ಪ್ರೀತಿ ಉಳಿಸಿಕೊಳ್ಳಬೇಕೆಂದ್ರೆ ಕ್ಲೀನ್ ಶೇವ್ ಮಾಡಿಕೊಳ್ಳಿ: ಏನಿದು ಹೊಸ ಅಭಿಯಾನ?
ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರ ಪ್ರತಿಭಟನೆಯೊಂದು ಸುದ್ದಿ ಮಾಡ್ತಿದೆ. ಗಡ್ಡ ಬಿಟ್ಟ ಹುಡುಗರು ಬೇಡ ಎನ್ನುತ್ತಿರುವ ಗರ್ಲ್ಸ್, ಬೀದಿಗಿಳಿದು ರ್ಯಾಲಿ ಮಾಡಿದ್ದಾರೆ. ಅವರ ಘೋಷಣೆ ಕೇಳಿ ಜನರು ದಂಗಾಗಿದ್ದಾರೆ.
ಸರ್ಕಾರದ ಪರ, ವಿರೋಧ, ಸಮಾಜದ ಉದ್ಧಾರಕ್ಕೆ ಜನರು ಪ್ರತಿಭಟನೆ (protest) ಮಾಡೋದನ್ನು ನಾವು ನೋಡಿದ್ದೇವೆ. ಆದ್ರೆ ಈ ಹುಡುಗಿಯರು ವಿಭಿನ್ನ ಕಾರಣಕ್ಕೆ ಪ್ರೊಟೆಸ್ಟ್ ಮಾಡ್ತಿದ್ದಾರೆ. ಅದನ್ನು ಕೇಳಿದ ಗಡ್ಡ (beard) ಬಿಟ್ಟ ಹುಡುಗ್ರು ಪಾರ್ಲರ್ ಗೆ ಓಡಿದ್ದಾರೆ. ಯಸ್, ಸೋಶಿಯಲ್ ಮೀಡಿಯಾ (Social Media)ದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಹುಡುಗಿಯರು ಕಾಲೇಜ್ ವಿಷ್ಯಕ್ಕಾಗ್ಲಿ ಇಲ್ಲ ಮನೆ ವಿಷ್ಯಕ್ಕಾಗ್ಲಿ ಈ ಪ್ರೊಟೆಸ್ಟ್ ಮಾಡ್ತಿಲ್ಲ. ಹುಡುಗ್ರ ಗಡ್ಡ ಇವರ ಪ್ರತಿಭಟನೆ ಸಬ್ಜೆಕ್ಟ್.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬೋರ್ಡ್ ಹಿಡಿದು ಹುಡುಗಿಯರು ಪ್ರತಿಭಟನೆ ಹೊರಟಿರೋದನ್ನು ನೀವು ನೋಡ್ಬಹುದು. ಅದ್ರಲ್ಲಿ ಹುಡುಗಿಯರೆಲ್ಲ ಗಡ್ಡಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದಾರೆ. ಇದು ಮಾಮೂಲಿ ಪ್ರತಿಭಟನೆಯಲ್ಲ. ಹುಡುಗ್ರ ಗಡ್ಡದ ವಿರುದ್ಧ ಹುಡುಗಿಯರು ನಡೆಸುತ್ತಿರುವ ಪ್ರೊಟೆಸ್ಟ್. ಈ ಹುಡುಗಿಯರು ಕ್ಲೀನ್ ಶೇವ್ ಬಾಯ್‌ಫ್ರೆಂಡ್ (boyfriend)ಗಾಗಿ ರ್ಯಾಲಿ ನಡೆಸ್ತಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಖುರ್ಚಿಯಲ್ಲಿ ಬಾಲೆ, ಈಕೆಯ ಸಾಧನೆಗೊಂದು ಸಲಾಂ
ಬೋರ್ಡ್ ಮೇಲೆ, ನೋ ಕ್ಲೀನ್ ಶೇವ್ ನೋ ಲವ್, ಗಡ್ಡ ತೆಗೆಯಿರಿ, ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳಿ, ಗಡ್ಡ ಬಿಟ್ಕೊಳ್ಳಿ ಇಲ್ಲ ಗರ್ಲ್ ಫ್ರೆಂಡ್ ಇಟ್ಕೊಳ್ಳಿ, ಆಯ್ಕೆ ನಿಮ್ಮದಾಗಿದೆ. ಗಡ್ಡವಿಲ್ಲದ ಗೆಳೆಯನನ್ನು ಪಡೆಯಬೇಕೆಂಬ ಆಸೆ ನಮ್ಮದು ಎಂಬ ಬೋರ್ಡ್ ಹಿಡಿದು, ಘೋಷಣೆ ಕೂಗ್ತಾ ಹುಡುಗಿಯರು ಮುಂದೆ ಹೋಗ್ತಿದ್ದಾರೆ.
ಈ ಹುಡುಗಿಯರ ಪ್ರತಿಭಟನೆ ನೋಡಿದ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದಾರೆ. ಇದು ಯಾವ ರೀತಿ ರ್ಯಾಲಿ ಎಂಬುದು ಅವರಿಗೆ ಗೊತ್ತಾಗ್ತಿಲ್ಲ. ಈ ವಿಡಿಯೋ ನಿಜವಾ ಇಲ್ಲ ರೀಲ್ ಗಾಗಿ ಮಾಡಲಾಗಿದೆಯಾ ಎಂಬುದು ಸ್ಪಷ್ಟವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಕೆಲವರು ಹುಡುಗಿಯರ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹುಡುಗ್ರು ಗಡ್ಡವಿದ್ದಾಗ ಒಂದು ರೀತಿ ಕಾಣ್ತಾರೆ. ಶೇವ್ ಮಾಡಿದಾಗ ಇನ್ನೊಂದು ರೀತಿ ಕಾಣ್ತಾರೆ. ನನಗೆ ಇದ್ರ ಅನುಭವವಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಪ್ರತಿಭಟನೆ ನನ್ನ ಕಣ್ಣುತೆರೆಸಿದೆ, ಇಷ್ಟು ದಿನ ಯಾಕೆ ನಾನು ಸಿಂಗಲ್ ಆಗಿದ್ದೆ ಎಂಬುದು ಗೊತ್ತಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಹುಡುಗಿಯರ ಗಡ್ಡದಾರಿ ಪ್ರತಿಭಟನೆಗೆ ಎಕ್ಸ್ ಖಾತೆದಾರನೊಬ್ಬ ಟಕ್ಕರ್ ನೀಡಿದ್ದಾನೆ. ತೂಕ ಇಳಿಸಿ ಅಥವಾ ನಿಮ್ಮ ಗೆಳೆಯನನ್ನು ಮರೆತುಬಿಡಿ. ಸ್ಲಿಮ್ ಗೆಳತಿಯನ್ನು ಹೊಂದಬೇಕೆಂಬ ಆಸೆ ಈಗ ನಮ್ಮ ಮನಸ್ಸಿನಲ್ಲಿದೆ. ತೂಕ ಕಡಿಮೆಯಾಗಿಲ್ಲ ಅಂದ್ರೆ ಗೆಳೆಯನಿಲ್ಲ. ತೆಳ್ಳಗಿನ ದೇಹವಿಲ್ಲ, ಪ್ರೀತಿ ಇಲ್ಲ ಎಂಬ ಘೋಷಣೆಯೊಂದಿಗೆ ಪುರುಷರು ಪ್ರತಿಭಟನೆ ನಡೆಸಿದ್ರೆ ಹೇಗಿರುತ್ತೆ ಎಂದು ಪ್ರಶ್ನೆ ಮಾಡಿದ್ದಾನೆ. ತರಗತಿಗೆ ಹೋಗದ ವಿದ್ಯಾರ್ಥಿನಿಯರು ಈ ಕೆಲಸ ಮಾಡಿದ್ದು, ಮುಂದಿದೆ ಅವರಿಗೆ ಮಾರಿಹಬ್ಬ ಎಂದು ಮತ್ತೊಂದಿಷ್ಟು ಮಂದಿ ಕಾಲೆಳೆದಿದ್ದಾರೆ.
ಕ್ಯಾಟ್ವಾಕ್ನಲ್ಲಿ ಕಾಲಿಗೆ ಡ್ರೆಸ್ಗೆ ಸಿಕ್ಕು ಉರುಳಿ ಬಿದ್ದ ಮಾಡೆಲ್: ಶಾಕಿಂಗ್ ವಿಡಿಯೋ ವೈರಲ್
ಶೇವ್ ಹಾಗೂ ವಿತ್ ಔಟ್ ಶೇವ್ ಇದು ಪುರುಷರ ಆಯ್ಕೆಯಾದ್ರೂ ಮಹಿಳೆಯರನ್ನು ಆಕರ್ಷಿಸುವುದು ಯಾವ ಲುಕ್ ಎನ್ನುವ ಬಗ್ಗೆ ಆಗಾಗ ಚರ್ಚೆ ನಡೆಯುತ್ಲೇ ಇರುತ್ತೆ. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಪ್ರಧಾನಿ ನರೇಂದ್ರ ಮೋದಿ ಗಡ್ಡ ಬಿಟ್ಟಾಗ ಅದು ಟ್ರೆಂಡ್ ಆಗಿತ್ತು. ಅನೇಕ ಪುರುಷರು ಗಡ್ಡ ಬೆಳೆಸಿಕೊಂಡು ಓಡಾಡ್ತಿದ್ದರು. ಗಡ್ಡ, ಹುಡುಗರ ಲುಕ್ ಬದಲಿಸುತ್ತೆ. ಕೆಲವರು ತಮ್ಮ ಮುಖದ ಮೇಲಿನ ಕಲೆಯನ್ನು ಮುಚ್ಚಿಡಲು ಉದ್ದದ ಗಡ್ಡ ಬೆಳೆಸಿದ್ರೆ ಮತ್ತೆ ಕೆಲವರು ಸ್ಟೈಲ್ ಎನ್ನುತ್ತಾರೆ. ಗಡ್ಡ ಬಿಟ್ಟರೆ ಮುಗಿಯಲಿಲ್ಲ. ಅದ್ರ ಆರೈಕೆ ಮುಖ್ಯ. ಟ್ರಿಮ್, ಶೈನ್ ಎಲ್ಲವನ್ನು ಗಮನಿಸಬೇಕಾಗುತ್ತದೆ. ಅದೇ ಕ್ಲೀನ್ ಶೇವ್ ಮಾಡುವವರಿಗೆ ಇದ್ರ ಚಿಂತೆ ಇಲ್ಲ. ಹುಡುಗಿ ಬೇಕಾ, ಗಡ್ಡ ಬೇಕಾ, ಆಯ್ಕೆ ನಿಮ್ಮದು.
Clean shave ke liye ladkiyon ne kiya kalesh🤯 pic.twitter.com/QkmIROdDyk
— Ghar Ke Kalesh (@gharkekalesh) October 17, 2024