ಬಳಸಿದ ಹೂ ಬಳಸಿ ಮನೆಯಲ್ಲಿಯೇ ಧೂಪ ತಯಾರಿಸೋದು ಹೀಗೆ
ಪೂಜೆ ಸಂದರ್ಭದಲ್ಲಿ ನಾವು ಹೆಚ್ಚೆಚ್ಚು ಹೂ ಬಳಕೆ ಮಾಡ್ತೇವೆ. ಅಷ್ಟೊಂದು ಹಣ ನೀಡಿ ತರುವ ಹೂವನ್ನು ದೇವರಿಗೆ ಬಳಸಿದ ಮೇಲೆ ಕಸಕ್ಕೆ ಎಸೆಯುತ್ತೇವೆ. ಆದ್ರೆ ಇದೇ ಹೂವನ್ನು ನೀವು ಮರಬಳಕೆ ಮಾಡ್ಬಹುದು. ಅದು ಹೇಗೆ ಗೊತ್ತಾ?
ದೀಪ, ಧೂಪವಿಲ್ಲದೆ ಪೂಜೆ ಪೂರ್ಣಗೊಳ್ಳುವುದಿಲ್ಲ. ಪ್ರತಿ ಪೂಜೆಯ ಆರಂಭದಲ್ಲಿ ನಾವು ದೀಪ ಬೆಳಗಿದ್ರೆ, ಆರತಿ ವೇಳೆ ಧೂಪವನ್ನು ಹಚ್ಚುತ್ತೇವೆ. ಸುಗಂಧಭರಿತ ಧೂಪಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತವೆ. ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಪರಿಮಳಯುಕ್ತ ಅನೇಕ ಧೂಪಗಳು ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈಗ ನವರಾತ್ರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಿತ್ಯದ ಬಳಕೆಗಿಂತ ಹೆಚ್ಚು ಹೂವನ್ನು ನಾವು ಬಳಕೆ ಮಾಡ್ತೇವೆ. ಈ ಬಳಸಿದ ಹೂವಿನಿಂದಲೇ ನೀವು ಧೂಪವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ನಾವಿಂದು ಮನೆಯಲ್ಲಿ ತಯಾರಿಸಬಹುದಾದ ಧೂಪಗಳ ಬಗ್ಗೆ ನಿಮೆ ಮಾಹಿತಿ ನೀಡ್ತೇವೆ.
ಈ ಧೂಪಗಳನ್ನು ತಯಾರಿಸಲು ಮೊದಲೇ ಹೇಳಿದಂತೆ ಹೂ (Flower) ಗಳು ಬೇಕು. ನೀವು ಇದಕ್ಕೆ ಒಣಗಿದ ಹೂಗಳನ್ನು ಬಳಸಬೇಕಾಗುತ್ತದೆ. ನಾವು ದೇವರಿಗೆ ಬಳಸಿದ ಹೂವನ್ನು ಏನು ಮಾಡ್ಬೇಕು ಎನ್ನುವ ಗೊಂದಲದಲ್ಲಿರುತ್ತೇವೆ. ವಿಶೇಷವಾಗಿ ಹಬ್ಬ (festival) ದ ಸಮಯದಲ್ಲಿ ಹೆಚ್ಚು ಹೂ ಮನೆಯಲ್ಲಿರೋದ್ರಿಂದ ಅದ್ರ ವಿಲೇವಾರಿ ಕಷ್ಟ. ಇನ್ಮುಂದೆ ಈ ಹೂಗಳನ್ನು ಎಸೆಯಬೇಡಿ.
ನವರಾತ್ರೀಲಿ ಉಪವಾಸ ಮಾಡಿದ್ರೆ ತೂಕ ಇಳಿಯುತ್ತಾ?
ಮನೆ (Home) ಯಲ್ಲೇ ಧೂಪ ತಯಾರಿಸಲು ಬೇಕಾಗುವ ಸಾಮಗ್ರಿ : ನೀವು ಹೂವಿನಿಂದ ಧೂಪವನ್ನು ಮನೆಯಲ್ಲೇ ತಯಾರಿಸುತ್ತೀರಿ ಎಂದಾದ್ರೆ ಕೆಲ ಸಾಮಗ್ರಿಗಳ ಅಗತ್ಯವಿರುತ್ತದೆ.
ಚೆಂಡ ಹೂವು : 5-7
ಗುಲಾಬಿ ಹೂ : 6-8
ಲವಂಗದ ಎಲೆ : 1-2
ಕರ್ಪೂರ : 3
ಕಲ್ಲಿದ್ದಲು ಮತ್ತು ಒಣ ಸಗಣಿ
ಶ್ರೀಗಂಧದ ಪುಡಿ
3 ಚಮಚ ತುಪ್ಪ
2 ಟೀಸ್ಪೂನ್ ಎಳ್ಳಿನ ಎಣ್ಣೆ
1 ಟೀಚಮಚ ಜೇನುತುಪ್ಪ
ಹವನದ ಸಾಮಗ್ರಿ
ದಿನಕ್ಕೆ 20ರೂ. ಗಳಿಸುತ್ತಿದ್ದ ಈಕೆ ಇಂದು 40 ಕೋಟಿ ವಹಿವಾಟು ನಡೆಸೋ ಕಂಪನಿ ಒಡತಿ
ಧೂಪವನ್ನು ತಯಾರಿಸುವ ವಿಧಾನ : ನೀವು ಮೊದಲು ಮಿಕ್ಸಿ ಜಾರಿಗೆ ಒಣ ಹೂವು, ಸಣ್ಣ ತುಂಡು ಕಲ್ಲಿದ್ದಲು, ಒಣ ಸಗಣಿ, ದಾಲ್ಚಿನಿ ಎಲೆ, ಶ್ರೀಗಂಧ ಮತ್ತು ಹವನದ ಪುಡಿಯನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ. ಇದಕ್ಕೆ ನೀರು ಹಾಕದೆ ಪುಡಿ ಮಾಡಬೇಕು. ಪುಡಿಯಾದ ಈ ಮಿಶ್ರಣವನ್ನು ನೀವು ಜರಡಿ ಹಿಡಿಯಬೇಕು. ಜರಡಿ ಹಿಡಿದ ನಂತ್ರ ಸಿಗುವ ಪುಡಿಯನ್ನು ನೀವು ಧೂಪಕ್ಕೆ ಬಳಸಬೇಕು.
ಈ ಜರಡಿ ಹಿಡಿದ ಪುಡಿಗೆ ನೀವು ತುಪ್ಪ, ಎಳ್ಳೆಣ್ಣೆ, ಜೇನುತುಪ್ಪ ಮತ್ತು ನೀರನ್ನು ಸೇರಿಸಿ ಮಿಕ್ಸ್ ಮಾಡ್ಬೇಕು. ಇದಕ್ಕೆ ನೀವು ಹೆಚ್ಚಿನ ನೀರನ್ನು ಬಳಸಬೇಡಿ. ಬರೀ ಒಂದರಿಂದ ಎರಡು ಚಮಚ ನೀರನ್ನು ಮಾತ್ರ ಹಾಕ್ಬೇಕು.
ಎಲ್ಲವೂ ಸರಿಯಾಗಿ ಮಿಕ್ಸ್ ಆದ್ಮೇಲೆ ನೀವು ಅದನ್ನು ಉಂಡೆ ಮಾಡಬೇಕು. ನಿಮಗಿಷ್ಟ ಆಕಾರದಲ್ಲಿ ಅದನ್ನು ತಯಾರಿಸಬಹುದು. ನೀವು ಈ ಉಂಡೆಯನ್ನು ಬಿಸಿಲಿನಲ್ಲಿಟ್ಟು ಚೆನ್ನಾಗಿ ಒಣಗಿಸಬೇಕು. ಇದು ಒಣಗಿದ ನಂತ್ರ ಬಳಸಲು ಸಿದ್ಧವಾಗುತ್ತದೆ. ಮಿಶ್ರಣ ತುಂಬಾ ಒಣಗಿದೆ ಎನ್ನಿಸಿದಲ್ಲಿ ನೀವು ಅದಕ್ಕೆ ಹೆಚ್ಚು ತುಪ್ಪ ಅಥವಾ ಹರಳೆಣ್ಣೆ ಸೇರಿಸಬಹುದು. ಧೂಪ ಹೆಚ್ಚು ಪರಿಮಳಯುಕ್ತವಾಗಿರಬೇಕು ಎನ್ನುವವರು ಕರ್ಪೂರದ ಬಳಕೆಯನ್ನು ಹೆಚ್ಚು ಮಾಡಬಹುದು.
ನೀವು ಚೆಂಡು ಹೂ ಅಥವಾ ಗುಲಾಬಿ ಹೂ ಇವೆರಡನ್ನೇ ಬಳಸಬೇಕು ಎಂದೇನಿಲ್ಲ. ನಿಮ್ಮ ಮನೆಯಲ್ಲಿರುವ ಯಾವುದೇ ಹೂವನ್ನು ನೀವು ಬಳಕೆ ಮಾಡಬಹುದು.
ಪೂಜೆ ನಂತ್ರ ಕಸಕ್ಕೆ ಹಾಕುವ ಹೂವನ್ನು ನೀವು ಹೀಗೆ ಮರುಬಳಕೆ ಮಾಡಬಹುದು. ಇದು ಸಾವಯವ ಧೂಪವಾಗಿರುವ ಕಾರಣ ಬಳಕೆಗೆ ಯಾವುದೇ ಭಯವಿರೋದಿಲ್ಲ. ಯಾವುದೇ ರಾಸಾಯನಿಕ ವಸ್ತು ಇದ್ರಲ್ಲಿ ಮಿಕ್ಸ್ ಆಗದ ಕಾರಣ ನೀವು ಆರಾಮವಾಗಿ ಇದರ ಬಳಕೆ ಮಾಡಬಹುದು. ಇದ್ರಲ್ಲಿ ಬಳಸಿದ ವಸ್ತುವಿನ ಧೂಪ ಪರಿಮಳಯುಕ್ತವಾಗಿರುವುದಲ್ಲದೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರದೂಡುತ್ತದೆ. ಮನೆಯ ವಾತಾವರಣವನ್ನು ಶುಚಿಗೊಳಿಸುತ್ತದೆ.