Asianet Suvarna News Asianet Suvarna News

Teenage: ಈ ಕಾರಣಕ್ಕೆ ಕನ್ಯತ್ವ ಪೊರೆ ಕಳೆದುಕೊಂಡ 12 ವರ್ಷದ ಹುಡುಗಿ!

ಕನ್ಯತ್ವ ಪೊರೆ ಕಳೆದುಕೊಳ್ಳೋದು ಅಂದ್ರೆ ಕನ್ಯತ್ವ ಕಳೆದುಕೊಂಡಿದ್ದಾರೆ ಎಂದಲ್ಲ. ಅನೇಕ ಬಾರಿ ಸೈಕ್ಲಿಂಗ್ ಸೇರಿದಂತೆ ಬೇರೆ ಕಾರಣಕ್ಕೆ ಕೂಡ ಕನ್ಯತ್ವ ಪೊರೆ ಹರಿಯುತ್ತದೆ. 12 ವರ್ಷದ ಈ ಹುಡುಗಿಗೆ ಕನ್ಯತ್ವ ಪೊರೆ ಹರಿಯಲು ಕಾರಣವಾದ ವಸ್ತು ಕೇಳಿ ತಾಯಿ ಬೇಸರದಲ್ಲಿದ್ದಾಳೆ.  
 

Daughter Broke Her Hymen With A Tampon teenage issues to be addressed
Author
First Published Sep 3, 2022, 11:07 AM IST

ಮಕ್ಕಳು ಚಿಕ್ಕವರಿದ್ದಾಗ ಅವರ ಆಹಾರ, ಅವರ ಆರೈಕೆ ಕಷ್ಟವೆನ್ನಿಸುತ್ತೆ ನಿಜ. ಅನೇಕ ಪಾಲಕರು ಮಕ್ಕಳು ದೊಡ್ಡವರಾದ್ರೆ ಸಾಕು ಎಂದುಕೊಳ್ತಾರೆ. ಆದ್ರೆ ಹದಿಹರೆಯಕ್ಕೆ ಬರ್ತಿರುವ ಮಕ್ಕಳನ್ನು ನೋಡಿಕೊಳ್ಳುವುದು ಚಿಕ್ಕ ಮಕ್ಕಳನ್ನು ನೋಡಿಕೊಂಡಿದ್ದಕ್ಕಿಂತ ಕಷ್ಟ. ಯಾಕೆಂದ್ರೆ ಮಕ್ಕಳ ಬುದ್ಧಿ ಬೆಳವಣಿಗೆ ಆಗ್ತಿರುತ್ತದೆ. ಅನೇಕ ವಿಷ್ಯವನ್ನು ಮಕ್ಕಳು ಪಾಲಕರಿಗೆ ಹೇಳೋದಿಲ್ಲ. ಸ್ವಂತ ನಿರ್ಧಾರ ತೆಗೆದುಕೊಳ್ಳೋದ್ರಲ್ಲಿ ಅವರು ಉತ್ಸುಕರಾಗಿರ್ತಾರೆ. ಆತುರದಲ್ಲಿ ಮಕ್ಕಳು ಕೆಲ ಯಡವಟ್ಟುಗಳನ್ನು ಮಾಡಿಕೊಳ್ತಾರೆ. ಮಕ್ಕಳ ಕೆಲಸ ಪಾಲಕರ ಟೆನ್ಷನ್ ಜಾಸ್ತಿ ಮಾಡುತ್ತೆ. ಆ ವಯಸ್ಸಿನ ಮಕ್ಕಳಿಗೆ ಹೊಡೆಯಲು ಸಾಧ್ಯವಿಲ್ಲ. ಗದರಲು ಭಯ. ಯಾಕೆಂದ್ರೆ ಮಕ್ಕಳು ಏನು ಬೇಕಾದ್ರೂ ಮಾಡ್ಬಹುದು ಎಂಬ ಆತಂಕ ಪಾಲಕರಲ್ಲಿ ಇರುತ್ತದೆ. ಪ್ರೀತಿಯಿಂದ ತಿದ್ದಿ ಹೇಳುವ ತಾಳ್ಮೆ ಪಾಲಕರಿಗೆ ಇರೋದಿಲ್ಲ. ಅದನ್ನು ಶಾಂತಿಯಿಂದ ಕೇಳುವ ಸೌಜನ್ಯ ಮಕ್ಕಳಿಗೆ ಇರೋದಿಲ್ಲ. ಮಹಿಳೆಯೊಬ್ಬಳು ತನ್ನ ಮಗಳು ಮಾಡಿರುವ ಯಡವಟ್ಟನ್ನ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ. ಮಗಳು ತಿಳಿಯದೆ ಕನ್ಯತ್ವ ಕಳೆದುಕೊಂಡಿದ್ದಾಳೆಂದು ಮಹಿಳೆ ಬರೆದಿದ್ದಾಳೆ. 

ಮಹಿಳೆ ಪ್ರಕಾರ ಆಕೆ ಸಹೋದರಿ ಲಿವ್, ಒಂದು ವರ್ಷದ ಹಿಂದೆ ಮಹಿಳೆ ಮನೆಗೆ ಬಂದಿದ್ದಳಂತೆ.  ಈ ಸಂದರ್ಭದಲ್ಲಿ ಲಿವ್ ಹಾಗೂ ಮಹಿಳೆಯ 12 ವರ್ಷದ ಮಗಳು ಹಾನಾ ಜೊತೆ ಮುಟ್ಟಿ (Period) ಗೆ ಸಂಬಂಧಿಸಿದಂತೆ ಚರ್ಚೆ ನಡೆದಿತ್ತಂತೆ. ಆಗಷ್ಟೆ ಹಾನಾ ದೊಡ್ಡವಳಾಗಿದ್ದಳಂತೆ. ಹಾಗಾಗಿ ಇದ್ರ ಬಗ್ಗೆ ಲಿವ್ ಒಂದಿಷ್ಟು ಮಾಹಿತಿ ನೀಡಿದ್ದಳಂತೆ. ಈ ವೇಳೆ ಲಿವ್, ಹಾನಾಗೆ ಟ್ಯಾಂಪೋನ್ (Tampoon) ಬಳಸುವಂತೆ ಸಲಹೆ ನೀಡಿದ್ದಳಂತೆ. ಟ್ಯಾಂಪೋನ್ (Tampon) ಬಳಕೆ ಮಾಡುವುದು ಬಹಳ ಒಳ್ಳೆಯದು. ಹಾಗೆ ಅದನ್ನು ಬಳಸುವುದು ಸುಲಭವೆಂದು ಲಿವ್, ಹಾನಾಗೆ ಹೇಳಿದ್ದಳಂತೆ. ಬೇಸಿಗೆ ಸಮಯದಲ್ಲಿ ಟ್ಯಾಂಪೋನ್ ಹೆಚ್ಚು ಆರಾಮ ನೀಡುತ್ತೆ ಎಂಬ ಮಾಹಿತಿ ನೀಡಿದ್ದಳಂತೆ.

ಎಲ್ಲ ಮಾತುಗಳನ್ನು ಕೇಳಿದ ಹಾನಾ, ಟ್ಯಾಂಪೋನ್ ಬಳಕೆಗೆ ಒಪ್ಪಿಗೆ ನೀಡಿದ್ದಳಂತೆ. ಟ್ಯಾಂಪೋನ್ ಬಳಕೆ ವೇಳೆ ಆಕೆಯ ಕನ್ಯತ್ವ ಪೊರೆ (Hymen) ಹರಿದಿದೆಯಂತೆ. ಘಟನೆ ನಡೆದು ಒಂದು ವಾರದ ನಂತ್ರ ಇಬ್ಬರೂ ಈ ಬಗ್ಗೆ ಮಹಿಳೆಗೆ ಹೇಳಿದ್ದರಂತೆ. ಕನ್ಯತ್ವದ ಪೊರೆ (Hymen) ಮಹತ್ವದ್ದು ಎಂಬುದನ್ನು ಅರಿತಿದ್ದ ಹಾನಾ, ತಾಯಿಗೆ ಇದನ್ನು ಹೇಳಿದ್ದಳಂತೆ. ಟ್ಯಾಂಪೋನ್ ಬಳಕೆ ವೇಳೆ ನನಗೆ ತುಂಬಾ ನೋವಾಗಿದೆ. ನನ್ನ ಕನ್ಯತ್ವ ಪೊರೆ ಹರಿದಿದೆ ಎಂದು ಹಾನಾ ತಾಯಿಗೆ ಹೇಳಿದ್ದಳಂತೆ.

ಮುಟ್ಟಿನ ನಂತ್ರ ಕಾಡುವ ಯೋನಿ ತುರಿಕೆಗೆ ಇಲ್ಲಿದೆ ಮನೆ ಮದ್ದು

ಮಗಳ  ಈ ಮಾತು ಕೇಳಿ ಮಹಿಳೆಗೆ ಸಹೋದರಿ ಮೇಲೆ ಕೋಪ ಬಂದಿತ್ತಂತೆ. ಟ್ಯಾಂಪೋನ್ ಬಳಕೆ ಮಾಡುವ ಮೊದಲು ಸಹೋದರಿ ನನಗೆ ಹೇಳ್ಬೇಕಿತ್ತು. ಮಗಳು ದೇಹದೊಳಗೆ ಏನು ಹಾಕ್ತಿದ್ದಾಳೆ ಎಂಬುದು ನನಗೆ ಮೊದಲೇ ತಿಳಿಯಬೇಕಿತ್ತು ಎನ್ನುತ್ತಾಳೆ ಮಹಿಳೆ. ನನಗೆ ಗೊತ್ತು ಈಗಿನ ದಿನಗಳಲ್ಲಿ ಕನ್ಯತ್ವ ಪೊರೆ ಬಗ್ಗೆ ಮಾತನಾಡಿದ್ರೆ ಎಲ್ಲರೂ ನಗ್ತಾರೆ. ಆದ್ರೆ ನನಗೆ ಅದು ಮುಖ್ಯ. ನನ್ನ ಮಗಳು ಮದುವೆಯಾಗುವವರೆಗೆ ಇಲ್ಲವೆ ಒಂದು ಸುರಕ್ಷಿತ ಸಂಬಂಧದಲ್ಲಿ ಬಂಧಿಯಾಗುವವರೆಗೆ ಕನ್ಯೆಯಾಗಿರಬೇಕೆಂದು ಬಯಸಿದ್ದೆ. ಬರೀ ಲೈಂಗಿಕ ಸಂಬಂಧದಿಂದ ಮಾತ್ರವಲ್ಲ ಬೇರೆ ಕಾರಣಗಳಿಂದಲೂ ಕನ್ಯತ್ವ ಪೊರೆ ಹರಿಯುತ್ತದೆ ಎನ್ನುವುದು ನನಗೆ ಗೊತ್ತಿತ್ತು. ಆದ್ರೆ ನನ್ನ ಮಗಳ ವಿಷ್ಯದಲ್ಲಿ ಇದಾಗಬಾರದು ಎಂದು ನಾನು ಬಯಸಿದ್ದೆ ಎನ್ನುತ್ತಾಳೆ ಮಹಿಳೆ. ನಾನೆಷ್ಟೆ ಸಪೋರ್ಟಿಂಗ್ ಅಮ್ಮನಾಗಿದ್ರೂ ನನಗೆ ಒಂದಿಷ್ಟು ಆಸೆ ಇರುತ್ತದೆ ಎನ್ನುತ್ತಾಳೆ ಮಹಿಳೆ.

WomanHealth: ಬ್ರಾ ಧರಿಸದೇ ಇರೋದ್ರಿಂದ ಏನೇನು ಆಗುತ್ತೆ ಗೊತ್ತಾ?

ಇದೇ ವಿಷ್ಯಕ್ಕೆ ಸಹೋದರಿ ಜೊತೆ ಜಗಳ ನಡೆದಿತ್ತಂತೆ. ಅನೇಕ ದಿನಗಳ ಕಾಲ ಇಬ್ಬರು ಮಾತನಾಡಿರಲಿಲ್ಲವಂತೆ. ಮಗಳು ಮಧ್ಯ ಪ್ರವೇಶ ಮಾಡಿ ಎಲ್ಲವನ್ನೂ ಸರಿ ಮಾಡಿದ್ದಳಂತೆ. ಲೀವ್ ಹೇಳದೆ ಹೋದ್ರೂ ನಾನು ಟ್ಯಾಂಫೋನ್ ಬಳಕೆ ಮಾಡ್ತಿದ್ದೆ. ನನಗೆ ಪ್ಯಾಡ್ ಬಳಕೆ ಕಷ್ಟವಾಗ್ತಿದೆ ಎಂದು ಹಾನಾ ಹೇಳಿದ್ದಳಂತೆ. 
 

Follow Us:
Download App:
  • android
  • ios