Asianet Suvarna News Asianet Suvarna News

ಇಲ್ಲಿ ಯುವತಿಯರ ಎದೆ ಚಪ್ಪಟೆ ಮಾಡುತ್ತಾರೆ, ಇದೆಂಥಾ ಕ್ರೌರ್ಯ!

ಹೆಣ್ಣು ಮಕ್ಕಳ ಲೈಂಗಿಕ ಆಕರ್ಷಣೆಯನ್ನು ಹತ್ತಿಕ್ಕಲು, ಅವರು ಅನಾಕರ್ಷಕವಾಗಿ ಕಾಣುವಂತೆ ಮಾಡಲು ಜಗತ್ತಿನ ಹಲವು ಪುರಾತನ ಸಮುದಾಯಗಳು ಅದರದೇ ಆದ ಆಚರಣೆಗಳನ್ನು ನಡೆಸಿಕೊಂಡು ಬಂದಿವೆ. ಅವುಗಳಲ್ಲಿ ಯುವತಿಯರ ಸ್ತನಗಳನ್ನು ಬಿಸಿ ವಸ್ತುಗಳಿಂದ ಸುಟ್ಟು, ಚಪ್ಪಟೆ ಮಾಡುವ ಕ್ರೌರ್ಯವೂ ಒಂದು. ಬನ್ನಿ ಅದರ ಬಗ್ಗೆ ತಿಳಿಯೋಣ.

 

breasts of young women are flattened such cruelty in south africa bni
Author
First Published Aug 4, 2024, 10:41 AM IST | Last Updated Aug 4, 2024, 11:55 AM IST

ಆಫ್ರಿಕ ದೇಶದಲ್ಲಿ ಒಂದು ಕ್ರೂರ ಪದ್ಧತಿಯಿದೆ. ಹೆಣ್ಣು ಮಕ್ಕಳೇ ಇದರ ಗುರಿ. ಇದನ್ನು ಸ್ತನವನ್ನು ಚಪ್ಪಟೆಗೊಳಿಸುವುದು (Breast Ironing) ಎನ್ನುತ್ತಾರೆ. ಹೆಣ್ಣು ಮಕ್ಕಳು ಸಾಧ್ಯವಾದಷ್ಟೂ ಅನಾಕರ್ಷವಾಗಿರಲಿ, ಹಾಗಾಗುವ ಮೂಲಕ ಗಂಡಸರ ರೇಪ್‌, ಲೈಂಗಿಕ ದಾಳಿಗೆ ತುತ್ತಾಗದಿರಲಿ ಎಂಬ ಉದ್ದೇಶದಿಂದ ಇದು ಮೊದಲು ಆರಂಭವಾಯಿತು. ಲೈಂಗಿಕ ಕಿರುಕುಳ, ಸಣ್ಣ ವಯಸ್ಸಿನಲ್ಲಿ ಗರ್ಭಧಾರಣೆ, ಬಲವಂತದ ಮದುವೆ ಇತ್ಯಾದಿಗಳಿಂದ ಹುಡುಗಿಯರನ್ನು ರಕ್ಷಿಸುವುದು ಇದರ ಗುರಿಯಂತೆ. ಇದನ್ನು ಆಯಾ ಹೆಣ್ಣು ಮಕ್ಕಳ ತಾಯಿ ಅಥವಾ ಅಜ್ಜಿಯರಂತಹ ನಿಕಟ ಸ್ತ್ರೀ ಸಂಬಂಧಿಗಳು ತಮ್ಮ ಹೆಣ್ಣು ಮಕ್ಕಳಿಗೆ ಮಾಡಿಸುತ್ತಾರೆ. 

ಇದನ್ನು ಸಣ್ಣ ಪ್ರಾಯದಲ್ಲಿಯೇ ಮಾಡಲಾಗುತ್ತದೆ. ಅಂದರೆ ಸುಮಾರು ಹತ್ತು ಹನ್ನೆರಡು ವಯಸ್ಸಿನಲ್ಲಿಯೇ, ಇನ್ನೇನು ಯುವತಿಯ ಎದೆ ದೊಡ್ಡದಾಗುತ್ತಿದೆ ಎನ್ನುವ ಪ್ರಾಯದಲ್ಲಿಯೇ. ಸ್ತನಗಳ ಮೇಲೆ ಬಿಸಿಯಾದ ವಸ್ತುಗಳಿಂದ ಬಡಿಯುವುದು, ಬಲವಾಗಿ ಮಸಾಜ್ ಮಾಡುವುದು ಇತ್ಯಾದಿಗಳಿಂದ ಮಾಡಲಾಗುತ್ತದೆ. ಸ್ತನವನ್ನು ಚಪ್ಪಟೆಗೊಳಿಸಲು ಮರದ ಕೀಟ, ಎಲೆ, ಬಾಳೆಹಣ್ಣು, ತೆಂಗಿನ ಚಿಪ್ಪು, ರುಬ್ಬುವ ಕಲ್ಲು, ಕಲ್ಲಿದ್ದಲಿನ ಮೇಲೆ ಬಿಸಿ ಮಾಡಲಾದ ಸುತ್ತಿಗೆಗಳನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆಯು ವಾರಗಳಿಂದ ಹಲವಾರು ತಿಂಗಳುಗಳವರೆಗೆ ನಡೆಯುತ್ತದೆ.

ಎದೆನ್ನು ಚಪ್ಪಟೆಗೊಳಿಸುವ ಈ ಸಂಪ್ರದಾಯವು ಯುವತಿಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಹಾನಿ ಉಂಟುಮಾಡುತ್ತದೆ. ಇದರಿಂದ ಸಾವನ್ನಪ್ಪುವವರೂ ಇದ್ದಾರೆ. ಬದುಕುಳಿದವರ ಮೇಲೆ ದೀರ್ಘಕಾಲ ಇದರ ಗುರುತು ಉಳಿದು ಬಿಡುತ್ತದೆ. ಕ್ಯಾಮರೂನ್‌ ದೇಶದಲ್ಲಿ ಇದನ್ನು ಹೆಚ್ಚಾಗಿ ಮಾಡಲಾಗುತ್ತದೆ. ಇತರ ಆಫ್ರಿಕನ್ ದೇಶಗಳಾದ ನೈಜೀರಿಯಾ, ಟೋಗೊ, ಗಿನಿಯಾ, ಕೋಟ್ ಡಿಐವೊಯಿರ್, ಕೀನ್ಯಾ ಮತ್ತು ಜಿಂಬಾಬ್ವೆಯಲ್ಲೂ ಈ ಸಂಪ್ರದಾಯವಿದೆ. ನಗರ ಪ್ರದೇಶಗಳಲ್ಲಿ ಲೈಂಗಿಕ ದುರ್ಬಳಕೆಯ ಅಪಾಯ ಹೆಚ್ಚಾಗಿರುವುದರಿಂದ ಈ ಸಂಪ್ರದಾಯ ಹೆಚ್ಚು ಪ್ರಚಲಿತವಾಗಿದೆ.

ಸ್ತನವನ್ನು ಚಪ್ಪಟೆಗೊಳಿಸುವ ಈ ಅಭ್ಯಾಸವನ್ನು ಪುರಾತನ ಕಾಲದಿಂದಲೂ ಮಾಡಲಾಗುತ್ತಿದೆ. ಈಗ ಇದು ಯುವತಿಯರ ಮೇಲೆ ನಿಯಂತ್ರಣ ಬೀರುವ ವಿಧಾನವಾಗಿ ಪರಿವರ್ತನೆಯಾಗಿದೆ. ಸ್ತನವನ್ನು ಚಪ್ಪಟೆಗೊಳಿಸುವುದು ತೀವ್ರ ತರದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತೀವ್ರವಾದ ನೋವು, ಅಂಗಾಂಶ ಹಾನಿ ಉಂಟು ಮಾಡುತ್ತದೆ. ದೈಹಿಕ ವಿರೂಪ, ಸ್ತನ್ಯಪಾನಕ್ಕೆ ತೊಂದರೆ, ವಿವಿಧ ರೀತಿಯ ಸೋಂಕು, ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. 

 

ಯೌವನಕ್ಕೆ ಬರ್ತಿದ್ದಂತೆ ಆಫ್ರಿಕನ್ ಯುವತಿಯರ ಸ್ತನಗಳನ್ನ ಚಪ್ಪಟ್ಟೆಗೊಳಿಸೋದ್ಯಾಕೆ? ಏನಿದು ವಿಚಿತ್ರ ಅನಿಷ್ಠ ಪದ್ದತಿ?

ಈ ಸಂಪ್ರದಾಯವನ್ನು ತಡೆಯಲು ಇತ್ತೀಚೆಗೆ ಕೆಲವು ಕಾನೂನುಗಳನ್ನು ರೂಪಿಸಿದ್ದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗುವಲ್ಲಿ ವಿಫಲವಾಗಿದೆ. ಕೆಲವು ಸಂಘ ಸಂಸ್ಥೆಗಳು ಈ ಸಂಪ್ರದಾಯದ ವಿರುದ್ಧ ಜಾಗೃತಿಯನ್ನು ಮೂಡಿಸುವ ಪ್ರಯತ್ನ ನಡೆಸುತ್ತಿದೆ. ಆದರೂ ಆಫ್ರಿಕಾ ಖಂಡದಲ್ಲಿ ಈ ಭಯಾನಕ ಪದ್ಧತಿ ಜಾರಿಯಲ್ಲಿದೆ.

ಆದರೆ ಬ್ರಿಟನ್, ಅಮೆರಿಕದಂಥ ಮುಂದುವರಿದ ದೇಶಗಳಲ್ಲೂ ಈ ಪದ್ಧತಿ ಜಾರಿಯಲ್ಲಿದೆ ಎಂದರೆ ನೀವು ನಂಬಬೇಕು! ಆಫ್ರಿಕಾದಿಂದ ಅಲ್ಲಿಗೆ ವಲಸೆ ಹೋಗಿರುವ ಹಲವು ಜನಾಂಗದವರೇ ಇದಕ್ಕೆ ಕಾರಣ. ಅಲ್ಲಿ ತೆರೆಮರೆಯಲ್ಲಿ ಇದನ್ನು ಜರುಗಿಸಲಾಗುತ್ತದೆ. ಇದರಂದ ಉಂಟಾಗುವ ನೋವು, ಯಾತನೆಗಳು ಹುಡುಗಿಯರನ್ನು ಜೀವಮಾನವಿಡೀ ಕಾಡುತ್ತವೆ. ಇತ್ತೀಚೆಗೆ ಇಂಥ ಸಮುದಾಯಗಳಲ್ಲಿ ಎಲ್ಲರಿಗೂ ಶಿಕ್ಷಣ ನೀಡಿ ಜಾಗೃತಿ ಮೂಡಿಸುವ ಕೆಲಸ ಹೆಚ್ಚು ಹೆಚ್ಚಾಗಿ ನಡೆಯುತ್ತಿದೆ. 

ಸ್ತನ ಕಸಿ ಶಸ್ತ್ರಚಿಕಿತ್ಸೆ ವೀಡಿಯೋ ವೈರಲ್: ವೈದ್ಯರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆ

Latest Videos
Follow Us:
Download App:
  • android
  • ios