Asianet Suvarna News Asianet Suvarna News

Kareena Home: ಬಾಲಿವುಡ್ ಬೇಬೋ ಹೊಸ ಮನೆ ವಿನ್ಯಾಸ ನೋಡಿ!

ಕರೀನಾ ಕಪೂರ್ ಖಾನ್ ಇತ್ತೀಚೆಗೆ ಮುಂಬೈನಲ್ಲಿ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ನಾಲ್ಕು ಅಂತಸ್ತಿನ ಮನೆಯಲ್ಲಿ ಏನೆಲ್ಲ ಇವೆ, ಆಸಕ್ತ ಮಹಿಳೆಯರು ಹೇಗೆಲ್ಲ ಮನೆಯನ್ನು ರೂಪಿಸಿಕೊಳ್ಳಬಹುದು ಎನ್ನುವುದಕ್ಕೆ ಈ ಮನೆಯೊಂದು ಮಾದರಿಯಾಗುವಂತಿದೆ. 
 

Bollywood actress Kareenas new house gives luxury and design ideas
Author
Bangalore, First Published Feb 22, 2022, 6:17 PM IST

ಬಾಲಿವುಡ್ ಸ್ಟಾರ್ (Star)ಗಳ ಮನೆ ಹೇಗಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಸಾಮಾನ್ಯ. ಅವರು ಮನೆಯ ಒಳಾಂಗಣ ವಿನ್ಯಾಸದ (Design) ಕುರಿತು ಸಾಕಷ್ಟು ಆಸಕ್ತಿ ವಹಿಸುತ್ತಾರೆ. ಇನ್ ಫ್ಯಾಕ್ಟ್, ಅವರಿಗೆ ಸ್ವಲ್ಪ ಹೆಚ್ಚೇ ವಿವಿಧ ಸೌಲಭ್ಯಗಳ ಅಗತ್ಯವಿರುತ್ತದೆ. ಎಲ್ಲದಕ್ಕೂ ಹೊರಗೆ ಹೋಗಲು ಸಾಧ್ಯವಿಲ್ಲವಲ್ಲ! ಆದರೆ, ಅವರಂತೆಯೇ ಮನೆಯ ಒಳಾಂಗಣ ರೂಪಿಸಿಕೊಳ್ಳಲು ಎಲ್ಲರಿಗೂ ಸಾಧ್ಯ.
ಬಾಲಿವುಡ್ ತಾರೆ ಕರೀನಾ ಕಪೂರ್ (Kareena Kapoor) ಹಾಗೂ ಸೈಫ್ ಅಲಿ ಖಾನ್ (Saif Ali Khan) ಅವರ ಮುಂಬೈನದಲ್ಲಿರುವ ಮನೆ ಈ ನಿಟ್ಟಿನಲ್ಲಿ ಮಾದರಿಯಾಗಿದೆ. ಲಕ್ಸುರಿ ಲುಕ್ (Luxury) ನೊಂದಿಗೆ ಸಾಂಪ್ರದಾಯಿಕ (Classic) ಶೈಲಿಯನ್ನೂ ಒಳಗೊಂಡಿರುವ ಈ ಹೊಸ ಮನೆಯನ್ನು ದರ್ಶನಿ ಶಾ (Darshani Shah) ವಿನ್ಯಾಸ ಮಾಡಿದ್ದಾರೆ. ನಾಲ್ಕು ಅಂತಸ್ತುಗಳಲ್ಲಿ ಏನೆಲ್ಲ ಸೌಲಭ್ಯಗಳನ್ನು ಈ ಮನೆ ಹೊಂದಿದೆ ಗೊತ್ತೇ? ಅವುಗಳಲ್ಲಿ ಕೆಲವನ್ನು ನೀವೂ ಟ್ರೈ ಮಾಡಬಹುದು.

•    ಬಾಹ್ಯ ನೋಟ ನೀಡುವ ಲಿವಿಂಗ್ ರೂಮ್ (Living Room) 
ಬೃಹತ್ತಾದ ಮನೆಯಲ್ಲಿ, ಕುರ್ಚಿ, ಸೋಫಾ ಮೇಲೆ ರಿಲ್ಯಾಕ್ಸ್ ಮಾಡುತ್ತ, ವಿಶಾಲ ಪ್ರದೇಶವನ್ನು ದಿಟ್ಟಿಸುತ್ತ ಕೂರುವುದು ಅದ್ಭುತ ಅನುಭವ. ಕರೀನಾ ಕಪೂರ್ ಖಾನ್ ಅವರ ನೂತನ ಮನೆಯೂ ಈ ಅನುಭವ ನೀಡುವಂತಿದೆ. ಟೆರೇಸ್ ಗೆ ಹೊಂದಿಕೊಂಡಂತೆಯೇ ಇರುವ ಲಿವಿಂಗ್ ರೂಮ್ ವಿಶಾಲವಾಗಿದ್ದು, ಹೊರಗಿನ ಪ್ರದೇಶವನ್ನು ದಿಟ್ಟಿಸಬಹುದು. ಮರದ ಫ್ಲೋರಿಂಗ್, ದೊಡ್ಡ ಗ್ಲಾಸ್ ವಿಂಡೋಗಳು, ಬಣ್ಣಗಳ ಸಂಯೋಜನೆಗಳು ಸ್ನೇಹಮಯ ವಾತಾವರಣ ಸೃಷ್ಟಿಸಿವೆ. ಗೋಡೆಗಳನ್ನು ಬಿಳಿ ಬಣ್ಣದಲ್ಲಿ ಪೇಂಟ್ ಮಾಡಲಾಗಿದ್ದು, ಅಲ್ಲಲ್ಲಿ ಪ್ಲಾಂಟ್ ಗಳನ್ನು ಇರಿಸಲಾಗಿದೆ. 

ಬೇಬೋ ಎರಡನೇ ಮಗನಿಗೆ ವರ್ಷದ ಸಂಭ್ರಮ

•    ಯೋಗ ರೂಮ್ (Yoga Room)ಗೂ ವಿಶಾಲ ಜಾಗ
ಯೋಗ ಮಾಡುವುದು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕಾಗಿ. ಈ ಸಮಯವನ್ನು ಎಂಜಾಯ್ ಮಾಡಬೇಕು. ಕರೀನಾ ಕೂಡ ಯೋಗ ಮಾಡುವುದನ್ನು ಎಂಜಾಯ್ ಮಾಡುವ ತಾರೆ. ಯೋಗ ವರ್ಕೌಟ್ ಮಾಡುತ್ತಿರುವ ಪೋಸ್ಟ್ ಗಳನ್ನು ಆಗಾಗ ಹಾಕುತ್ತಲೇ ಇರುತ್ತಾರೆ. ಇವರ ಮನೆಯ ಈ ಕೋಣೆ ಹೇಗಿದೆ ಎಂದರೆ, ನೈಸರ್ಗಿಕ ಬೆಳಕು ಧಾರಾಳವಾಗಿ ಬರುತ್ತದೆ. ಹಸಿರುಮಯವಾಗಿದೆ. ಇದೂ ಸಹ ಮರದ ಫ್ಲೋರಿಂಗ್, ದೊಡ್ಡ ಗಾತ್ರದ ವಿಂಡೋಗಳನ್ನು ಹೊಂದಿದ್ದು, ಫೋಟೊಗಳನ್ನು ಅಳವಡಿಸಲಾಗಿದೆ. 

•    ಓದುವ ಕೊಠಡಿ (Reading Nook)
ಕರೀನಾ ತಮ್ಮ ಮನೆಯಲ್ಲಿ ಪುಟ್ಟದೊಂದು ಲೈಬ್ರರಿ, ಓದುವ ಸ್ಥಳಕ್ಕೂ ಆದ್ಯತೆ ನೀಡಿದ್ದಾರೆ. ಮರದ ಅತ್ಯಾಕರ್ಷಕ ಕಪಾಟುಗಳು, ಆರ್ಟ್ ವರ್ಕ್, ಹಳೆಯ ಸಾಂಪ್ರದಾಯಿಕ ವಸ್ತುಗಳು, ಸಂಗ್ರಹಿಸಿದ ಅತ್ಯುತ್ತಮ ಸ್ಮರಣಿಕೆಗಳನ್ನೂ ಇದು ಒಳಗೊಂಡಿದೆ. ಹಾಗೂ ಸಾಕಷ್ಟು ಉತ್ತಮ ಪುಸ್ತಕಗಳ ಸಂಗ್ರಹವೂ ಇದೆ. 

•    ಯುರೋಪಿಯನ್ ಮಾದರಿ ಪ್ರೇರಿತ ಆಧುನಿಕ ಬೆಡ್ ರೂಮ್ (Bed Room)
ಕರೀನಾ ತಮ್ಮ ಬೆಡ್ ರೂಮ್ ಫೋಟೊಕ್ಕೆ ನೀಡಿರುವ ಕ್ಯಾಪ್ಷನ್ “ಡೋರ್ ಟು ನ್ಯೂ ಬಿಗಿನಿಂಗ್ಸ್’ ಎಂದು. ಮರದ ಫ್ಲೋರಿಂಗ್ (Flooring) ಒಳಗೊಂಡಿರುವ ಈ ಕೋಣೆ ಬಿಳಿ ಬಣ್ಣದ ಉದ್ದನೆಯ ಲಿನೆನ್ ಕರ್ಟನ್ ಗಳನ್ನು ಒಳಗೊಂಡಿದೆ. ಹಳೆಯ ಫೋಟೊಫ್ರೇಮ್ ಗಳು, ಪುಸ್ತಕ, ಕ್ಯಾಂಡಲ್, ಲ್ಯಾಂಪ್ ಗಳನ್ನೂ ಅಳವಡಿಸಲಾಗಿದೆ. ಬಿಳಿಯದಾದ ಬೆಡ್ ಎದುರು ಗೋಡೆಗೆ ಅಳವಡಿಸಿರುವ ಫ್ಲಾಟ್ ಟಿವಿ ಇದೆ. 

ಬಾಲಿವುಡ್ ಜೋಡಿಗಳ ವಯಸ್ಸಿನ ಅಂತರವಿಷ್ಟು!

•    ಮನೆಯೊಳಗೆ ಸ್ವಿಮ್ಮಿಂಗ್ ಪೂಲ್ (Swimming Pool)
ಮನೆಯೊಳಗೇ ಸ್ವಿಮ್ಮಿಂಗ್ ಪೂಲ್ ಇಟ್ಟುಕೊಳ್ಳುವುದು ಇತ್ತೀಚೆಗೆ ಸಾಮಾನ್ಯ. ಹಾಗೆಯೇ ಕರೀನಾ ಕೂಡ ತಮ್ಮ ಮನೆಯೊಳಗೆ ಹೆಚ್ಚು ಗಾಳಿ, ಬೆಳಕು ಇರುವ ಸ್ಥಳದಲ್ಲಿ ಸ್ವಿಮ್ಮಿಂಗ್ ಪೂಲ್ ಇಟ್ಟುಕೊಂಡಿದ್ದಾರೆ. ಟೆರೇಸ್ ಹಾಗೂ ಓಪನ್ ಸ್ಥಳಗಳನ್ನು ಹೊಂದಿದ್ದಾರೆ. ಟೆರೇಸ್ ಮೇಲೆ ಸುತ್ತಲೂ ದಟ್ಟವಾದ ಹಸಿರು (Green) ಗಿಡಗಳನ್ನು ನಿರ್ಮಿಸಲಾಗಿದೆ. 
ಒಟ್ಟಾರೆ, ಕರೀನಾ ಕಪೂರ್ ನೂತನ ಗೃಹ ಲಕ್ಸುರಿ ಹಾಗೂ ವಿನ್ಯಾಸದ ಹೊಸ ಪಾಠ ಹೇಳುವಂತಿದೆ. 

Follow Us:
Download App:
  • android
  • ios