ವರ್ಷಗಳ ಹಿಂದೆ ಬರೀ ವಸ್ತುಗಳು, ವಾಹನಗಳನ್ನಷ್ಟೇ ಮೋಡಿಫಿಕೇಶನ್ ಮಾಡಿಸಿಕೊಳ್ಳುತ್ತಿದ್ದರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಬಾಡಿ ಮೋಡಿಫಿಕೇಶನ್ ಕೂಡಾ ಅತೀ ಸಾಮಾನ್ವಾಗಿದೆ. ಸುಂದರವಾಗಿ ಕಾಣಿಸಿಕೊಳ್ಳಬೇಕು ಅನ್ನೋ ಹುಚ್ಚಿನಲ್ಲಿ ದೇಹದ ಭಾಗಗಳ ಸರ್ಜರಿ ಮಾಡಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬ ಮಹಿಳೆ ನಾಲಿಗೆಯನ್ನೇ ಸೀಳಿಕೊಂಡಿದ್ದಾಳೆ. ಅದಕ್ಕೇನು ಕಾರಣ?

ಸೌಂದರ್ಯ ಅನ್ನೋದು ಬಾಹ್ಯ ಮತ್ತು ಆಂತರಿಕ ಎರಡೂ ವಿಚಾರಕ್ಕೆ ಸಂಬಂಧಿಸಿದ್ದು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಾತ್ರ ಸೌಂದರ್ಯ ಎಂದರೆ ಬಣ್ಣ, ಆಕಾರ, ಗಾತ್ರದಲ್ಲಿ ಅಳೆಯಲ್ಪಡುತ್ತಿದೆ. ಆಂತರಿಕೆ ಸೌಂದರ್ಯಕ್ಕೆ ಯಾರೂ ಬೆಲೆ ನೀಡುತ್ತಿಲ್ಲ. ಹೀಗಾಗಿ ಸಹಜವಾಗಿಯೇ ಎಲ್ಲರೂ ಬಾಹ್ಯ ಸೌಂದರ್ಯ ಹೆಚ್ಚಿಸಿಕೊಳ್ಳುವತ್ತ ಗಮನ ಕೊಡುತ್ತಿದ್ದಾರೆ. ದೇಹದ ಪೂರ್ತಿ ಟ್ಯಾಟೂ, ಚುಚ್ಚಿಕೊಳ್ಳುವಿಕೆಯ ಅಭ್ಯಾಸಗಳು ಹೆಚ್ಚುತ್ತಿವೆ. ಮಾತ್ರವಲ್ಲ ಮೂಗು, ತುಟಿ, ಕೈ, ಎದೆ, ಸೊಂಟದ ಭಾಗಗಳ ಸರ್ಜರಿ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ದೇಹದ ಈ ಭಾಗಗಳ ಸರ್ಜರಿ ಮಾಡೋದೇನೋ ಸರಿ. ಆದ್ರೆ ಇಲ್ಲೊಬ್ಬಾಕೆ ಬಾಡಿ ಮೋಡಿಫಿಕೇಶನ್ ಹೆಸರಲ್ಲಿ ನಾಲಿಗೆಯನ್ನೇ ಸೀಳಿಕೊಂಡಿದ್ದಾಳೆ. 

ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದ ಮಹಿಳೆ (Woman)ಯೊಬ್ಬರು ಇತ್ತೀಚೆಗೆ ತನ್ನ ನಾಲಿಗೆಯನ್ನು (Tongue) ಎರಡಾಗಿ ವಿಭಜಿಸುವ ವಿಲಕ್ಷಣವಾದ ಮಾರ್ಪಾಡಿಗೆ ಒಳಗಾದರು. 43 ವರ್ಷದ ಅಂಬರ್ ಲೇನ್ ತನ್ನ ನಾಲಿಗೆಯನ್ನು ಸೀಳಿಕೊಳ್ಳುವ ಸರ್ಜರಿಗೆ ಒಳಗಾದರು. ಇದು ನನ್ನ ದೈಹಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಲೈಂಗಿಕ ಜೀವನವನ್ನು (Sex) ಉತ್ತಮಗೊಳಿಸಲು ನೆರವಾಗಲಿದೆ ಎಂದು ಅಂಬರ್‌ ಲೇನ್ ಹೇಳಿದರು. 

ಅಬ್ಬಾ..ಗಾಡಿನಾ..ಬಾಡಿನಾ ! ಅತಿ ಹೆಚ್ಚು ಬಾರಿ ದೇಹ ಮಾರ್ಪಾಡು ಮಾಡಿ ದಂಪತಿ ದಾಖಲೆ

ಕಾಯಿಲೆಯ ನೋವು ಗೊತ್ತಾಗದಿರಲು ನಾಲಿಗೆ ಸೀಳಿಕೊಂಡ ಮಹಿಳೆ
ಅಂಬರ್‌ಲೇನ್ 2014ರಿಂದ ಅಂಗವಿಕಲರಾಗಿದ್ದಾರೆ. ಮಾತ್ರವಲ್ಲ ಹಲವಾರು ಕಾಯಿಲೆಗಳಿಂದ (Disease) ಬಳಲುತ್ತಿದ್ದಾರೆ. ದೀರ್ಘಕಾಲದ ನೋವು (Pain), ಉರಿಯೂತ, ತೋಳು ಅಥವಾ ಕಾಲಿನ ಗಾಯದ ಸಮಸ್ಯೆಯಿಂದ ಅಂಬರ್‌ ಲೇನ್ ತೊಂದರೆ ಅನುಭವಿಸುತ್ತಿದ್ದಾರೆ. ಗಾಯಗಳ ವಿಪರೀತ ನೋವಿನಿಂದ ಮುಕ್ತ ಪಡೆಯಲು ನಾಲಿಗೆಯನ್ನು ಸೀಳಿಕೊಂಡಿರುವುದಾಗಿ ಅಂಬರ್‌ಲೇನ್ ತಿಳಿಸಿದ್ದಾರೆ. ಅಂಬರ್ ತನ್ನ ದೇಹದ ಮೇಲೆ ನಿಯಂತ್ರಣ ಮಾಡಲು ಸಾಧ್ಯವಾಗುವ ಚಟುವಟಿಕೆಗಳನ್ನು ಮತ್ತು ನೋವಿನ ಮಟ್ಟವನ್ನು ನಿರ್ವಹಿಸಲು ಸಾಧ್ಯವಾಗುವ ವಿಷಯವನ್ನು ಯಾವಾಗಲೂ ಹುಡುಕುತ್ತಿದ್ದರು. ಇದರ ಭಾಗವಾಗಿ ತಮ್ಮ ನಾಲಿಗೆಯನ್ನು ಸೀಳಿಕೊಳ್ಳಲು ನಿರ್ಧರಿಸಿದ್ದಾರೆ.

'ನಾನು ಆರಂಭದಲ್ಲಿ ನಾಲಿಗೆಗೆ ಚುಚ್ಚಿಸಿಕೊಳ್ಳಬೇಕು ಎಂದು ಅಂದುಕೊಡೆ. ಆದರೆ ನಾಲಿಗೆ ಸೀಳಿದ ವ್ಯಕ್ತಿಯೊಬ್ಬನ ಫೋಟೋ ನೋಡಿ ತುಂಬಾ ಇನ್‌ಸ್ಪಯರ್ ಆದೆ. ಹೀಗಾಗಿ ನಾಲಿಗೆಯನ್ನು ಸ್ಲಿಟ್ ಮಾಡಿಕೊಳ್ಳಲು ನಿರ್ಧರಿಸಿದೆ' ಎಂದು ಅಂಬರ್‌ಲೇನ್ ಹೇಳುತ್ತಾರೆ. ಹೀಗೆ ಒಂದು ಬಾರಿ ಸ್ಲಿಟ್ ಮಾಡಿದರೂ ನಾಲಿಗೆಯನ್ನು ಮತ್ತೆ ಜೋಡಿಸಲು ಸಾಧ್ಯವಿರುವ ಕಾರಣ ನಾನು ಈ ನಿರ್ಧಾರವನ್ನು ತೆಗೆದುಕೊಂಡೆ. ನಾಲಿಗೆ ಸೀಳಿದ ನಂತರ ರುಚಿ ವ್ಯತ್ಯಸ್ಥವಾಗಿದೆ. ಆಹಾರದ ರುಚಿ ಕೆಲವೊಮ್ಮೆ ತುಂಬಾ ಉಪ್ಪಾಗಿರುತ್ತದೆ. ಇನ್ನು ಕೆಲವೊಮ್ಮೆ ಯಾವ ರುಚಿಯೂ ಗೊತ್ತಾಗುವುದಿಲ್ಲ' ಎಂದು ಮಹಿಳೆ ತಿಳಿಸಿದ್ದಾರೆ.

ಗರ್ಲ್‌ಫ್ರೆಂಡ್ ಸಿಗ್ತಿಲ್ವಂತೆ, ಭರ್ತಿ 1.35 ಕೋಟಿ ಖರ್ಚು ಮಾಡಿ ಹೈಟ್ ಹೆಚ್ಚಿಸಿಕೊಂಡ ಭೂಪ!

ಅಂಬರ್ ನಾಲಿಗೆ ಸೀಳಿಕೊಂಡಿರುವುದಕ್ಕೆ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ವಿವಿಧ ಪ್ರತಿಕ್ರಿಯೆಗಳನ್ನು ಪಡೆದಿದ್ದಾರೆ. 'ನಾನು ಲೈಂಗಿಕ ಕಾರಣಗಳಿಗಾಗಿ ಇದನ್ನು ಮಾಡಿದ್ದೇನೆಯೇ ಎಂದು ನನ್ನ ತಾಯಿ ನನ್ನನ್ನು ಕೇಳಿದರು. ನಾನು ನಗುತ್ತಾ, ಇದು ನೋವನ್ನು ನಿಭಾಯಿಸುವ ನನ್ನ ಮಾರ್ಗವಾಗಿದೆ ಎಂದು ವಿವರಿಸಿದೆ ಮತ್ತು ನಂತರ ಅವಳು ಸಂಪೂರ್ಣವಾಗಿ ಅರ್ಥಮಾಡಿಕೊಂಡಳು' ಎಂದು ಅಂಬರ್ ಹೇಳಿದ್ದಾರೆ. ಮಾತ್ರವಲ್ಲ 'ಜನರು ದೇಹದ ಬಗ್ಗೆ ಏನು ಹೇಳುತ್ತಾರೆ ಅನ್ನೋ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ತಿಳಿಸಿದ್ದಾರೆ. ಅದೇನೆ ಇರ್ಲಿ, ಬಾಡಿ ಮೋಡಿಫಿಕೇಶನ್‌ ಹೆಸರಲ್ಲಿ ಇವತ್ತಿನ ದಿನಗಳಲ್ಲಿ ಜನರು ಮಾಡ್ತಿರೋದು ನೋಡಿದ್ರೆ ನಗ್ಬೇಕೋ ಅಳ್ಬೇಕೋ ಗೊತ್ತಾಗ್ತಿಲ್ಲ.

View post on Instagram