ಐದನೇ ಕ್ಲಾಸಲ್ಲೇ ಸೆಕ್ಸ್ ಬಗ್ಗೆ ಮಾತಾಡೋ ಹುಡುಗ್ರಿಗೆ ಪಿರಿಯಡ್ಸ್ ಬಗ್ಗೆ ಗೊತ್ತಿರೋದು ಬಿಗ್ ಜೀರೋ!
ಐದನೇ ಕ್ಲಾಸೋ ಅಥವಾ ಅದಕ್ಕೂ ಮೊದಲೋ ಸೆಕ್ಸ್ ಬಗ್ಗೆ ತಿಳಿದುಕೊಳ್ಳೋ ನಮ್ ಹುಡುಗ್ರಿಗೆ ಪೀರೆಯೆಡ್ಸ್ ಬಗ್ಗೆ ಎಷ್ಟು ಗೊತ್ತು? ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಡೀತಿರೋ ಈ ಬಿಸಿ ಚರ್ಚೆ ಏನು?
ಶೈಲಿ ಚೋಪ್ರಾ ಅವ್ರ 'ಶಿ ದಿ ಪೀಪಲ್ ಟಿವಿ' ಅನ್ನೋ ಚಾನೆಲ್ ಸಖತ್ ಫೇಮಸ್. ನಾನಾ ವಿಚಾರಗಳ ಬಗ್ಗೆ ಇಲ್ಲಿ ಇಂಟರೆಸ್ಟಿಂಗ್ ಡಿಸ್‌ಕಶನ್ಸ್ ನಡೀತಿರುತ್ತೆ. ಮುಖ್ಯವಾಗಿ ಇಲ್ಲಿ ಚರ್ಚಿಸೋದು ಹೆಣ್ಮಕ್ಕಳ ಸೂಕ್ಷ್ಮ ಸಂಘರ್ಷಗಳ ಬಗ್ಗೆ. ಸೆಕ್ಸ್ ಬಗೆಗೂ ಮುಕ್ತವಾದ ಚರ್ಚೆ ನಡೆಯುತ್ತೆ. ಮತ್ತು ಇದು ಆರೋಗ್ಯಕರವಾಗಿ ನಡೆಯೋ ಚರ್ಚೆ. 'ಹೆಣ್ಣುಮಕ್ಕಳ ಸೆಕ್ಷುವಲ್ ಪ್ಲೆಶರ್' ಅಂದರೆ ಹೆಣ್ಣುಮಕ್ಕಳ ಲೈಂಗಿಕ ಸಂತೃಪ್ತಿ ಅನ್ನೋ ವಿಚಾರವಾಗಿ ಕೆಲವು ಸಮಯದ ಹಿಂದೆ ಇಲ್ಲಿ ಸಾಕಷ್ಟು ಒಳ್ಳೆ ಚರ್ಚೆ ನಡೀತು. ಅಂದ ಹಾಗೆ ಕಳೆದ ಏಳು ವರ್ಷಗಳಿಂದ ಈ ಚಾನಲ್ ಹೆಣ್ಣುಮಕ್ಕಳ ಪರವಾಗಿ ದನಿ ಎತ್ತುವ ಕೆಲಸ ಮಾಡುತ್ತಿದೆ. ಈ ಚಾನಲ್‌ನಲ್ಲಿ ಅನೇಕ ಸೆಲೆಬ್ರಿಟಿಗಳ ಇಂಟರ್‌ವ್ಯೂಗಳೂ ಪ್ರಸಾರವಾಗಿವೆ. ಆದರೆ ಹೆಚ್ಚಿನವರಿಗೆ ಈ ಚಾನಲ್ ಬಗ್ಗೆ ಮಾಹಿತಿ ಇದ್ದಂತಿಲ್ಲ.
ಇರಲಿ, ಸದ್ಯಕ್ಕೀಗ ಈ ಚಾನಲ್ ಒಂದು ವಿಚಾರವನ್ನು ಗಟ್ಟಿ ದನಿಯಲ್ಲಿ ಹೇಳಿದೆ. ಈ ಬಗ್ಗೆ ಪರ ವಿರೋಧದ ಚರ್ಚೆ ಜೋರಾಗಿ ಸೋಷಿಯಲ್ ಮೀಡಿಯಾದಲ್ಲಿ ನಡೀತಿದೆ. ಅದೇನು ಅಂದರೆ 'ಐದನೇ ಕ್ಲಾಸಿಗೆ ಬರುವಾಗಲೇ ಸೆಕ್ಸ್ ಬಗ್ಗೆ ಎಲ್ಲಾ ತಿಳ್ಕೊಂಡಿರೋ ನಮ್ ಹುಡುಗರಿಗೆ ಪೀರಿಯೆಡ್ಸ್ ಬಗ್ಗೆ ಇರೋ ಜ್ಞಾನ ದೊಡ್ಡ ಸೊನ್ನೆ' ಅನ್ನೋದು. ಇನ್ನೊಂದು ವಿಚಾರ ಅಂದರೆ ಸೆಕ್ಸ್ ಬಗ್ಗೆ ಓಪನ್ ಆಗಿ ಮಾತಾಡೋ ಹುಡುಗರು, ಗಂಡಸರು ಋತುಚಕ್ರದ ಬಗ್ಗೆ ಮಾತಾಡೋದಕ್ಕೆ ಮುಜುಗರ ಪಟ್ಟುಕೊಳ್ಳುತ್ತಾರೆ ಅನ್ನೋದು. ಕೆಲವರಂತೂ ಈ ಬಗ್ಗೆ ಯಾವ ತಿಳಿವಳಿಯೂ ಇಲ್ಲದೇ ಅಸಹ್ಯ ಪಟ್ಟುಕೊಳ್ಳುವ ಮೂಲಕ ತಾವು ಎಂಥಾ ಅಸೂಕ್ಷ್ಮ ಮೂರ್ಖರು ಅನ್ನೋದನ್ನು ಪದೇ ಪದೇ ಸಾಬೀತು ಮಾಡ್ತಾ ಇರುತ್ತಾರೆ. ಸದ್ಯಕ್ಕೆ ಇಂಥಾ ಸೂಕ್ಷ್ಮ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿದೆ.
ಯೋನಿ ಡ್ರೈನೆಸ್ ಸಮಸ್ಯೆ, ನೋವಿಲ್ಲದ ಸೆಕ್ಸ್‌ಗೆ ಈ ವಿಟಮಿನ್ ಟ್ರೈ ಮಾಡಿ
ಈ ಬಗ್ಗೆ ಒಂದಿಷ್ಟು ಮಂದಿ ಪುರುಷರು ರೊಚ್ಚಿಗೆದ್ದು ಪ್ರತಿಕ್ರಿಯೆ ನೀಡಿದ್ದಾರೆ. 'ಯಾವ ಕಾಲದಲ್ಲಿ ನಿಂತು ಈ ರೀತಿ ಪ್ರಶ್ನೆ ಕೇಳ್ತಾ ಇದ್ದೀರ? ನಂಗೆ ಋತುಚಕ್ರದ (menstruation) ಬಗ್ಗೆ ತಿಳಿದಿದೆ. ಆ ಸಮಯದಲ್ಲಿ ಹೆಣ್ಣುಮಕ್ಕಳು ಎದುರಿಸುವ ಸಮಸ್ಯೆಗಳ ಬಗ್ಗೆಯೂ ಅರಿವಿದೆ' ಎಂದು ಒಬ್ಬಾತ ಪ್ರತಿಕ್ರಿಯೆ ನೀಡಿದರೆ ಇನ್ನೊಬ್ಬ ವ್ಯಕ್ತಿ ಅದಕ್ಕೆ ಕೌಂಟರ್ ನೀಡಿದ್ದಾರೆ. 'ಯಾವ ಸಿಟಿಯಲ್ಲಿ ನೀನು ಬದುಕ್ತಾ ಇದೀಯ? ಹೀಗೆ ಸೆಲ್ಫ್ ಸೆಂಟರ್ಡ್ (self centered) ಆಗಿ ಯೋಚಿಸಬೇಡ. ನಮ್ಮ ದೇಶದ ಹಳ್ಳಿಗಳಲ್ಲಿ ಹೆಣ್ಣುಮಕ್ಕಳ ಸ್ಥಿತಿ ಹೇಗಿದೆ ಅನ್ನುವುದು ನಿಮಗೆ ತಿಳಿದಿದೆಯಾ? ಅಲ್ಲಿನ ಹುಡುಗರು ಪೀರೆಯೆಡ್ಸ್ (periods) ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಅನ್ನೋದು ನಿನಗೆ ಗೊತ್ತಾ?' ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು 'ನಮ್ಮ ಶಿಕ್ಷಣ ವ್ಯವಸ್ಥೆಯನ್ನು (education) ಹೊಣೆ ಮಾಡಬೇಕೇ ಹೊರತು ಹುಡುಗರನ್ನಲ್ಲ' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಬ್ಬ ಹೆಣ್ಣುಮಗಳು, ' ಒಂದು ಮಾತು ಹೇಳ್ತೀನಿ, ನಾನು ನನ್ನ ವೃತ್ತಿ ಸಂಬಂಧ ಸಾಕಷ್ಟು ಜನರನ್ನು ಭೇಟಿ ಆಗುತ್ತಿರುತ್ತೇನೆ.
ಹುಡುಗರು, ಗಂಡಸರು ಇಂದಿಗೂ ನಮ್ಮ ಪೀರಿಯೆಡ್ಸ್ ಬಗ್ಗೆ ಮಾತನಾಡಲು ಹಿಂಜರಿಯುವುದು, ಅಸಹ್ಯಿಸಿಕೊಳ್ಳುವುದು ನನ್ನ ಗಮನಕ್ಕೆ ಬಂದಿದೆ. ನನ್ನ ಮಗ (son) ಹೀಗಾಗೋದಕ್ಕೆ ನಾನು ಬಿಡೋದಿಲ್ಲ' ಎಂದಿದ್ದಾರೆ. ಶ್ವೇತಾ ಎಂಬ ಬಿಹಾರದ ಹೆಣ್ಮಗಳು, 'ನನ್ನ ತಂದೆ ಆಗಿರಬಹುದು, ನನ್ನ ಕುಟುಂಬದಲ್ಲಿರುವ ಇತರ ಗಂಡಸರಾಗಿರಬಹುದು ಈ ಬಗ್ಗೆ ಓಪನ್ ಆಗಿ ಮಾತನಾಡೋದೇ ಇಲ್ಲ. ಅವರಿಗೆ ಈ ಬಗ್ಗೆ ಜ್ಞಾನವೂ ಇಲ್ಲ. ಬರೀ ಕೇವಲವಾಗಿ ನೋಡೋದಷ್ಟೇ ಗೊತ್ತು. ಕ್ಲಾಸಲ್ಲಿ ಯಾವುದಾದರೂ ಹುಡುಗಿ ಪೀರೆಯಡ್ಸ್ ಆಗಿದ್ದು ಗೊತ್ತಾದರೆ ಹುಡುಗರು ಶಾಕ್ ಆಗ್ತಾರೆ ಮತ್ತು ಕೆಟ್ಟದಾಗಿ ನಗುತ್ತಾರೆ' ಎಂದು ಹೇಳಿದ್ದಾರೆ.
ಒಟ್ಟಾರೆ ಹುಡುಗರು ಒಪ್ಪಿಕೊಳ್ಳಲಿ ಬಿಡಲಿ, ನಮ್ಮ ಹುಡುಗರು ಪೀರೆಯಡ್ಸ್ (periods) ಬಗ್ಗೆ ಒಂದಿಷ್ಟು ತಿಳಿದುಕೊಂಡು ಸೆನ್ಸಿಟಿವ್ ಆಗಿ ವರ್ತಿಸಬೇಕಾದ್ದು ಈ ಕಾಲದ ಅಗತ್ಯ ಅನ್ನೋದಂತೂ ಸತ್ಯ.
ಅರೆ..ಏನಿದು ವಿಚಿತ್ರ, ಈ ಕಂಪೆನೀಲಿ ಕೆಲ್ಸ ಮಾಡೋಕೆ ಸೆಕ್ಸ್ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕ್ಬೇಕಂತೆ!