ಕ್ಯಾಟ್ವಾಕ್ ಮಾಡುವಾಗ ಕಾಲಿಗೆ ಡ್ರೆಸ್ ಸಿಕ್ಕಿ ಉರುಳಿ ಬಿದ್ದ ಮಾಡೆಲ್: ವಿಡಿಯೋ ವೈರಲ್
ಕ್ಯಾಟ್ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ಡ್ರೆಸ್ಗೆ ಸಿಕ್ಕು ಮಾಡೆಲ್ ಒಬ್ಬರು ಬಿದ್ದಿರುವ ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಹೇಳ್ತಿರೋದೇನು?
ಚಿತ್ರ ನಟಿಯರು, ಮಾಡೆಲ್ಗಳು ಎಂದರೆ ಹಾಗೆ ಅಲ್ವೆ? ಫಂಕ್ಷನ್ಗಳಿಗೆ ಹೋಗುವಾಗ, ರ್ಯಾಂಪ್ ಮೇಲೆ ನಡೆಯುವಾಗ, ರೆಡ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡುವಾಗ ಅವರ ಭಾರಿ ಡ್ರೆಸ್ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್ ಆಗಿ ಸಕತ್ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.
ಆದರೆ ಕೆಲವೊಮ್ಮೆ ನಿಜವಾಗಿಯೂ ಅನಾಹುತಗಳು ಆಗಿಬಿಡುತ್ತವೆ. ಉದ್ದನೆಯ ಡ್ರೆಸ್ ಕಾಲಿಗೆ ಸಿಕ್ಕು ಎಡವಿ ಬೀಳುವ ಹಲವು ನಟಿಯರ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅವರ ಸಹಾಯಕರು ಬಂದು ಅವರನ್ನು ಎತ್ತುತ್ತಾರೆ. ಇದೇನೋ ಒಂದು ಹಂತಕ್ಕೆ ಸರಿ. ಆದರೆ ಮಾಡೆಲ್ಗಳು ಸಹಸ್ರಾರು, ಲಕ್ಷಾಂತರ ಮಂದಿ ವೀಕ್ಷಣೆಗೆ ಬಂದಿರುವ ವೇದಿಕೆಯ ಮೇಲೆ ಹೀಗಾಗಿ ಬಿಟ್ಟರೆ? ಅಂಥದ್ದೇ ಒಂದು ಶಾಕಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ. ಮಾಡೆಲ್ಗಳು ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು ಎನ್ನುವ ಪರಿಕಲ್ಪನೆ ಇದೆ. ಇದೇ ಕಾರಣಕ್ಕೆ ಸೈಜ್ ಮೆಂಟೇನ್ ಮಾಡಲು ರೂಪದರ್ಶಿಗಳು ಮಾಡುವ ಸರ್ಕಸ್ ಇಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಪ್ಲಸ್ ಸೈಜ್ ಮಾಡೆಲ್ಗಳ ರ್ಯಾಂಪ್ ವಾಕ್, ಫ್ಯಾಷನ್ ಷೋಗಳು ಕೂಡ ನಡೆಯುತ್ತವೆ.
ಸ್ಕ್ರಿಪ್ಟ್ ಇಲ್ದೇ 10 ಗಂಟೆ ಷೋ ಮಾಡೋ ತಾಕತ್ತಿದೆ ಕಣ್ರೀ... ಕೊಂಕು ಮಾಡುವವರಿಗೆ ಅನುಶ್ರೀ ಕೊಟ್ಟ ತಿರುಗೇಟೇನು?
ಮಾಡೆಲ್ ಆಗಲು ಸೈಜ್ ಮುಖ್ಯವಲ್ಲ ಎಂದು ಧೈರ್ಯ, ವಿಶ್ವಾಸ ತುಂಬುವ ಇಂಥ ಷೋಗಳಿಗೆ ತುಂಬಾ ರೆಸ್ಪಾನ್ಸ್ ಇದೆ. ಆದರೆ ದುರದೃಷ್ಟವಶಾತ್ ಈ ಷೋನಲ್ಲಿ ಮಾಡೆಲ್ ಕ್ಯಾಟ್ ವಾಕ್ ಶುರು ಮಾಡುತ್ತಿದ್ದಂತೆಯೇ ಕಾಲಿಗೆ ಬಟ್ಟೆ ತಗುಲಿ ಬಿದ್ದುಬಿಟ್ಟಿದ್ದಾರೆ. ಏನೂ ಆಗಲಿಲ್ಲ ಎನ್ನುವಂತೆ ನಗುತ್ತಲೇ ಇದ್ದ ಈ ರೂಪದರ್ಶಿ ಏಳಲು ಟ್ರೈ ಮಾಡಿದ್ದಾರೆ. ಪುನಃ ತಮ್ಮ ಷೋ ಮುಂದುವರಿಸಲು ನೋಡಿದ್ದಾರೆ. ಆದರೆ ಅವರಿಗೆ ತುಂಬಾ ಏಟಾಗಿದ್ದರಿಂದಲೋ ಏನೋ ಏಳಲು ಸಾಧ್ಯವಾಗಲಿಲ್ಲ. ಅವರಿಗೆ ತುಂಬಾ ನೋವಾಗಿರುವುದು ಮುಖದಿಂದಲೇ ಕಾಣಿಸುತ್ತದೆ. ಕೂಡಲೇ ಉಳಿದ ರೂಪದರ್ಶಿಗಳು ಓಡಿ ಬಂದು ಅವರನ್ನು ಏಳಿಸಿದ್ದಾರೆ. ಈ ರೂಪದರ್ಶಿ ಕೊನೆಗೆ ಸುಧಾರಿಸಿಕೊಂಡರೋ ಇಲ್ಲವೋ ತಿಳಿದಿಲ್ಲ.
ಆದರೆ ಈ ವಿಡಿಯೋಗೆ ಹಲವಾರು ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಸರಿಯಾದ ತರಬೇತಿ ಪಡೆಯದೇ, ಕಾನ್ಫಿಡೆನ್ಸ್ ಇಲ್ಲದೇ ವೇದಿಕೆ ಮೇಲೆ ಬರುವುದನ್ನು ತಪ್ಪಿಸಿ ಎಂದು ಹಲವರು ಹೇಳುತ್ತಿದ್ದಾರೆ. ಅನ್ಕಂಫರ್ಟ್ ಎನ್ನುವ ಬಟ್ಟೆಯನ್ನು ರೂಪದರ್ಶಿಗಳಿಗೆ ಹಾಕುವುದು ಏಕೆ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ. ರೂಪದರ್ಶಿ ಎಂದರೆ, ಹೀಗೆಯೇ ಇರಬೇಕು, ಇದೇ ರೀತಿ ಬಟ್ಟೆ ಧರಿಸಬೇಕು ಎನ್ನುವ ಸಿದ್ಧಸೂತ್ರ ಬಿಟ್ಟು ಆರಂಭದಲ್ಲಿ ಅವರಿಗೆ ಸರಿಹೊಂದುವ ಬಟ್ಟೆ ಹಾಕಿ ಕಳುಹಿಸಿ ಎನ್ನುವ ಸಲಹೆ ನೆಟ್ಟಿಗರಿಂದ ಬರುತ್ತಿದೆ. ಅಷ್ಟಕ್ಕೂ ಇಂಥ ಎಡವಟ್ಟು ಆಗಲು ಮತ್ತೊಂದು ದೊಡ್ಡ ಕಾರಣ ಹೈ ಹೀಲ್ಸ್ ಚಪ್ಪಲಿಗಳು. ಹೈ ಹೀಲ್ಸ್ ಧರಿಸಿ ಇದಾಗಲೇ ಸಾಕಷ್ಟು ಎಡವಟ್ಟುಗಳನ್ನು ಮಾಡೆಲ್ಗಳು, ನಟಿಯರು ಮಾಡಿಕೊಂಡಿದ್ದಾರೆ. ಹಾಗೆ ಆಗಲು ಬಿಡಬೇಡಿ ಎನ್ನುವುದು ನೆಟ್ಟಿಗರ ಸಲಹೆ.
ಎಲ್ಲರನ್ನೂ ಹಿಂದಿಕ್ಕಿ ನಂ.1 ಶ್ರೀಮಂತ ನಾಯಕಿ ಪಟ್ಟ ಗಿಟ್ಟಿಸಿಕೊಂಡ 'ಪ್ರೇಮಲೋಕ' ಬೆಡಗಿ! ಆಸ್ತಿ ಎಷ್ಟು ಗೊತ್ತಾ?