Asianet Suvarna News Asianet Suvarna News

ಬ್ಯೂಟಿಯಲ್ಲಿ ಯಾವ ಮಾಡೆಲ್‌ಗೂ ಕಮ್ಮಿಯಿಲ್ಲ ಕೋಟಿ ಉದ್ಯಮದ ಒಡತಿ ಅಂಕಿತಿ ಬೋಸ್

ಬ್ಯೂಟಿ ವಿತ್ ಬ್ರೈನ್ ಎಂದು ಇರುವುದು ತುಂಬಾ ವಿರಳ. ಬೃಹತ್ ಉದ್ಯಮವನ್ನು ಕಟ್ಟಿ ಬೆಳೆಸಿದವರಿಗೆಲ್ಲಾ ಸಾಕಷ್ಟು ವಯಸ್ಸಾಗಿರುತ್ತದೆ. ಆದರೆ ಈಕೆ ಸಣ್ಣ ವಯಸ್ಸಿನಲ್ಲೇ ಕೋಟಿ ಕೋಟಿ ಉದ್ಯಮವನ್ನು ಕಟ್ಟಿ ಬೆಳೆಸಿದಾಕೆ. ಆಕೆಯ ಬಗ್ಗೆ ಇಲ್ಲಿದೆ ಮಾಹಿತಿ.

Ankiti Bose, young entrepreneur from India, started commerce startup called Zilingo Vin
Author
First Published Apr 2, 2024, 9:29 AM IST

ಅಂಕಿತಿ ಬೋಸ್ ಭಾರತದ ಯುವ ಉದ್ಯಮಿಗಳಲ್ಲೊಬ್ಬರು. ಶೂನ್ಯದಿಂದ ಆರಂಭಿಸಿ ಕೋಟಿ ಕೋಟಿ ಗಳಿಸುವ ಉದ್ಯಮವನ್ನು ಕಟ್ಟಿ ಬೆಳೆಸಿದಾಕೆ. ಆದರೆ ಈಕೆಯ ಜೀವನ ಉಳಿದ ಉದ್ಯಮಿಗಳಂತೆ ಸರಳವಾಗಿಲ್ಲ. ಬರೋಬ್ಬರಿ 7000 ಕೋಟಿ ಮೌಲ್ಯದ ಕಂಪೆನಿಯನ್ನು ನಿರ್ಮಿಸಿದ ಅಂಕಿತಿ ಬೋಸ್ ತಮ್ಮದೇ ಸಂಸ್ಥೆಯಿಂದ ಹೊರ ಹಾಕಲ್ಪಟ್ಟರು. ನೋಡೋಕೆ ಯಾವ ಮಾಡೆಲ್‌ಗೂ ಕಮ್ಮಿಯಿಲ್ಲ ಅಂಕಿತಿ ಬೋಸ್‌. ಸ್ಟೈಲಿಶ್‌ ಆಗಿ ಎಲ್ಲರ ಗಮನ ಸೆಳೆಯುತ್ತಾರೆ. ಯಾವಾಗಲೂ ತಮ್ಮ ಡ್ರೆಸ್‌, ಆಸೆಸ್ಸರೀಸ್ ಬಗ್ಗೆ ಹೆಚ್ಚು ಕಾನ್ಶಿಯಸ್ ಆಗಿರುತ್ತಾರೆ.

ಅಂಕಿತಿ ಬೋಸ್ ಧ್ರುವ್ ಕಪೂರ್ ಅವರೊಂದಿಗೆ ಪಾಲುದಾರಿಕೆ ಹೊಂದಿದ್ದು, ಝಿಲಿಂಗೋ ಎಂಬ ಬಹುರಾಷ್ಟ್ರೀಯ ತಂತ್ರಜ್ಞಾನ ಮತ್ತು ವಾಣಿಜ್ಯ ಪ್ರಾರಂಭವನ್ನು ಸ್ಥಾಪಿಸಿದರು. 2019ರಲ್ಲಿ Zillingo ಅವರ ಗರಿಷ್ಠ ಮೌಲ್ಯವು ಸುಮಾರು 7000 ಕೋಟಿ ರೂಪಾಯಿಗಳನ್ನು ತಲುಪಿತ್ತು. ಈ ಯಶಸ್ಸಿನ ಹಿಂದೆ ಅಂಕಿತಿ ಬೋಸ್ ದೊಡ್ಡ ಪಾತ್ರವನ್ನು ವಹಿಸುತ್ತಾರೆ. 

ಮಗುವಾದ್ಮೇಲೆ ಕೆಲಸ ಬಿಟ್ಟಾಕೆ ಈಗ ಲಕ್ಷಾಂತರ ರೂ. ಸಂಪಾದಿಸೋ ಉದ್ಯಮಿ!

ಅಂಕಿತಿ, 2018ರಲ್ಲಿ ಫೋರ್ಬ್ಸ್ ಏಷ್ಯಾ 30 ಜನರ ಪಟ್ಟಿಯಲ್ಲಿ ಹಾಗೂ ಫಾರ್ಚೂನ್‌ನ 40 ವರ್ಷದೊಳಗಿನವರ ಪಟ್ಟಿಯಲ್ಲಿ, 2019ರಲ್ಲಿ ಬ್ಲೂಮ್‌ಬರ್ಗ್ ಲಿಸ್ಟ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ, ಪ್ರಸ್ತುತ ಹೂಡಿಕೆದಾರ ಮಹೇಶ್ ಮೂರ್ತಿ ವಿರುದ್ಧ 738 ಕೋಟಿ ರೂ. ಮೊಕದ್ದಮೆಯಲ್ಲಿ ಭಾಗಿಯಾಗಿದ್ದಾರೆ.

ಕಂಪನಿಯನ್ನು ಹೊಸ ಉತ್ತುಂಗಕ್ಕೆ ಏರಿಸಿದ ನಂತರ, 2022ರಲ್ಲಿ ಬೋ್ಸ್‌ರನ್ನು ಸ್ವಂತ ಸ್ಟಾರ್ಟ್‌ಅಪ್‌ನಿಂದ ವಜಾಗೊಳಿಸಲಾಯಿತು. ಕಂಪನಿಯಲ್ಲಿ ಹಣಕಾಸಿನ ದುರುಪಯೋಗವನ್ನು ಹೊರಿಸಿ ಬೋಸ್‌ನ್ನು ಸಿಇಒ ಜಿಲ್ಲಿಂಗೋ ಆಗಿ ಅಮಾನತುಗೊಳಿಸಲಾಯಿತು. 

ದುಡಿಯೋ ಹೆಣ್ಣಿನ ಕೈಯ್ಯಲ್ಲೂ ಇರ್ಬೇಕು ತುರ್ತು ನಿಧಿ, ಹೇಗೆ ಹೆಲ್ಪ್ ಆಗುತ್ತೆ ಇಲ್ನೋಡಿ!

ಅಂಕಿತಾ ಬೋಸ್‌ ವಿರುದ್ಧ ವಂಚನೆಯ ಆರೋಪ
ವರದಿಗಳ ಪ್ರಕಾರ, ಮಂಡಳಿಯ ಅನುಮೋದನೆಯಿಲ್ಲದೆ ಅಂಕಿತಾ ಬೋಸ್‌ ತಮ್ಮ ಸಂಬಳವನ್ನು 10 ಪಟ್ಟು ಹೆಚ್ಚಿಸಿದ್ದರು. ವಿವಿಧ ಮಾರಾಟಗಾರರಿಗೆ 10 ಮಿಲಿಯನ್ ಡಾಲರ್ ಮೌಲ್ಯದ ಪಾವತಿಯನ್ನು ಉಳಿಸಿಕೊಂಡಿರುವ ಆರೋಪವೂ ಕೇಳಿ ಬಂತು. ಅಂಕಿತಿ ಬೋಸ್ ಡೆಹ್ರಾಡೂನ್‌ನಲ್ಲಿ ಜನಿಸಿದರು. ಮುಂಬೈನ ಕೇಂಬ್ರಿಡ್ಜ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ಪದವಿಗಾಗಿ, ಬೋಸ್ ಮುಂಬೈನ ಜನಪ್ರಿಯ ಸೇಂಟ್ ಕ್ಸೇವಿಯರ್ ಕಾಲೇಜಿಗೆ ಹೋದರು. ಪದವಿಯ ನಂತರ ಬೆಂಗಳೂರಿನ ಮೆಕಿನ್ಸೆ & ಕಂಪನಿ ಮತ್ತು ಸಿಕ್ವೊಯಾ ಕ್ಯಾಪಿಟಲ್‌ನಲ್ಲಿ ಕೆಲಸಕ್ಕೆ ಸೇರಿದರು.

ಚತುಚಕ್ ವೀಕೆಂಡ್ ಮಾರ್ಕೆಟ್‌ನಲ್ಲಿ ಅಡ್ಡಾಡುತ್ತಿರುವಾಗ, ಅನೇಕ ಸ್ಥಳೀಯ ಅಂಗಡಿಗಳಲ್ಲಿ ಆನ್‌ಲೈನ್ ಉಪಸ್ಥಿತಿಯ ಕೊರತೆಯಿದೆ ಎಂದು ಅರಿತುಕೊಂಡು ಜಿಲ್ಲಿಂಗೋವನ್ನು ಆರಂಭಿಸಿದರು. ಸಿಕ್ವೊಯಾ ಕ್ಯಾಪಿಟಲ್‌ನಲ್ಲಿ ಹೂಡಿಕೆ ವಿಶ್ಲೇಷಕರಾಗಿ ತನ್ನ ಸ್ಥಾನವನ್ನು ತೊರೆದು ಜಿಲ್ಲಿಂಗೋವನ್ನು ಹುಟ್ಟು ಹಾಕಿದರು.

ಆದರೆ ಸಂಸ್ಥೆಯಲ್ಲಿ ಅವರು ಮಾಡಿದ ಹಲವು ತಪ್ಪುಗಳು ಅವರನ್ನು ವಜಾಗೊಳಿಸಲು ಕಾರಣವಾಯಿತು ಎಂದು ತಿಳಿದುಬಂದಿದೆ. 7000 ಕೋಟಿ ಮೌಲ್ಯದ ಕಂಪೆನಿಯನ್ನು ನಿರ್ಮಿಸಿದ ಅಂಕಿತಿ ಬೋಸ್ ತಮ್ಮದೇ ಸಂಸ್ಥೆಯಿಂದ ಹೊರ ಹಾಕಲ್ಪಟ್ಟರು.

Follow Us:
Download App:
  • android
  • ios