ಮೊಟ್ಟೆಗಿಂತ ಧರ್ಮ ಮುಖ್ಯ; 25 ಲಕ್ಷ ಯಾವ ಲೆಕ್ಕ ಎಂದು ಮಾಸ್ಟರ್ ಶೆಫ್‌ನಿಂದ ಹೊರ ನಡೆದ ಅರುಣಾ!

ಅಡುಗೆ ರಿಯಾಲಿಟಿ ಷೋದಿಂದ ಹೊರಕ್ಕೆ ಬಂದ ಜೈನ ಮಹಿಳೆಯರೊಬ್ಬರು ಸಾಮಾಜಿಕ ಜಾಲತಾಣದ ನಾಯಕಿಯಾಗಿ ಮಿಂಚುತ್ತಿದ್ದಾರೆ, ಕಾರಣವೇನು? 
 

An Egg Made Aruna Vijay Give Up Immunity Pin in reality show

ಹಲವರು ಯಶಸ್ಸಿನ ಹಿಂದೆ ಓಡಿದರೆ, ಕೆಲವರ ಹಿಂದೆ ಯಶಸ್ಸು (Success) ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಯಶಸ್ಸು ಸಿಗಬೇಕು ಎಂದು ಅಥವಾ ಗುರಿ ಸಾಧನೆ ಮಾಡಬೇಕೇಂದು ಜೀವವನ್ನೇ ಪಣಕ್ಕಿಡುವವರು ನಮ್ಮ ಮಧ್ಯೆ ಇದ್ದಾರೆ. ಇಂಥವರ ಪೈಕಿ ಹಲವರು ಏನಾದರೂ ಆಗಲಿ...  ನೈತಿಕತೆ, ಆದರ್ಶ, ಸಂಪ್ರದಾಯ ಯಾವುದೇ ಅಡ್ಡಿ ಬಂದರೂ ಅದನ್ನು ಮೆಟ್ಟಿ  ಗುರಿಯನ್ನು ಸಾಧಿಸಲು ಹಾತೊರೆದರೆ, ಬೆರಳೆಣಿಕೆಯಷ್ಟು ಮಂದಿ ನೈತಿಕತೆ, ಆದರ್ಶಕ್ಕಾಗಿ ಯಶಸ್ಸು ಎದುರಿಗೆ ಬಂದರೂ ಅದನ್ನು ವಾಪಸ್​ ಕಳಿಸುತ್ತಾರೆ. ಈ ಬೆರಳೆಣಿಕೆಯಷ್ಟು ಮಂದಿಯಲ್ಲಿ ಒಬ್ಬರಾಗಿರೋ ಈ ಮಹಿಳೆ ಈಗ ಸಾಮಾಜಿಕ ಜಾಲತಾಣದ (Social Media) ನಾಯಕಿ. ಯಶಸ್ಸು ಕಣ್ಣೆದುರಿಗೇ ಬಂದು ನಿಂತರೂ ತಮ್ಮ ಆದರ್ಶ, ಮೌಲ್ಯ, ಸಂಪ್ರದಾಯವೇ ಮೇಲೆಂದು ಬಗೆದು ಆ ಯಶಸ್ಸನ್ನು ವಾಪಸ್​ ಕಳಿಸಿದ ಮಹಿಳೆ ಈಕೆ.

ಹೌದು. ಈ ಚಿತ್ರದಲ್ಲಿ ಕಾಣಿಸುವ ಸಾಮಾನ್ಯ ಮಹಿಳೆ ಈಗ ನಾಯಕಿಯಾಗಿದ್ದು, ಇವರ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಷ್ಟಕ್ಕೂ ಅವರು ಮಾಡಿದ್ದೇನೆಂದರೆ ಒಂದು ಮೊಟ್ಟೆಗಾಗಿ 25 ಲಕ್ಷ ರೂಪಾಯಿ ತಿರಸ್ಕರಿಸಿದ್ದಾರೆ! ಕಣ್ಣುಮುಂದೆ ಇದ್ದ ಗುರಿಯನ್ನು ಮೊಟ್ಟೆಯ ಸಲುವಾಗಿ ವಾಪಸ್​ ಕಳಿಸಿದ್ದಾರೆ. ಅಂದಹಾಗೆ ಇವರ ಹೆಸರು ಅರುಣಾ ವಿಜಯ್ (Aruna Vijay. ತಮಿಳುನಾಡಿನ ಈ ಮಹಿಳೆ ಜೈನ ಧರ್ಮಕ್ಕೆ (Jain) ಸೇರಿದವರು. ಇಲ್ಲಿ ಮಹಿಳೆಯ ಜೊತೆಗೆ ಅವರ ಧರ್ಮದ ಹೆಸರು ಉಲ್ಲೇಖಿಸಿರುವುದಕ್ಕೂ, ಈ ಸುದ್ದಿಗೂ ತೀರಾ ಹತ್ತಿರದ ಸಂಬಂಧವಿದೆ. ಇವರೇ ಈಗ ಒಂದು ಮೊಟ್ಟೆಯ ಕಥೆಯ ಭಾಗವಾಗಿದ್ದಾರೆ.

ಬ್ಯುಸಿನೆಸ್ ಗಂಧಗಾಳಿ ತಿಳಿಯದ ಮಹಿಳೆಗೆ ರತನ್ ಟಾಟಾ ಬೆಂಬಲ, ಈಗ ಆಕೆ 180 ಕೋಟಿ ಮೌಲ್ಯದ ಕಂಪನಿ ಒಡತಿ!

ಆಗಿದ್ದೇನೆಂದರೆ, ಇವರು ಅಡುಗೆಯಲ್ಲಿ ಪರಿಣತರು (Shef). ಇದೇ  ಕಾರಣಕ್ಕೆ ಸೋನಿ ಟಿವಿಯ ಮುಂಬರುವ ರಿಯಾಲಿಟಿ ಶೋ 'ಮಾಸ್ಟರ್‌ಚೆಫ್ ಇಂಡಿಯಾ'ದಲ್ಲಿ ಭಾಗವಹಿಸಿದ್ದರು. ವಾಸ್ತವವಾಗಿ, ದೇಶದಾದ್ಯಂತದ ಬಾಣಸಿಗರು ಮಾಸ್ಟರ್ ಚೆಫ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಮತ್ತು ಈ ರಿಯಾಲಿಟಿ ಶೋನಲ್ಲಿ ವಿವಿಧ ಭಕ್ಷ್ಯಗಳನ್ನು ಮಾಡುವ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಅತ್ಯುತ್ತಮ ಬಾಣಸಿಗರಿಗೂ ಬಹುಮಾನ ನೀಡಲಾಗುತ್ತದೆ. ರಿಯಾಲಿಟಿ ಶೋನ ತೀರ್ಪುಗಾರರು ಯಾವ ಖಾದ್ಯ ಮಾಡಬೇಕೆಂದು ನಿರ್ಧರಿಸುತ್ತಾರೆ. ಆ ಖಾದ್ಯವನ್ನು ಬಾಣಸಿಗರು ಮಾಡಿ ತೋರಿಸಬೇಕು.

ಅದೇ ರೀತಿ ಈ ಅಡುಗೆ ಕಾರ್ಯಕ್ರಮದಲ್ಲಿಯೂ ಸ್ಪರ್ಧಿಗಳಿಗೆ ಅಲ್ಲಿ ಹಲವಾರು ತೆರನಾದ ಖಾದ್ಯಗಳನ್ನು ಮಾಡಲು ಹೇಳಲಾಗಿತ್ತು. ಎಲ್ಲವನ್ನೂ ಸಲೀಸಾಗಿ ಮಾಡಿ ತೋರಿಸಿದರು ಅರುಣಾ. ಎಲ್ಲವನ್ನೂ ಗೆದ್ದ ಬಳಿಕ 25 ಲಕ್ಷ ರೂಪಾಯಿ ಗೆಲ್ಲಲು ಒಂದೇ ಹೆಜ್ಜೆ ಬಾಕಿ ಇತ್ತು. ಒಂದು ಅಡುಗೆ ಮಾಡಿ ಸೈ ಎನಿಸಿಕೊಂಡಿದ್ದರೆ ಅವರು ಅದನ್ನು ಗೆದ್ದು ಹಣವನ್ನು ಪಡೆದುಕೊಳ್ಳಬಹುದಿತ್ತು. ಆದರೆ ಆ ಟಾಸ್ಕ್​ (Task) ಮಾಡಲು ಅರುಣಾ  ನಿರಾಕರಿಸಿದರು.  ಇದಕ್ಕೆ ಕಾರಣ ಅವರಿಗೆ ಮೊಟ್ಟೆಯನ್ನು ಬೇಯಿಸಲು ಹೇಳಲಾಗಿತ್ತು.  ಜೈನ ಧರ್ಮದ ಮಹಿಳೆಯಾಗಿರುವ ಅರುಣಾ ಅವರಿಗೆ ಇದು ಸರಿ ಹೊಂದಲಿಲ್ಲ. ತಾವು ಮೊಟ್ಟೆ ಬೇಯಿಸಲು ಸಾಧ್ಯವೇ ಇಲ್ಲ ಎಂದರು. ನೀವು ತಿನ್ನುವುದು ಬೇಡ, ಕೇವಲ ಬೇಯಿಸಿ ಮುಂದಿನ ಹಂತಕ್ಕೆ ಹೋಗಬಹುದು ಎಂದು ತೀರ್ಪುಗಾರರು ಹೇಳಿದರು. 25 ಲಕ್ಷ ರೂಪಾಯಿ (25 lakhs) ಕಣ್ಣುಮುಂದೆ ಇತ್ತು. ಆದರೆ ಮೊಟ್ಟೆಗಿಂತ ತಮ್ಮ ಮೌಲ್ಯಗಳು ಮತ್ತು ಸಂಪ್ರದಾಯಗಳೇ ಮೇಲು. ಅವುಗಳಲ್ಲಿ  ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದ  ಅರುಣಾ ವಿಜಯ್, ಆ ಷೋ ಬಿಟ್ಟು ಹೊರಕ್ಕೆ ನಡೆದರು.

ಸಿವಿಲ್‌ ಸರ್ವೀಸ್‌ ಅಧಿಕಾರಿಗಳ ಸರಳ ವಿವಾಹ, ಅನಾಥ ಮಕ್ಕಳ ಶಿಕ್ಷಣಕ್ಕೆ ಹಣ ದಾನ!

ತಮ್ಮ ಪಾಕಶಾಲೆಯ ಕೌಶಲದಿಂದಾಗಿ ಈ ರಿಯಾಲಿಟಿ ಶೋನಲ್ಲಿ ಟಾಪ್-10 ಸ್ಪರ್ಧಿಯಾಗಿ ಹೊಮ್ಮಿದ್ದ ಅರುಣಾ, ಮೊಟ್ಟೆಯಿಂದಾಗಿ ಸ್ವಯಂ ಪ್ರೇರಿತರಾಗಿ ಷೋ ಬಿಟ್ಟು  ಹೊರಕ್ಕೆ ನಡೆದರು. ಕೊನೆಗೆ ಈ ಬಗ್ಗೆ ತಮ್ಮ ಟ್ವೀಟರ್​ ಖಾತೆಯಲ್ಲಿ ಅದನ್ನು ಬರೆದುಕೊಂಡರು. 'ನಾನು ಮೊಟ್ಟೆಗಾಗಿ ಕಾರ್ಯಕ್ರಮದಿಂದ ಹೊರಕ್ಕೆ ಬಂದೆ.  ನಿಮ್ಮ ತತ್ವಗಳನ್ನು ಬಿಟ್ಟು ಯಶಸ್ಸಿನ ಹಿಂದೆ ಓಡಬೇಡಿ. ನಿಮ್ಮ ಮೌಲ್ಯಗಳನ್ನು ಗೌರವಿಸುವ ಮೂಲಕ ಯಶಸ್ಸು ನಿಮ್ಮನ್ನು ಅನುಸರಿಸಲಿ. ನಿಮ್ಮ ಮೌಲ್ಯಗಳು ನಿಮ್ಮನ್ನು ವಿಜೇತರನ್ನಾಗಿ ಮಾಡುತ್ತವೆ ಎಂದು ಬರೆದುಕೊಂಡರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದೇ ಮಾತು ಅರುಣಾ ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿದೆ. ಕೆಲವರು ಇವರ ಬಗ್ಗೆ ಟೀಕೆ (critisise) ಮಾಡುತ್ತಿದ್ದರೂ, ಹಲವರು ಇವರು ಮಾಡಿದ ಕಾರ್ಯವನ್ನು ತುಂಬು ಹೃದಯದಿಂದ ಶ್ಲಾಘಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios