ಹೊಸ ತಾಯಂದಿರಿಗೆ ಪ್ರತಿ ತಿಂಗಳು ₹7000, 26 ವಾರಗಳ ಹೆರಿಗೆ ರಜೆ: ಭಾರ್ತಿ ಏರಟೆಲ್
ಹೊಸ ತಾಯಂದಿರಾದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 7,000 ರೂಪಾಯಿ ನೀಡುವುದಾಗಿ ಏರ್‌ಟೆಲ್ ಹೇಳಿದೆ. ಮಕ್ಕಳನ್ನು ದತ್ತು ಪಡೆದ ತಾಯಂದಿರಿಗೂ ವಿಶೇಷ ಮಾಸಿಕ ಭತ್ಯೆ ಅನ್ವಯಿಸುತ್ತದೆ.
Tech Desk: ಉದ್ಯೋಗಿಗಳಿಗೆ ಪ್ರಯೋಜನಗಳನ್ನು ಸುಧಾರಿಸಲು ಏರ್‌ಟೆಲ್ ಇತ್ತೀಚೆಗೆ ಹೊಸ ಉಪಕ್ರಮಗಳನ್ನು ಘೋಷಿಸಿದೆ. ಇದೀಗ ತಾಯಂದಿರಾದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 7,000 ರೂಪಾಯಿ ನೀಡುವುದಾಗಿ ಟೆಲಿಕಾಂ ಆಪರೇಟರ್ ಏರ್‌ಟೆಲ್ ಘೋಷಿಸಿದೆ. ಮಗುವಿಗೆ 18 ತಿಂಗಳು ತುಂಬುವವರೆಗೆ ವಿಶೇಷ ಮಾಸಿಕ ಭತ್ಯೆ ರೂ 7,000 ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.ಮಕ್ಕಳನ್ನು ದತ್ತು ಪಡೆದ ತಾಯಂದಿರಿಗೂ ವಿಶೇಷ ಮಾಸಿಕ ಭತ್ಯೆ ಅನ್ವಯಿಸುತ್ತದೆ.
ಹೊಸ ಪೋಷಕರ ಯೋಜನೆಯೊಂದಿಗೆ, ವೈವಿಧ್ಯಮಯ ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವಂತಹ ಕೆಲಸದ ಸ್ಥಳವನ್ನು ನಿರ್ಮಿಸುವ ಆಲೋಚನೆ ಇದೆ ಎಂದು ಕಂಪನಿ ಹೇಳಿದೆ. ಈ ಮೂಲಕ ಹೊಸ ತಾಯಂದಿರಿಗೆ ಮತ್ತು ತಂದೆಗೆ ಸಮಯ ಮತ್ತು ಹಣಕಾಸಿನ ಪ್ರಯೋಜನಗಳನ್ನು ನೀಡುವ ಕೆಲವೇ ಕೆಲವು ಕಂಪನಿಗಳ ಪಟ್ಟಿಗೆ ಏರ್‌ಟೆಲ್ ಸೇರಿದೆ.
ಇದನ್ನೂ ಓದಿ: Airtel 5G: ಸ್ಪೆಕ್ಟ್ರಮ್ ಹರಾಜು ಬಳಿಕ ಶೀಘ್ರದಲ್ಲೇ ಸೇವೆ ಪ್ರಾರಂಭ: ಹೈಸ್ಪೀಡ್ ಇಂಟರ್‌ನೆಟ್ ಭರವಸೆ!
26 ವಾರ ಹೆರಿಗೆ ರಜೆ: ವಿತ್ತೀಯ ಪ್ರಯೋಜನಗಳ ಜೊತೆಗೆ, ಕಂಪನಿಯು ಮಹಿಳಾ ಉದ್ಯೋಗಿಗಳಿಗೆ 26 ವಾರಗಳ ಹೆರಿಗೆ ರಜೆಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಟೆಲಿಕಾಂ ಆಪರೇಟರ್ 24 ವಾರಗಳ ಫ್ಲೇಕ್ಸಿಬಲ್ ವರ್ಕ್ ಆಯ್ಕೆಯನ್ನು ನೀಡುತ್ತದೆ. ಇದರಿಂದ ಹೊಸ ತಾಯಂದಿರು ತಮಗೆ ಅನೂಕೂಲವಾದ ಸಮಯದಲ್ಲಿ ಕೆಲಸಕ್ಕೆ ಮರಳಬಹುದು. ಅಲ್ಲದೇ ಹೊಸ ತಾಯಂದಿರು ಮಕ್ಕಳ ಆರೈಕೆಗಾಗಿ ಪ್ರತಿ ತ್ರೈಮಾಸಿಕಕ್ಕೆ ಎರಡು ಹೆಚ್ಚುವರಿ ಪಾವತಿಸಿದ ರಜೆಗಳನ್ನು ಪಡೆಯುತ್ತಾರೆ. ಈ ಮೂಲಕ ತಮ್ಮ ನವಜಾತ ಶಿಶುಗಳಿಗೆ ಸಮಯವನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಿಸುವುದು ಕಂಪನಿಯ ಉದ್ದೇಶವಾಗಿದೆ.
ಎಂಟು ವಾರ ಪಿತೃತ್ವ ರಜೆ: ಟೆಲಿಕಾಂ ಆಪರೇಟರ್ ಹೊಸ ತಂದೆಯಂದಿರಿಗೆ ಕೂಡ ಪೋಷಕರ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಅವರೂ ಕೂಡ ಆರೈಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಕಂಪನಿಯು ಹೊಸ ತಂದೆಗೆ ಎಂಟು ವಾರಗಳವರೆಗೆ ಪಿತೃತ್ವ ರಜೆಯನ್ನು ನೀಡುತ್ತದೆ.
ನೀತಿಗಳನ್ನು ಮರುಪರಿಶೀಲಿಸಬೇಕು: ಮಾರುಕಟ್ಟೆಯಲ್ಲಿ ಪ್ರಗತಿ ಸಾಧಿಸಲು, "ನೀತಿಗಳನ್ನು ಮರುಪರಿಶೀಲಿಸುವ ಅವಶ್ಯಕತೆಯಿದೆ" ಎಂದು ಭಾರ್ತಿ ಏರ್‌ಟೆಲ್‌ನ ಚೀಫ್ ಪೀಪಲ್ಸ್ ಆಫೀಸರ್ ಅಮೃತ್ ಪಡ್ಡಾ ಹೇಳಿದ್ದಾರೆ. ಈ ಉಪಕ್ರಮಗಳು "ಹೆಚ್ಚು ಮಹಿಳೆಯರು ಭಾರ್ತಿ ಏರ್‌ಟೆಲ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತವೆ" ಎಂದು ಅವರು ನಂಬುತ್ತಾರೆ.
ಇದನ್ನೂ ಓದಿ: Kiwi Fruit ಗರ್ಭಿಣಿಗಷ್ಟೇ ಅಲ್ಲ, ಭ್ರೂಣದ ಬೆಳವಣಿಗೆಗೂ ಸಹಾಯಕ
“ನಾವು ಇದನ್ನು ಹೆಚ್ಚು ವೈವಿಧ್ಯಮಯ ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವಂತಹ ಕೆಲಸದ ಸ್ಥಳವಾಗುವುದರ ಮೇಲೆ ಸ್ಪಷ್ಟ ಗಮನವನ್ನು ಕೇಂದ್ರೀಕರಿಸಿದ್ದೇವೆ. ಹೆಚ್ಚಿನ ಮಹಿಳೆಯರು ತಮ್ಮ ಜೀವನದಲ್ಲಿ ಪ್ರಮುಖ ಜೀವನ ಹಂತಗಳ ಮೂಲಕ ಸಾಗುತ್ತಿರುವಾಗ ಏರ್‌ಟೆಲ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಇದು ಉತ್ತೇಜನ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ”ಎಂದು ಪಡ್ಡಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಪನಿಯು "ಸಮಾಜದಲ್ಲಿ ಗುರುತು ಮೂಡಿಸುವ ಪ್ರಭಾವಶಾಲಿ ಆವಿಷ್ಕಾರಗಳನ್ನು ರಚಿಸುವ ಬಗ್ಗೆ ಹೆಮ್ಮೆಪಡುತ್ತದೆ" ಪಡ್ಡಾ ಎಂದು ಹೈಲೈಟ್ ಮಾಡಿದ್ದಾರೆ. ನಮ್ಮ ಕೆಲಸದ ಸ್ಥಳ ಮತ್ತು ಕೆಲಸದ ಅಭ್ಯಾಸಗಳನ್ನು ಮತ್ತಷ್ಟು ಬಲಪಡಿಸುವ ನಮ್ಮ ಪ್ರಯತ್ನದಲ್ಲಿ, ನಾವು ಮಾರುಕಟ್ಟೆಯಲ್ಲಿ ಮುಂದೆ ಉಳಿಯಬೇಕು ಮತ್ತು ನಮ್ಮ ನೀತಿಗಳನ್ನು ಮರುಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ.
ಎಲ್ಲರಿಗೂ ವರ್ಕ್ ಫ್ರಂ ಹೋಮ್ ಆಪ್ಶನ್ ಇಲ್ಲ: ಮೆಟರ್ನಿಟಿ ಬೆನಿಫಿಟ್‌ನಲ್ಲಿ ಎಲ್ಲರಿಗೂ ವರ್ಕ್ ಫ್ರಂ ಹೋಮ್ ಆಪ್ಶನ್ ಇಲ್ಲ. ಗರ್ಭಿಣಿಯರು ಎಲ್ಲರೂ ವರ್ಕ್ ಫ್ರಂ ಹೋಮ್ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಹೆರಿಗೆ ಪ್ರಯೋಜನ ಕಾಯ್ದೆಯಡಿ 'ವರ್ಕ್ ಫ್ರಮ್ ಹೋಮ್' ಕೆಲಸದ ಸ್ವರೂಪ ಅನುಮತಿಸಿದರೆ ಮಾತ್ರ ಗರ್ಭಿಣಿಯರು ಇದರ ಪ್ರಯೋಜನ ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ ಇತ್ತಿಚೆಗೆ ಹೇಳಿತ್ತು.
ಹೆರಿಗೆ ಪ್ರಯೋಜನ (ತಿದ್ದುಪಡಿ) ಕಾಯ್ದೆ 2017ರ ಸೆಕ್ಷನ್ 5 (5) ರ ಅಡಿಯಲ್ಲಿ ಉದ್ಯೋಗಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತಹ ಹೆರಿಗೆ ಪ್ರಯೋಜನಗಳನ್ನು ಮಹಿಳೆಯರಿಗೆ ನಿಯೋಜಿಸಲಾದ ಕೆಲಸದ ಸ್ವರೂಪ ನಿರ್ಧರಿಸುತ್ತದೆ. ಸಾಫ್ಟ್‌ವೇರ್ ಉದ್ಯೋಗ, ಡಾಟಾ ಎಂಟ್ರಿ ಮೊದಲಾದವರಿಗೆ ಮೆಟರ್ನಿಟಿ ಬೆನಿಫಿಟ್‌ನಲ್ಲಿ ವರ್ಕ್ ಫ್ರಂ ಹೋಮ್‌ಗೆ ಅವಕಾಶ ನೀಡಬಹುದು. ಆದರೆ ಸೈಟ್ ಇಂಜಿನಿಯರ್, ಮೆಟ್ರೋದಲ್ಲಿ ಕೆಲಸ ಮಾಡಬಹುದು ಇಂಥವರಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿತ್ತು.