Asianet Suvarna News Asianet Suvarna News

ನೋಡೋಕೆ ಕ್ಯೂಟ್, ಸಖತ್‌ ಬ್ರಿಲಿಯಂಟ್‌, ಬ್ಯೂಟಿ ವಿತ್‌ ಬ್ರೈನ್ ಎಂದೇ ಕರೆಸಿಕೊಳ್ಳೋ IAS ಆಫೀಸರ್‌ ಈಕೆ!

ನೋಡೋಕೆ ಸಿಕ್ಕಾಪಟ್ಟೆ ಕ್ಯೂಟು, ಜೊತೆಗೆ ಸಖತ್‌ ಬ್ರಿಲಿಯಂಟ್. ಬ್ಯೂಟಿ ವಿತ್‌ ಬ್ರೈನ್ ಎಂದೇ ಕರೆಸಿಕೊಳ್ಳೋ ಐಎಎಸ್ ಆಫೀಸರ್ ಈಕೆ. ಯುಪಿಎಸ್‌ಸಿ ಪರೀಕ್ಷೆ ಆಗೋಕೆ ಪಣ ತೊಟ್ಟು ಮೊಬೈಲ್‌ ಬಳಸೋದನ್ನೆ ಬಿಟ್ಬಿಟ್ಟಿದ್ರು..ಯಾರವರು?

Beauty with Brain IAS officer Pari Bishnoi, who lived like a monk to clear UPSC exam Vin
Author
First Published Mar 14, 2024, 1:46 PM IST

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅತ್ಯಂತ ಕಷ್ಟಕರವಾದ ಕೆಲಸ. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಪಾಸ್ ಆಗುವ ಕನಸಿನೊಂದಿಗೆ ದೊಡ್ಡ ನಗರಗಳಲ್ಲಿ ಅತ್ಯುತ್ತಮ ತರಬೇತಿ ಪಡೆಯಲು ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಊರನ್ನು ಬಿಟ್ಟು ಬರುತ್ತಾರೆ. ಹಗಲೂ ರಾತ್ರಿ ಕಷ್ಟಪಟ್ಟು ಓದುತ್ತಾರೆ. ವರ್ಷಗಳ ಕೇವಲ ಈ ಒಂದು ಪರೀಕ್ಷೆಗಾಗಿಯೇ ಸತತವಾಗಿ ಪ್ರಯತ್ನ ಮಾಡುವವರಿದ್ದಾರೆ. ಹಲವು ಅಂಟೆಪ್ಟ್‌ನಲ್ಲಿ ಫೇಲ್ ಆದರೂ ಮತ್ತೆ ಮತ್ತೆ ಪರೀಕ್ಷೆ ಬರೆದು ಪಾಸ್ ಆಗಲು ಪ್ರಯತ್ನಿಸುತ್ತಾರೆ. ಹೀಗಿದ್ದೂ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಾರೆ.

ಐಎಎಸ್ ಪರಿ ಬಿಷ್ಣೋಯ್, ಹೀಗೆ ನಾಗರಿಕ ಸೇವಕರಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸಮರ್ಥರಾದ ಕೆಲವೇ ಕೆಲವರಲ್ಲಿ ಒಬ್ಬರು. ಪಾರಿ ಬಿಷ್ಣೋಯ್ ರಾಜಸ್ಥಾನದ ಬಿಕಾನೇರ್ ಮೂಲದವರು. ಆಕೆಯ ತಾಯಿ ಜಿಆರ್‌ಪಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದು, ಆಕೆಯ ತಂದೆ ವಕೀಲರಾಗಿದ್ದಾರೆ.

ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ ಈ ಸುಂದರಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸ್ ಮಾಡಿದ ಐಪಿಎಸ್ ಅಧಿಕಾರಿ

ಬಿಷ್ಣೋಯಿ ತಮ್ಮ ಶಾಲಾ ಶಿಕ್ಷಣವನ್ನು ಅಜ್ಮೀರ್ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ಪೂರ್ತಿಗೊಳಿಸಿದರು. ಅದರ ನಂತರ, ದೆಹಲಿ ವಿಶ್ವವಿದ್ಯಾನಿಲಯದ ಇಂದ್ರಪ್ರಸ್ಥ ಮಹಿಳಾ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡಿದರು. ಬಿಷ್ಣೋಯ್, ಅಜ್ಮೀರ್‌ನ MDS ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಪರಿ ಬಿಷ್ಣೋಯ್ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಯೋಚಿಸಲು ಪ್ರಾರಂಭಿಸಿದರು. ಪರೀಕ್ಷೆಗೆ ತಯಾರಾಗಲು, ಪರಿ ತನ್ನ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಳಿಸಿ ತನ್ನ ಮೊಬೈಲ್ ಫೋನ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರತ್ತ ಮಾತ್ರ ಗಮನಹರಿಸಿದ್ದರು. ಪರಿ 2019ರಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇದು ಅವರ ಮೂರನೇ ಪ್ರಯತ್ನವಾಗಿತ್ತು. ಪರೀಕ್ಷೆಯಲ್ಲಿ ಪರಿ, ಅಖಿಲ ಭಾರತ ಶ್ರೇಣಿ (AIR) 30 ರ್ಯಾಂಕ್ ಪಡೆದುಕೊಂಡಿದ್ದಾರೆ. ಪ್ರಸ್ತುತ ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅವರು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ಅನಿಲ ಸಚಿವಾಲಯದಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದರು.

ಬೋಲ್ಡ್‌ & ಬ್ಯೂಟಿಫುಲ್‌ ಈ ಐಎಎಸ್‌ ಆಫೀಸರ್‌, ಸಖತ್ ಹಾಟ್ ಆಗಿರೋ ಪ್ರಿಯಾಂಕ ಯಾವ ಮಾಡೆಲ್‌ಗೂ ಕಮ್ಮಿಯಿಲ್ಲ!

ಇತ್ತೀಚೆಗಷ್ಟೇ, ಹಿಸಾರ್‌ನ ಆದಂಪುರದಿಂದ ಹರಿಯಾಣ ವಿಧಾನಸಭೆಯ ಕಿರಿಯ ಸದಸ್ಯೆ ಭವ್ಯಾ ಬಿಷ್ಣೋಯ್ ಅವರನ್ನು ಮದುವೆಯಾಗಿ ಸುದ್ದಿಯಲ್ಲಿದ್ದರು. ಭವ್ಯಾ ಅವರು ಬಿಜೆಪಿ ನಾಯಕ ಕುಲದೀಪ್ ಬಿಷ್ಣೋಯ್ ಅವರ ಪುತ್ರ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ.

Follow Us:
Download App:
  • android
  • ios