Asianet Suvarna News Asianet Suvarna News

ಬೆಂಗಳೂರಲ್ಲಿ ಓದಿದ್ರೆ ಸಾಕು, ಪುತ್ರಿಗೆ ಡಿಕೆಶಿ ಹಾಕಿದ್ರಾ ಕಂಡೀಷನ್? ಐಶ್ವರ್ಯ ಮುಕ್ತ ಮಾತು!

ಏನೇ ಇದ್ರೂ ಬೆಂಗಳೂರಲ್ಲೇ ಓದು. ಬೆಂಗಳೂರಿಗಿಂತ ಬೇರೆ ಊರು ಬೇಕಾ? ತಮ್ಮ ವಿದ್ಯಾಭ್ಯಾಸ, ಉದ್ಯಮ ಸಾಮ್ರಾಜ್ಯ, ತಂದೆ ಡಿಕೆ ಶಿವಕುಮಾರ್ ಸಲಹೆ ಸೇರಿದಂತೆ ಹಲವು ವಿಚಾರಗಳ ಕುರಿತು ಐಶ್ವರ್ಯ ಡಿಕೆಎಸ್ ಹೆಗ್ಡೆ ಮುಕ್ತವಾಗಿ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿಯ ಕಾರ್ಯಕ್ರಮದಲ್ಲಿ ಐಶ್ವರ್ಯ ಮುಕ್ತವಾಗಿ ಹಲವು ವಿಚಾರ ಹಂಚಿಕೊಂಡಿದ್ದಾರೆ.
 

Bengaluru Enough for study DK Shivakumar Daughter aisshwarya dks hegde reveals college days ckm
Author
First Published Jun 17, 2024, 10:30 PM IST

ಬೆಂಗಳೂರು(ಜೂ.17) ದೊಡ್ಡ ಕುಟುಂಬ, ಅಧಿಕಾರ, ಹಣ ಎಲ್ಲ ಇರುವು ಕುಟುಂಬದಿಂದ ಬಂದು ಸಾಧನೆ ಹಾದಿಯಲ್ಲಿ ನಡೆಯುವುದು ಕೂಡ ಸುಲಭದ ಮಾತಲ್ಲ. ಕಾರಣ ಹೀಗೆ ಬಂದವರು ಶೂನ್ಯದಿಂದ ಅಲ್ಲ ಮೈನಸ್‌ನಿಂದ ಎಲ್ಲವನ್ನು ಶುರುಮಾಡಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಹೇಳಿದ್ದಾರೆ. ರ್ಯಾಪಿಡ್ ರಶ್ಮಿ ನಡೆಸಿಕೊಡುವ ಜಸ್ಟ್ ಕ್ಯೂರಿಯಸ್ ಕಾರ್ಯಕ್ರಮದಲ್ಲಿ ಸಾಧನೆಯ ಪಥ, ಕಾಲೇಜು ಜೀವನ ಸೇರಿದಂತೆ ಹಲವು ವಿಚಾರಗಳ ಕುರಿತು ಐಶ್ವರ್ಯ ಮಾತನಾಡಿದ್ದಾರೆ. 

ಕಾಲೇಜು ವ್ಯಾಸಾಂಗ ಕುರಿತು ತಮ್ಮ ನೆನಪುಗಳನ್ನು ಬಿಚ್ಚಿಟ್ಟ ಐಶ್ವರ್ಯ ಡಿಕೆಎಸ್ ಹೆಗ್ಡೆ, ನಮ್ಮ ಮನೆಯಲ್ಲೇ ಹೊರಗಡೆ ಕಳುಹಿಸುವ ಸೀನ್ ಇರಲಿಲ್ಲ. ಏನೇ ಆದರೂ ಬೆಂಗಳೂರಲ್ಲೇ ಓದಿದರೆ ಸಾಕು. ಬೆಂಗಳೂರಿಗಿಂತ ಬೇರೆ ಊರು ಬೇಕಾ? ಇಡೀ ವಿಶ್ವವೇ ಬೆಂಗಳೂರನ್ನ ನೋಡುತ್ತಿದೆ. ಹೀಗಾಗಿ ನನ್ನ ಎಲ್ಲಾ ವ್ಯಾಸಾಂಗ ಬೆಂಗಳೂರಲ್ಲೇ ಆಗಿದೆ. ನಾನು ಸಂಪೂರ್ಣ ಬೆಂಗಳೂರಿನ ಪ್ರಾಡಕ್ಟ್ ಅನ್ನೋದರಲ್ಲಿ ನನಗೆ ಹೆಮ್ಮೆ ಇದೆ ಎಂದು ಐಶ್ವರ್ಯ ಡಿಕೆಎಸ್ ಹೆಗ್ಡೆ ಹೇಳಿದ್ದಾರೆ.

ಮನಗೆದ್ದ ಸೊಸೆ ಐಶ್ವರ್ಯಗೆ ಅತ್ತೆಯ ಉಡುಗೊರೆ, ಡಿಕೆಶಿ ಪುತ್ರಿ ಹೆಗಲಿಗೆ ಹೊಸ ಜವಾಬ್ದಾರಿ!

ಸಮಾಜದಲ್ಲಿ ಗುರುತಿಸಿರುವ ಒಂದು ಕುಟುಂಬದಿಂದ ಬಂದು ಸಾಧನೆ ಮಾಡುವುದು ಸುಲಭದ ಮಾತಲ್ಲ. ಕಾರಣ ಎಲ್ಲರೂ ಒಂದು ಜಡ್ಜ್‌ಮೆಂಟ್‌ನಲ್ಲಿ ನಿಮ್ಮನ್ನ ನೋಡುತ್ತಾರೆ. ಅವರು ಹೀಗೆ ಬೆಳೆದಿರುತ್ತಾರೆ, ಅವರಿಗೇನು ದೊಡ್ಡಿದೆ. ಅದರಲ್ಲೇ ಬೆಳದೆದಿದ್ದಾರೆ. ಅವರಿಗೆ ಎಲ್ಲಾ ಅನುಕೂಲಗಳಿವೆ ಎಂದು ಜನ ಹೇಳುತ್ತಾರೆ. ಜನರನ್ನು ಎದುರಿಸುವುದು ಕೂಡ ಸವಾಲು. ಕಾರಣ ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲ ಕುಟುಂಬದಿಂದ ಬಂದಾಗ ಶೂನ್ಯದಿಂದ ಜೀವನ ಶುರುವಾಗಲ್ಲ. ಬದಲಾಗಲಿ ಮೈನಸ್‌ನಿಂದ ಜೀವನ ಶುರು ಮಾಡಬೇಕಾಗುತ್ತದೆ.

 

 

ಕಾಲೇಜಿಗೆ ಹೋಗುವಾಗ ಡಿಕೆಎಸ್ ಅನ್ನೋ ಹೆಸರು ತೆಗೆದು ಪ್ರವೇಶ ಪಡೆದಿದ್ದೆ. ನಾನು ಈ ಕಾಲೇಜಿನ ಚೇರ್ಮೆನ್ ಡಿಕೆ ಶಿವುಕಮಾರ್ ಮಗಳು ಅನ್ನೋದು ಯಾರಿಗೂ ಗೊತ್ತಾಗಬಾರದು ಅನ್ನೋದು ನನ್ನ ಉದ್ದೇಶವಾಗಿತ್ತು. ಪ್ರಿನ್ಸಿಪಾಲ್ ಜೊತೆಗೂ ಈ ಮಾತು ಸ್ಪಷ್ಟಪಡಿಸಿ ಕಾಲೇಜಿಗೆ ಹೋಗಿದ್ದೆ. ಆದರೆ ಕೆಲ ದಿನಗಳಲ್ಲೇ ಗೊತ್ತಾಗಿಬಿಟ್ಟಿತು. ಆರಂಭಿಕ ವಾರದಲ್ಲಿ ಎಲ್ಲಾ ಗೆಳೆಯರ ಮಾತನಾಡಿಸಿದೆ. ಹಲವರು ಆತ್ಮೀಯರಾದರು. ಆ ವೇಳೆ ಯಾರಿಗೂ ನಾನು ಡಿಕೆಶಿ ಮಗಳು ಅನ್ನೋದು ಗೊತ್ತಿರಲಿಲ್ಲ. ಆದರೆ ತಿಳಿದಾಗ ಟೀಕೆಗಳು ಹೆಚ್ಚಾಯಿತು. ಚೆನ್ನಾಗಿ ಓದಿದರೂ, ಇವಳಿಗೇನು ಚೇರ್ಮೆನ್ ಮಗಳು ಮಾರ್ಕ್ಸ್ ಕೊಡ್ತಾರೆ ಅಂತಾ ಮಾತಾಡುತ್ತಿದ್ದರು ಎಂದು ಐಶ್ವರ್ಯ ಹೇಳಿದ್ದಾರೆ.

ಐಶ್ವರ್ಯ ಡಿಕೆಎಸ್ ಹೆಗ್ಡೆ ಪಕ್ವ ಮಾತುಗಳು, ಕುಟುಂಬದ ಮಾರ್ಗದರ್ಶನ, ನಾಯಕತ್ವ ಗುಣಗಳಿಂದ ದೈತ್ಯ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಉದ್ಯಮ ಸಾಮ್ರಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಅನ್ನೋದು ಈ ಸಂದರ್ಶನದಲ್ಲಿ ಸ್ಪಷ್ಟವಾಗುತ್ತಿದೆ. ನಾವು ಬದುಕಿನಲ್ಲಿ ಏನು ಆಗುತ್ತೆ ಅದರಿಂದ ಪಾಠ ಕಲಿಯುತ್ತಾ ಹೋದರೆ ಜೀವನ ತುಂಬಾ ಸಿಂಪಲ್ ಎಂದಿದ್ದಾರೆ. ಪ್ರತಿ ದಿನ ಹೊಸ ದಿನವಾಗಿರುತ್ತದೆ. ಪ್ರತಿ ದಿನ ಹೊಸದು ಕಲಿಯಬೇಕಾಗುತ್ತದೆ ಎಂದು ಐಶ್ವರ್ಯ ಡಿಕೆಎಸ್ ಹೆಗ್ಡೆ ಹೇಳಿದ್ದಾರೆ. 

ನ್ಯೂಸ್ ಪೇಪರ್ ಡ್ರೆಸ್‌ನಲ್ಲಿ ಮಿಂಚಿದ ಡಿಕೆಶಿ ಪುತ್ರಿ, ಐಶ್ವರ್ಯ ನಮ್ಮ ಕ್ರಶ್ ಎಂದ ಫ್ಯಾನ್ಸ್!

ಬದುಕಿನ ಪಾಠಗಳನ್ನು ಐಶ್ವರ್ಯ ಡಿಕೆಎಸ್ ಹೆಗ್ಡೆ ಹೇಳಿದ್ದಾರೆ. ಮುಕ್ತ ಮಾತುಕತೆಯಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಭರ್ಜರಿ ಕಮೆಂಟ್ಸ್ ಹಾಗೂ ಲೈಕ್ಸ್ ವ್ಯಕ್ತವಾಗಿದೆ.


 

Latest Videos
Follow Us:
Download App:
  • android
  • ios