Women Health: ಮುಟ್ಟಿಗೂ ಹಸ್ತಮೈಥುನಕ್ಕೂ ಸಂಬಂಧವಿದ್ಯಾ?
ಅನೇಕ ಮಹಿಳೆಯರಿಗೆ ಸಮಯಕ್ಕೆ ಸರಿಯಾಗಿ ಮುಟ್ಟಾಗೋದಿಲ್ಲ. ಪಿರಿಯಡ್ಸ್ ಪ್ರಾಬ್ಲಂಗೆ ಹಸ್ತಮೈಥುನ ಕೂಡ ಕಾರಣ ಎನ್ನುವ ಮಾತಿದೆ. ಆದ್ರೆ ಹಸ್ತಮೈಥುನ ಮಾಡಿದ್ರೆ ಮುಟ್ಟು ಮುಂದೆ ಹೋಗುತ್ತಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಹಸ್ತಮೈಥುನದ ಹೆಸರು ಕೇಳ್ತಿದ್ದಂತೆ ಕೆಲವರು ಮುಖ ಮುಚ್ಚಿಕೊಳ್ತಾರೆ. ಆದ್ರೆ ಹಸ್ತಮೈಥುನ ಸಾಮಾನ್ಯ ವಿಷ್ಯ. ಪುರುಷರು ಮಾತ್ರವಲ್ಲ ಮಹಿಳೆಯರೂ ಆರೋಗ್ಯ ದೃಷ್ಟಿಯಿಂದ ಹಾಗೂ ವಿಶ್ರಾಂತಿಗಾಗಿ ಹಸ್ತಮೈಥುನ ನೆರವು ಪಡೆಯಬಹುದು. ಹಸ್ತಮೈಥುನದ ಬಗ್ಗೆ ಸಾರ್ವಜನಿಕವಾಗಿರಲಿ ವೈದ್ಯರ ಬಳಿ ಕೂಡ ಜನರು ಮಾತನಾಡುವುದಿಲ್ಲ. ಇದರ ಬಗ್ಗೆ ಸಮಾಜದಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಹಸ್ತಮೈಥುನ ಮಾಡಿದ್ರೆ ಮಹಿಳೆಯರ ಮುಟ್ಟು ತಡವಾಗುತ್ತೆ ಎಂಬ ನಂಬಿಕೆಯೂ ಇದೆ. ಇಂದು ನಾವು ಹಸ್ತಮೈಥುನ ಹಾಗೂ ಮುಟ್ಟಿಗೆ ಯಾವ ಸಂಬಂಧವಿದೆ ಎಂಬುದನ್ನು ಹೇಳ್ತೇವೆ.
ಹಸ್ತಮೈಥುನ (Masturbation) ಆರೋಗ್ಯಕ್ಕೆ ಒಳ್ಳೆಯದು : ಹೌದು, ಹಸ್ತಮೈಥುನ ಆರೋಗ್ಯಕ್ಕೆ ಒಳ್ಳೆಯದು. ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ಹಸ್ತಮೈಥುನ ಒತ್ತಡ (Stress) ವನ್ನು ಕಡಿಮೆ ಮಾಡುತ್ತದೆ. ತಲೆನೋವು ಸಮಸ್ಯೆಯನ್ನು ನಿವಾರಿಸುವ ಕೆಲಸ ಮಾಡುತ್ತದೆ. ನಮ್ಮ ದೇಹವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹಸ್ತಮೈಥುನ ನೆರವಾಗುತ್ತದೆ. ಹಸ್ತಮೈಥುನಕ್ಕೆ ನಮ್ಮನ್ನ ಈಸ್ಟ್ರೊಜೆನ್ (Estrogen ) ಹೆಸರಿನ ಹಾರ್ಮೋನ್ ಪ್ರೇರೇಪಿಸುತ್ತದೆ. ಈ ಈಸ್ಟ್ರೊಜೆನ್ ಹಾರ್ಮೋನ್, ಒತ್ತಡಕ್ಕೆ ಕಾರಣವಾಗಿರುವ ಕಾರ್ಟಿಸೋಲ್ ಹಾರ್ಮೋನ್ ಅನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಹಾಗಾಗಿ ಹಸ್ತಮೈಥುನದಿಂದ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ಮನಸ್ಸು ಆರಾಮವಾಗಿರಲು ನೆರವಾಗುತ್ತದೆ.
ಮಹಿಳೆಯರೇ ಗರ್ಭ ನಿರೋಧಕ ಮಾತ್ರೆ ಸೇವಿಸ್ತೀರಾ , ಸ್ತನ ಹಿಗ್ಗುವಿಕೆ ಸಮಸ್ಯೆನೂ ಕಾಡ್ಬೋದು ಎಚ್ಚರ..!
ಮುಟ್ಟು (Periods) ಹಾಗೂ ಹಸ್ತಮೈಥುನ : ಅನೇಕ ಮಹಿಳೆಯರಿಗೆ ಮುಟ್ಟು ಸರಿಯಾದ ಸಮಯಕ್ಕೆ ಆಗುವುದಿಲ್ಲ. ಇದಕ್ಕೆ ಅನೇಕ ಕಾರಣವಿದೆ. ಆದ್ರೆ ಕೆಲವರು ಹಸ್ತಮೈಥುನದಿಂದ ಮುಟ್ಟು ಮುಂದೂಡಲ್ಪಡ್ತಿದೆ ಎಂದು ಭಾವಿಸ್ತಾರೆ. ಆದ್ರೆ ಅದು ತಪ್ಪು ಕಲ್ಪನೆ ಎನ್ನುತ್ತಾರೆ ತಜ್ಞರು. ಹಸ್ತಮೈಥುನಕ್ಕೂ ಮತ್ತು ಮುಟ್ಟು ಮುಂದೆ ಹೋಗಲು ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ. ಹಸ್ತಮೈಥುನದಿಂದ ಮುಟ್ಟು ಮುಂದೆ ಹೋಗಿದೆ ಎಂದು ಭಾವಿಸುವುದು ತಪ್ಪು ಎಂಬುದು ವೈದ್ಯರ ಹೇಳಿಕೆಯಾಗಿದೆ. ಬರೀ ಮುಟ್ಟು ಮಾತ್ರವಲ್ಲ ಹಸ್ತಮೈಥುನಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ಭ್ರಮೆಗಳಿವೆ. ಹಸ್ತಮೈಥುನ ರೋಗ ಉಂಟುಮಾಡಬಹುದು ಅಥವಾ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು ಎಂಬು ಜನರು ಭಾವಿಸಿದ್ದಾರೆ. ಹಸ್ತಮೈಥುನ ಮಾನಸಿಕ ಸಮಸ್ಯೆಯಲ್ಲದೆ ಕುರುಡುತನವನ್ನು ಉಂಟು ಮಾಡುತ್ತದೆ ಎಂಬ ನಂಬಿಕೆಯೂ ಇದೆ. ಇದಲ್ಲದೆ ವಂಶಾಭಿವೃದ್ಧಿಗೆ, ಫಲವತ್ತತೆ ಮೇಲೆ ಹಸ್ತಮೈಥುನ ಪರಿಣಾಮ ಬೀರುತ್ತದೆ ಎಂದೂ ಹೇಳಲಾಗಿದೆ. ಆದ್ರೆ ಇದೆಲ್ಲ ಸುಳ್ಳು. ಇದ್ರಲ್ಲಿ ತಿರುಳಿಲ್ಲ ಎನ್ನುತ್ತಾರೆ ವೈದ್ಯರು.
ಹಸ್ತಮೈಥುನ ಮೊದಲೇ ಹೇಳಿದಂತೆ ಖಾಸಗಿ ವಿಷ್ಯ. ಜನರು ಇದನ್ನು ಯಾರ ಬಳಿಯೂ ಮಾತನಾಡುವುದಿಲ್ಲ. ಇದೇ ಕಾರಣಕ್ಕೆ ಅವರಿಗೆ ಇದ್ರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ. ಹಿಂದೆ ಕೇಳಿದ ಅಥವಾ ಓದಿದ ವಿಷ್ಯವನ್ನೇ ಅವರು ಸತ್ಯವೆಂದು ನಂಬುತ್ತಾರೆ. ಅದ್ರ ಬಗ್ಗೆ ಹೆಚ್ಚಿನ ಹಾಗೂ ವಿಶೇಷವಾದ ಚರ್ಚೆ ನಡೆಸುವುದಿಲ್ಲ.
ಹೊಳೆಯುವ ಚರ್ಮಕ್ಕಾಗಿ ಆಯುರ್ವೇದವನ್ನು ಆಧುನಿಕ ರೀತಿಯಲ್ಲೂ ಬಳಸ್ಬೋದು
ಮುಟ್ಟಿನ ಅವಧಿಯಲ್ಲಿ ಏರುಪೇರಾದಾಗ ಏನು ಮಾಡಬೇಕು ? : ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದೇ ಅವರ ಆರೋಗ್ಯ ಪದೇ ಪದೇ ಹದಗೆಡಲು ಕಾರಣವಾಗುತ್ತದೆ. ಮುಟ್ಟು ಸೇರಿದಂತೆ ಖಾಸಗಿ ಸಮಸ್ಯೆಗಳನ್ನು ವೈದ್ಯರ ಬಳಿ ಹೇಳಲು ಮುಹಿಳೆಯರು ನಾಚಿಕೊಳ್ತಾರೆ. ಮುಟ್ಟು ಮುಂದೆ ಹೋಗ್ತಿದ್ದರೆ ಹಸ್ತ ಮೈಥುನ ಸೇರಿದಂತೆ ಬೇರೆ ಕಾರಣಗಳನ್ನು ಹೇಳಿಕೊಂಡು ಸುಮ್ಮನಾಗ್ತಾರೆ. ಆದ್ರೆ ಇದು ತಪ್ಪು ಎನ್ನುತ್ತಾರೆ ವೈದ್ಯರು. ಮೂರು ತಿಂಗಳವರೆಗೆ ಮುಟ್ಟಾಗಿಲ್ಲವೆಂದಾದ್ರೆ ಹಾಗೂ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದಾದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಸಂಪೂರ್ಣ ಚಿಕಿತ್ಸೆ ಅಗತ್ಯವಿರುತ್ತದೆ. ನಿರ್ಲಕ್ಷ್ಯ ಮಾಡಿದ್ರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಯಿರುತ್ತದೆ. ಹಸ್ತಮೈಥುನದ ಬಗ್ಗೆ ಯಾವುದೇ ಸಮಸ್ಯೆಯಿದ್ರೂ ಅದನ್ನು ಕೂಡ ಮುಚ್ಚಿಡಬೇಡಿ. ನಿಮ್ಮ ಪ್ರಶ್ನೆಗೆ ವೈದ್ಯರ ಬಳಿ ಉತ್ತರ ಹುಡುಕಿಕೊಳ್ಳಿ. ಸಾಧ್ಯವಿಲ್ಲ ಎನ್ನುವವರು ಕುಟುಂಬಸ್ಥರ ಜೊತೆ ಮಾತನಾಡಬಹುದು.