ್ ನ ಪ್ರತಿಯೊಂದು ಹಂತವೂ ಬಹಳ ಮುಖ್ಯ. ಲಿಪ್ ಲೈನಿಂಗ್ ಕೂಡ ಅಷ್ಟೇ ಮುಖ್ಯ.ಹಾಗಾಗಿ ಪ್ರೊ ನಂತೆ ಲಿಪ್ ಲೈನರ್ ಹಚ್ಚುವ ಸರಿಯಾದ ವಿಧಾನ ತಿಳಿದುಕೊಳ್ಳಿ!
ನೀವು ಪರ್ಫೆಕ್ಟ್ ಮೇಕಪ್ ಬಯಸೋದಾದ್ರೆ, ಲಿಪ್ ಲೈನರ್ ನಿಮ್ಮ ತುಟಿಗಳನ್ನು ಅಂದವಾಗಿಸೋದು ಮಾತ್ರವಲ್ಲದೇ, ಲಿಪ್ ಕಲರ್ ಗೆ(Lip color) ವಿಭಿನ್ನ ಲುಕ್ ನೀಡುತ್ತೆ. ಇದು ಲಿಪ್ ಕಲರ್‌ಗೆ ಬಣ್ಣವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ತುಟಿಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಸುಲಭವಲ್ಲ. ಮೇಕಪ್ ಮಾಡುವ ವಿಷಯದಲ್ಲಿ ನೀವು ಹೊಸಬರಾಗಿದ್ರೆ, ತುಟಿಗಳನ್ನು ಸುಂದರವಾಗಿ ಕಾಣುವಂತೆ ಮಾಡಲು ಪ್ರಯತ್ನಿಸುತ್ತಿದ್ದರೆ, ಲಿಪ್ ಲೈನರ್ ಹಚ್ಚುವ ಸರಿಯಾದ ವಿಧಾನದ ಬಗ್ಗೆ ತಿಳಿದುಕೊಳ್ಳಿ. ತುಟಿಗಳ ಮೇಲೆ ಹಂತ ಹಂತವಾಗಿ ಲಿಪ್ ಲೈನರ್ ಹಚ್ಚಲು ಸರಿಯಾದ ಮಾರ್ಗ ಇಲ್ಲಿದೆ.
ತುಟಿಯನ್ನು(Lips) ಎಕ್ಸ್ಫೋಲಿಯೇಟ್ ಮಾಡಿ
ಒಡೆದ ತುಟಿಗಳು ನಿಮ್ಮ ಸಂಪೂರ್ಣ ಲುಕ್ ಹಾಳು ಮಾಡುತ್ತವೆ. ಒಡೆದ ತುಟಿಗಳ ಮೇಲೆ ಲಿಪ್ ಸ್ಟಿಕ್ ಹಚ್ಚಿದ್ರೆ , ನಿಮ್ಮ ಲಿಪ್ ಕಲರ್ ಎಷ್ಟೇ ಸುಂದರವಾಗಿದ್ದರೂ ಅಥವಾ ನೀವು ಅದನ್ನು ಎಷ್ಟು ಸುಂದರವಾಗಿ ಹಚ್ಚಿದ್ರು, ಅವು ಹರಿದಂತೆ ಕಾಣುತ್ತವೆ. ಆದ್ದರಿಂದ, ಲಿಪ್ ಲೈನರ್ ಹಚ್ಚುವ ಮೊದಲು ತುಟಿಗಳನ್ನು ಉಜ್ಜುವುದು ಬಹಳ ಮುಖ್ಯ.
ಬ್ರೌನ್ ಶುಗರ್ ಮತ್ತು ಜೇನುತುಪ್ಪದ ಸಮಾನವಾಗಿ ತೆಗೆದುಕೊಂಡು ಲಿಪ್ ಸ್ಕ್ರಬ್ (Lip scrub) ತಯಾರಿಸಿ ಮತ್ತು ಅದನ್ನು ತುಟಿಗಳಿಗೆ ಹಚ್ಚಿ. ಇದು ತುಟಿಗಳ ಒಳ ಪದರವನ್ನು ಸಾಫ್ಟ್ ಮಾಡಲು ಸಹಾಯ ಮಾಡುತ್ತೆ. ಹಿಂದಿನ ರಾತ್ರಿ ತುಟಿಗಳನ್ನು ಎಕ್ಸ್ಫೋಲಿಯೇಟ್ ಮಾಡಬಹುದು ಮತ್ತು ನಯವಾದ ತುಟಿಗಳಿಗಾಗಿ ರಾತ್ರಿಯಿಡೀ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿ ಹಚ್ಚಿ. ವ್ಯಾಸಲೀನ್ ಪೆಟ್ರೋಲಿಯಂ ಜೆಲ್ಲಿ ಒಣಗಿದ ತುಟಿಗಳನ್ನು ದೀರ್ಘಕಾಲದವರೆಗೆ ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತೆ.
ಲಿಪ್ ಲೈನರ್ ಉತ್ತಮವಾಗಿ ಹಚ್ಚಲು, ಮೊದಲನೆಯದಾಗಿ, ತುಟಿಗಳಿಗೆ ಲಿಪ್ ಬಾಮ್ (Lip balm) ಹಚ್ಚಿ. ಮಾಯಿಶ್ಚರೈಸಿಂಗ್ ಲಿಪ್ ಬಾಮ್ ಒಣಗಿದ ತುಟಿಗಳನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತೆ. ವಿಶೇಷವಾಗಿ ನೀವು ಮ್ಯಾಟ್ ಲಿಪ್ಸ್ಟಿಕ್ ಹಚ್ಚಲು ಹೊರಟಿದ್ದರೆ, ಲಿಪ್ಸ್ಟಿಕ್ ಹಚ್ಚುವ ಮೊದಲು ತುಟಿಗಳನ್ನು ಮಾಯಿಶ್ಚರೈಸ್ ಮಾಡಲು ಮರೆಯಬೇಡಿ.
ನಿಮ್ಮ ನೆಚ್ಚಿನ ಲಿಪ್ ಬಾಮ್ ತೆಗೆದುಕೊಳ್ಳಿ ಮತ್ತು ಅದನ್ನು ನಿಮ್ಮ ತುಟಿಗಳ ಮೇಲೆ ಸಮಾನವಾಗಿ ಹಚ್ಚಿ. ಇದರ ನಂತರ, ಟಿಶ್ಯೂ ಪೇಪರ್ ನಿಂದ(Tissue paper) ಹೆಚ್ಚುವರಿಯನ್ನು ತೆಗೆಯಿರಿ ಮತ್ತು ಸ್ವಲ್ಪ ಸಮಯದವರೆಗೆ ತುಟಿಗಳನ್ನು ಹಾಗೇ ಬಿಡಿ. ಇದನ್ನು ಮಾಡೋದರಿಂದ, ತುಟಿಗಳು ದಿನವಿಡೀ ಮೃದುವಾಗಿರುತ್ತವೆ.
ಲಿಪ್ ಲೈನರ್ ಹಚ್ಚಲು ಸರಿಯಾದ ಬಣ್ಣ(Color) ಆರಿಸಿ
ಲಿಪ್ ಲೈನರ್ ಹಚ್ಚಲು ಸರಿಯಾದ ಶೇಡ್ ಆಯ್ಕೆ ಮಾಡಿ. ತುಟಿ ಬಣ್ಣಕ್ಕಿಂತ ಸ್ವಲ್ಪ ಗಾಢವಾದ ಶೇಡ್ ಆಯ್ಕೆ ಮಾಡಲು ಪ್ರಯತ್ನಿಸಿ. ಲಿಪ್ ಕಲರ್ ಮತ್ತು ಲಿಪ್ ಲೈನರ್ ಒಂದೇ ಬಣ್ಣದ ಫ್ಯಾಮಿಲಿಗೆ ಸೇರಿರಬೇಕು. ಬಣ್ಣದ ಹೆಚ್ಚಿನ ಆಳ ಮತ್ತು ತೀವ್ರತೆಗಾಗಿ ಲಿಪ್ ಸ್ಟಿಕ್ ಮತ್ತು ಲಿಪ್ ಲೈನರ್ ಮಿಕ್ಸ್ ಮಾಡಬಹುದು.
ತುಟಿಗಳ ಮಧ್ಯದಲ್ಲಿ 'X' ಗುರುತನ್ನು ಮಾಡಿ
ಯಾವ ಬಣ್ಣದ ಲಿಪ್ ಲೈನರ್ ಹಚ್ಚಲು ಹೊರಟಿದ್ದೀರಿ ಎಂದು ನಿರ್ಧರಿಸಿದ ನಂತರ, ಲಿಪ್ ಲೈನರ್ ಕೈಯ ಹಿಂಭಾಗದಲ್ಲಿ ಟ್ರೈ ಮಾಡೋ ಮೂಲಕ ತುದಿಯನ್ನು ನಯಗೊಳಿಸಿ. ಆಗ ತುಟಿಗಳ ಮೇಲೆ ಸ್ಮೂತ್(Smooth) ಆಗಿ ಮತ್ತು ವೇಗವಾಗಿ ಬಿಡಿಸಲು ಸುಲಭಗೊಳಿಸುತ್ತೆ. ಈಗ, ಮೇಲಿನ ತುಟಿಯ ಮಧ್ಯದಲ್ಲಿ 'X' ನ ಗುರುತನ್ನು ಮಾಡಿ. ತುಟಿಗಳ ಮೇಲ್ಭಾಗದ ಇದನ್ನು ಟ್ರೈ ಮಾಡೋದು ಮಹಿಳೆಯರಿಗೆ ವಿಶೇಷವಾಗಿ ಉಪಯುಕ್ತ.
ನೀವು X ಅನ್ನು ಎಳೆದ ನಂತರ, ತುಟಿಗಳನ್ನು ಸ್ವಲ್ಪ ಬೇರ್ಪಡಿಸಿ ಮತ್ತು ನಂತರ ತುಟಿಗಳ ಮೂಲೆಯ ಕಡೆಗೆ ನಿಮ್ಮ ಕೈಯನ್ನು X ಆಕಾರವನ್ನು ಹೊರಮುಖವಾಗಿ ವಿಸ್ತರಿಸಿ. ಇದು ನಿಮ್ಮ ಮೇಲಿನ ತುಟಿಯನ್ನು ಸಂಪೂರ್ಣವಾಗಿ ಲೈನ್ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಕೆಳಗಿನ ತುಟಿ ಮೇಲೆ ಲಿಪ್ ಲೈನರ್ ಮಧ್ಯದಿಂದ ಪ್ರಾರಂಭಿಸಿ ಮತ್ತು ವೃತ್ತಾಕಾರದ ಆಕಾರಕ್ಕಾಗಿ ಮೂಲೆಗಳ ಕಡೆಗೆ ಲೈನ್ ಮಾಡಿ. ಇದರ ನಂತರ, ಕೆಳಗಿನ ಮತ್ತು ಮೇಲಿನ ತುಟಿಗಳ ಮೂಲೆಯಲ್ಲಿ ಎಳೆಯಲಾದ ಗೆರೆಗಳನ್ನು ಮಿಕ್ಸ್ ಮಾಡಿ ಮತ್ತು ಲೈನನ್ನು ಸ್ವಲ್ಪ ಡಾರ್ಕ್ ಮಾಡಲು ಮತ್ತೊಮ್ಮೆ ಲಿಪ್ ಲೈನರ್ ಹಚ್ಚಿ. ನಿಮ್ಮ ನ್ಯಾಚುರಲ್ (Natural) ತುಟಿಯ ರೇಖೆಗೆ ಅಂಟಿಕೊಳ್ಳೋದು ಉತ್ತಮ.
ತುಟಿಗಳನ್ನು ಫೀಲ್ ಮಾಡಿ
ತುಟಿಗಳ ಸುತ್ತಳತೆಯ ಮೇಲೆ ಲಿಪ್ ಲೈನರ್ ಹಚ್ಚಿದ ನಂತರ, ಅವುಗಳಿಗೆ ನಿರ್ದಿಷ್ಟ ಆಕಾರ ನೀಡಲು ಅದೇ ಲಿಪ್ ಲೈನರ್ ಬಳಸಿ. ತುಟಿಗಳನ್ನು ಲಿಪ್ ಶೇಡ್‌ನಿಂದ ತುಂಬಿಸಿ. ಇದು ನಿಮ್ಮ ತುಟಿಗಳಿಗೆ ಏಕರೂಪದ ಬಣ್ಣ ನೀಡಲು ಸಹಾಯ ಮಾಡುತ್ತೆ. ತುಟಿಗಳ ಮೇಲೆ ಕೆಂಪು ಅಥವಾ ಮರೂನ್‌ನಂತಹ ಡಾರ್ಕ್ ಶೇಡ್ (Dark shade) ಪ್ರಯತ್ನಿಸಲು ಬಯಸಿದರೆ, ಖಂಡಿತವಾಗಿಯೂ ಲಿಪ್ ಸ್ಟಿಕ್‌ಗೆ ಮೊದಲು ನಿಮ್ಮ ತುಟಿ ಮೇಲೆ ಲಿಪ್ ಲೈನರ್ ಕಪ್ಪು ಕೋಟ್ ಹಚ್ಚಿ.
ಲಿಪ್ ಕಲರ್ ಹಚ್ಚಿ
ತುಟಿಗಳಿಗೆ ಲಿಪ್ ಲೈನರ್ ಚೆನ್ನಾಗಿ ಹಚ್ಚಿದ ನಂತರ, ಲೈನರ್ ಅಥವಾ ತಿಳಿ ಬಣ್ಣವನ್ನು ಹೋಲುವ ಲಿಪ್ ಕಲರ್ ತೆಗೆದುಕೊಳ್ಳಿ. ತುಟಿಗಳ ಮೇಲೆ ಸ್ವೈಪ್ ಮಾಡಿ. ಮೊದಲನೆಯದಾಗಿ, ತುಟಿಗಳ ಮಧ್ಯದಲ್ಲಿರುವ ಬಣ್ಣವನ್ನು ಬ್ರಶ್ ಸಹಾಯದಿಂದ ಮಿಕ್ಸ್ ಮಾಡಿ. ಪರ್ಫೆಕ್ಟ್ ಶೈನಿಂಗ್ (Shining)ಗಾಗಿ, ನೀವು ಮೊದಲು ಕ್ರೀಮ್ ಲಿಪ್ ಸ್ಟಿಕ್ ಬಳಸಬಹುದು.