ಪೆಟ್ರೋಲ್ ಬಂಕ್ ಸಿಬ್ಬಂದಿ ಮಗಳ ಸಾಧನೆಗೆ ಮೆಚ್ಚುಗೆ ಪೆಟ್ರೋಲ್ ಹಾಕುವಾತನ ಮಗಳಿಗೆ ಐಐಟಿಯಲ್ಲಿ ಸೀಟ್

ದೆಹಲಿ(ಅ.09): ಸಾಧನೆ ಮಾಡಲು ಹೊರಟವರಿಗೆ ಸಬೂಬುಗಳಿಲ್ಲ ಎಂಬಂತೆ ಕೇರಳದ(Kerala) ಯುವತಿಯ ಸಾಧನೆ ಮಾದರಿಯಾಗಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿ ಮಗಳು ಮಾಡಿದ ಸಾಧನೆಗೆ ಈಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇಂಡಿಯನ್ ಆಯಿಲ್ ಚೇರ್‌ಮ್ಯಾನ್ ಶ್ರೀಕಾಂತ್ ಮಾಧವ್ ವೈದ್ಯ ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದರು. ಈ ಫೋಟೋ ವೈರಲ್ ಆಗಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಂಡಿಯನ್ ಆಯಿಲ್‌ನಲ್ಲಿ(Indian Oil) ಕೆಲಸ ಮಾಡುವ ಕೆಲಸಗಾರನ ಮಗಳಿಗೆ ಐಐಟಿಯಲ್ಲಿ(IIT) ಸೀಟ್ ಸಿಕ್ಕಿದ್ದು ಪೆಟ್ರೋಲ್ ಬಂಕ್‌ನಲ್ಲಿ ತಂದೆಯೊಂದಿಗೆ ಮಗಳು ನಿಂತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.

ತಂದೆಯ ಕನಸು ನನಸು ಮಾಡಿದ ಪುತ್ರ: ಯುಪಿಎಸ್ಸಿಯಲ್ಲಿ ಹುಬ್ಳಿ ಹುಡುಗನ ಸಾಧನೆ..!

ಕೇರಳದ ಆರ್ಯ ಇಂಡಿಯನ್ ಆಯಿಲ್‌ನಲ್ಲಿ ಕಸ್ಟಮರ್ ಎಟೆಂಡೆಂಟ್ ಎಸ್ ರಾಜಗೋಪಾಲನ್ ಅವರ ಮಗಳು. ಕಣ್ಣೂರಿನ ಪಯ್ಯನ್ನೂರು ಪೆಟ್ರೋಲ್ ಬಂಕ್‌ನಲ್ಲಿ ಕಳೆದ 20 ವರ್ಷಗಳಿಂದ ರಾಜಗೋಪಾಲನ್ ಕೆಲಸ ಮಾಡುತ್ತಿದ್ದು ಆರ್ಯನ ಅಮ್ಮ ಕೆಕೆ ಶೋಭಾನಾ ಬಜಾಜ್ ಮೋಟರ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ಆರ್ಯ ಐಐಟಿ ಕಾನ್ಪುರದಲ್ಲಿ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಮಾಡಲಿದ್ದಾರೆ ಎನ್ನಲಾಗಿದೆ.

Scroll to load tweet…

ಇಂಡಿಯನ್ ಆಯಿಲ್ ಕಸ್ಟಮರ್ ಎಟೆಂಡೆಂಟ್ ರಾಜಗೋಪಾಲನ್ ಅವರ ಮಗಳು ಆರ್ಯಾಳ ಪ್ರೇರಣಾದಾಯಕವಾದ ಕಥೆಯನ್ನು ಹಂಚಿಕೊಳ್ಳುತ್ತಿದ್ದೇನೆ. ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆದು ಆರ್ಯ ನಮಗೆ ಹೆಮ್ಮೆ ತಂದಿದ್ದಾಳೆ. ನಿನ್ನ ಮುಂದಿನ ಪಯಣಕ್ಕೆ ಅಲ್‌ ದಿ ಬೆಸ್ಟ್ ಆರ್ಯ ಎಂದು ವೈದ್ಯ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ 14 ಸಾವಿರ ಲೈಕ್ಸ್ ಬಂದಿದ್ದು 1574 ರೀಟ್ವೀಟ್ ಆಗಿದೆ.

ವಯಸ್ಸು ಕೇವಲ 7, ಸಾಧನೆ ಬಾನೆತ್ತರ; ಕೊಡಗಿನ ಕುವರ ಚೆಸ್ ಚಾಂಪಿಯನ್!

ಶೀಘ್ರದಲ್ಲೇ, ಟ್ವೀಟ್ ವೈರಲ್ ಆಗಿದ್ದು, ನೆಟ್ಟಿಗರು ಆರ್ಯಳ ಸಾಧನೆ ಶ್ಲಾಘಿಸಿದ್ದಾರೆ. ಆರ್ಯ ಅವರ ಪ್ರವೇಶಕ್ಕೆ ಅಭಿನಂದಿಸಿದ್ದಾರೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ಆರ್ಯ ಅವರ ಶ್ರಮವನ್ನು ಪ್ರಶಂಸಿದ್ದಾರೆ.

ಆರ್ಯ ರಾಜಗೋಪಾಲ್ ತನ್ನ ತಂದೆಯಾದ ಶ್ರೀ ರಾಜಗೋಪಾಲ್ ಜಿ ಮಾತ್ರವಲ್ಲ ದೇಶದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿರುವ ನಮಗೆಲ್ಲರಿಗೂ ಹೆಮ್ಮೆ ತಂದಿದ್ದಾರೆ ಎಂದಿದ್ದಾರೆ.