Valentines Day: ಗಿಫ್ಟ್ ಕೊಟ್ರೆ ಪ್ರೀತಿ ಹೆಚ್ಚಾಗುತ್ತಾ ?
ವ್ಯಾಲೆಂಟೈನ್ಸ್ ಡೇ (Valentines Day)ಗೆ ಇನ್ನೇನು ಕೆಲವೇ ದಿನ. ನಿಮ್ಮ ಸಂಗಾತಿಗೆ ಏನಾದ್ರೂ ಗಿಫ್ಟ್ (Gift) ಕೊಡ್ಬೇಕು ಅಂತ ಪ್ಲಾನ್ ಮಾಡಿದ್ದೀರಾ. ಅಯ್ಯೋ ಗಿಫ್ಟ್ ಎಲ್ಲಾ ಯಾಕೆ, ನಾನು ಅವನನ್ನು,ಅವಳನ್ನು ಜೀವಕ್ಕಿಂತ ಜಾಸ್ತಿ ಪ್ರೀತಿಸ್ತೀನಿ ಅಂತ ಡೈಲಾಗ್ ಹೊಡಿತೀರಾ. ಹಾಗಿದ್ರೆ ತಿಳ್ಕೊಳ್ಳಿ ರಿಲೇಷನ್ ಶಿಪ್ (Relationship)ನಲ್ಲಿ ಗಿಫ್ಟ್ ಕೊಡೋದ್ರಿಂದ ಎಷ್ಟು ಲಾಭವಿದೆ ಅಂತ.
ಫೆಬ್ರವರಿ 14. ಪ್ರೇಮಿಗಳ ದಿನ. ವಾರಕ್ಕೆ ಮುಂಚಿತವಾಗಿ ರೋಸ್ ಡೇ, ಟೆಡ್ಡೀ ಡೇ ಎಂದು ಹಲವು ಆಚರಣೆಗಳು ಶುರುವಾಗುತ್ತವೆ. ವ್ಯಾಲೆಂಟೈನ್ಸ್ ಡೇ (Valentines Day) ಎಂದಾಗ ಸಾಮಾನ್ಯವಾಗಿ ಎಲ್ಲರೂ ಗಿಫ್ಟ್ (Gift) ವಿನಿಮಯ ಮಾಡಿಕೊಳ್ಳುವುದನ್ನು ನೋಡಬಹುದು. ಯಾವುದೇ ಸಂಬಂಧದಲ್ಲಿ, ಒಂದು ಸಣ್ಣ ಉಡುಗೊರೆಯು ಬಹಳಷ್ಟು ಅರ್ಥವನ್ನು ಹೊಂದಿರುತ್ತದೆ. ಸಣ್ಣದಾಗಿರಲಿ, ದೊಡ್ಡದಾಗಿರಲಿ ಪ್ರತಿಯೊಂದು ಗಿಫ್ಟ್ ಕೂಡಾ ಅದರದ್ದೇ ಆದ ಮಹತ್ವವಿದೆ. ಉಡುಗೊರೆ ನೀಡುವುದು ಪ್ರೀತಿಯನ್ನು ಹೆಚ್ಚಿಸುತ್ತದೆ. ನಂಬಿಕೆ, ಕೃತಜ್ಞತಾ ಭಾವವನ್ನು ಸೂಚಿಸುತ್ತದೆ.
ಆದರೆ ಸಂಬಂಧದಲ್ಲಿ ಗಿಫ್ಟ್ ನೀಡುವುದು ನಿಜಕ್ಕೂ ಮುಖ್ಯಾನ. ಗಿಫ್ಟ್ ಕೊಟ್ರೆ ಮಾತ್ರ ಪ್ರೀತಿ ಇದೆ ಎಂದು ಅರ್ಥಾನ. ಇಲ್ಲಾಂದ್ರೆ ಮತ್ಯಾಕೆ ಗಿಫ್ಟ್ ಕೊಡ್ಬೇಕು, ಇಂಥಹಾ ಹಲವಾರು ಪ್ರಶ್ನೆಗಳು ಮೂಡಬಹುದು. ಜನರು ಉಡುಗೊರೆ ನೀಡುವುದನ್ನು ಮುಖ್ಯವೆಂದು ಪರಿಗಣಿಸಲು ಹಲವು ಕಾರಣಗಳಿವೆ. ರಿಲೇಶನ್ ಶಿಪ್ (Relationship)ನಲ್ಲಿ ಯಾಕೆ ಪರಸ್ಪರ ಗಿಫ್ಟ್ ಕೊಡ್ಬೇಕು ನಾವ್ ಹೇಳ್ತೀವಿ.
Valentine Day : ಕೊಡುಕೊಳ್ಳುವ ಮುನ್ನ ಯಾವ ಬಣ್ಣದ ಗುಲಾಬಿಗೆ ಏನರ್ಥ ತಿಳಿಯಿರಿ
ಭಾವನೆಗಳನ್ನು ವ್ಯಕ್ತಪಡಿಸುವುದು
ಸಂಬಂಧದಲ್ಲಿ ಪ್ರೀತಿಯ ಮಾತುಗಳು, ಶ್ಲಾಘನೆಗಳು ಮುಖ್ಯವಾಗಿದೆ. ಇದನ್ನು ಹೊರತುಪಡಿಸಿ ಗಿಫ್ಟ್ ನೀಡುವುದು, ಔಟಿಂಗ್ ಕರೆದೊಯ್ಯುವುದು ಅಷ್ಟು ಪ್ರಾಮುಖ್ಯತೆ ಪಡೆಯುವುದಿಲ್ಲ ಎಂದು ಹಲವರು ಹೇಳಬಹುದು. ಆದರೆ ರಿಲೇಶನ್ ಶಿಪ್‌ನಲ್ಲಿ ಗಿಪ್ಟ್‌ಗಳನ್ನು ನೀಡುವುದು ಇಂಪಾರ್ಟೆಂಟ್ ಆಗಿದೆ. ಇದು ಕೂಡಾ ಭಾವನೆ (Feelings)ಗಳನ್ನು ವ್ಯಕ್ತಪಡಿಸುವ ಒಂದು ರೀತಿ. ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದಾಗ, ನಿಮ್ಮ ಸಂಗಾತಿಗೆ ಅರ್ಥಪೂರ್ಣ ಉಡುಗೊರೆಯನ್ನು ನೀಡಬಹುದು. ಇದು ಸಂಗಾತಿಗೆ ನಿಮ್ಮ ಕುರಿತು ವಿಶೇಷ ಭಾವನೆಯನ್ನು ನೀಡುವುದಲ್ಲದೆ, ನೀವು ಪದಗಳಲ್ಲಿ ಹೇಳಲು ಸಾಧ್ಯವಾಗದಿರುವುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕೃತಜ್ಞತೆಯನ್ನುಸೂಚಿಸುತ್ತದೆ
ನಿಮ್ಮ ಸಂಗಾತಿಯು ನಿಮ್ಮಿಂದ ಉಡುಗೊರೆಯನ್ನು ಅಪೇಕ್ಷಿಸುವ ಅಥವಾ ಉಡುಗೊರೆಯನ್ನು ಕೇಳುವ ಪೈಕಿಯಲ್ಲವಾಗಿದ್ದರೆ, ಅವರು ನಿಮ್ಮನ್ನು ಹೊಂದಲು ಕೃತಜ್ಞತಾ ಭಾವ ಹೊಂದಿದ್ದಾರೆ ಎಂದರ್ಥ. ಹೀಗಾಗಿ ಅವರಿಗೆ ಅರ್ಥಪೂರ್ಣ ಉಡುಗೊರೆಯನ್ನು ನೀಡುವ ಮೂಲಕ ನೀವು ಸಹ ಅವರನ್ನು ಪಡೆದು ಖುಷಿಯಾಗಿದ್ದೀರಿ ಎಂಬ ಭಾವನೆಯನ್ನು ವ್ಯಕ್ತಪಡಿಸಿ. ನೀವು ಧನ್ಯವಾದ ಹೇಳಲು ಬಯಸುವಾಗ, ಪದಗಳು ಕಡಿಮೆಯಾದಾಗ, ಸಣ್ಣ ಉಡುಗೊರೆಯು ದೊಡ್ಡ ಅರ್ಥವನ್ನು ನೀಡುತ್ತದೆ.
ಪ್ರೀತಿ ಉಳಿಸಿಕೊಳ್ಳಲು ಐದು ಸೂತ್ರಗಳು!
ಕ್ಷಮಾಪಣೆ ಕೇಳಬಹುದು
ಸಂಬಂಧದಲ್ಲಿ ತಪ್ಪು ಮಾಡಿದಾಗ ನೀವದನ್ನು ಸರಿಪಡಿಸಲು ಅದೇನೆ ಹೇಳಿದರೂ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ ಹೊರತು ಸುಧಾರಿಸುವುದಿಲ್ಲ.ಇಂಥಹಾ ಸಂದರ್ಭದಲ್ಲಿ ಗಿಫ್ಟ್ ನೀಡಿ ಮನವೊಲಿಸುವುದು ಅತ್ಯುತ್ತಮ. ಸಂಗಾತಿಯನ್ನು ತುಂಬಾ ನೋಯಿಸಿದ್ದೀರಿ , ಆದರೆ ಸಮಾಧಾನಪಡಿಸಲು ಕಷ್ಟವಾಗುತ್ತಿದ್ದೀರಿ ಎಂದಾದರೆ ಅವರಿಗೆ ಆಪ್ತವೆನಿಸುವ ಉಡುಗೊರೆಗಳನ್ನು ನೀಡಿ.
ಪ್ರೀತಿ (Love)ಯನ್ನು ತಾಜಾಗೊಳಿಸುತ್ತದೆ
ಗಿಫ್ಟ್ ಕೊಡುವ ಅಭ್ಯಾಸ ಪ್ರೀತಿಯನ್ನು ತಾಜಾವಾಗಿಡುತ್ತದೆ. ನೆನಪುಗಳನ್ನು ಪುನರುಜ್ಜೀವನಗೊಳಿಸುತ್ತದೆ. ನೀವು ಅವರನ್ನು ಎಷ್ಟು ಪ್ರೀತಿಸುತ್ತಿದ್ದೀರಿ ಎಂಬುದನ್ನು ಮನವರಿಕೆ ಮಾಡಿ ಕೊಡುತ್ತದೆ. ಹಾಗೆಂದು ಗಿಫ್ಟ್ ಕೊಡಲು ಕಾಸ್ಟ್ಲೀ ಐಟಮ್‌ಗಳೇ ಆಗಬೇಕೆಂದೇನಿಲ್ಲ. ಅರ್ಥಪೂರ್ಣವಾದ ಸಣ್ಣ ಪುಟ್ಟ ಉಡುಗೊರೆಗಳು ಸಹ ಪ್ರೀತಿಯನ್ನು ಹೆಚ್ಚಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಿ ಪಾತ್ರರಿಗೆ ಸಮಯ ನೀಡಿ. ಸಮಯ ಎಲ್ಲದಕ್ಕಿಂತಲೂ ಅತ್ಯಮೂಲ್ಯ ಉಡುಗೊರೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚೆಚ್ಚು ಸಮಯವನ್ನು ವಿನಿಯೋಗಿಸಿ, ಯು ಆರ್ ಸ್ಪೆಷಲ್ ಎಂಬುದನ್ನು ತಿಳಿಸಿ.
ಪ್ರೀತಿಯ ವಿಶೇಷ ದಿನಗಳನ್ನು ಆಚರಿಸಿ
ಮೊದಲ ಬಾರಿಗೆ ಭೇಟಿಯಾದ ದಿನ, ಪ್ರಪೋಸ್ (Propose) ಮಾಡಿದ ದಿನ, ಬರ್ತ್‌ಡೇ ಮೊದಲಾದ ದಿನಗಳಗನ್ನು ವಿಶೇಷವಾಗಿ ಆಚರಿಸಿ. ಪರಸ್ಪರ ಗಿಫ್ಟ್ ಕೊಡುವುದನ್ನು ಮರೆಯದಿರಿ. ಇದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಇಂಥಹಾ ದಿನಗಳಲ್ಲಿ ವಿಶೇಷವಾಗಿ ಊಟಕ್ಕೆ ಕರೆದುಕೊಂಡು ಹೋಗಿ. ನಿಮ್ಮ ಸಂಗಾತಿಯನ್ನು ಖುಷಿಗೊಳಿಸುವ ಉಡುಗೊರೆಯನ್ನು ಖರೀದಿಸಿ. ನೀಡಿ. ವ್ಯಾಲೆಂಟೈನ್ಸ್ ಡೇಯ ಸಂದರ್ಭದಲ್ಲಿ ಇಂಥಹಾ ಗಿಫ್ಟ್‌ಗಳ ವಿನಿಮಯ ಸದಾಕಾಲ ನೆನಪಿನಲ್ಲಿ ಇರುವಂತೆ ಮಾಡುತ್ತದೆ.