Asianet Suvarna News Asianet Suvarna News

5 ಕೋಟಿ ಬೆಲೆ ಬಾಳೋ ಇಂಥ ಹಾಸಿಗೆ ಮೇಲೆಯೇ ಸೆಲೆಬ್ರಿಟಿಗಳು ಮಲಗೋದು!

ಕೋಟಿ ಕೋಟಿ ಹಣ ಇರೋರಿಗಾಗಿಯೇ ಕೆಲ ಐಷಾರಾಮಿ ವಸ್ತುಗಳು ಸಿದ್ಧವಾಗ್ತವೆ. ಕೆಲವರು ಎಷ್ಟೇ ಹಣವಿದ್ರೂ ಬಟ್ಟೆ, ಹಾಸಿಗೆಗೆ ಹೆಚ್ಚು ಖರ್ಚು ಮಾಡೋದಿಲ್ಲ. ಮತ್ತೆ ಕೆಲವರು ಬೆಲೆ ನೋಡೋದಿಲ್ಲ. ಅವರಿಗೆ ಹೇಳಿ ಮಾಡಿಸಿದಂತಿದೆ ಈ ದುಬಾರಿ ಬೆಡ್.
 

Sweden Company Bed Sold Five Crores Hollywood Celebrities Beyonce Tom Cruise Use It roo
Author
First Published Oct 11, 2023, 5:37 PM IST

ಜೀವನದ ಬಹುದೊಡ್ಡ ಆಸೆ ಅಂದ್ರೆ ಬಹುತೇಕರಿಗೆ ಮನೆ. ಸಾಯುವ ಮುನ್ನ ಸ್ವಂತ ಸೂರೊಂದು ಕಟ್ಟಬೇಕು ಎಂದುಕೊಳ್ತಾರೆ. ಅಷ್ಟು ದೊಡ್ಡ ಆಸೆ ಈಡೇರಿಸಲೂ ಒಂದು ಕೋಟಿಗಿಂತ ಹೆಚ್ಚು ಹಣ ಹೂಡಿಕೆ ಮಾಡಲು ಜನರು ಮನಸ್ಸು ಮಾಡೋದಿಲ್ಲ. ಇನ್ನು ಪದೇ ಪದೇ ಬದಲಿಸುವ ಬೆಡ್ ಗೆ ಯಾರು ಹೆಚ್ಚು ಬೆಲೆ ಕೊಟ್ಟು ಖರೀದಿ ಮಾಡ್ತಾರೆ ಹೇಳಿ? ಹಣವುಳ್ಳವರು ಕೂಡ ಒಂದ ಲಕ್ಷಕಿಂತ ಹೆಚ್ಚು ಬೆಲೆಯ ಹಾಸಿಗೆ ಖರೀದಿ ಮಾಡೋದು ಅನುಮಾನ. ಹಾಗಿರುವಾಗ ಒಂದು ಬೆಡ್ ಗೆ 5ಕೋಟಿ ನೀಡುವವರೂ ಇದ್ದಾರೆ ಅಂದ್ರೆ ನೀವು ನಂಬುತ್ತೀರಾ?. ನಂಬ್ಲೇಬೇಕು. 660,000 ಡಾಲರ್ ಅಂದ್ರೆ ಸುಮಾರು 5 ಕೋಟಿ ಬೆಡ್ ಇದು. ಅದರ ವಿಶೇಷ ಏನು? ಅದನ್ನೂ ಖರೀದಿ ಮಾಡ್ತಾರಾ ಎನ್ನುವ ಮಾಹಿತಿ ಇಲ್ಲಿದೆ. 

5 ಕೋಟಿ ಮೌಲ್ಯದ ಬೆಡ್ ( Bed) ತಯಾರಿಸಿದ್ದು ಯಾರು? : ಇಷ್ಟು ದುಬಾರಿ ಹಾಸಿಗೆಯನ್ನು ಸ್ವೀಡಿಷ್ (Swedish) ಹಾಸಿಗೆ ಮಾರಾಟಗಾರ ಹೆಸ್ಟೆನ್ಸ್ ಹ್ಯಾಂಡಿಕ್ರಾಫ್ಟ್ ಹಾಸಿಗೆ ಬಿಡುಗಡೆ ಮಾಡಿದೆ. ಹೆಸ್ಟೆನ್ಸ್ ಈ ಹಾಸಿಗೆಯನ್ನು  ಸ್ಲೀಪ್ ಇನ್ಸ್ಟ್ರುಮೆಂಟ್  ಎಂದು ಕರೆದಿದೆ. ಐದು ಕೋಟಿ ಬೆಲೆಯಾದ್ರೂ ಈ ಹಾಸಿಗೆಯನ್ನು ಕೆಲವರು ಖರೀದಿ ಮಾಡಿದ್ದಾರೆ. ಅದರಲ್ಲಿ  ಬೆಯೋನ್ಸ್, ಬ್ರಾಡ್ ಪಿಟ್, ಡ್ರೇಕ್, ಟಾಮ್ ಕ್ರೂಸ್ ಮತ್ತು ಏಂಜಲೀನಾ ಜೋಲೀ ಸೇರಿದ್ದಾರೆ. 

ಟೆಕ್‌ ಉದ್ಯಮಕ್ಕೆ ಸೆಡ್ಡು ಹೊಡೆದ 16 ವರ್ಷದ ಭಾರತೀಯ ಬಾಲೆ, 2022ರಲ್ಲಿ ಸ್ಥಾಪಿಸಿದ ಕಂಪೆನಿ ಈಗ 100 ಕೋಟಿ ಮೌಲ್ಯ

ಕುದುರೆ ಕೂದಲಿನಿಂದ ತಯಾರಾಗಿದೆ ಈ ಹಾಸಿಗೆ : ಈ ಹಾಸಿಗೆ ವಿಶೇಷವೆಂದ್ರೆ ಇದನ್ನು ಕುದುರೆ ಕೂದಲಿನಿಂದ ತಯಾರಿಸಲಾಗಿದೆ. ಈ ಹಾಸಿಗೆಗೆ 25 ವರ್ಷಗಳ ಗ್ಯಾರಂಟಿ ನೀಡಲಾಗಿದೆ. ಈ ಹಾಸಿಗೆಯ ಎಲ್ಲ ಬೆಲೆ ಒಂದೇ ಆಗಿಲ್ಲ. ಬೇರೆ ಬೇರೆ ಮಾಡೆಲ್ ಬೆಲೆ ಬೇರೆ ಬೇರೆಯಾಗಿದೆ. ಈ ಬೆಡ್ ನ ಆರಂಭಿಕ ಬೆಲೆ 25 000 ಡಾಲರ್ ಅಂದ್ರೆ ಸುಮಾರು 2 ಕೋಟಿ ರೂಪಾಯಿಯಿಂದ ಶುರುವಾಗುತ್ತದೆ. ಇದನ್ನು ಮೊದಲ ಬಾರಿ 1852 ರಲ್ಲಿ ಸ್ವೀಡನ್‌ನ ವೆಸ್ಟ್‌ಮನ್‌ಲ್ಯಾಂಡ್ ಕೌಂಟಿಯ ಕೋಪಿಂಗ್‌ನಲ್ಲಿ ತಯಾರಿಸಲಾಗಿತ್ತು.  ಇಷ್ಟು ದೊಡ್ಡ ಮಟ್ಟದಲ್ಲಿ ಬೆಲೆ ನೀಡಿ ಹಾಸಿಗೆ ಖರೀದಿ ನೀಡುವ ಗ್ರಾಹಕರು ಖುಷಿಯಾಗಿರಬೇಕು ಎನ್ನುವ ಕಾರಣಕ್ಕೆ ಹೆಸ್ಟೆನ್ಸ್ ಟ್ರಾಯಲ್ ಅವಕಾಶ ನೀಡುತ್ತದೆ. ಜನರು ಇದ್ರಲ್ಲಿ ಅನೇಕ ವರ್ಷ ಮಲಗುವ ಕಾರಣ ಟ್ರಾಯಲ್ ಮಾಡಲು ನಾವು ಅವಕಾಶ ನೀಡ್ತೇವೆ ಎಂದು ಕಂಪನಿ ಹೇಳಿದೆ. ಅಮೆರಿಕಾದ ವಿವಿಧೆಡೆ ಇರುವ ಕಂಪನಿ ಅಂಗಡಿಗಳಲ್ಲಿ ಟ್ರಾಯಲ್ ಗೆ ಅವಕಾಶ ನೀಡಲಾಗುತ್ತದೆ. 

ಫ್ರೆಂಚ್ ಅರಮನೆಯಲ್ಲಿ ನಡೆದ ಭಾರತೀಯ ಉದ್ಯಮಿ ಮಗಳ ಅದ್ಧೂರಿ ಮದುವೆ ಗಿನ್ನೆಸ್‌ ರೆಕಾರ್ಡ್‌ಗೆ ಸೇರ್ಪಡೆ!

ಗ್ರಾಹಕರನ್ನು  ಡಾರ್ಕ್, ಲ್ಯಾವೆಂಡರ್ ಪರಿಮಳದ ಶೋರೂಮ್ ಗೆ ಕರೆದೊಯ್ಯಲಾಗುತ್ತದೆ. ಹಾಸಿಗೆ ಮೇಲೆ ಕುಳಿತುಕೊಳ್ಳುವ ಮೊದಲು,  ಹಾಸಿಗೆಗೆ ನಮಸ್ಕಾರ ಹೇಳುವಂತೆ ಹೇಳ್ತಾರೆ. ಹಾಸಿಗೆ ಮೇಲೆ ಮಲಗಿದಾಗ ನೀವು ಯಾವೆಲ್ಲ ವಿಷ್ಯವನ್ನು ಗಮನಿಸಬೇಕು ಎಂಬುದನ್ನು ಕೂಡ ಹೇಳಲಾಗುತ್ತದೆ. ಇದು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಅದನ್ನು ಖರೀದಿಸಿದ ನಂತರ, ವಿಶೇಷ ನಿರ್ವಹಣೆ ಅಗತ್ಯ. ನಿಮ್ಮ ಹಾಸಿಗೆಯನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳಲು, ಅದನ್ನು ಸ್ವಲ್ಪ ಸಮಯದವರೆಗೆ 180 ಡಿಗ್ರಿಗಳಷ್ಟು ತಿರುಗಿಸಬೇಕು.

ಬಾಡಿಗೆಗೆ ಸಿಗುವ ಈ ಬೆಡ್ ಬೆಲೆ ಒಂದು ರಾತ್ರಿಗೆ ೮ ಲಕ್ಷ ರೂಪಾಯಿ : ಕಂಪನಿ ಈ ಹಾಸಿಗೆಯನ್ನು ಬಾಡಿಗೆಗೂ ನೀಡುತ್ತದೆ. ಲಂಡನ್ ನ  ಲ್ಯಾಂಗ್‌ಹ್ಯಾಮ್‌ನಲ್ಲಿರುವ ಇನ್ಫಿನಿಟಿ ಸೂಟ್ ಹೊಟೇಲ್ ನಲ್ಲಿ ಹಸ್ಟೆನ್ಸ್‌ನ 2000T ಹಾಸಿಗೆ ಇದೆ. ಈ ಹೋಟೆಲ್‌ನಲ್ಲಿ  ಅತಿಥಿಗಳು ಮೂರು ವಿಭಿನ್ನ ಹೆಸ್ಟೆನ್ಸ್ ಬೆಡ್‌ಗಳಲ್ಲಿ ಮಲಗಬಹುದು. ಇಲ್ಲಿನ ವೆಚ್ಚ ಪ್ರತಿ ರಾತ್ರಿಗೆ 8 ಲಕ್ಷ ರೂಪಾಯಿ. 
 

Follow Us:
Download App:
  • android
  • ios