Asianet Suvarna News Asianet Suvarna News

ಹೆಣ್ಣು ಮಕ್ಕಳೂ ಹಸ್ತಮೈಥುನ ಮಾಡಿಕೊಳ್ತಾರಾ ? ಇದು ಸಹಜ ಪ್ರಕ್ರಿಯೆಯೇ ?

ದೈಹಿಕ ವಾಂಛೆ ಎನ್ನೋದು ಗಂಡಿನಷ್ಟೇ ಹೆಣ್ಣಿಗೂ ಸಹಜ. ಆದರೆ, ಸಾಮಾಜಿಕ ಕಟ್ಟುಪಾಡುಗಳ (Social Restrictions) ಕಾರಣ ಆಕೆ ಗಂಡಿನಷ್ಟು ಎಕ್ಸೆಪ್ರೆಸ್ಸಿವ್ ಆಗಿರೋಲ್ಲ. ಹಾಗಂಥ ಹದಿ ವಯಸ್ಸು ದಾಟಿದ ಮಗಳೊಬ್ಬರು ಹಸ್ತಮೈಥುನ ಮಾಡಿ ಕೊಳ್ಳುತ್ತಿದ್ದಾಳೆಂದರೆ ಪೋಷಕರು ಆತಂಕಗೊಳ್ಳುವ ಅಗತ್ಯವಲ್ಲ. ಅದೇನು Unusual ಅಲ್ಲವೇ ಅಲ್ಲ. 

Did Females Masturbate Is A Natural Process Vin
Author
Bengaluru, First Published May 29, 2022, 12:07 PM IST

ಆಪ್ತ ಸಲಹೆ (Counselling) ಕಾಲಮ್‌ವೊಂಜಕಸ್ಸಿ ತಾಯಿಯೊಬ್ಬಳು ತನ್ನ 24 ವರ್ಷದ ಮಗಳೊಬ್ಬಳು ಹಸ್ತುಮೈಥುನ (Manstrubutaion)ಮಾಡಿಕೊಳ್ಳುವುದ ನೋಡಿ ಶಾಕ್ ಆಗಿದ್ದೇನೆ ಎಂದ ದುಗುಡ ತೋಡಿಕೊಂಡಿದ್ದರು. ಮಗಳ ಪ್ರೈವೇಸಿಗೆ (Privacy) ಬೆಲೆ ಕೊಡುವ ತಾಯಿ, ಇದನ್ನು ನೋಡಿ ಏನು ಮಾಡಬೇಕೆಂದು ತೋಚದೇ ಮೌನವಾಗಿಯೇ ಇದ್ದರು. ಆದರೆ, ಮನಸ್ಸಿನಲ್ಲಿಯ ಬಚ್ಚಿಟ್ಟುಕೊಂಡು ಆತಂಕವನ್ನು ಹೇಗಾದರೂ ಎಕ್ಸ್‌ಪ್ರೆಸ್ ಮಾಡಬೇಕಾದ ಕಾರಣ ಖ್ಯಾತ ಪತ್ರಿಕೆಯೊಂದು ನೀಡುವ ಆಪ್ತ ಸಲಹೆ ಕಾಲಮ್‌ಗೆ ಪ್ರಶ್ನೆ ಕೇಳಿದ್ದರು.

ಮಧ್ಯ ವಯಸ್ಸಿನ (Middle Aged) ಆ ತಾಯಿಗೋ ಇದಕ್ಕೆ ಹೇಗೆ ರಿಯಾಕ್ಟ್ ಮಾಡಬೇಕೋ ಗೊತ್ತಾಗುತ್ತಿಲ್ಲ. ಇಗ್ನೋರ್ ಮಾಡುವಂಥ ಮನಸ್ಥಿತಿಯಲ್ಲಿ ಇರಲಿಲ್ಲ. ಮಗಳನ್ನು ಆ ಸ್ಥಿತಿಯಲ್ಲಿ ನೋಡಿದಾಗಿನಿಂದ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದಂಥ ಅನುಭವ. ಜೊತೆಗೆ ಮಗಳು ತಪ್ಪು ಮಾಡುತ್ತಿದ್ದಾಳೆಂಬ ಭಾವ, ತಾನೂ ತಪ್ಪು ಮಾಡಿದೆ ಎಂಬ ಅಪರಾಧ ಭಾವಕ್ಕೆ (Guilt Feeling) ತಜ್ಞರು ಮನಸ್ಸು ನಿರಾಳವಾಗುವಂತೆ ಉತ್ತರಿಸಿದ್ದು ಹೀಗೆ. 

ಹಸ್ತಮೈಥುನ ಮಾಡ್ಕೊಂಡು ಲೈಂಗಿಕ ತೃಪ್ತಿ ಪಡೆಯಲು ಹೋದ ಯುವಕನ ಶ್ವಾಸಕೋಶವೇ ಹರಿಯಿತು !

ಅಯ್ಯೋ, ಇದು ಇಷ್ಟು ತಲೆ ಕೆಡಿಸಿಕೊಳ್ಳುವಂಥ ವಿಷಯವೇವಲ್ಲ ಬಿಡಿ. ಗಂಡಿನಂತೆ ಹೆಣ್ಣಿಗೂ ವಯೋ ಸಹಜ ಲೈಂಗಿಕ ವಾಂಛೆ (Sexual Feeling) ಇರುವುದು ಸಹಜ. ಆದರೆ, ಕೆಲವರು ಅದನ್ನು ಅದುಮಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಮತ್ತೆ ಮದುವೆಯಾಗದ ಕೆಲವು ಹೆಣ್ಣು ಮಕ್ಕಳು ಹಸ್ತಮೈಥುನ ಮಾಡಿಕೊಳ್ಳುತ್ತಾರೆ. ಆ ಆಧುನಿಕ ಯುಗದಲ್ಲಿ (Modern Era) ಸಾಕಷ್ಟು ಸೆಕ್ಸ್ ಟಾಯ್ಸ್ (Sex Toys) ಸಹ ಲಭ್ಯವಾಗಿದ್ದು, ಆರ್ಥಿಕವಾಗಿ ಸ್ವತಂತ್ರವಾಗಿದ್ದು, ಒಂಟಿಯಾಗಿರುವ ಹೆಣ್ಣು ಮಕ್ಕಳಂತೂ ಸ್ವಲ್ಪವೂ ಮುಜುಗರವಿಲ್ಲದೇ ಅದನ್ನು ಬಳಿಸಿ, ತಮ್ಮ ದೈಹಿಕ ಸುಖವನ್ನು ಈಡೇರಿಸಿಕೊಳ್ಳುತ್ತಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಕಾಲ ಬಂದಾಗ ಇಳೆಗೆ ಮಳೆ ಬಂದಷ್ಟೇ ನೈಸರ್ಗಿಕ ಸಹಜ ಪ್ರಕ್ರಿಯೆ. 

ಮಗಳಿಗೆ ಮದುವೆ ವಯಸ್ಸು ಬಂದಿದೆ. ಆದರೆ, ನಿಮ್ಮ ಪಾಲಿಗಿನ್ನೂ ಚಿಕ್ಕವಳು ಎನಿಸೋದು ಸಹಜ. ಆದರೆ, ಅವಳ ಮನಸ್ಸಿನಲ್ಲಿ ಈಗಾಗಲೇ ಮದುವೆ (Wedding), ಸಂಸಾರ (Family), ಲೈಂಗಿಕ ಬಯಕೆಗಳು ಹಕ್ಕಿಯಂತೆ ಹಾರಾಡುತ್ತಿರುವೆ. ಈ ಸಂಬಂಧ ಹಾರ್ಮೋನ್‌ಗಳು ಹೆಚ್ಚು ಉತ್ಪತ್ತಿಯಾಗುತ್ತಲೇ ಇರುತ್ತವೆ. ಆದರೆ, ಕೆಲವರಿಗೆ ಈ ಭಾವನಗಳಿಗೆ ಹೇಗೆ ರಿಯಾಕ್ಟ್ ಮಾಡಬೇಕೆಂಬುವುದು ಗೊತ್ತಿರೋಲ್ಲ. ಅದಕ್ಕೆ ಕಾರಣವೂ ಪೋಷಕರೇ ಎಂದರೆ ತಪ್ಪಿಲ್ಲ.

Sex Life : ಮಹಿಳೆಯರ ಹಸ್ತಮೈಥುನ ಕುರಿತ ಸೀಕ್ರೆಟ್ಸ್ ಇಲ್ಲಿವೆ

ಮಕ್ಕಳೆದುರು ಸೆಕ್ಸ್ ಬಗ್ಗೆ ಮಾತನಾಡುವುದೇ ತಪ್ಪೆಂಬ ಭಾವ ನಮ್ಮಲ್ಲಿ ಅನೇಕ ಹಿರಿಯರಿಗಿದೆ. ಆದರೆ, ವಯಸ್ಸಿಗೆ ತಕ್ಕಂತೆ ಚಿಗುರಿಕೊಳ್ಳುವ ಮನೋವಾಂಛೆಗಳ ಬಗ್ಗೆ ಹಿಂದೂ ಮುಂದೂ ಗೊತ್ತಿಲ್ಲದ ಮಕ್ಕಳಿಗೂ ಆ ಪೋಷಕರಲ್ಲಿ ಕೇಳುವಷ್ಟು ಸ್ವಾತಂತ್ರ್ಯವೂ (Freedom) ಇರೋಲ್ಲ, ಧೈರ್ಯವೂ ಸಾಲೋಲ್ಲ. ಈ ಬಗ್ಗೆ ವಯಸ್ಸಿಗೆ ಸರಿಯಾಗಿ ಹೆಚ್ಚಿಗೆ ಅಲ್ಲದಿದ್ದರೂ ಸ್ವಲ್ಪ ಸ್ವಲ್ಪ ಹೇಳಿ ಕೊಡಬೇಕು. ಈ ಬಗ್ಗೆ ಅರಿವು ಮೂಡಿಸಬೇಕು. ಅವೆಲ್ಲ ಸಹಜ ಎಂದು ಹೇಳಿ ಕೊಡಬೇಕು. ಅವರಲ್ಲಿ ಅಪ್ಪಿ ತಪ್ಪಿಯೂ ಆ ಯೋಜನೆಗಳು ಬರೋದು ಅಪರಾಧ (Guilt Feeling) ಎಂಬ ಭಾವ ಮೂಡಿಸಬಾರದು. 

ಮಕ್ಕಳು ಸಣ್ಣಗಿರುವಾಗಲೇ ಅವರ ಪ್ರೈವೇಟ್ ಪಾರ್ಟ್ಸ್ (Private Parts) ಸ್ವಚ್ಛತೆಯಿಂದ ಸಣ್ಣ ಪುಟ್ಟ ವಿಷಯಗಳನ್ನು ಹೇಳುತ್ತಾ ಹೋದರೆ, ಇಂಥ ಲೈಂಗಿಕ ಭಾವನೆಗಳು ಸೃಷ್ಟಿಯಾಗುವಾಗ ಮಕ್ಕಳೂ ಪೋಷಕರೊಂದಿಗೆ ತಮ್ಮ ಅನುಮಾನಗಳನ್ನು ಮುಕ್ತವಾಗಿ ಬಗೆಹರಿಸಿಕೊಳ್ಳುತ್ತಾರೆ. ಆಗ ಪೋಷಕರಿಗೂ ಮಕ್ಕಳು ಹಸ್ತ ಮೈಥುನ ಮಾಡಿಕೊಳ್ಳುತ್ತಿದ್ದಾರೆಂದರೆ ಏನೋ ತಪ್ಪು ಮಾಡುತ್ತಿದ್ದಾರೆಂಬ ಭಾವವೂ ಮೂಡುವುದಿಲ್ಲ. ಹಾಗಾಗಿ ಇದು ಚಿಂತಿಸುವ ವಿಷಯವಲ್ಲ. ಮಗಳಿಗೆ ಮದುವೆಯಾಗುವ ಇಚ್ಛೆ ಇದ್ದರೆ ಗಂಡು ಹುಡುಕಲು ಶುರು ಮಾಡಿ. ಅವಳೊಂದಿಗೆ ಮಾತನಾಡಿ, ಯಾರಾದಾರೂ ಹುಡುಗ ಮನಸ್ಸಿನಲ್ಲಿ ಇದ್ದಾನಾ ತಿಳಿದುಕೊಳ್ಳಿ. ಮತ್ತೇನಾದರೂ ಮಾನಸಿಕ ಗೊಂದಲಗಳಿದ್ದರೆ, ಸಾಮಾಧಾವನಾಗಿ ಮಾತನಾಡಿ, ಬಗೆ ಹರಿಸಲು ಯತ್ನಿಸಿ. ಅಕಸ್ಮಾತ್ ನಿಮ್ಮಿಂದ ಸಾಧ್ಯವಾಗದೇ ಹೋದರೆ ಆಪ್ತ ಸಲಹೆಗಾರರ ಹತ್ತಿರ ಕರೆದುಕೊಂಡು ಹೋಗಿ. 

No sex after childbirth: ಮಗು ಬಂದ ಬಳಿಕ ಸೆಕ್ಸ್ ಇಲ್ಲ, ಹೀಗಾದರೆ ಏನು ದಾರಿ?

ಆದರೆ, ಎಲ್ಲವೂ ನಾರ್ಮಲ್ ಆಗಿಯೇ ಇದೆ ಅಂದರೆ, ಹಸ್ತಿ ಮೈಥುನ ಮಾಡಿಕೊಂಡಿದ್ದು ತಪ್ಪಲ್ಲವೇ ಅಲ್ಲ. ಅವಳೊಂದಿಗೆ ನಿಮ್ಮ ನಡವಳಿಕೆ ಸಹಜವಾಗಿಯೇ ಮುಂದುವರಿಯಲಿ. ಅವಳ ಆತ್ಮವಿಶ್ವಾಸ ಕುಂದದಿರಲಿ. ಆದರೆ ಇದಕ್ಕಿಂತಲೂ ಮುಖ್ಯವಾಗಿ ನಿಮ್ಮ ಮಗಳಿಗೆ ಈ ಬಗ್ಗೆ ಅರಿವು ನೀಡುವಂಥಾ ಪುಸ್ತಕವನ್ನು ಗಿಫ್ಟ್ ಕೊಡಿ. ಮಕ್ಕಳಿಗೆ ಲೈಂಗಿಕತೆ, ಹಾರ್ಮೋನ್ ಬದಲಾವಣೆ ಇತ್ಯಾದಿ ವಿಷಯಗಳಲ್ಲಿ ಅರಿವು ಮೂಡಿಸುವ ಪುಸ್ತಕಗಳಿವೆ. ಉತ್ತಮವಾದ ಪುಸ್ತಕ ಹುಡುಕಿ ಮಕ್ಕಳಿಗೆ ನೀಡಿದರೆ ಗೊಂದಲಗಳು, ಸಮಸ್ಯೆಗಳು ಪರಿಹಾರವಾಗುತ್ತವೆ. ನೀವೂ ಅಪರಾಧಿ ಭಾವನೆಯಿಂದ ಮುಕ್ತರಾಗಬಹುದು.

Follow Us:
Download App:
  • android
  • ios