Asianet Suvarna News Asianet Suvarna News

Valentines Day: ಸ್ಪೆಷಲ್ ಆಗಿ ರೆಡಿಯಾಗೋದು ಹೇಗೆ ?

ವ್ಯಾಲೆಂಟೈನ್ಸ್ ಡೇ (Valentines Day)ಗೆ ಇನ್ನೇನು ಕೆಲವೇ ದಿನ. ಆದರೆ ಸ್ಪೆಷಲ್ ಡೇಗೆ ಯಾವ ರೀತಿ ಡ್ರೆಸ್ (Dress) ಮಾಡ್ಬೇಕು ಅನ್ನೋದು ಇನ್ನೂ ಡಿಸೈಡ್ ಆಗಿಲ್ಲ. ಡೋಂಟ್ ವರಿ, ಪ್ರೇಮಿಗಳ ದಿನ ನಿಮ್ಮನ್ನು ನಾವು ರೆಡಿ ಮಾಡ್ತೀವಿ. ನೀವು ಮೀಟ್ ಆಗೋ ಸಂಗಾತಿ ನಿಮ್ ಜತೆ ಮತ್ತೆ ಮತ್ತೆ ಲವ್‌ನಲ್ಲಿ ಬೀಳದಿದ್ರೆ ಮತ್ತೆ ಹೇಳಿ.

Dressing Ideas For Valentines Day Date Night
Author
Bengaluru, First Published Feb 5, 2022, 8:50 PM IST

ಪ್ರೇಮಿಗಳ ದಿನ. ಪ್ರೀತಿಸುವ ಹೃದಯಗಳಿಗೆ ಸ್ಪೆಷಲ್ ಡೇ. ಹೀಗಾಗಿ ಈ ದಿನವನ್ನು ಸ್ಪೆಷಲ್ ಆಗಿ ಸ್ಪೆಂಡ್ ಮಾಡ್ಬೇಕು ಅಂತ ಎಲ್ರೂ ಕಾತುರದಿಂದ ಕಾಯ್ತಿರ್ತಾರೆ. ಆದ್ರೆ ವ್ಯಾಲೆಂಟೈನ್ಸ್ ಡೇ (Valentines Day) ದಿನ ಯಾವ ಡ್ರೆಸ್ ಹಾಕೋದು, ಯಾವ ರೀತಿಯ ಗಿಫ್ಟ್ ಮಾಡೋದು ಅನ್ನೋದು ಮಾತ್ರ ದೊಡ್ಡ ಕನ್‌ಫ್ಯೂಶನ್. ಗಿಫ್ಟ್ ಕತೆ ಹಾಗಿರ್ಲಿ, ಡ್ರೆಸ್ ಹೇಗೆ ಮಾಡೋದಪ್ಪಾ ಅಂತ ತಲೆಕೆಡಿಸ್ಕೊಂಡಿದ್ದೀರಾ. ಹಾಗಿದ್ರೆ ಅದಕ್ಕೆ ಸೊಲ್ಯೂಶನ್ ನಮ್ಮಲ್ಲಿದೆ.

ಧರಿಸುವ ಡ್ರೆಸ್ (Dress) ನಮ್ಮ ಆಯ್ಕೆ, ಅಭಿರುಚಿ ಒಟ್ಟಾರೆ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ದಿರಿಸನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಎಚ್ಚರ ವಹಿಸಬೇಕಾಗುತ್ತದೆ. ಫಸ್ಟ್ ಇಂಪ್ರೆಶನ್ ಈಸ್ ಬೆಸ್ಟ್ ಇಂಪ್ರೆಶನ್ ಅನ್ನೋ ಥರ, ಮೊದಲ ನೋಟಕ್ಕೆ ಅವರು ನಿಮ್ಮನ್ನು ನೋಡಿ ಅವರು ಫಿದಾ ಆಗುವಂತಿರಬೇಕು. ಬದಲಾಗಿ ನಿರಾಶೆಗೊಳ್ಳಬಾರದು. ಇಲ್ಲದಿದ್ದರೆ ಪ್ರೇಮಿಗಳ ದಿನದಂದೇ ನಿಮ್ಮ ಪ್ರೀತಿ ತಿರಸ್ಕಾರಗೊಂಡರೆ ಅಥವಾ ಬ್ರೇಕಪ್ ಆದರೂ ಆಶ್ಚರ್ಯವಿಲ್ಲ.

Valentine Day : ಕೊಡುಕೊಳ್ಳುವ ಮುನ್ನ ಯಾವ ಬಣ್ಣದ ಗುಲಾಬಿಗೆ ಏನರ್ಥ ತಿಳಿಯಿರಿ

ಪ್ರೇಮಿಗಳ ದಿನದಂದು ಲವರ್ಸ್ ಹೆಚ್ಚಾಗಿ ಸ್ಪೆಷಲ್ (Special) ಆಗಿ ಪ್ಲಾನ್ ಮಾಡಿಕೊಂಡಿರುತ್ತಾರೆ. ಪ್ರೀತಿ ಪಾತ್ರದ ಜತೆ ಔಟಿಂಗ್, ಡಿನ್ನರ್ ಹೀಗೆ ಯಾವುದಾದರೂ ಪ್ಲಾನ್ ಇರುತ್ತದೆ. ಹೀಗಾಗಿ ನೀವು ಎಲ್ಲಿಗೆ ಹೋಗುತ್ತಿದ್ದರೆ ಎಂದು ಮುಂಚಿತವಾಗಿ ತಿಳಿದುಕೊಂಡು, ಅದಕ್ಕನುಸಾರವಾಗಿ ಡ್ರೆಸ್ ಆಯ್ಕೆ ಮಾಡಿಕೊಳ್ಳಿ. ಪಾರ್ಟಿ ಎಂದಾದರೆ ಶಾರ್ಟ್ ಡ್ರೆಸ್ ನಡೆಯತ್ತೆ, ಆದರೆ ಹೊರಗೆಲ್ಲೂ ಡಿನ್ನರ್‌ (Dinner)ಗೆ ಹೋಗುತ್ತೀರಿ ಎಂದಾದರೆ ಮೊಣಕಾಲಿನ ಮೇಲಿನ ಬಟ್ಟೆ ಹಾಕಿ ಮುಜುಗರಕ್ಕೊಳಗಾಗಬೇಡಿ. ಕಂಫರ್ಟ್ ಎನಿಸುವ ಬಟ್ಟೆಗಳನ್ನು ಧರಿಸುವುದರಿಂದ ದಿನವನ್ನು ಎಂಜಾಯ್ ಮಾಡಬಹುದು. ಹಾಗಿದ್ರೆ ಪ್ರೇಮಿಗಳ ದಿನ ಹಾಕೋಕೆ ಬೆಸ್ಟ್ ಡ್ರೆಸ್ ಯಾವುದು ?

ಕ್ಲಾಸಿಕ್ ಎಲ್ಬಿಡಿ ಡ್ರೆಸ್
ಡೇಟ್ ನೈಟ್‌ಗೆ ಕ್ಲಾಸಿಕ್ ಎಲ್ಬಿಡಿ ಡ್ರೆಸ್ ಅತ್ಯುತ್ತಮ ಆಯ್ಕೆ. ಅದರಲ್ಲೂ ಬ್ಲ್ಯಾಕ್ ಕಲರ್ ಬೆಸ್ಟ್. ನೈಟ್ ಪಾರ್ಟಿಗಳಲ್ಲಿ ಇಂಥಹಾ ಡ್ರೆಸ್ ಹೆಚ್ಚು ಸ್ಯೂಟೆಬಲ್ ಎನಿಸುತ್ತದೆ. ಕಂಪ್ಲೀಂಟ್ ಶೈನಿಂಗ್ ಇರೋ ಡ್ರೆಸ್ ಎಲ್ಲರನ್ನೂ ಒಮ್ಮೆ ನಿಮ್ಮತ್ತ ನೋಡುವಂತೆ ಮಾಡುವುದು ಸುಳ್ಳಲ್ಲ. ಈ ಡ್ರೆಸ್ ಹಾಕುವುದರ ಜತೆ ಬ್ಲ್ಯಾಕ್ ಹೀಲ್ಸ್ ನಿಮ್ಮನ್ನು ಇನ್ನಷ್ಟು ಅಟ್ರ್ಯಾಕ್ಟಿಕ್ ಆಗಿಸುತ್ತದೆ. ಜತೆಗೆ ಮಿನುಗುವ ಸ್ಲಿಂಗ್ ಬ್ಯಾಗ್ ತೆಗೆದುಕೊಳ್ಳುವುದ್ನು ಮರೆಯದಿರಿ.

Valentines Day: ಗಿಫ್ಟ್ ಕೊಟ್ರೆ ಪ್ರೀತಿ ಹೆಚ್ಚಾಗುತ್ತಾ ?

ಫ್ಲೋರಲ್ ಗೌನ್
ಆಫ್ ಶೋಲ್ಡರ್ ಫ್ಲೋರಲ್ ಅಥವಾ ಸೀಕ್ವಿನ್ ಗೌನ್ ಪ್ರೇಮಿಗಳ ದಿನಕ್ಕೆ ಉತ್ತಮವಾಗಿದೆ. ಅದರಲ್ಲೂ ರೆಡ್ ಕಲರ್ ಪರ್ಫೆಕ್ಟ್. ಇದನ್ನು ಬ್ಲ್ಯಾಕ್ ಅಥವಾ ನ್ಯೂಡ್ ಕಲರ್ ಹೀಲ್ಸ್ ಜತೆ ಪ್ಯಾರ್ ಮಾಡಬಹುದು. ಸಿಂಪಲ್ ಆಗಿರುವ ಕ್ಲಚ್ ಜತೆಗಿರಲಿ.

ಕ್ಲಾಸಿಕ್ ಫಾರ್ಮಲ್ಸ್
ಗರಿಗರಿಯಾದ ಬಿಳಿ ಶರ್ಟ್ ಮತ್ತು ಕಾರ್ಸೆಟ್‌ನೊಂದಿಗೆ ಪೀಪ್ ಟೋಸ್ ಡೆನಿಮ್ ಹಾಕಿಕೊಳ್ಳಬಹುದು. ಇದು ಕ್ಯಾಶುಯಲ್ ಮತ್ತು ಆರಾಮದಾಯಕವಾಗಿ ಕಾಣುತ್ತಿದ್ದರೂ ಸಹ, ನೀವು ಧರಿಸಿರುವ ಆಭರಣಗಳು ಅದಕ್ಕೆ ಪೂರಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಚೋಕರ್, ಸ್ಟೈಲಿಶ್ ನೆಕ್ಲೇಸ್ ಟ್ರೆಂಡೀಯಾಗಿ ಕಾಣುವಂತೆ ಮಾಡುತ್ತದೆ. 

ಮಾಡರ್ನ್ ಡ್ರೆಸ್‌ಗಳನ್ನು ಹಾಕಲು ಇಷ್ಟಪಡದವರು ಸಾಂಪ್ರದಾಯಿಕವಾಗಿ ಸೀರೆ, ಸಲ್ವಾರ್ ಹಾಕಿಯೂ ಪ್ರೀತಿಪಾತ್ರರ ಜತೆ ಸಮಯ ಕಳೆಯಬಹುದು.  ಪ್ಲೋರಲ್ ಪ್ರಿಂಟೆಂಡ್ ಸೀರೆ, ಸ್ಲೀವ್ ಲೆಸ್ ಬ್ಲಾಸ್ ಹಾಕಬಹುದು. ಇದಕ್ಕೆ ಸಿಂಪಲ್ ಜ್ಯುವೆಲ್ಲರಿ, ಬ್ಯಾಂಗಲ್ಸ್ ಮ್ಯಾಚ್ ಆಗುತ್ತದೆ. ಅಥವಾ ಶೈನಿಂಗ್ ಸ್ಯಾರಿ, ಮಿರರ್ ವರ್ಕ್ಡ್ ಕುರ್ತಾ ಮೊದಲಾದವುಗಳು ಪ್ರೇಮಿಗಳ ದಿನಕ್ಕೆ ಬೆಸ್ಟ್ ಸೆಲೆಕ್ಷನ್. ವ್ಯಾಲೆಂಟೈನ್ಸ್ ಡೇ ಕಾನ್ಸೆಪ್ಟ್ ವಿದೇಶಿಗರದ್ದಾಗಿದರೂ ನಾವು ನಮ್ಮತನವನ್ನು ಬಿಟ್ಟುಕೊಡಬೇಕಾಗಿಲ್ಲ. ನಮ್ಮತನವನ್ನು ಸೇರಿಸಿಕೊಂಡೇ ಪ್ರೇಮಿಗಳ ದಿನವನ್ನು ಸ್ಪೆಷಲ್ ಆಗಿಸಬಹುದು. ಇನ್ಯಾಕೆ ತಡ, ಪ್ರೇಮಿಗಳ ದಿನಕ್ಕೆ ಫುಲ್ ಸ್ಪೆಷಲ್ ಆಗಿ ರೆಡಿಯಾಗಿ ಎಂಜಾಯ್ ಮಾಡಿ.

Follow Us:
Download App:
  • android
  • ios