ಮನುಷ್ಯರು ಕೆಲವೊಮ್ಮೆ ಎಷ್ಟು ವಿಚಿತ್ರವಾಗಿ ವರ್ತಿಸ್ತಾರೆ ನೋಡಿ. ಆ ಲೇಡಿ ಕಾಪ್ ಪಾಪ ಖಿನ್ನತೆಯಲ್ಲಿದ್ದ ಆ ವ್ಯಕ್ತಿಗೆ ಸಮಾಧಾನ ಮಾಡಲು ಯತ್ನಿಸ್ತಿದ್ಲು. ಆದ್ರೆ ಆತನೋ ಅಚಾನಕ್ ಆಗಿ ಆಕೆಗೆ ಕಿಸ್ ಮಾಡಿದ್ದಾರೆ. ಲೇಡಿ ಕಾಪ್ ರಿಯಾಕ್ಷನ್ ಹೇಗಿತ್ತು ನೋಡಿ.
ಕಾನೂನನ್ನು ಜಾರಿಗೊಳಿಸುವ ಮೂಲಕ ಅಪರಾಧ ಮತ್ತು ಅವ್ಯವಸ್ಥೆಯನ್ನು ತಡೆಗಟ್ಟುವ ಜೊತೆಗೆ ಕಾನೂನು ಮತ್ತು ಶಾಂತಿಯನ್ನು ಕಾಪಾಡುವುದು ಪೊಲೀಸರ ಪ್ರಧಾನ ಕರ್ತವ್ಯವಾಗಿದೆ. ಆದರೆ, ಅಗತ್ಯವಿದ್ದಾಗ ಸಾರ್ವಜನಿಕರ ಪರ ನಿಲ್ಲುವ ಜವಾಬ್ದಾರಿಯೂ ಅವರ ಮೇಲಿದೆ. ಆದರೆ, ಕೆಲವೊಮ್ಮೆ, ಅನಿರೀಕ್ಷಿತ ನಿದರ್ಶನಗಳು ಸಂಭವಿಸುತ್ತವೆ. ಅದು ಎಲ್ಲರಿಗೂ ಆಘಾತವನ್ನುಂಟು ಮಾಡುತ್ತದೆ. ಇಂಥಾ ವೀಡಿಯೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಸುಂದರವಾದ ಲೇಡಿ ಕಾಪ್ ಖಿನ್ನತೆಗೆ ಒಳಗಾದ ಹುಡುಗನನ್ನು ಸಮಾಧಾನ ಪಡಿಸುತ್ತಿರುವ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಇದರಲ್ಲಿ ಹುಡುಗ ದಿಢೀರ್ ಆಗಿ ಮಹಿಳೆಗೆ ಚುಂಬಿಸುವುದನ್ನು ನೋಡಬಹುದು.
ವೀಡಿಯೊದಲ್ಲಿ, ಸುಂದರ ಮಹಿಳಾ ಪೋಲೀಸ್ (Lady cop) ಒಬ್ಬ ವ್ಯಕ್ತಿಯನ್ನು ಸಮಾಧಾನಿಸುತ್ತಿರುವುದನ್ನು ನೋಡಬಹುದು. ಯುವಕ (Youth) ಖಿನ್ನತೆಗೆ ಒಳಗಾಗಿರುವಂತೆ ಕಾಣುತ್ತಾನೆ. ಪೋಲೀಸ್ ಅವನೊಂದಿಗೆ ಬಹಳ ನಯವಾಗಿ ಸಂವಹನ ನಡೆಸುತ್ತಿರುತ್ತಾರೆ. ಆ ವ್ಯಕ್ತಿ ತಕ್ಷಣ ಅವಳನ್ನು ತಬ್ಬಿಕೊಳ್ಳುತ್ತಾನೆ ಮತ್ತು ಪೋಲೀಸ್ ವಿರೋಧಿಸದೆ ಅವನಿಗೆ ಬೆಚ್ಚಗಿನ ಅಪ್ಪುಗೆ (Hug)ಯನ್ನು ನೀಡುತ್ತಾರೆ.
ಆಹ ಆಹಾ... ಹಾವಿಗೆ ಮುತ್ತಿಕ್ಕಿದ ಯುವಕ: ವೈರಲ್ ವೀಡಿಯೋ
ಹಗ್ ಮಾಡಿ ಸಮಾಧಾನ ಮಾಡಿದ ಲೇಡಿ ಕಾಪ್‌ಗೆ ಚುಂಬಿಸಿದ ಯುವಕ
ಇದಾದ ಕೆಲವು ಕ್ಷಣಗಳ ನಂತರ, ವ್ಯಕ್ತಿ ಇದ್ದಕ್ಕಿದ್ದಂತೆ ಅವಳ ಕುತ್ತಿಗೆಯನ್ನು ಹಿಡಿದು ಮಹಿಳಾ ಪೋಲೀಸ್ ಮುಖದ ಮೇಲೆ ಚುಂಬಿಸುತ್ತಾನೆ. ಪುರುಷನ ಅಂತಹ ನಡವಳಿಕೆಯಿಂದ ಲೇಡಿ ಕಾಪ್ ಗಾಬರಿಯಾಗುತ್ತಾರೆ. ಆತನ ಮುಖವನ್ನು ಇದಕ್ಕೆ ಸರಿಸುತ್ತಾರೆ. ಮಹಿಳಾ ಪೋಲೀಸ್ ಕೋಪಗೊಳ್ಳುವ ಬದಲು ಆಶ್ಚರ್ಯದಿಂದ ನಗುತ್ತಾರೆ. ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಹುಡುಗನ ವರ್ತನೆಗೆ (Behaviour) ಬೈಯ್ದು ದೂರ ತಳ್ಳುತ್ತಾರೆ.
Sanscari_ladka ಅವರು Instagramನಲ್ಲಿ ವೀಡಿಯೊ ಹಂಚಿಕೊಂಡಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ (Social media) ಇದು ವೈರಲ್ ಆಗಿದ್ದು, ಘಟನೆಯ ಬಗ್ಗೆ ನೆಟಿಜನ್‌ಗಳು ತಮ್ಮ ಅಭಿಪ್ರಾಯ (Opinion)ಗಳನ್ನು ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಈ ಘಟನೆಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಹುಡುಗನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಮಹಿಳಾ ಪೊಲೀಸ್‌ನ ಮಾತೃ ಗುಣಕ್ಕೆ ಹ್ಯಾಟ್ಸಾಫ್ ಅಂದಿದ್ದಾರೆ. ಮಹಿಳಾ ಪೋಲೀಸ್ ಬಾಂಗ್ಲಾದೇಶದ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದರಿಂದ ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ತೋರುತ್ತದೆ.
ಅದೇನೆ ಇರ್ಲಿ ಮಾತೃಗುಣದಿಂದ ಸಮಾಧಾನ ಮಾಡಲು ಬಂದ ಲೇಡಿ ಕಾಪ್ ಜೊತೆ ಯುವಕ ಈ ರೀತಿ ವಿಚಿತ್ರವಾಗಿ ವರ್ತಿಸಿರೋದು ಎಲ್ಲರ ಹುಬ್ಬೇರುವಂತೆ ಮಾಡಿದ್ದಂತೂ ನಿಜ.
ಚಲಿಸುವ ಬೈಕ್ ಮೇಲೆ ಬಾಲಕಿಯರ ರೋಮ್ಯಾನ್ಸ್: ಲಿಪ್ ಕಿಸ್ ವಿಡಿಯೋ ವೈರಲ್
