ಮೆಟರ್ನಿಟಿ ಬೆನಿಫಿಟ್‌ನಲ್ಲಿ ಎಲ್ಲರಿಗೂ ವರ್ಕ್‌ ಫ್ರಂ ಹೋಮ್ ಆಪ್ಶನ್‌ ಇಲ್ಲ..! ಕಂಡೀಷನ್ಸ್ ಏನು ಗೊತ್ತಾ ?

ಮೆಟರ್ನಿಟಿ ಬೆನಿಫಿಟ್‌ (Maternity Benefit)ನಲ್ಲಿ ಎಲ್ಲರಿಗೂ ವರ್ಕ್‌ ಫ್ರಂ ಹೋಮ್ (Work From Home) ಆಪ್ಶನ್‌ ಇಲ್ಲ..ಗರ್ಭಿಣಿಯರು ಎಲ್ಲರೂ ವರ್ಕ್ ಫ್ರಂ ಹೋಮ್ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಅದಕ್ಕಿರುವ ಕಂಡೀಷನ್ಸ್ ಏನು ಗೊತ್ತಾ ? ಕರ್ನಾಟಕ ಹೈಕೋರ್ಟ್ (Highcourt) ಹೇಳಿದ್ದೇನು ?

Work From Home Under Maternity Benefit Act Can  Availed Only If Work Permits Vin

ಮೆಟರ್ನಿಟಿ ಬೆನಿಫಿಟ್‌ನಲ್ಲಿ ಎಲ್ಲರಿಗೂ ವರ್ಕ್‌ ಫ್ರಂ ಹೋಮ್ ಆಪ್ಶನ್‌ ಇಲ್ಲ..ಗರ್ಭಿಣಿಯರು ಎಲ್ಲರೂ ವರ್ಕ್ ಫ್ರಂ ಹೋಮ್ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಹೆರಿಗೆ ಪ್ರಯೋಜನ ಕಾಯ್ದೆಯಡಿ 'ವರ್ಕ್ ಫ್ರಮ್ ಹೋಮ್' ಕೆಲಸದ ಸ್ವರೂಪ ಅನುಮತಿಸಿದರೆ ಮಾತ್ರ ಗರ್ಭಿಣಿಯರು ಇದರ ಪ್ರಯೋಜನ ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. 

ಹೆರಿಗೆ ಪ್ರಯೋಜನ (ತಿದ್ದುಪಡಿ) ಕಾಯ್ದೆ 2017ರ ಸೆಕ್ಷನ್ 5 (5) ರ ಅಡಿಯಲ್ಲಿ ಉದ್ಯೋಗಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತಹ ಹೆರಿಗೆ ಪ್ರಯೋಜನಗಳನ್ನು ಮಹಿಳೆಯರಿಗೆ ನಿಯೋಜಿಸಲಾದ ಕೆಲಸದ ಸ್ವರೂಪ ನಿರ್ಧರಿಸುತ್ತದೆ. ಸಾಫ್ಟ್‌ವೇರ್ ಉದ್ಯೋಗ, ಡಾಟಾ ಎಂಟ್ರಿ ಮೊದಲಾದವರಿಗೆ ಮೆಟರ್ನಿಟಿ ಬೆನಿಫಿಟ್‌ನಲ್ಲಿ ವರ್ಕ್‌ ಫ್ರಂ ಹೋಮ್‌ಗೆ ಅವಕಾಶ ನೀಡಬಹುದು. ಆದರೆ ಸೈಟ್ ಇಂಜಿನಿಯರ್, ಮೆಟ್ರೋದಲ್ಲಿ ಕೆಲಸ ಮಾಡಬಹುದು ಇಂಥವರಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಹೆರಿಗೆ ಪ್ರಯೋಜನ ಕಾಯ್ದೆಯಡಿ ಕೆಲಸದ ಸ್ವರೂಪ ಅನುಮತಿಸಿದರೆ ಮಾತ್ರ  'ವರ್ಕ್ ಫ್ರಮ್ ಹೋಮ್' ಅವಕಾಶ ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಈ ಮೂಲಕ ಮಹಿಳೆಯೊಬ್ಬಳಿಗೆ ಪರಿಹಾರ ನಿರಾಕರಿಸಿದೆ.

ಮಹಿಳೆಯರಿಗೆ ಗುಡ್‌ನ್ಯೂಸ್: ನಯಾಪೈಸೆ ಖರ್ಚು ಮಾಡ್ದೇ ಪಡೆಯಿರಿ ಹೊಲಿಗೆ ಮೆಷಿನ್

ಪ್ರಕರಣದ ಹಿನ್ನೆಲೆ
ಸಂಸ್ಥೆಯಲ್ಲಿ ಹಿರಿಯ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅರ್ಜಿದಾರರು, ವರ್ಕ್ ಫ್ರಂ ಹೋಮ್ ಅವಕಾಶ ನೀಡದ ಸಂಸ್ಥೆಯ ನಡೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರತಿವಾದಿಯು ತನ್ನ ಪ್ರಾತಿನಿಧ್ಯವನ್ನು ಪೂರ್ವಾವಲೋಕನದ ಪರಿಣಾಮದೊಂದಿಗೆ ಪರಿಗಣಿಸಲು ನಿರ್ದೇಶನವನ್ನು ಕೋರಿದ್ದರು. ಅರ್ಜಿದಾರರ ವೇತನವನ್ನು ಕ್ರಮಬದ್ಧಗೊಳಿಸಲು ಮತ್ತು 24.05.2021ರಿಂದ ತಡೆಹಿಡಿಯಲಾದ ವೇತನವನ್ನು ಬಿಡುಗಡೆ ಮಾಡಲು, ಈ ಸಂವಹನಗಳ ಮೂಲಕ ಅರ್ಜಿದಾರರನ್ನು ತಕ್ಷಣವೇ ಕರ್ತವ್ಯಕ್ಕೆ ಸೇರಲು ಮತ್ತು 24.05.2021 ರಿಂದ ಗೈರುಹಾಜರಿಯನ್ನು ಕ್ರಮಬದ್ಧಗೊಳಿಸುವಂತೆ ಕರೆ ನೀಡಲಾಯಿತು.

ಅರ್ಜಿದಾರರ ವಾದಗಳು
ಮಾತೃತ್ವ ಪ್ರಯೋಜನ ಕಾಯಿದೆ, 1961ರ ನಿಬಂಧನೆಗಳು ಭಾರತ ಸರ್ಕಾರದಿಂದ ನಿಯಂತ್ರಿಸಲ್ಪಡುವ ಪ್ರತಿವಾದಿ-ಸಂಸ್ಥೆಯ ಉದ್ಯೋಗಿಯಾಗಿರುವ ಅರ್ಜಿದಾರರಿಗೆ ಅನ್ವಯಿಸುತ್ತದೆ ಎಂದು ವಾದಿಸಲಾಯಿತು. ಇದಲ್ಲದೆ, ಕಾಯಿದೆಯ ಅಡಿಯಲ್ಲಿ ಒದಗಿಸಲಾದ ಅವಧಿಗೆ ಹೆರಿಗೆ ಪ್ರಯೋಜನವನ್ನು ಪಡೆದ ನಂತರ ಅರ್ಜಿದಾರರಿಗೆ ಮನೆಯಿಂದಲೇ ತನ್ನ ಕೆಲಸವನ್ನು ಮುಂದುವರಿಸಲು ಅನುಮತಿಸಬೇಕು ಎಂದು  1961ರ ಸೆಕ್ಷನ್ 5(5) ಪ್ರಕಾರ ಸೂಚಿಸಲಾಯಿತು.

Kiwi Fruit ಗರ್ಭಿಣಿಗಷ್ಟೇ ಅಲ್ಲ, ಭ್ರೂಣದ ಬೆಳವಣಿಗೆಗೂ ಸಹಾಯಕ

COVID-19 ಸಾಂಕ್ರಾಮಿಕ ರೋಗ. ಹೀಗಾಗಿ, ಕೇಂದ್ರ ಸರ್ಕಾರ/ರಾಜ್ಯ ಸರ್ಕಾರವು ತನ್ನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಅಗತ್ಯವಿಲ್ಲ ಎಂದು ಘೋಷಿಸುವವರೆಗೆ ಮಕ್ಕಳ ಆರೈಕೆ ರಜೆಯನ್ನು ಒದಗಿಸುವುದು ಮತ್ತು ಅರ್ಜಿದಾರರಿಗೆ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡುವುದು ಸಂಸ್ಥೆಯ ಕರ್ತವ್ಯವಾಗಿದೆ ಎಂದು ತಿಳಿಸಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ, ಹಾಲುಣಿಸುವ ತಾಯಂದಿರನ್ನು ಗಮನದಲ್ಲಿಟ್ಟುಕೊಂಡು ಮನೆಯಿಂದಲೇ ಕೆಲಸ ಮಾಡುವಂತೆ ನಿಬಂಧನೆಗಳನ್ನು ಹಾಕಬೇಕು ಎಂದು ಹೇಳಲಾಗಿದೆ.

ಆದರೆ, ಹೆರಿಗೆ ಪ್ರಯೋಜನ (ತಿದ್ದುಪಡಿ) ಕಾಯ್ದೆ 2017 ರ ಸೆಕ್ಷನ್ 5 (5) ರ ಅಡಿಯಲ್ಲಿ ಉದ್ಯೋಗಿಗೆ ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಾಗುವುದಾದರೆ ಮಾತ್ರ ಮಾಡುವಂತೆ ಸೂಚಿಸಬೇಕು. ಮಾಡುತ್ತಿರುವ ಕೆಲಸ ವರ್ಕ್‌ ಫ್ರಂ ಹೋಮ್ ಆಪ್ಶನ್ ಹೊಂದಿಲ್ಲವಾದರೆ ಆ ಅವಕಾಶವನ್ನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಾಗುವ ಸ್ವರೂಪವನ್ನು ಮಾತ್ರ ನೀಡಬಹುದು ಎಂದು ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ. 

Latest Videos
Follow Us:
Download App:
  • android
  • ios