ಇಳಿವಯಸ್ಸಲ್ಲೂ ದುಡಿಯುವ ಮಹಿಳೆಯರಿಗೆ ಬೆಂಗಳೂರು ಬೆಸ್ಟ್‌: ಸಮೀಕ್ಷೆ

ವಯಸ್ಸಾದ ಮಹಿಳೆಯರು ಕೆಲಸ ಮಾಡುವುದಕ್ಕೆ ಉತ್ತಮ ಉದ್ಯೋಗ ಸ್ನೇಹಿ ವಾತಾವರಣವಿರುವ ದೇಶದ ಉತ್ತಮ ಸ್ಥಳ ಬೆಂಗಳೂರು ಎಂಬ ಹೆಗ್ಗಳಿಕೆಗೆ ಬೆಂಗಳೂರು ನಗರ ಪಾತ್ರವಾಗಿದೆ.

Bangalore Best for elderly Working Women Survey Report akb

ಬೆಂಗಳೂರು: ಉದ್ಯಾನನಗರಿ ಬೆಂಗಳೂರು ಇಲ್ಲಿನ ಸುಂದರವಾದ ಏಸಿಯಂತಹ ಹವೆಗೆ ದೇಶ ವಿದೇಶದಲ್ಲೂ ಫೇಮಸ್, ಇದೇ ಕಾರಣಕ್ಕೆ ಕೆಲಸ ಅರಸಿ ದೇಶದ ವಿವಿಧೆಡೆಯಿಂದ ಇಲ್ಲಿಗೆ ಬರುವ ಜನ ನಂತರ ಇಲ್ಲೇ ನೆಲೆ ನಿಲ್ಲುತ್ತಾರೆ. ಇದು ತಿಳಿದಿರುವ ವಿಷಯ ಹೊಸ ವಿಚಾರ ಏನಾದರು ಇದ್ರೆ ಹೇಳಿ ಅಂತೀರಾ? ಇದೇ ಇದೇ ಬೆಂಗಳೂರು ನಗರದ ಹೆಮ್ಮೆಯ ಕಿರೀಟಕ್ಕೆ ಈಗ ಮತ್ತೊಂದು ಗರಿ ಸೇರಿದೆ.  ವಯಸ್ಸಾದ ಮಹಿಳೆಯರು ಕೆಲಸ ಮಾಡುವುದಕ್ಕೆ ಉತ್ತಮ ಉದ್ಯೋಗ ಸ್ನೇಹಿ ವಾತಾವರಣವಿರುವ ದೇಶದ ಉತ್ತಮ ಸ್ಥಳ ಬೆಂಗಳೂರು ಎಂಬ ಹೆಗ್ಗಳಿಕೆಗೆ ನಗರ ಪಾತ್ರವಾಗಿದೆ. ಹೆಲ್ಪ್ ಏಜ್ ಇಂಡಿಯಾ ಎಂಬ ಸಂಸ್ಥೆ ನಡೆಸಿದ ಸರ್ವೇಯಲ್ಲಿ ಈ ವಿಚಾರ ತಿಳಿದು ಬಂದಿದೆ. ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಒಂದು ಈ ವಿಚಾರದಲ್ಲಿ ಉನ್ನತ ಸ್ಥಾನದಲ್ಲಿದೆ ಎಂದು ಈ ಸರ್ವೇ ಹೇಳಿದೆ. 

ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ (World Elder Abuse Awareness Day) ದ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ವೃದ್ಧಾಪ್ಯ: ತೆರೆಮರೆಗೆ ಸರಿಯುವುದು ಅಥವಾ ಸಬಲೀಕರಣ (Women & Ageing: Invisible or Empowered) ಎಂಬ ವಿಚಾರದ ಬಗ್ಗೆ  ಸಮೀಕ್ಷಾ ವರದಿ ಬಿಡುಗಡೆಗೊಳಿಸಲಾಯಿತು.ಈ ಸಮೀಕ್ಷಾ ವರದಿಯಲ್ಲಿ ನಗರದಲ್ಲಿ ಕೆಲಸ ಮಾಡುವ ಶೇಕಡಾ 85ರಷ್ಟು ಮಹಿಳೆಯರು ತಾವು ಕೆಲಸ ಮಾಡುವ ಸ್ಥಳ ಹಿರಿಯ ನಾಗರಿಕರಿಗೆ ಸಹಕಾರಿಯಾಗಿದೆ. ಜೊತೆಗೆ ಬಹುತೇಕ ಪೂರಕವಾಗಿದೆ ಎಂದು ಹೇಳಿದ್ದಾರೆ.  ರಾಷ್ಟ್ರೀಯ ಮಟ್ಟದ ಇತರ ನಗರಗಳಿಗೆ ಹೋಲಿಸಿದರೆ ಇದು ತುಂಬಾ ಹೆಚ್ಚು, ಇತರ ನಗರಗಳಲ್ಲಿ ಈ ರೀತಿಯ ವೃದ್ಧ ಮಹಿಳೆಯರಿಗೆ ಉದ್ಯೋಗ ಸ್ನೇಹಿ ವಾತಾವರಣವಿರುವುದು ಕೇವಲ ಶೇಕಡಾ 64 ಪ್ರಮಾಣ ಮಾತ್ರ 64 ಶೇಕಡಾ ಹಿರಿಯ ಮಹಿಳೆಯರು ಮಾತ್ರ ತಾವು ಕೆಲಸ ಮಾಡುವ ವಾತಾವರಣ ಚೆನ್ನಾಗಿದೆ ನೆಮ್ಮದಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. 

62ರ ಪ್ರಾಯದಲ್ಲಿ ತ್ರಿಬಲ್ ಧಮಾಕ: ತ್ರಿವಳಿಗೆ ಜನ್ಮ ನೀಡಿದ 2ನೇ ಪತ್ನಿ!

ಹೊಂದಾಣಿಕೆಯಾಗಬಲ್ಲ ಕೆಲಸದ ಸಮಯ (Flexible Timing), ಬೆಂಬಲಿಸುವ ಹಾಗೂ ಅರ್ಥ ಮಾಡಿಕೊಳ್ಳುವ ಮ್ಯಾನೇಜ್‌ಮೆಂಟ್ ಮತ್ತು ಕೆಲಸದ ಸ್ಥಳದಲ್ಲಿರುವ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳು ಬೆಂಗಳೂರನ್ನು ಹಿರಿಯ ಮಹಿಳಾ ಉದ್ಯೋಗ (Women Employee)ಸ್ನೇಹಿ ಸ್ಥಳವನ್ನಾಗಿಸಿದೆ. ಐದು ಮೆಟ್ರೋ ನಗರಗಳು ಸೇರಿದಂತೆ ಒಟ್ಟು 20 ರಾಜ್ಯಗಳಲ್ಲಿ ಈ ಸರ್ವೇ ಮಾಡಲಾಗಿತ್ತು. 7911 ಜನರ ಸಮೀಕ್ಷೆ ಮಾಡಲಾಗಿತ್ತು, ಅದರಲ್ಲಿ  ಬೆಂಗಳೂರಿನಿಂದ 578 ಜನ ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. 

ಇನ್ನು ಕೆಲಸದ ವಿಚಾರಕ್ಕೆ ಬರುವುದಾದರೆ ಬೆಂಗಳೂರಿನ  ಶೇಕಡಾ 33ರಷ್ಟು ಹಿರಿಯ ಮಹಿಳೆಯರು ಮಾತ್ರ ತಮ್ಮನ್ನು ಪಾರ್ಟ್‌ಟೈಮ್ ಫುಲ್ ಟೈಮ್‌  ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.  ಬಹುತೇಕ ಹಿರಿಯ ನಾಗರಿಕ ಮಹಿಳೆಯರು ಆರ್ಥಿಕವಾಗಿ ಸಕ್ರಿಯ ಹಾಗೂ ಸ್ವಾತಂತ್ರವಾಗಿರಬೇಕೆಂದು ಬಯಸಿದ್ದಾರೆ.  ಆದರೆ ವಯೋವೃದ್ಧಶಾಸ್ತ್ರಜ್ಞೆ ಇಂದಿರಾ ಜೈ ಪ್ರಕಾಶ್ ಹೇಳುವ ಪ್ರಕಾರ ನಗರದ ಶೇಕಡಾ 66ರಷ್ಟು ಹಿರಿಯ ಮಹಿಳೆಯರು ಉದ್ಯೋಗ ಮಾಡುತ್ತಿಲ್ಲ, ಮನೆಯಿಂದ ದೂರ ಹೋಗಿ ಕೆಲಸ ಮಾಡುವಂತಹ ವಾತಾವರಣ ಇಲ್ಲ ಹೀಗಾಗಿ ಮನೆಯೊಳಗೆ ಇರಬೇಕಾಗಿದೆಎಂದು ಅವರು ಹೇಳಿಕೊಂಡಿದ್ದಾರೆ. 

ಆದರೆ ಇನ್ನೊಂದು ಆಘಾತಕಾರಿ ವಿಚಾರ ಎಂದರೆ ನಗರದಲ್ಲಿ ಶೇಕಡಾ 49 ರಷ್ಟು ವೃದ್ಧರ ಮೇಲೆ ಹಲ್ಲೆಯಾಗುತ್ತಿದೆ. ಇದು ದೈಹಿಕ ಹಾಗೂ ಮಾನಸಿಕ ಕಿರುಕುಳವನ್ನು ಒಳಗೊಂಡಿದೆ. ತಮ್ಮ ಕುಟುಂಬದವರಿಂದಲೇ ನಡೆಯುವ ಹಲ್ಲೆಯ ಕಾರಣಕ್ಕೆ ಶೇಕಡಾ 15 ರಷ್ಟು ವೃದ್ಧ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ವರದಿ ಹೇಳಿದೆ. 

Old Age Pension : ವೃದ್ಧಾಪ್ಯ ವೇತನಕ್ಕಾಗಿ ಕೊಪ್ಪಳದಲ್ಲಿ ವೃದ್ಧರ ದಯನೀಯ ಸ್ಥಿತಿ!

Latest Videos
Follow Us:
Download App:
  • android
  • ios