ಆಹ ಆಹಾ... ಹಾವಿಗೆ ಮುತ್ತಿಕ್ಕಿದ ಯುವಕ: ವೈರಲ್ ವೀಡಿಯೋ
ನಾವೆಲ್ಲಾ ಹಾವು ನೋಡಿ ಹಾವು ಹಾವು ಅಂತ ಬೊಬ್ಬೆ ಹೊಡೆದು ಓಡಲು ಶುರು ಮಾಡುತ್ತೇವೆ. ಆದ್ರೆ ಇಲ್ಲೊಬ್ಬ ಆಹ ಆಹಾ ಎಂದು ಹಾವಿಗೆ ಮುತ್ತಿಕ್ಕಿದ್ದಾನೆ. ಇದರ ವಿಡಿಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾವೆಲ್ಲಾ ಹಾವು ನೋಡಿ ಹಾವು ಹಾವು ಅಂತ ಬೊಬ್ಬೆ ಹೊಡೆದು ಓಡಲು ಶುರು ಮಾಡುತ್ತೇವೆ. ಆದ್ರೆ ಇಲ್ಲೊಬ್ಬ ಆಹ ಆಹಾ ಎಂದು ಹಾವಿಗೆ ಮುತ್ತಿಕ್ಕಿದ್ದಾನೆ. ಇದರ ವಿಡಿಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಅನೇಕರು ಈ ರೀತಿ ಮಾಡಿ ಅಪಾಯ ಮೈಮೇಲೆ ಎಳೆದುಕೊಂಡಿದ್ದರು. ಆದರೂ ಕೆಲ ಯುವಕರಿಗಿನ್ನು ಬುದ್ದಿ ಬಂದಂತೆ ಕಾಣುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಒಂದು ಲೈಕ್ಸ್, ಕಾಮೆಂಟ್‌ಗಾಗಿ ಕೆಲವರು ಹಾವು ಹಲ್ಲಿ ಮುಂತಾದ ಮೂಕ ಪ್ರಾಣಿಗಳ ಹಿಂದೆ ಬಿದ್ದು ಅವುಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಯುಟ್ಯೂಬ್ ವಿಡಿಯೋಗಾಗಿ ಹಾವನ್ನು ಹಿಡಿದು ಮನೆಯಲ್ಲಿ ಇರಿಸಿಕೊಂಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಅಸ್ಸಾಂನಿಂದ ವರದಿಯಾಗಿತ್ತು. ಇದೇ ರೀತಿಯ ಹಲವು ಘಟನೆಗಳು ನಡೆಯುತ್ತಲೇ ಇವೆ. ಅದೇ ರೀತಿ ಈಗ ಯುವಕನೋರ್ವ ಹಾವಿನ ಹೆಡೆಗೆ ಹಿಂದಿನಿಂದ ಮುತ್ತಿಕ್ಕಿದ್ದು, ಇದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾನೆ.
ಇನ್ಸ್ಟಾಗ್ರಾಮ್‌ನಲ್ಲಿ nickthewrangler ಎಂಬ ಖಾತೆ ಹೊಂದಿರುವಾತ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ಆತನ ಇನ್ಸ್ಟಾ ಖಾತೆಯಲ್ಲಿ ಇಂತಹ ನೂರಾರು ವೀಡಿಯೋಗಳಿವೆ. ಆತ ತನ್ನ ಬಯೋದಲ್ಲಿ ಪ್ರಾಣಿಗಳು ಹಾಗೂ ಸರೀಸೃಪಗಳ ಚಟ (Animal and Reptile Addict) ಹೊಂದಿರುವವ ಎಂದು ಬರೆದುಕೊಂಡಿದ್ದು, ಅದರಂತೆ ಆತ ಹಾವುಗಳೊಂದಿಗೆ ಹಾಗೂ ಇತರ ಸರೀಸೃಪಗಳೊಂದಿಗೆ ಇರುವ ಸಾವಿರಾರು ವೀಡಿಯೋಗಳು ಆತನ ಇನ್ಸ್ಟಾ ಪೇಜ್‌ನಲ್ಲಿದೆ. ನಾವು ಈಗ ತೋರಿಸುತ್ತಿರುವ ವೀಡಿಯೋದಲ್ಲಿ ನಿಕ್ 12 ಅಡಿ ಎತ್ತರದ ಹಾವಿನ ಹೆಡೆಗೆ ಮುತ್ತಿಕ್ಕಿದ್ದಾನೆ. ಹಾವನ್ನು ಹಿಂಬದಿಯಿಂದ ಸಲೀಸಾಗಿ ಹಿಡಿದ ಆತ ಹಾವಿಗೆ ಮುತ್ತಿಕ್ಕಿದ್ದು, ಹಾವು ಏನು ಮಾಡದೇ ಸುಮ್ಮನಾಗಿದೆ.
ಹಾವನ್ನೇ ಹಗ್ಗದಂತೆ ಬಳಸಿ ಹೊಡೆದಾಟ: ಯುವಕನ ಜೈಲಿಗಟ್ಟಿದ ಪೊಲೀಸರು
ನೀವು 12 ಅಡಿಯ ಕಿಂಗ್ ಕೋಬ್ರಾಗೆ ಕಿಸ್ ಮಾಡುವಿರಾ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಈ ವೀಡಿಯಯೋವನ್ನು 4 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಅನೇಕರು ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ನಿಕ್ ಬಗ್ಗೆ ಕಾಳಜಿ ತೋರಿದ್ದಾರೆ. ಮತ್ತೆ ಕೆಲವರು ಕಾಮೆಂಟ್ ಮಾಡಿದ್ದು, ನೀವು ಹಾವನ್ನು ಬಹಳ ಸಲೀಸಾಗಿ ಹ್ಯಾಂಡಲ್ ಮಾಡುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ನಮಗೆ ನಿಮ್ಮನ್ನು ವೈಯಕ್ತಿಕವಾಗಿ ತಿಳಿದಿಲ್ಲ. ಆದರೂ ನಿಮ್ಮ ಸುರಕ್ಷತೆಯ ಬಗ್ಗೆ ಯೋಚನೆಯಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕಾರೊಳಗೆ ಅಡಗಿದ್ದ 15 ಅಡಿ ಉದ್ದದ ನಾಗರ ಹಾವು: ರಕ್ಷಿಸಿ ಕಾಡಿಗೆ ಬಿಟ್ಟ ಉರಗತಜ್ಞ
ಒಟ್ಟಿನಲ್ಲಿ ಹಾವು ಎಂದರೆ ಒಂದಷ್ಟು ಜನ ಕಾಲಿಗೆ ಬುದ್ಧಿ ಹೇಳಿದ್ರೆ, ಇಂತಹ ಕೆಲವರು ಹಾವಿಗೆ ಮುತ್ತಿಕ್ಕುವ ಕೆಲಸ ಮಾಡುತ್ತಿದ್ದು, ವಿಚಿತ್ರವೆನಿಸುತ್ತಿದೆ