ಬ್ಯುಸಿನೆಸ್ ಗಂಧಗಾಳಿ ತಿಳಿಯದ ಮಹಿಳೆಗೆ ರತನ್ ಟಾಟಾ ಬೆಂಬಲ, ಈಗ ಆಕೆ 180 ಕೋಟಿ ಮೌಲ್ಯದ ಕಂಪನಿ ಒಡತಿ!

ಸ್ವಂತ ಸಂಸ್ಥೆ ಸ್ಥಾಪಿಸೋದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ವ್ಯವಹಾರ ಜ್ಞಾನ ಹಾಗೂ ಹೂಡಿಕೆ ಎರಡೂ ಅಗತ್ಯ. ಅದಿತಿ ಬೋಸಲೆ ವಲುಂಜ್ ಹಾಗೂ ಚೇತನ್ ವಲುಂಜ್  ಅವರೂ ಈ ಎರಡೂ ಇಲ್ಲದೆ ಉದ್ಯಮ ಸ್ಥಾಪಿಸಲು ಮುಂದಾಗಿದ್ದರು. ಆಗ ಅವರಿಗೆ ಬೆಂಬಲ ನೀಡಿದ್ದು ರತನ್ ಟಾಟಾ. ಇಂದು ಈ ಸಂಸ್ಥೆ ಭಾರತದಾದ್ಯಂತ 188 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಷ್ಟೇ ಅಲ್ಲ, ಸುಮಾರು 180 ಕೋಟಿ ರೂ. ಆದಾಯ ಗಳಿಸುತ್ತಿದೆ. 
 

Meet Aditi Bhosale Ratan Tata backed CEO whose earnings are over Rs 180 crore they waited 12 hours at Tatas home

Business Desk:ಭಾರತೀಯರಿಗೆ ಉದ್ಯಮಿ ರತನ್ ಟಾಟಾ ಅವರ ನಡತೆ ಹಾಗೂ ಉದಾರತೆಯ ಬಗ್ಗೆ ವಿವರಿಸಬೇಕಾದ ಅಗತ್ಯವಿಲ್ಲ. ಅವರ ಸರಳತೆ ಹಾಗೂ ಉದಾರತೆ ಬಗ್ಗೆ ನಾವು ಸಾಕಷ್ಟು ಕಥೆಗಳನ್ನು ಈಗಾಗಲೇ ಕೇಳಿದ್ದೇವೆ. ಆದರೆ, ಅದಿತಿ ಬೋಸಲೆ ವಲುಂಜ್ ಹಾಗೂ ಚೇತನ್ ವಲುಂಜ್ ಅವರ ಕಥೆ ಇವೆಲ್ಲಕ್ಕಿಂತಲೂ ಭಿನ್ನವಾಗಿವೆ. ಈ ದಂಪತಿ 'ರೆಪೋಸ್' ಎಂಬ ಇಂಧನ ವಿತರಣಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸಂಸ್ಥೆ ಪ್ರಾರಂಭಿಸಿದ ಸಮಯದಲ್ಲಿ ಈ ಉದ್ಯಮಿ ದಂಪತಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇಂಥ ಸಮಯದಲ್ಲಿ ಅವರು ತಮಗೆ ರೋಲ್ ಮಾಡೆಲ್ ಆಗಿದ್ದ ರತನ್ ಟಾಟಾ ಅವರ ಮಾರ್ಗದರ್ಶನ ಬಯಸಿದ್ದರು. ಅದಕ್ಕಾಗಿ ರತನ್ ಟಾಟಾ ಅವರನ್ನು ಭೇಟಿ ಮಾಡಲು ಬಯಸಿದ್ದರು. ರತನ್ ಟಾಟಾ ಅವರನ್ನು ಭೇಟಿ ಮಾಡುವ ಅವರ ಕನಸು ನನಸಾಯಿತು ಕೂಡ. ಆದರೆ, ಅವರನ್ನು ಭೇಟಿ ಮಾಡುವುದು ಇವರಿಗೆ ಸುಲಭದ ಕೆಲಸವೇನೂ ಆಗಿರಲಿಲ್ಲ. ಸದಾ ಬ್ಯುಸಿ ಆಗಿರುವ ರತನ್ ಟಾಟಾ ಅವರನ್ನು ಭೇಟಿ ಮಾಡಲು ಸಾಕಷ್ಟು ಶ್ರಮ ಪಡಬೇಕಾಯಿತು. ಆದರೆ, ಬೋಸಲೆ ಅವರ ಸ್ಥೈರ್ಯ ಹಾಗೂ ದೃಢಸಂಕಲ್ಪವನ್ನು ಮೆಚ್ಚಲೇಬೇಕು. ಹಾಗೆಯೇ ಮುಂದಿನ ಜನಾಂಗದ ಉದ್ಯಮಿಗಳನ್ನು ಬೆಳೆಸುವ ರತನ್ ಟಾಟಾ ಅವರ ಉದಾತ್ತತೆ ಹಾಗೂ ಮನೋಸ್ಥೈರ್ಯಕ್ಕೆ ಸಲಾಂ ಅನ್ನಲೇಬೇಕು. 

ಚೇತನ್ ಹಾಗೂ ಅದಿತಿ ಬೋಸಲೆ ವಲುಂಜ್ ರೆಪೋಸ್ ಎನರ್ಜಿ ಎಂಬ ಹೊಸ ಸ್ಟಾರ್ಟ್ ಅಪ್ ಪ್ರಾರಂಭಿಸಿದರು. ಸಾಂಪ್ರದಾಯಿಕ ಇಂಧನ ಉದ್ಯಮದಲ್ಲಿ ಕಾರ್ಬನ್ ಉತ್ಪಾದನೆ ತಗ್ಗಿಸೋದು ಇವರಿಬ್ಬರ ಧ್ಯೇಯವಾಗಿತ್ತು. ಎಲ್ಲ ವಿಧದ ಇಂಧನಗಳನ್ನು ಒಂದೇ ಕಡೆ ಕ್ಯುರೇಟ್ ಮಾಡಿ ಆ ಬಳಿಕ ತಂತ್ರಜ್ಞಾನ ಬಳಸಿ ವಿತರಣೆ ಮಾಡಲು ಕಂಪನಿ ಬಯಸಿತ್ತು. ಅಲ್ಲದೆ, ಅವರು ತ್ಮ ಉದ್ಯಮವನ್ನು ವೆಚ್ಚ ದಕ್ಷತೆಯ ಮಾದರಿಯನ್ನಾಗಿ ರೂಪಿಸಲು ಬಯಸಿದ್ದರು. ಇವರ ಈ ಉದ್ಯಮಕ್ಕೆ 2017ರಲ್ಲಿ ಟಾಟಾ ಸಂಸ್ಥೆಯ ಬೆಂಬಲ ಕೂಡ ದೊರಕಿತ್ತು. ಆದರೆ, ಟಾಟಾ ಸಂಸ್ಥೆಯ ಮುಖ್ಯಸ್ಥರಾದ ರತನ್ ಟಾಟಾ ಅವರನ್ನು ಭೇಟಿಯಾಗಲು ಈ ದಂಪತಿ ಸಾಕಷ್ಟು ಹರಸಾಹಸ ಪಡಬೇಕಾಯಿತು.

90ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ ಖರೀದಿಸಿದ ಚಾಯ್ ವಾಲಾ; ಈತನ ಕಥೆ ಕೆಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ!

ಈ ಬಗ್ಗೆ ಲಿಂಕ್ಡ್ ಇನ್ ಪೋಸ್ಟ್ ಮಾಡಿರುವ ಬೋಸಲೆ, ಸುಲಭವಾಗಿ ಭೇಟಿಯಾಗಲು ಟಾಟಾ ಅವರೇನು ನಮ್ಮ ನೆರಹೊರೆಯವರಾ? ಅವರು ಆಗ ಟಾಟಾ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಇನ್ನು ದಂಪತಿ ಬ್ಯುಸಿನೆಸ್ ಸ್ಕೂಲ್ ನಲ್ಲಿ ಯಾವುದೇ ಔಪಚಾರಿಕ ಶಿಕ್ಷಣ ಪಡೆದಿರಲಿಲ್ಲ. ಹೀಗಾಗಿ ಈ ಉದ್ಯಮವನ್ನು ಅರಿಯಲು ಅವರು ಸಾಕಷ್ಟು ಶ್ರಮಪಡಬೇಕಾಯಿತು. ಬೋಸಲೆ ಹಾಗೂ ಅವರ ಪತಿ ತಮ್ಮ ಕನಸಿನ ಉದ್ಯಮದ 3ಡಿ ಪ್ರಸೆಂಟೇಷನ್ ಸಿದ್ಧಪಡಿಸಿ, ಟಾಟಾ ಅವರನ್ನು ಭೇಟಿಯಾದರು. ಪ್ರಾರಂಭದಲ್ಲಿ ಅವರು ಟಾಟಾ ಅವರಿಗೆ ಕೈಬರಹದ ಪತ್ರ ಕಳುಹಿಸಿದರು. ಹಾಗೆಯೇ ಅವರಿಬ್ಬರು ಟಾಟಾ ಜೊತೆಗೆ ದಿನನಿತ್ಯದ ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಕೂಡ ಭೇಟಿಯಾದರು. ಇನ್ನು ರತನ್ ಟಾಟಾ ಅವರನ್ನು ಮುಂಬೈಯಲ್ಲಿನ ಅವರ ನಿವಾಸದಲ್ಲಿ ಭೇಟಿಯಾಗಲು 12 ಗಂಟೆ ಕಾದರು. ಆದರೆ, ಟಾಟಾ ಅವರ ಬಿಡುವಿಲ್ಲದ ವೇಳಾಪಟ್ಟಿ ಹಿನ್ನೆಲೆಯಲ್ಲಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಹೋಟೆಲ್ ರೂಮ್ ಗೆ ಹಿಂತಿರುಗಿದ್ದರು. 

ಇದಾದ ಒಂದು ಗಂಟೆ ಬಳಿಕ ಅದಿತಿಗೆ ಒಂದು ಕರೆ ಬಂದಿತ್ತು. ಆ ಕಡೆಯಿಂದ ಮೃದು ಧ್ವನಿಯಲ್ಲಿ ವ್ಯಕ್ತಿಯೊಬ್ಬರು 'Hi, can I speak to Aditi' ಎಂದು ಕೇಳಿದರು. ಆ ಬಳಿಕ 'ನಾನು ರತನ್ ಟಾಟಾ ಮಾತನಾಡುತ್ತಿದ್ದೇನೆ. ನಿಮ್ಮ ಪತ್ರ ಸಿಕ್ಕಿತ್ತು. ನಾವು ಭೇಟಿಯಾಗೋಣವೇ?' ಎಂದು ಕೇಳಿದರಂತೆ. ಪ್ರಾರಂಭದಲ್ಲಿ ಅದಿತಿಗೆ ನಂಬಲು ಸಾಧ್ಯವಾಗಲೇ ಇಲ್ಲ. ರತನ್ ಟಾಟಾ ನೇರವಾಗಿ ನನಗೆ ಕರೆ ಮಾಡಲು ಸಾಧ್ಯವೇ ಎಂಬ ಅಚ್ಚರಿ ಮೂಡಿತು. ತಕ್ಷಣ ಅವರಿಬ್ಬರು ರತನ್ ಟಾಟಾ ಅವರನ್ನು ಭೇಟಿಯಾಗಿ ಉದ್ಯಮದ ಬಗ್ಗೆ ವಿವರಿಸಿದರು. ಅವರ ಉದ್ಯಮ ಯೋಜನೆಯಿಂದ ಪ್ರೇರಿತರಾಗಿ ರತನ್ ಟಾಟಾ ಅವರ ಕಂಪನಿಯಲ್ಲಿ ಎರಡು ಬಾರಿ ಹೂಡಿಕೆ ಮಾಡಿದ್ದಾರೆ.

Gautam Adani: ಗೌತಮ್‌ ಅದಾನಿ ಪತ್ನಿ ಯಾರು? ಮದುವೆಗೂ ಮುನ್ನ ಅವ್ರೇನ್‌ ಮಾಡ್ತಿದ್ರು?

ರೆಪೋ ಸದ್ಯ ಭಾರತದಾದ್ಯಂತ 188 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾವಿರಕ್ಕೂ ಹೆಚ್ಚಿನ ಉದ್ಯಮ ಪಾಲುದಾರರನ್ನು ಹೊಂದಿದೆ. 2022ರ ಮೇನಲ್ಲಿ ಈ ಕಂಪನಿಗೆ ಟಾಟಾ ಗ್ರೂಪ್ 56 ಕೋಟಿ ರೂ. ಹೂಡಿಕೆ ಮಾಡಿದೆ. ಈ ವರ್ಷ ಕಂಪನಿ 185 ಕೋಟಿ ರೂ. ಆದಾಯ ಸೃಷ್ಟಿಸುವ ನಿರೀಕ್ಷೆಯಿದೆ. 
 

Latest Videos
Follow Us:
Download App:
  • android
  • ios