ಪತಿಯ ನಿರ್ಲಕ್ಷಕ್ಕೆ ಒಳಗಾದ ನೋವನ್ನು ಹಂಚಿಕೊಂಡ ಸೂಪರ್ ಸ್ಟಾರ್ ಪ್ರಿಯಾಂಕ!
ಈ ಬಾರಿ ಸುವರ್ಣ ಸೂಪರ್ ಸ್ಟಾರ್‌ನ ಸ್ಪರ್ಧಿಯಾಗಿ ಬಂದಿರುವ ಪ್ರಿಯಾಂಕಾ ಎಂಬಾಕೆ, ತನಗೆ ಮಕ್ಕಳಾಗಲಿಲ್ಲವೆಂದು ಪತಿ ಬಿಟ್ಟು ಹೋದ. ಈಗಿನ ಕಾಲದಲ್ಲಿ ಗಂಡ ಸತ್ತಿರೋರಿಗೆ ಇರೋ ಬೆಲೆ ಗಂಡ ಬಿಟ್ಟು ಹೋದವರಿಗೆ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಈ ಬಾರಿ ಸುವರ್ಣ ಸೂಪರ್ ಸ್ಟಾರ್‌ನ ಸ್ಪರ್ಧಿಯಾಗಿ ಬಂದಿರುವ ಪ್ರಿಯಾಂಕಾ ಎಂಬಾಕೆ, ತನಗೆ ಮಕ್ಕಳಾಗಲಿಲ್ಲವೆಂದು ಪತಿ ಬಿಟ್ಟು ಹೋದ. ಈಗಿನ ಕಾಲದಲ್ಲಿ ಗಂಡ ಸತ್ತಿರೋರಿಗೆ ಇರೋ ಬೆಲೆ ಗಂಡ ಬಿಟ್ಟು ಹೋದವರಿಗೆ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಹೆಂಡತಿ ಹೆಣ್ಣು ಮಗುವನ್ನು ಹೆರಲಿಲ್ಲ ಎಂದೋ, ಹೆಂಡತಿ ದುಡಿಯುತ್ತಾಳೆ ಎಂದೋ, ಪತ್ನಿ ಆಸ್ತಿ ತರಲಿಲ್ಲವೆಂದೋ ವಿಚ್ಚೇದನ ನೀಡುವ ಈ ಸಮಾಜದಲ್ಲಿ ಮಕ್ಕಳಾಗಿಲ್ಲ ಎಂದು ವಿಚ್ಚೇದನ ನೀಡುವುದು ಕೂಡಾ ಅಂಥ ವಿಶೇಷವಲ್ಲ.
ಭಾರತದಲ್ಲಿ ಇದೊಂದು ಸಾಮಾನ್ಯ ಪಿಡುಗಾಗಿದೆ. ಬಹಳ ಹಿಂದಿನ ಕಾಲದಿಂದಲೂ ಮಕ್ಕಳಾಗಲಿಲ್ಲವೆಂದ ಕೂಡಲೇ ಮತ್ತೊಬ್ಬಳನ್ನು, ಮಗದೊಬ್ಬಳನ್ನು ಕಟ್ಟಿಕೊಳ್ಳುವ ಗಂಡಸಿನ ಚಾಳಿ ನಡೆದು ಬಂದೇ ಇದೆ. ಇದನ್ನು ಹೆಂಗಸರು ಸೆರಗಲ್ಲಿ ಕಣ್ಣೀರು ಒರೆಸಿಕೊಂಡು ಸಹಿಸಿಕೊಂಡು ಬಂದಿದ್ದಾರೆ. ಎಷ್ಟೋ ಬಾರಿ, ಗಂಡಸಿನ ಸಮಸ್ಯೆಯಿಂದ ಮಕ್ಕಳಾಗದಿದ್ದರೂ, ಅದನ್ನು ಮುಚ್ಚಿಕೊಳ್ಳಲು ಅವರು ಈ ರೀತಿ ಪತ್ನಿಯ ಮೇಲೆ ಆರೋಪ ಹೊರೆಸಿ ತಾವು ಮತ್ತೊಂದು ಮದುವೆಯಾಗುತ್ತಾರೆ. ಇವೆಲ್ಲವೂ ಈ ಸಮಾಜದಲ್ಲಿ ಎಷ್ಟು ಸಾಮಾನ್ಯವಾಗಿದೆ ಎಂದರೆ, ಈ ಕಾರಣಕ್ಕಾಗಿ ಪತ್ನಿಯನ್ನು ಬೇರೆ ಮಾಡಿದರೆ ಆ ಹೆಣ್ಣಿನ ಬಗ್ಗೆ ಸಹಾನುಭೂತಿ ತೋರುವವರು ಅಪರೂಪವೇ ಆಗಿದ್ದಾರೆ. ಗಂಡಸಿನ ಕಾರ್ಯಕ್ಕೆ ಬೆಂಬಲಿಸುವವರ ಸಂಖ್ಯೆ ದೊಡ್ಡದಿದೆ.
ಫೇಶಿಯಲ್ಗಾಗಿ ಸಾವಿರಾರು ರುಪಾಯಿ ಸುರಿಯೋದ್ಯಾಕೆ? ರವೆ, ಕಾಫಿಪುಡಿಯ ಈ ಫೇಸ್ಪ್ಯಾಕ್ ಟ್ರೈ ಮಾಡಿ
ಪುರುಷ ಪ್ರಧಾನ ಸಮಾಜದಲ್ಲಿ ಆರಂಭವಾದ ಈ ಪಿಡುಗು, ಈಗ ಹೆಣ್ಣು ಸಮಾನಳೆಂದು ಸಾಬೀತುಪಡಿಸಿ ತೋರಿಸಿದ ನಂತರವೂ ಮುಂದುವರೆದೇ ಇದೆ.
ಮಗುವನ್ನು ಹೆರಲು ಅಸಮರ್ಥತೆಯು ಮದುವೆಯನ್ನು ವಿಸರ್ಜಿಸಲು ಮಾನ್ಯವಾದ ಕಾರಣವಲ್ಲ ಎಂದು ಈ ಹಿಂದೆ ಕೇಸೊಂದರ ತೀರ್ಪು ನೀಡುವಾಗ ಪಾಟ್ನಾ ಹೈಕೋರ್ಟ್ ಹೇಳಿತ್ತು. ಮಕ್ಕಲಾಗಲಿ, ಆಗದಿರಲಿ ಅವೆಲ್ಲವೂ ವೈವಾಹಿಕ ಜೀವನದ ಭಾಗವಾಗಿದೆ. ಜೀವನವನ್ನು ಬಂದಂತೆ ತೆಗೆದುಕೊಂಡು ಹೋಗಬೇಕು ಎಂದು ಕೋರ್ಟ್ ಆಗ ಮಕ್ಕಳಾಗಲಿಲ್ಲವೆಂದು ಪತ್ನಿಗೆ ಡಿವೋರ್ಸ್ ನೀಡಹೊರಟ ಪತಿಗೆ ಬುದ್ಧಿ ಹೇಳಿತ್ತು.
ಮಗನಿಗೆ ಮದ್ವೆ ಮಾಡ್ತಾ ಇದೀರಾ? ಹುಷಾರು, ಇಂಥಾ ಸೊಸೆ ಅತ್ತೆ-ಮಾವನ ಜೀವನ ನರಕ ಮಾಡಿಬಿಡ್ತಾಳೆ
ಈ ಪಾಠ ಮಕ್ಕಳಿಗೆ ಮನೆಯಲ್ಲಿಯೇ ಆಗಬೇಕು. ಹೆಣ್ಣನ್ನು ಹೇಗೆ ಗೌರವಿಸಬೇಕು, ಪತ್ನಿಯಾಗುವವಳನ್ನು ಹೇಗೆ ನಡೆಸಿಕೊಳ್ಳಬೇಕು, ಆಕೆಯೂ ತನ್ನಂತೆಯೇ ಒಂದು ಜೀವ ಎಂಬುದನ್ನು ಗಂಡು ಮಕ್ಕಳಿಗೆ ಪೋಷಕರು ತಿಳಿ ಹೇಳಬೇಕು. ವಿವಾಹದ ಬಳಿಕವೂ ಪತ್ನಿಯನ್ನು ತನ್ನ ಅಗತ್ಯ ಪೂರೈಸುವ ಸರಕಂತೆ ನೋಡದೆ, ಸ್ನೇಹಿತೆಯಂತೆ ನಡೆಸಿಕೊಳ್ಳುವ ಮನಸ್ಥಿತಿ ಪುರುಷರಲ್ಲಿ ಬರಬೇಕು. ಮೊದಲೇ ಮಕ್ಕಳಾಗುತ್ತಿಲ್ಲ ಎಂದು ನೊಂದ ಪತ್ನಿಗೆ ಮತ್ತಷ್ಟು ನೋಯಿಸುವುದು ಸ್ಯಾಡಿಸ್ಟ್ ಮನಸ್ಥಿತಿಯಾಗಿದೆ. ಯಾವಾಗ ಪತಿ ತನ್ನ ಪತ್ನಿಗೆ ಮಗುವಾಗದಿದ್ದರೂ ಪರವಾಗಿಲ್ಲ, ಆಕೆ ನನ್ನ ಉತ್ತಮ ಸ್ನೇಹಿತೆ ಎಂದು ಗೌರವಾದರಗಳಿಂದ ನಡೆಸಿಕೊಳ್ಳುತ್ತಾನೋ, ಆಗ ಸಮಾಜವೂ ಆಕೆಯನ್ನು ಗೌರವದಿಂದ ನಡೆಸಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳುತ್ತದೆ.