Asianet Suvarna News Asianet Suvarna News

ಜಿಲ್ಲಾ ಮ್ಯಾಜಿಸ್ಟ್ರೇಟ್ ಖುರ್ಚಿಯಲ್ಲಿ ಬಾಲೆ, ಈಕೆಯ ಸಾಧನೆಗೊಂದು ಸಲಾಂ

ವಿದ್ಯಾರ್ಥಿಗಳಿಗೆ ಓದು ಬಹಳ ಮುಖ್ಯ. ಅತಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದವರಿಗೆ ಅವಕಾಶಗಳು ಒದ್ಕೊಂಡು ಬರುತ್ವೆ. ಅದಕ್ಕೆ ನಿಧಿ ಯಾದವ್ ಉತ್ತಮ ನಿದರ್ಶನ. ಹತ್ತನೇ ಕ್ಲಾಸ್ ನಲ್ಲಿ ಅವರು ಮಾಡಿದ ಸಾಧನೆ ಈಗ ಡಿಎಂ ಖುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ.
 

Girl topper nidhiyadav appointed as one day dm under mission roo
Author
First Published Oct 17, 2024, 10:29 AM IST | Last Updated Oct 17, 2024, 10:44 AM IST

ನಿಧಿ ಯಾದವ್ (Nidhi Yadav). ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ವಿದ್ಯಾರ್ಥಿನಿ (student). ಉತ್ತರ ಪ್ರದೇಶದ ಮಹಾರಾಜಾ ಗಂಜ್ (Maharaja ganj) ಜನರಿಗೆ ನಿಧಿ ಯಾದವ್ ಈಗ ಮನೆಮಗಳಾಗಿದ್ದಾರೆ. ಜಿಲ್ಲೆಯ ಟಾಪರ್ ವಿದ್ಯಾರ್ಥಿನಿ ನಿಧಿ ಯಾದವ್ ಒಂದಿ ದಿನದ ಡಿಎಂ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಅವರನ್ನು ಮಿಷನ್ ಶಕ್ತಿ ಅಡಿಯಲ್ಲಿ ಒಂದು ದಿನದ ಜಿಲ್ಲಾ ಮ್ಯಾಜಿಸ್ಟ್ರೇಟ್ (District Magistrate)ಆಗಿ ನಾಮನಿರ್ದೇಶನ ಮಾಡಲಾಗಿತ್ತು. ಡಿಎಂ ಅನುನಯ್ ಝಾ ಅವರು, ನಿಧಿ ಯಾದವ್ ಅವರಿಗೆ ತಮ್ಮ ಅಧಿಕಾರವನ್ನು ಒಂದು ದಿನದ ಮಟ್ಟಿಗೆ ಬಿಟ್ಟುಕೊಟ್ಟಿದ್ದರು. 

ನಿಧಿ ಯಾದವ್, ಡಿಎಂ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿರುವ ಕಂದಾಯ ವಿಷಯಗಳಿಗೆ ಸಂಬಂಧಿಸಿದ ಕಡತಗಳ ಪರಿಶೀಲನೆ ಮಾಡಿದರು. ಡಿಎಂ ಆಗ್ಬೇಕು ಎನ್ನುವುದು ನಿಧಿ ಯಾದವ್ ಕನಸು. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ, ಅವರಿಗೆ ನೆರವಾಗಬೇಕು ಎಂಬ ಮಹದಾಸೆಯನ್ನು ನಿಧಿ ಯಾದವ್ ಹೊಂದಿದ್ದಾರೆ.  

ಭಾರತದಲ್ಲಿರುವ 5 ದುಬಾರಿ ಶಾಲೆಗಳು; ಇಲ್ಲಿನ ಶುಲ್ಕದಲ್ಲಿ ಬಡವರು ಮನೆ ಕಟ್ಟಿಕೊಳ್ಳಬಹುದು

ನಿಧಿ ಯಾದವ್ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಟಾಪರ್. ಅವರ ಸಾಧನೆಗೆ ಕುಟುಂಬ ಸಂಪೂರ್ಣ ಬೆಂಬಲ ನೀಡಿದೆ. ಈಗ ನಿಧಿ ಯಾದವ್ ಗೋರಖ್‌ಪುರದಲ್ಲಿ 11ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಇದ್ರ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ನಿಧಿ ಮೊದಲಿನಿಂದಲೂ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಪ್ರತಿ ವರ್ಷ ಟಾಪರ್ ಆಗಿ ಉಳಿದಿದ್ದಾರೆ. ತಂದೆ-ತಾಯಿ ಹಾಗೂ ಕುಟುಂಬದವರು ಓದುವ ನಿಟ್ಟಿನಲ್ಲಿ ಸದಾ ಬೆಂಬಲ ನೀಡುತ್ತಿದ್ದು, ಇದು ನಿಧಿ ಯಾದವ್ ಅವರನ್ನು ನಿರಂತರವಾಗಿ ಮುನ್ನಡೆಯಲು ಪ್ರೇರಣೆ ನೀಡಿದೆ. 

ಮಶಿನ್ ಶಕ್ತಿ ಅಡಿಯಲ್ಲಿ ಮಹಿಳಾ ಕಲ್ಯಾಣ ವಿಭಾಗ, ನಿಧಿ ಯಾದವ್ ಗೆ ಈ ಅಧಿಕಾರವನ್ನು ಕಲ್ಪಿಸಿತ್ತು. ಒಂದು ದಿನದ ಡಿಎಂ ಆದ ನಿಧಿ ಯಾದವ್, ಮೊದಲು ಅಧಿಕಾರಿಗಳ ಪರಿಚಯ ಮಾಡಿಕೊಂಡ್ರು. ನಂತ್ರ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ್ರು. ಗ್ರಾಮೀಣ ಅಭಿವೃದ್ಧಿ, ಪೊಲೀಸ್ ಸೇರಿದಂತೆ ಎಂಟು ಪ್ರಕರಣಗಳ ವಿಚಾರಣೆ ನಡೆಸಿದ್ರು. 

ಡಿಎಂ ಅನುನಯ್ ಝಾ ಅವರಿಂದ ನಿಧಿ ಯಾದವ್ ಸ್ಫೂರ್ತಿ ಪಡೆದಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ನಿಧಿ ಯಾದವ್, ಅನುನಯ್ ಝಾ  ಅವರಿಗೆ ಧನ್ಯವಾದ ಹೇಳಿದ್ದಾರೆ. ಅವರಂತೆ ನಾನು ಮೊದಲು ಐಐಟಿ ಮಾಡಲು ಬಯಸುತ್ತೇನೆ. ನಂತರ ಆಡಳಿತ ಸೇವೆಗೆ ಹೋಗಿ ಸಾರ್ವಜನಿಕ ಸೇವೆಗೆ ಹೋಗುತ್ತೇನೆ ಎಂದು ನಿಧಿ ಹೇಳಿದ್ದಾರೆ. ಈ ಒಂದು ದಿನದ ಅನುಭವ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನನ್ನ ಕನಸು ಮತ್ತಷ್ಟು ಬಲಗೊಂಡಿದೆ. ಇದು ನನ್ನ ಜೀವನದ ಮಹತ್ವದ ದಿನ ಎಂದು ನಿಧಿ ಹೇಳಿದ್ದಾರೆ. ತನ್ನ ಯಶಸ್ಸಿನ ದೊಡ್ಡ ಶ್ರೇಯಸ್ಸು ತನ್ನ ಹೆತ್ತವರಿಗೆ ಸಲ್ಲುತ್ತದೆ ಎನ್ನುತ್ತ ಪಾಲಕರಿಗೆ ಧನ್ಯವಾದ ಹೇಳಿದ ನಿಧಿ ಯಾದವ್, ನನ್ನ ಸಾಧನೆಗೆ ತನ್ನ ಕುಟುಂಬದ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ. ಅವರ ಸಹಕಾರದಿಂದ ನಾನು ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ನಿಧಿ ಯಾದವ್ ಹೇಳಿದ್ದಾರೆ.

10ನೇ ತರಗತಿ ಪಾಸ್‌ ಆದವರಿಗೆ ರೈಲ್ವೆಯಲ್ಲಿ ಬಂಪರ್‌ ಆಫರ್

ನಿಧಿ ಅವರಿಗೆ ಅವರ ತಂದೆ ಸಂಜಯ್ ಯಾದವ್ ಮತ್ತು ಸಹೋದರಿ ಯಾವಾಗಲೂ ಸಲಹೆಗಳನ್ನು ನೀಡುತ್ತಿದ್ದರು. ಅಧ್ಯಯನದ ಬಗ್ಗೆ ಸ್ಫೂರ್ತಿ ನೀಡುತ್ತಿದ್ದರು. ಅವರು ಎಲ್ಲ ರೀತಿಯಲ್ಲೂ ನಿಧಿಗೆ ಬೆಂಬಲ ನೀಡಿದ್ದರು ಮತ್ತು ಅಧ್ಯಯನ ಮಾಡಲು ಪ್ರೇರೇಪಿಸಿದ್ದರು. ನಿಧಿ ಯಾದವ್ ಈ ಸಾಧನೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ಓದಲು ಪ್ರೇರಣೆ ನೀಡಿದೆ. 

Latest Videos
Follow Us:
Download App:
  • android
  • ios